Moving text

Mandya District Police

Press Note Date:26-03-2013


                                                ಪೊಲೀಸ್ ಸೂಪರಿಂಟೆಂಡೆಂಟ್ ರವರ ಕಛೇರಿ, 
                                                   ಮಂಡ್ಯ ಜಿಲ್ಲೆ, ದಿನಾಂಕಃ 26-03-2013.

ಪತ್ರಿಕಾ ಪ್ರಕಟಣೆ 


       ದಿನಾಂಕಃ 11.03.13. ರಂದು ಪಿರ್ಯಾದಿ ಪೆಮ್ಮಯ್ಯ, ಅರಣ್ಯ ವಲಯಾದಿಕಾರಿಗಳು, ಕೊಟಗಹಳ್ಳಿ ಶಾಖೆ, ಇವರು ಪಿರ್ಯಾದು ನೀಡಿದ್ದು ಅದರಲ್ಲಿ ಮೇಲುಕೋಟೆ ವನ್ಯಜೀವಿ ವಲಯದ ಗಸ್ತು ಸಂಖ್ಯೆ 5 ರ ನಾರಾಯಣ ದುರ್ಗ ಅರಣ್ಯ ಪ್ರದೇಶದಲ್ಲಿ ಎಂದಿನಂತೆ ಗಸ್ತಿನಂತೆ ಬೆಳಿಗ್ಗೆ 9-00 ಗಂಟೆಗೆ ಕೊಟಗಹಳ್ಳಿ ಕಡೆಯಿಂದ ಬಸವನಗುಡಿ ಮಾರ್ಗವಾಗಿ ಪಾದರತಿ ಕಡೆಗೆ ಗುಸ್ತು ಮಾಡಿಕೊಂಡುಬರುತ್ತಿರುವಾಗ ಕೆ.ಅರ್.ಪೇಟೆ-ಮೇಲುಕೋಟೆ ಮುಖ್ಯ ರಸ್ತೆಯಿಂದ ಸುಮಾರು 50 ಮೀಟರ್ ದೊರದಲ್ಲಿ ಒಂದು ಕಾರು ನಿಂತಿರುವುದುಕಂಡುಬಂದು ಕೂಡಲೇ ಸಿಬ್ಬಂದಿಗಳು ಮತ್ತು ಪಿರ್ಯಾದಿಯು ಹತ್ತಿರ ಹೋಗಿ ನೋಡಲಾಗಿ ಕಾರು ಸುಟ್ಟು ಹೋಗಿದ್ದು ಕಾರನ್ನು ಪರಿಶೀಲಿಸಲಾಗಿ ಒಳಗಡೆ ಹಿಂಬಾಗದ ಸೀಟಿನಲ್ಲಿ ಸುಟ್ಟು ಕರಕಲಾಗಿರುವ ಒಂದು ದೇಹವಿದ್ದು ಯಾವುದೋ ಕಾರಣಕ್ಕೆ ದುಷ್ಕರ್ಮಿಗಳು ಕೊಲೆ ಮಾಡಿರುವ ಶಂಕೆಯಿದ್ದು ಸಾಕ್ಷಾದಾರಗಳನ್ನು ನಾಶಪಡಿಸುವ ದೃಷ್ಠಿಯಿಂದ ಸುಟ್ಟು ಹಾಕಿರುತ್ತಾರೆಂದು ಇತ್ಯಾದಿ ನೀಡಿದ ದೊರಿನ ಮೇರೆಗೆ ಕೆ.ಅರ್.ಅರ್.ಪೇಟೆ ಟೌನ್ ಪೊಲೀಸ್ ಠಾಣೆಯಲ್ಲಿ ಮೊಃಸಂಃ 73/2013 ಕಲಂಃ 302, 201 ಐಪಿಸಿ ರೀತ್ಯ ಪ್ರಕರಣ ದಾಖಲಾಗಿರುತ್ತೆ. ಈ ಬಗ್ಗೆ ತನಿಖೆ ಕೈಗೊಂಡಿರುತ್ತದೆ. 

