Moving text

Mandya District Police

DAILY CRIME REPORT DATED : 20-04-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 20-04-2013 ರಂದು ಒಟ್ಟು 32 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 3 ರಾಬರಿ ಪ್ರಕರಣಗಳು,  2 ರಸ್ತೆ ಅಪಘಾತ ಪ್ರಕರಣಗಳು,  2 ವಾಹನ ಕಳವು ಪ್ರಕರಣಗಳು,  1 ಚುನಾವಣಾ ನೀತಿ ಸಂಹಿತೆ ಪ್ರಕರಣ,  ಅಬಕಾರಿ ಕಾಯಿದೆ ಪ್ರಕರಣಗಳು, ಚುನಾವಣಾ ಮುಂಜಾಗ್ರತಾ ಪ್ರಕರಣಗಳು ಹಾಗು ಇತರೆ 24 ಪ್ರಕರಣಗಳು ವರದಿಯಾಗಿರುತ್ತವೆ.


ರಾಬರಿ ಪ್ರಕರಣಗಳು :

1. ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 191/13 392,  ಐ.ಪಿ.ಸಿ.

     ದಿನಾಂಕ: 20-04-2013 ರಂದು ಪಿರ್ಯಾದಿ ಬಿ. ಕೇಶವ ಬಿನ್. ಎಸ್. ಭೀಮರಾಜು, ಆಶೋಕ ನಗರ, ಮಂಡ್ಯ, ವಿದ್ಯಾನಗರ, ಶಿವಮೊಗ್ಗ ಟೌನ್ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಯಾರೋ ಇಬ್ಬರು ಅಪರಿಚಿತ ಮೋಟಾರು ಬೈಕು ಸವಾರರು ಸುಮಾರು 19 ರಿಂದ 20 ವರ್ಷದವರು ಪಿರ್ಯಾದಿಯವರು ಬಿಲ್ ಕಲೆಕ್ಷನ್ ಮಾಡಿಕೊಂಡು ಬಿಲ್ಗಳು ಮತ್ತು ಹಣ ಸುಮಾರು 50-60 ರೂ ನಗದು ಹಣವನ್ನು ಟಾರ್ಪಲ್ ಬ್ಯಾಗಿನಲ್ಲಿ ಇಟ್ಟುಕೊಂಡು ಪೇಟೆ ಬಿದಿಗೆ ಹೋಗಲು ಗುತ್ತಲಿನಿಂದ ಹೊರಟು ಎಸ್,ಎಫ್ ಸರ್ಕಲ್ ಮೂಲಕ ಹಳೆ ಎಂ.ಸಿ ರಸ್ತೆ ಷುಗರ್ ಟೌನ್ ಷುಗರ್ ಕಂಪನಿಯ ಮುಖ್ಯ ಕಛೇರಿಯ ಪಶ್ಚಿಮದ ಹಳೆ ಸಂಗಪ್ಪನ ಖಾಲಿಸ ಜಾಗದಲ್ಲಿ ಬೈಕ್ ಅನ್ನು ಇಲ್ಲಿಸಿ ಹಣದ ಬ್ಯಾಗಿನ ಸಮೇತ ಮೂತ್ರ ವಿಸರ್ಜನೆ ಮಾಡುತ್ತಿದ್ದಾಗ ಯಾರೋ ಇಬ್ಬರು ಹಿಂದಿನಿಂದ ಬಂದು ಒಬ್ಬ ಒಂದು ಕಡ್ಡಿಯಿಂದ ವೃಷಣಕ್ಕೆ ಹೊಡೆದಾಗ ಮತ್ತೊಬ್ಬ ಹಣದ ಬ್ಯಾಗನ್ನು ಕಿತ್ತುಕೊಂಡು ಇಬ್ಬರ ಅವರ ಬೈಕ್ ಹತ್ತಿ ಪೂರ್ವಕ್ಕಾದಂತೆ ಹೊರಟು ಹೋಗಿರುತ್ತಾರೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಮದ್ದೂರು ಪೊಲೀಸ್ ಠಾಣೆ ಮೊ.ನಂ. 177/13 ಕಲಂ. 392 ಐ.ಪಿ.ಸಿ.

