Moving text

Mandya District Police

DAILY CRIME REPORT DATED : 28-04-2013


ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 28-04-2013 ರಂದು ಒಟ್ಟು 22 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 2 ಕಳವು ಪ್ರಕರಣಗಳು,  3 ಯು.ಡಿ.ಆರ್. ಪ್ರಕರಣಗಳು,  1 ಮಹಿಳಾ ದೌರ್ಜನ್ಯ / ವರದಕ್ಷಿಣೆ ಕಿರುಕುಳ ಪ್ರಕರಣ,  1 ಅಪಹರಣ ಪ್ರಕರಣ, 1 ವಂಚನೆ ಪ್ರಕರಣ, 1 ರಾಬರಿ ಪ್ರಕರಣ ಹಾಗು 13 ಚುನಾವಣಾ ಅಕ್ರಮ/ಮುನ್ನೆಚ್ಚರಿಕೆ ಪ್ರಕರಣಗಳು, ಅಬಕಾರಿ ಪ್ರಕರಣಗಳು ಮತ್ತು ಇತರೆ ಐ.ಪಿ.ಸಿ. ಪ್ರಕರಣಗಳು ವರದಿಯಾಗಿರುತ್ತವೆ. 


ಕಳವು ಪ್ರಕರಣಗಳು :

1. ಕೆ.ಆರ್.ಸಾಗರ ಪೊಲೀಸ್ ಠಾಣೆ ಮೊ.ನಂ. 105/13 ಕಲಂ. 379 ಐ.ಪಿ.ಸಿ.

       ದಿನಾಂಕ: 28-04-2013 ರಂದು ಪಿರ್ಯಾದಿ ಆರ್ ನಾಗೇಶ್ ರಾವ್.  ಬಿನ್. ಎಸ್. ರಾಮರಾವ್, ಮನೆ. ನಂ-52, 2ನೇ ಹಂತ, 7ನೇ ಕ್ರಾಸ್, ನಿವೇದಿತ ನಗರ, ಮೈಸೂರು ಸಿಟಿ ರವರು ನೀಡಿದ ದೂರಿನ ವಿವರವೇನೆಂದರೆ ಪಿರ್ಯಾದಿಯವರು ಹಾಗೂ ಅವರ ಸ್ನೇಹಿತರು ನಂ.ಕೆಎ-55-ಎಂ-1843 ಮಾರುತಿ ಓಮಿನಿ ಕಾರಿನಲಿ ಪ್ರವಾಸಕ್ಕೆಂದು ಬಲಮುರಿಗೆ ಬಂದಿದ್ದು ಸ್ನಾನ ಮಾಡುವ ಸಲುವಾಗಿ ಪಿರ್ಯಾದಿಯವರ ಬಾಬ್ತು ಬ್ಲಾಕ್ ಬೆರಿ ಮೊಬೈಲ್ ಹಾಗೂ ಅವರ ಸ್ನೇಹಿತರ ಇತರೇ 5 ಮೊಬೈಲ್ ಎಟಿಎಂ ಕಾರ್ಡ, ಡ್ರೈವಿಂಗ್ ಲೆಸನ್ಸ್ಗಳನ್ನು  ಕಾರಿನಲ್ಲಿಟ್ಟು ಲಾಕ್ ಮಾಡಿದ್ದು, ವಾಪಸ್ 03-00 ಗಂಟೆಗೆ ಬಂದು ನೋಡಲಾಗಿ ಕಾರಿನಲ್ಲಿದ್ದ ಮೇಲ್ಕಂಡ ವಸ್ತುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಒಟ್ಟು 12600/- ರೂ ನಗದು, ಮೊಬೈಲ್ಗಳ ಒಟ್ಟು ಬೆಲೆ ಸುಮಾರು 25000, ಕಳುವಾದ ಇಲ್ಲಾ ವಸ್ತುಗಳ ಒಟ್ಟು ಬೆಲೆ 37600/- ರೂ ಗಳಾಗಿರುತ್ತೆ ಇವುಗಳನ್ನು ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಅರಕೆರೆ ಪೊಲೀಸ್ ಠಾಣೆ ಮೊ.ನಂ. 155/13 ಕಲಂ. 379 ಐ.ಪಿ.ಸಿ.