       ದಿನಾಂಕಃ 24.03.13. ರಂದು ಕೆ.ಅರ್.ಪೇಟೆ ನಗರ ಠಾಣೆಯ ಅಪರಾದ ಪತ್ತೆ ದಳದ ಸಿಬ್ಬಂದಿಗಳು ರಾತ್ರಿ ಗಸ್ತಿನಲ್ಲಿದ್ದಾಗ ಬೆಳಿಗ್ಗೆ ಸುಮಾರು 5-00 ಗಂಟೆ ಸಮಯದಲ್ಲಿ ಕೆ.ಅರ್.ಪೇಟೆ ಟೌನ್ ಠಾಣೆಯ ಎಂಓ ಅಸಾಮಿಯಾದ ಮಧುಕುಮಾರ ಬಿನ್ ಪುಟ್ಟಸ್ವಾಮಿ, ಬಿಲ್ಲರಾಮನಹಳ್ಳಿ ಗ್ರಾಮ ಈತನು ದುರ್ಗಾಭವನ್ ಸರ್ಕಲ್ ಬಳಿ ಅನುಮಾನಸ್ಪದವಾಗಿ ಓಡಾಡುತ್ತಿದ್ದವನನ್ನು ಹಿಡಿದುಕೊಂಡು ಚೆಕ್ ಮಾಡಲಾಗಿ ಈತನ ಬಳಿ ಒಂದು ಕಬ್ಬಿಣದ ರಾಡು ಇದ್ದು ಈತನನ್ನು ಠಾಣೆಗೆ ಕರೆದುಕೊಂಡು ಬಂದು ಹಾಜರ್ಪಡಿಸಿದ್ದು ಈತನನ್ನು ಕೂಲಂಕುಷವಾಗಿ ವಿಚಾರಣೆಗೊಳಪಡಿಸಿದಾಗ ಈತನು ಕಳ್ಳತನ ಮಾಡುವ ಉದ್ದೇಶದಿಂದ ರಾಡು ಇಟ್ಟುಕೊಂಡು ಓಡಾಡುತ್ತಿದ್ದುದಾಗಿ ಹಾಗೂ ಈ ಪ್ರಕರಣದ ಬಗ್ಗೆ ಸಹ ತಪ್ಪೋಪ್ಪಿಕೊಂಡಿರುತ್ತಾನೆ. 