   ದಿನಾಂಕ: 20-04-2013 ರಂದು ಪಿರ್ಯಾದಿ ಪಾರ್ವತಮ್ಮ ಕೊಂ. ಲೇ|| ರಾಮಕೃಷ್ಣ, ಎಸ್.ಬಿ.ಎಂ. ಮುಂಭಾಗದ ರಸ್ತೆ, ಮದ್ದೂರು ಟೌನ್. ರವರು ನೀಡಿದ ದೂರಿನ ವಿವರವೇನೆಂದರೆ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿರುವಾಗ ಹಿಂಭಾಗದಿಂದ ಏಕಾಏಕಿ ಯಾರೋ ಕಳ್ಳನು ನನ್ನ ಬಲಕತ್ತಿನ ಬಳಿ ಬಂದು ಕೈ ಹಾಕಿ ಬಲವಾಗಿ ಹಿಡಿದುಕೊಂಡು ನನ್ನ ಕತ್ತಿನಲ್ಲಿದ್ದ ಒಂದು ಸುಮಾರು 70ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ಬಲವಾಗಿ ಕಿತ್ತಾಗ ಅದರ ಬಗ್ಗೆ ನನಗೆ ಅರಿವು ಬಂದು ಎಡಗೈಯಿಂದ ನನ್ನ ಕತ್ತಿನ ಸರವನ್ನು ಬಲವಾಗಿ ಹಿಡಿದುಕೊಂಡೆ ಆದರೂ ಆತ ಅರ್ಧ ಸರವನ್ನು ಕಿತ್ತುಕೊಂಡನು. ಉಳಿದರ್ಧ ನನ್ನ ಎಡಗೈಗೆ ಸೇರಿದೆ. ಸುಮಾರು 35ಗ್ರಾಂ ಆಗಿರುತ್ತೆ ಅದರ ಅಂದಾಜು ಬೆಲೆ ಸುಮಾರು 91,000/- ಬೆಲೆ ಆಗಿರುತ್ತದೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


3. ಕೆರಗೋಡು ಪೊಲೀಸ್ ಠಾಣೆ ಮೊ.ನಂ. 60/13 ಕಲಂ. 392 ಐ.ಪಿ.ಸಿ.

   ದಿನಾಂಕ: 20-04-2013 ರಂದು ಪಿರ್ಯಾದಿ ಪಲ್ಲವಿ ಕೋಂ. ರಾಮು, ಸ್ವರ್ಣಸಂದ್ರ, 3 ನೇ ಕ್ರಾಸ್, ಮಂಡ್ಯ ಸಿಟಿ ರವರು ನೀಡಿದ ದೂರು ಏನೆಂದರೆ ದಿನಾಂಕ: 20-04-2013 ರಂದು ಬೆಳಿಗ್ಗೆ 09-50 ಗಂಟೆಯಲ್ಲಿ ಕೀಲಾರ, ಮಂಡ್ಯ ಮುಖ್ಯ ರಸ್ತೆಯಲ್ಲಿ ಯಾರೋ ಇಬ್ಬರು ಅಪರಿಚಿತ ಹುಡುಗರು ಹಣವನ್ನು ಕಲೆಕ್ಟ್ ಮಾಡಿದ್ದು ಒಟ್ಟು ಹಣ 44252/- ರೂಪಾಯಿಗಳನ್ನು ಕಪ್ಪು ಬ್ಯಾಗ್ ನಲ್ಲಿ ಇಟ್ಟುಕೊಂಡು ಸುಮಾರು 09-50 ಗಂಟೆಯಲ್ಲಿ ಕೀಲಾರದಿಂದ ಮಂಡ್ಯಕ್ಕೆ ಕೆಎ-02-ಇಡಿ-651 ಸ್ಕೂಟಿಯಲ್ಲಿ ಹೋಗುವಾಗ ಕೀಲಾರ ಬಳಿಯ ಆಚರ್್ ಸಹ ಬಿಟ್ಟು ಮುಂದೆ ಹಳ್ಳದ ಹತ್ತಿರ ಹೋಗುತ್ತಿದ್ದಾಗ ಯಾರೋ ಇಬ್ಬರು ಅಪರಿಚಿತ ವ್ಯಕ್ತಿ ಹುಡುಗರು ಪಲ್ಸರ್,  ಗಾಡಿಯಲ್ಲಿ ಬಂದು ನನ್ನನ್ನು ಅಡ್ಡಗಟ್ಟಿ ನಿಲ್ಲಿಸಿ ಚಾಕು ತೋರಿಸಿ ನನಗೆ ನನ್ನ ಹತ್ತಿರ ಇದ್ದ ಹಣದ ಬ್ಯಾಗನ್ನು ಕಿತ್ತುಕೊಂಡು ಹೊರಟು ಹೋದರು. ಗಾಬರಿಯಲ್ಲಿ ಗಾಡಿಯ ಸಂಖ್ಯೆಯನ್ನು ನೋಡಲಿಲ್ಲ. ಸದರಿ ವ್ಯಕ್ತಿಗಳನ್ನು ನೋಡಿದರೆ ಗುತರ್ಿಸುತ್ತೇನೆ. ಈ ಮೇಲ್ಕಂಡ ಹಣವನ್ನು ಪತ್ತ್ತೆ ಮಾಡಿಕೊಟ್ಟು ಕಾನೂನು ರೀತಿಯಾಗಿ ಕ್ರಮ ಜರುಗಿಸಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ರಸ್ತೆ ಅಪಘಾತ ಪ್ರಕರಣಗಳು :