ದಿನಾಂಕ: 28-04-2013 ರಂದು ಪಿರ್ಯಾದಿ ಜಗದೀಶ ಬಿನ್. ಶಿಲ್ಪಾಚಾರ್, 40 ವರ್ಷ, ವಿಶ್ವಕರ್ಮ ಜನಾಂಗ, ಮ್ಯಾನೇಜರ್ ಕೆಲಸ, ವಿಜಯನಗರ, ಮೈಸೂರು ಸಿಟಿ ರವರು ನೀಡಿದ ದೂರು ಏನೆಂದರೆ ದಿನಾಂಕ: 27-04-2013 ರಂದು ರಾತ್ರಿ ವೇಳೆಯಲ್ಲಿ ಹಂಗರಹಳ್ಳಿ ಗ್ರಾಮದ ಆರ್.ಕೆ.ಕೆ ಠಾರ್ ಮಿಕ್ಸಿಂಗ್ ಪ್ಲಾಂಟ್ನಲ್ಲಿ ಫಿರ್ಯಾದಿಯವರು ಮ್ಯಾನೇಜರ್ ಆಗಿದ್ದು, ಸದರಿ ಪ್ಲಾಂಟ್ನಲ್ಲಿ 10 ಅಡಿಗಳ ಅಂತರದಲ್ಲಿ 2 ಹೆಚ್.ಪಿ ಕಿರ್ಲೋಸ್ಕರ್  ಕಂಪನಿಯ 4 ಡಿ.ಸಿ. ಮೋಟಾರ್ ಗಳನ್ನು  ಅಳವಡಿಸಿದ್ದು, ದಿನಾಂಕಃ 27-04-2013 ರಂದು ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು ಈ 4 ಡಿಸಿ ಮೋಟಾರ್ ಗಳನ್ನು  ಕಳುವು ಮಾಡಿಕೊಂಡು ಹೋಗಿರುತ್ತಾರೆ ಇವುಗಳ ಬೆಲೆ ಸುಮಾರು 49,000/- ರೂ. ಆಗುತ್ತದೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಯು.ಡಿ.ಆರ್. ಪ್ರಕರಣಗಳು :

1. ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 16/13 ಕಲಂ. 174 ಸಿ.ಆರ್.ಪಿ.ಸಿ.

    ದಿನಾಂಕ: 28-04-2013 ರಂದು ಪಿರ್ಯಾದಿ ಭಾಗ್ಯಮ್ಮ ಕೋಂ. ಶಿವಲಿಂಗಶೆಟ್ಟಿ, ಪಟ್ಟಸೋಮನಹಳ್ಳಿ ಗ್ರಾಮ, ಪಾಂಡವಪುರ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಅವರ ಗಂಡ ಶಿವಲಿಂಗಶೆಟ್ಟಿ, 55ವರ್ಷ, ಪಟ್ಟಸೋಮನಹಳ್ಳಿ ಗ್ರಾಮ ರವರು ಕ್ರಿಮಿನಾಶಕವನ್ನು ಸಿಂಪಡಿಸುವಾಗ ಗಾಳಿಯಲ್ಲಿ ನನ್ನ ಗಂಡ ಕ್ರಿಮಿನಾಶಕವನ್ನು ಸೇವಿಸಿ ನಿತ್ರಾಣಗೊಂಡು ಅಲ್ಲೇ ಜಮೀನಿನ ಬಳಿ ಇದ್ದರು ನಾವುಗಳು ಸಂಜೆ 06-00 ಗಂಟೆಗೆ ಹೋಗಿ ನೋಡಲಾಗಿ ಎದೆ ಉರಿ ಎಂದು ತುಂಬಾ ಅಸ್ವಸ್ಥಗೊಂಡಿದ್ದರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತ ಹೊಂದಿರುತ್ತಾರೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 17/13 ಕಲಂ. 174 ಸಿ.ಆರ್.ಪಿ.ಸಿ.
         