      ಈತನು ಇದೇ ಕೆ.ಅರ್.ಪೇಟೆ ಟೌನ್ ಠಾಣೆಯ ಪ್ರ.ಸಂ 245/12 ಕಲಂಃ 379 ಐಪಿಸಿ ಪ್ರಕರಣಕ್ಕೆ ಸಂಬಂದಪಟ್ಟಂತೆ ಆರೋಪಿಯಾಗಿ ಮಂಡ್ಯ ಜೈಲಿನಲ್ಲಿದ್ದಾಗ ಈತನಿಗೆ ಮೈಸೂರು ನಗರ ವಾಸಿ ಎಂಓ ಅಸಾಮಿಯಾದ ಕೆಂಡ @ ನಾಗರಾಜ @ ನಾಗ ಈತನು ಮಂಡ್ಯ ಜೈಲಿನಲ್ಲಿ ಪರಿಚಯವಾಗಿ ನಂತರ ಇಬ್ಬರೂ ಜಾಮೀನಿನ ಮೇಲೆ ಹೊರಬಂದು ದಿನಾಂಕಃ 09.03.13. ರಂದು ಬೆಂಗಳೂರು ಸಿಟಿ, ಸೋಲದೇವನಹಳ್ಳಿ ಪೊಲೀಸ್ ಠಾಣಾ ಮೊಃಸಂಃ 30/2013 ಕಲಂಃ 454, 457, 380 ಐಪಿಸಿ ಪ್ರಕರಣದಲ್ಲಿ ಸೋಲದೇವನಹಳ್ಳಿ ವ್ಯಾಪ್ತಿಗೆ ಸೇರಿದ ಚಿಕ್ಕಸಂದ್ರ ಬಡಾವಣೆಯ ವಾಸಿ ಶ್ರೀ ಕೆ.ಎಸ್. ರವಿಶಂಕರ್ ಎಂಬುವರ ಮನೆಯ ಬಾಗಿಲ ಬೀಗವನ್ನು ಮುರಿದು ಅವರ ಮನೆಯಲ್ಲಿದ್ದ ಚಿನ್ನಾಬರಣಗಳನ್ನು ಕಳವು ಮಾಡಿ ಹಾಗೂ ಅವರ ಮನೆಯ ಮುಂದೆ ನಿಲ್ಲಿಸಿದ್ದ ಒಂದು ಕೆಎ-02 ಎಂಬಿ-6492 ರ ಅಲ್ಟೋ ಕಾರನ್ನು ಕಳ್ಳತನ ಮಾಡಿಕೊಂಡು ಕೆ.ಅರ್.ಪೇಟೆಗೆ ಬಂದಿದ್ದು ನಂತರ ಕಳವು ಮಾಡಿರುವ ಚಿನ್ನಾಭರಣಗಳನ್ನು ತಾನೇ ಸಂಪೂರ್ಣವಾಗಿ ಅಭರಣ ಹೊಡೆದುಕೊಳ್ಳಬೇಕು ಎಂಬ ದುರುದ್ದೇಶದಿಂದ ಮತ್ತೊಬ್ಬ ಎಂಓ ಅಸಾಮಿಯಾದ ಕೆಂಡ @ ನಾಗರಾಜ @ ನಾಗ ಈತನಿಗೆ ಅತಿಯಾದ ಮದ್ಯಪಾನ ಮಾಡಿಸಿ ಮೇಲುಕೋಟೆ ರಸ್ತೆಯಲ್ಲಿರುವ ನಾರಾಯಣ ದುರ್ಗ ಅರಣ್ಯ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಆತನಿಗೆ ತನ್ನ ಬಳಿ ಇದ್ದ ಕಬ್ಬಿಣದ ರಾಡಿನಿಂದ ತಲೆಗೆ ಬಾಗಕ್ಕೆ ಬಲವಾಗಿ ಹೊಡೆದು ಅದೇ ಕಾರಿನ ಹಿಂಬಾಗದ ಸೀಟಿನಲ್ಲಿ ಕೂರಿಸಿ ಕಾರಿನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವುದಾಗಿ ತಿಳಿಸಿರುತ್ತಾರೆ. ನಂತರ ಕಳವು ಮಾಡಿದ ಚಿನ್ನಾಭರಣಗಳನ್ನು ತನ್ನ ಹೆಂಡತಿ ವರಲಕ್ಷ್ಮಿಗೆ ಹಾಗೂ ತನ್ನ ದೊಡ್ಡ ಅತ್ತೆ ಶಿವಲಿಂಗಮ್ಮ ಎಂಬುವರಿಗೆ ಕೊಟ್ಟಿರುವುದಾಗಿ ತಿಳಿಸಿರುತ್ತಾರೆ. 