1. ಬಿಂಡಿಗನವಿಲೆ ಪೊಲೀಸ್ ಠಾಣೆ ಮೊ.ನಂ. ಕಲಂಃ 59/13 ಕಲಂ. 279-304(ಎ) ಐಪಿಸಿ ಕೂಡ 187 ಐಎಂವಿ ಆಕ್ಟ್.

     ದಿನಾಂಕ: 20-04-2013 ರಂದು ಪಿರ್ಯಾದಿ ಲಕ್ಷ್ಮಮ್ಮ @ ಸಾವಿತ್ರಮ್ಮ ಕೋಂ. ಲೇ.ನಂಜಪ್ಪ, ಪಿಚಿಟ್ಟನಹಳ್ಳಿ ಗ್ರಾಮ, ಬಿಂಡಿಗನವಿಲೆ ಹೋ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ  ಪ್ರವೀಣ, ಕೆಎ-04/5485 ರ ಹೀರೊಹೊಂಡಾ ಸಿಡಿ-100 ಬೈಕ್ ಚಾಲಕ, ಮಸ್ಕೋನಹಳ್ಳಿ ಗ್ರಾಮ ರವರು ಮೊಟಾರ್ ಬೈಕ್ನ್ನು ಅತಿ ವೇಗವಾಗಿ ಮತ್ತು ಅಜಾಗೃತೆಯಿಂದ ಚಾಲನೆ ಮಾಡಿಕೊಂಡು ಬಂದು ನಮ್ಮ ತಾಯಿಗೆ ಡಿಕ್ಕಿ ಅಪಘಾತವನ್ನುಂಟು ಮಾಡಿದನು ಇದರಿಂದ ನಮ್ಮ ತಾಯಿ ತಕ್ಷಣ ಕೆಳಗೆ ಬಿದ್ದು ತಲೆಗೆ ತೀವ್ರ ಸ್ವರೂಪದ ಪೆಟ್ಟಾಗಿದ್ದು,. ಮೊಟಾರ್ ಬೈಕ್ ಚಾಲಕ ಬೈಕ್ನ್ನು ನಿಲ್ಲಿಸದೆ ಹೊರಟು ಹೋದನು. ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಿ ಎಂದು ಫಿರ್ಯಾದಿಯವರು ನೀಡಿದ ದೂರಿನ ಮೇರೆಗೆ ಪ್ರ.ವ.ವರದಿ ದಾಖಲಿಸಲಾಗಿದೆ. 