         ದಿನಾಂಕ: 28-04-2013 ರಂದು ಪಿರ್ಯಾದಿ ನಿಂಗರಾಜು ಬಿನ್. ಬಸವಶೆಟ್ಟಿ, ಉಮ್ಮತ್ತೂರು ಗ್ರಾಮ, ಸಂತೇಮರಹಳ್ಳಿ ಹೋಬಳಿ, ಚಾಮರಾಜನಗರ ತಾ.ರವರು ನೀಡಿದ ದೂರು ಏನೆಂದರೆ ದಿನಾಂಕ:28-04-2013 ರಂದು ದೇವೇಗೌಡನಕೊಪ್ಪಲು ಗ್ರಾಮದಲ್ಲಿ ಬೀಸಿದ ಗಾಳಿಯ ರಭಸಕ್ಕೆ ಮತ್ತು ಮಿಂಚಿನಿಂದ ಆಕಸ್ಮಿಕವಾಗಿ ದೊಡ್ಡತೆಂಗಿನ ಮರ ಮುರಿದು ತನ್ನ ತಂದೆ ಬಸವಶೆಟ್ಟಿ, ಉಮ್ಮತ್ತೂರು ಗ್ರಾಮ, ಸಂತೇಮರಹಳ್ಳಿ ಹೋಬಳಿ, ಚಾಮರಾಜನಗರ ರವರ ಮೇಲೆ ಬಿದ್ದು, ಮೂಗು ಬಾಯಿಯಿಂದ ರಕ್ತ ಬಂದು ತಲೆ ಹೊಡೆದುಹೋಗಿರುತ್ತದೆ. ಬೀಸಿದ ಬಿರುಗಾಳಿ ಮತ್ತು ಮಿಂಚಿನಿಂದ ಆಕಸ್ಮಿಕವಾಗಿ ತೆಂಗಿನ ಮರ ಮುರಿದು ನಮ್ಮ ತಂದೆಯ ಮೇಲೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿರುತ್ತಾರೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


3. ಕೊಪ್ಪ ಪೊಲೀಸ್ ಠಾಣೆ ಯು.ಡಿ.ಆರ್. ನಂ. 04/13 ಕಲಂ. 174(ಸಿ) ಸಿ.ಆರ್.ಪಿ.ಸಿ. 

        ದಿನಾಂಕ: 28-04-2013 ರಂದು ಪಿರ್ಯಾದಿ ಮಹದೇವ ಲೇಟ್. ಜವರಯ್ಯ, ಕೊಡಿಯಾಲ, ಅರೆಕೆರೆ ಹೋಬಳಿ, ಶ್ರೀರಂಗಪಟ್ಟಣ ತಾ. ಮಂಡ್ಯ ಜಿಲ್ಲೆ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅವರ ಅಕ್ಕನಾದ ಲಕ್ಷ್ಮಿ ಕೋಂ. ಕುಮಾರ, 28ವರ್ಷ, ಪರಿಶಿಷ್ಠ ಜಾತಿ, ಚಿಕ್ಕಹೊಸಗಾವಿ ಗ್ರಾಮ, ಕೊಪ್ಪ ಹೋಬಳಿ ವಾಸಿ, ಎಂಬುವವಳು ಮನೆಯಲ್ಲಿ ನೇಣುಹಾಕಿಕೊಂಡು ಸತ್ತಿದ್ದು ಈ ಬಗ್ಗೆ ತಾನು ಗ್ರಾಮಕ್ಕೆ ಬಂದಾಗ ಗ್ರಾಮದಲ್ಲಿ ಮೃತಳ ಜೊತೆ ಆಕೆಯ ಗಂಡ ಕುಮಾರ, ಮೈದುನ ಶಂಕರ, ಅತ್ತೆ ಸಣ್ಣಮ್ಮ, ವಾರಗಿತ್ತಿ ಪ್ರೇಮ ಎಂಬುವವರುಗಳು ಜಗಳ ಮಾಡಿದ್ದು ಈ ಹಿನ್ನೆಲೆಯಲ್ಲಿ ನೇಣು ಹಾಕಿಕೊಂಡು ಸತ್ತಿರುವುದಾಗಿದ್ದು ಈಕೆಯ ಸಾವಿನ  ಬಗ್ಗೆ ಅನುಮಾನವಿರುವುದಾಗಿ ಮುಂದಿನ ಕ್ರಮ ಕೈಗೊಳ್ಳುವಂತೆ ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಮಹಿಳಾ ದೌರ್ಜನ್ಯ / ವರದಕ್ಷಿಣೆ ಕಿರುಕುಳ ಪ್ರಕರಣ :

ಮೇಲುಕೋಟೆ ಪೊಲೀಸ್ ಠಾಣೆ ಮೊ.ನಂ. 66/13 ಕಲಂ. 498[ಎ] ಐ.ಪಿ.ಸಿ. 