     ಈ ಪ್ರಕರಣದ ಚಿನ್ನಾಭರಣಗಳನ್ನು ಆರೋಪಿಯ ಹೆಂಡತಿ ವರಲಕ್ಷ್ಮಿ ಇವರಿಂದ ಒಂದು ಮುತ್ತಿನ ಸರ 25 ಗ್ರಾಂ, 600 ಮಿಲಿ, ಒಂದು ಜೊತೆ ಮುತ್ತಿನ ಓಲೆ 4 ಗ್ರಾಂ 800 ಮಿಲಿ, 2 ಎಳೆ ಚಿನ್ನದ ಮಾಂಗಲ್ಯ ಸರ 45 ಗ್ರಾಂ 500 ಮಿಲಿ ಹಾಗೂ ಆರೋಪಿಯ ದೊಡ್ಡ ಅತ್ತೆ ಶಿವಲಿಂಗಮ್ಮ ಈಕೆ ಕೆ.ಅರ್.ಪೇಟೆ ಮುತ್ತೂಟ್ ಪಿನ್ ಕಾರ್ಫ್ ನಲ್ಲಿ ಗಿರವಿ ಇಟ್ಟಿದ್ದ ಒಂದು ಜೊತೆ ಬಳೆ 48 ಗ್ರಾಂ 600 ಮಿಲಿ, ಒಂದು ಜೊತೆ ಸಾದಾ ಬಳೆ 18 ಗ್ರಾಂ 650 ಮಿಲಿ ಹಾಗೂ ಮನೆಯಲ್ಲಿಟ್ಟಿದ್ದ ಒಂದು ಜೊತೆ ಬಳೆ 23 ಗ್ರಾಂ 500 ಮಿಲಿ, ಒಂದು ನೆಕ್ಲೇಸ್ 14 ಗ್ರಾಂ 500 ಮಿಲಿ, ಒಂದು ಜೊತೆ ಸಾದಾ ಓಲೆ 10 ಗ್ರಾಂ 400 ಮಿಲಿ, ಒಂದು ಲೇಡಿಸ್ ಉಂಗುರ 2 ಗ್ರಾಂ 600 ಮಿಲಿ, ಒಂದು ಹವಳದ ಉಂಗುರ 6 ಗ್ರಾಂ 500 ಮಿಲಿ ಒಟ್ಟು 171 ಗ್ರಾಂ 100 ಮಿಲಿ ಇರುವ ಚಿನ್ನಾಭರಣಗಳನ್ನು ಅಮಾನತ್ತು ಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುತ್ತೆ. ಅತ್ಯಂತ ಕ್ಲಿಷ್ಠವಾಗಿದ್ದ ಈ ಪ್ರಕರಣವನ್ನು ಅತ್ಯಂತ ಜಾಣ್ಮೆಯಿಂದ ಪ್ರಕರಣವನ್ನು ಬೇದಿಸಿರುತ್ತಾರೆ. 

   ಮಾನ್ಯ ಮಂಡ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ಭೂಷಣ ಗುಲಾಬರಾವ್ ಬೊರಸೆ, ಐ.ಪಿ.ಎಸ್ ಹಾಗೂ ಅಪರ ಪೊಲೀಸ್ ಅಧೀಕ್ಷಕರಾದ ಶ್ರೀ ಎ.ಎನ್. ರಾಜಣ್ಣ ಹಾಗೂ ಶ್ರೀರಂಗಪಟ್ಟಣ ಉಪ ವಿಬಾಗದ ಉಪ ಪೊಲೀಸ್ ಅಧೀಕ್ಷಕರಾದ ಕಲಾ ಕೃಷ್ಣಸ್ವಾಮಿ ಇವರುಗಳ ಮಾರ್ಗದರ್ಶನದಲ್ಲಿ ಈ ಪ್ರಕರಣವನ್ನು ಕೆ.ಅರ್.ಪೇಟೆ ವೃತ್ತ ನಿರೀಕ್ಷಕರಾದ ಶ್ರೀ ಎಸ್.ಎನ್. ಸಂದೇಶಕುಮಾರ್ ರವರು ಮತ್ತು ಅವರ ಅದಿಕಾರಿ ಮತ್ತು ಸಿಬ್ಬಂದಿಯವರಾದ ಆರಕ್ಷಕ ಉಪ ನಿರೀಕ್ಷಕರಾದ ರಂಗಸ್ವಾಮಿ ಮತ್ತು ಡಿ.ಪಿ. ದನರಾಜ್ ಮತ್ತು ಮುಖ್ಯ ಪೇದೆಗಳಾದ ಮಹದೇವಯ್ಯ, ಶಿವಣ್ಣ, ಸಿಬ್ಬಂದಿಗಳಾದ ಕೃಷ್ಣೇಗೌಡ, ಪ್ರಶಾಂತ್ ಕುಮಾರ್, ನಾಗರಾಜು, ಮಹಿಳಾ ಸಿಬ್ಬಂದಿಯಾದ ಸುಜಾತಾ ಇವರುಗಳ ಕಾರ್ಯವನ್ನು ಮಾನ್ಯ ಅರಕ್ಷಕ ಅಧೀಕ್ಷಕರಾದ ಶ್ರೀ ಭೂಷಣ ಗುಲಾಬರಾವ್ ಬೊರಸೆ, ಐ.ಪಿ.ಎಸ್ ರವರು ಪ್ರಶಂಶಿಸಿ 10000 ರೂಗಳ ಬಹುಮಾನವನ್ನು ಘೋಷಿರುತ್ತಾರೆ

No comments:

Post a Comment