2. ಬಿಂಡಿಗನವಿಲೆ ಪೊಲೀಸ್ ಠಾಣೆ ಮೊ.ನಂ.60/13 ಕಲಂ. 279, 304(ಎ) ಐ.ಪಿ.ಸಿ.

     ದಿನಾಂಕ: 20-04-2013 ರಂದು ಪಿರ್ಯಾದಿ ಸತೀಶ್ ಬಿನ್. ಸುಬ್ಬರಾಮಯ್ಯ, ದಡಗ ಗ್ರಾಮ, ಬಿಂಡಿಗನವಿಲೆ ಹೋಬಳಿ ರವರು ನೀಡಿದ ದೂರು ಏನೆಂದರೆ ಆರೋಪಿ ಅರುಣ. ಕೆ.ಎ-03-ಎಂ.ಎನ್.-6042 ವೆನ್ಟೋ ಕಾರಿನ ಚಾಲಕ ಕಾರನ್ನು ಅತಿವೇಗ ಮತ್ತು ಅಜಾರೂಕತೆಯಿಂದ ಓಡಿಸಿಕೊಂಡು ಬಂದು ಶ್ರೀಮಂದಿರಯ್ಯನವರ ಮೋಟಾರ್ ಸೈಕಲಿಗೆ ಢಿಕ್ಕಿ ಮಾಡಿದ ಪರಿಣಾಮ ಶ್ರೀ ಮಂದಿರಯ್ಯ ನವರ ತಲೆಗೆ, ಕುತ್ತಿಗೆಗೆ, ಮೈ ಕೈಗಳಿಗೆ ಕಾಲುಗಳಿಗೆ, ತೀವ್ರ ಸ್ವರೂಪದ ರಕ್ತಗಾಯವಾಗಿ ಸ್ಥೃಳದಲ್ಲಿಯೇ ಮೃತಪಟ್ಟಿದ್ದು ಈ ಅಪಘಾತ ಮಾಡಿದ ಕಾರಿನ ಚಾಲಕ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ವಾಹನ ಕಳವು ಪ್ರಕರಣಗಳು :

1. ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 83/13 ಕಲಂ. 379 ಐ.ಪಿ.ಸಿ.

   ದಿನಾಂಕ: 20-04-2013 ರಂದು ಪಿರ್ಯಾದಿ ದಿ:07/04/13 ರಂದು ಸಿದ್ದರಾಜು ಬಿನ್. ಚಿಕ್ಕಲಿಂಗೇಗೌಡ, ಅಮೃತೇಶ್ವರನಹಳ್ಳಿ ಗ್ರಾಮ, ಮಳವಳ್ಳಿ ತಾಲ್ಲೋಕು ರವರು ನೀಡಿದ ದೂರು ಏನೆಂದರೆ ಅವರ    ಜಮೀನು ಅಮೃತೇಶ್ವರನಹಳ್ಳಿ ಗ್ರಾಮದ ಸವರ್ೇ. ನಂ.71/6ಎ ಮತ್ತು 71/6ಎಪೈ ಜಮೀನು, ಮಳವಳ್ಳಿ ತಾ. ರಲ್ಲಿ ಆರೋಪಿಗಳಾದ 1) ಜವನೇಗೌಡ, 2) ಮಹದೇವಶೆಟ್ಟಿ ಹಾಗು 3) ನಾಗರಾಜಶೆಟ್ಟಿ ಅಮೃತೇಶ್ವರನಹಳ್ಳಿ ಗ್ರಾಮ ರವರುಗಳು ರಾತ್ರಿ ಸಮಯದಲ್ಲಿ ಕದ್ದು ಟೈರ್ ಗಾಡಿಯಲ್ಲಿ ತುಂಬಿಕೊಂಡು ಕಳ್ಳತನ ಮಾಡಿಕೊಂಡು ಸಾಗಿಸಿರುತ್ತಾರೆಂದು ಇವುಗಳ ಬೆಲೆ ಸುಮಾರು 30,000/- ರೂ.ಗಳಾಗುತ್ತೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 199/13 ಕಲಂ. 379 ಐ.ಪಿ.ಸಿ.