       ದಿನಾಂಕ: 28-04-2013 ರಂದು ಪಿರ್ಯಾದಿ ಡಿ.ಗೋದಾ ಕೋಂ. ಎಲ್.ಎಲ್.ಲೋಕೇಶ, ಕಲ್ಯಾಣಿ ಬೀದಿ, [ಭಕ್ತ ಮಂಡಳಿ] ಮೇಲುಕೋಟೆ ಟೌನ್ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಎಲ್.ಎನ್. ಲೋಕೇಶ್, ಮೇಲುಕೋಟ್ ಟೌನ್, ಪಾಂಡವಪುರ ತಾಲ್ಲೋಕು ರವರು ಪ್ರತಿ ದಿನ ನನ್ನ ಮೇಲೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ ನೀಡುತ್ತಿದ್ದಾರೆ ದಿನಾಂಕಃ-24-04-2013 ರಂದು ಸಂಜೆ 5 ಗಂಟೆಯಲ್ಲಿ ಅದೇ ರೀತಿ ನಡೆದುಕೊಂಡಿರುತ್ತಾರೆ ಅದ್ದ್ರರಿಂದ ದಯಮಾಡಿ ಕಾನೂನು ರೀತಿಯಲ್ಲಿ ಸೂಕ್ತ ರಕ್ಷಣೆಬೇಕೆಂದು ನೀಡಿದ ದೂರಿನ ಮೇರೆಗೆ ಕೇಸು ದಾಖಲು ದಾಖಲಿಸಲಾಗಿರುತ್ತದೆ.


ಅಪಹರಣ ಪ್ರಕರಣ :

ಹಲಗೂರು ಪೊಲೀಸ್ ಠಾಣೆ ಮೊ.ನಂ. 92/13 ಕಲಂ. 364. 506 ಕೂಡ 34 ಐ.ಪಿ.ಸಿ.

       ದಿನಾಂಕ: 28-04-2013 ರಂದು ಪಿರ್ಯಾದಿ ಚಿಕ್ಕತಾಯಮ್ಮ ಕೋಂ. ಲೇಟ್. ಮರಿದೇವರು, ಟಿ.ಕೆ.ಹಳ್ಳಿ ಗ್ರಾಮ ರವರು ನೀಡಿದ ದೂರು ಏನೆಂದರೆ ಆರೋಪಿಗಳಾದ 1] ಕುಮಾರ ಬಿನ್. ಹೊನ್ನಯ್ಯ. 2] ಕರಿಯಪ್ಪ ಬಿನ್. ದಡಿಯಯ್ಯ, ಇಬ್ಬರೂ ತೊರೆಕಾಡನಹಳ್ಳಿ ಗ್ರಾಮ ರವರುಗಳು ಪಿರ್ಯಾದಿಯವರನ್ನು ಕೊಲೆ ಮಾಡುವ ಉದ್ದೇಶದಿಂದ ಅಪಹರಣ ಮಾಡಿಕೊಂಡು ಆಟೋದಲ್ಲಿ ಕರೆದುಕೊಂಡು ಮದ್ದೂರು ರಸ್ತೆಯಿಂದ ಓದುಬಸಪ್ಪನದೊಡ್ಡಿ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ಆಟೋದಲ್ಲಿ ಹೋಗುತ್ತಿದ್ದಾಗ ಪಿರ್ಯಾದಿಯವರು ಕಿರುಚಿಕೊಂಡಾಗ ಅಲ್ಲಿನ ಗ್ರಾಮಸ್ಥರು ಆಟೋವನ್ನು ಅಡ್ಡಗಟ್ಟಿ ಪಿರ್ಯಾದಿಯವರನ್ನು ಪ್ರಾಣಪಾಯದಿಂದ ಕಾಪಾಡಿರುತ್ತಾರೆ ಆರೋಪಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ವಂಚನೆ ಪ್ರಕರಣ :

ಹಲಗೂರು ಪೊಲೀಸ್ ಠಾಣೆ ಮೊ.ನಂ. 93/13 ಕಲಂ. 420, 114 ಕೂಡ 34 ಐ.ಪಿ.ಸಿ.