    ದಿನಾಂಕ: 20-04-2013 ರಂದು ಪಿರ್ಯಾದಿ ಬಿ.ಸಿ.ಮಾಯಿಗಯ್ಯ ಒಕ್ಕಲಿಗರು, ಬೇಲೂರು ರವರು ಮೋಟಾರ್ ಮತ್ತು ಪೈಪನ್ನು ಅವರ ಜಮೀನಿನ ಬೋರ್ವೆಲ್ ಗೆ ಅಳವಡಿಸಿದ್ದು, ದಿನಾಂಕ-19-04-13 ರಂದು ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು ಪೈಪ್ ಮತ್ತು ಮೋಟಾರ್ ಎರಡನ್ನೂ ಕಳವು ಮಾಡಿಕೊಂಡು ಹೋಗಿರುತ್ತಾರೆ. ಇದರ ಬೆಲೆ ಸುಮಾರು 8000/- ರೂಗಳಾಗಿರುತ್ತೆಂದು ಪತ್ತೆ ಕ್ರಮ ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಚುನಾವಣಾ ನೀತಿ ಸಂಹಿತೆ ಪ್ರಕರಣ : 

ಕಿಕ್ಕೇರಿ ಪೊಲೀಸ್ ಠಾಣೆ ಮೊ.ನಂ. 105/13 ಕಲಂ. 171 (ಹೆಚ್) ಐ.ಪಿ.ಸಿ.

   ದಿನಾಂಕ: 20-04-2013 ರಂದು ಪಿರ್ಯಾದಿ ಕೆಂಪೇಗೌಡ, ಪಂಚಾಯಿತಿ ಅಭಿವೃದ್ದಿ ಅಧಿಕಾರಿಯವರು, ಹರಳಹಳ್ಳಿ, ಹರಿಯಾಲದಮ್ಮ ಚೆಕ್ ಪೊಸ್ಟ್ನ ಮುಖ್ಯಸ್ಥರು ನೀಡಿದ ದೂರು ಏನೆಂದರೆ ಆರೋಪಿ 1] ಸರ್ವಣ್ಣ ಹಾಗು 2] ಮಂಜುನಾಥ ಇಬ್ಬರೂ ಬೆಂಗಳೂರು ನಗರ ರವರುಗಳು ಮೋಟಾರ್ ಸೈಕಲ್ನಲ್ಲಿ ಬರುತ್ತಿದ್ದು ಅವರನ್ನು ಪಿರ್ಯಾದಿಯವರು ತಡೆದು ತಪಾಸಣೆ ಮಾಡುತ್ತಿದ್ದಾಗ ಹಿಂದೆ ಕುಳತಿದ್ದ ಆರೋಪಿ-2 ರವರ ಕೈಯ್ಯಲ್ಲಿ ಒಂದು ಪ್ಲಾಸ್ಟಿಕ್ ಕವರ್ ಇದ್ದು ಕವರ್ ನಲ್ಲಿ   1,65,000-00 ರೂ ನಗದು ಹಣವಿದ್ದು ಎಲ್ಲಿಂದ ಎಲ್ಲಿಗೆ ತೆಗೆದುಕೊಂಡು ಹೋಗುತ್ತಿದ್ದೀರ ಚುನಾವಣಾ ನೀತಿ ಸಂಹಿತೆ ಇದ್ದುದರಿಂದ ಮತ್ತು ಹಣವನ್ನು ತೆಗೆದುಕೊಂಡು ಹೋಗುತ್ತಿದ್ದವರ ಬಳಿ ಯಾವುದೇ ರೀತಿಯ ಸೂಕ್ತ ದಾಖಲಾತಿಗಳು ಇಲ್ಲದ ಕಾರಣ ಆರೋಪಿಗಳನ್ನು ಮತ್ತು ಮಾಲಿನ ಸಮೇತ ದೂರು ದಾಖಲಿಸಿರುತ್ತಾರೆಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.

No comments:

Post a Comment