ದಿನಾಂಕ:28-04-2013 ರಂದು ಪಿರ್ಯಾದಿ ಪ್ರಿಯಾ ಕೆ. ಬಿನ್. ಕೃಷ್ಣ, ಕರಡಹಳ್ಳಿ ಗ್ರಾಮ, ಮಳವಳ್ಳಿ ತಾ. ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿಗಳಾದ 1] ಸಂಪಂಗಿರಾಮ ಬಿನ್. ಶ್ರೀನಿವಾಸಯ್ಯ. 2] ರಂಗನಾಯಕಮ್ಮ ಕೋಂ. ಶ್ರೀನಿವಾಸಯ್ಯ, ಕರಡಹಳ್ಳಿ ಗ್ರಾಮ ರವರುಗಳು ಪಿರ್ಯಾದಿಯವರ ತಂದೆ ತಾಯಿಯವರು ಮದುವೆ ಮಾಡುವ ಸಲುವಾಗಿ ಮನೆಯಲ್ಲಿ ಇಟ್ಟಿದ್ದ ಹಣವನ್ನು ತೆಗೆದುಕೊಂಡು ಬಾ ಕನಕಪುರದಲ್ಲಿ ಚಿನ್ನದ ಬೆಲೆ ಕಡಿಮೆ ಇದೆ ಎಂದು ಹೇಳಿ ನಂಬಿಸಿ ಮನೆಯಲ್ಲಿದ್ದ 20ಸಾವಿರ ರೂನಗದು ಮತ್ತು 20 ಗ್ರಾಂ ಚಿನ್ನದ ಸರವನ್ನು ತೆಗೆದುಕೊಂಡು ಕನಕಪುರಕ್ಕೆ ಆರೋಪಿಯು ಪಿರ್ಯಾದಿಯವರನ್ನು ಕರೆದುಕೊಂಡು ಹೋಗಿ ಇಲ್ಲಿ ಕಳ್ಳರು ಇದ್ದಾರೆ ನಿನ್ನ ಸರವನ್ನು ಬಿಚ್ಚಿಕೊಡು ನನ್ನ ಜೇಬಿನಲ್ಲಿ ಇಟ್ಟಿರುತ್ತೇನೆ ಎಂದು ಹೇಳಿ ಹಣ ಮತ್ತು ವಡವೆಯನ್ನು ತೆಗೆದು- ಕೊಂಡು ನಿಮ್ಮ ತಂದೆ-ತಾಯಿಯನ್ನು ಕರೆದುಕೊಂಡು ಬರುತ್ತೇನೆ ಎಂದು ಹೇಳಿ ಹೋದವನು ವಾಪಸ್ಸು ಬಂದಿರುವುದಿಲ್ಲ ನನ್ನನ್ನು ನಂಬಿಸಿ 20 ಸಾವಿರ ರೂ ನಗದು ಹಾಗೂ ಚಿನ್ನದ ಸರವನ್ನು ತೆಗೆದುಕೊಂಡು ಹೋಗಲು ಆತನ ತಾಯಿ ಕುಮ್ಮಕ್ಕು ನೀಡಿರುತ್ತಾರೆ ಅವರನ್ನು ಪತ್ತೆಹಚ್ಚಿ ಪ್ರಕರಣ ದಾಖಲಿಸಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


 ರಾಬರಿ ಪ್ರಕರಣ :

ಕಿರುಗಾವಲು ಪೊಲೀಸ್ ಠಾಣೆ ಮೊ.ನಂ. 59/13 ಕಲಂ. 392 ಐ.ಪಿ.ಸಿ.

        ದಿನಾಂಕ: 28-04-2013 ರಂದು ಪಿರ್ಯಾದಿ ಲೀಲಾವತಿ ಕೋಂ. ಲಿಂಗಾಚಾರಿ, ದೊಡ್ಡೇಗೌಡನಕೊಪ್ಪಲು ಗ್ರಾಮ, ಮಳವಳ್ಳಿ ತಾಲ್ಲೂಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ಯಾರೋ ಅಪರಿಚಿತ ಇಬ್ಬರು ಗಂಡಸರು ಮೋಟಾರ್ ಬೈಕ್ನಲ್ಲಿ ಬಂದ, ಇಬ್ಬರೂ ಗಂಡಸರು ತಮ್ಮ ಮೋಟಾರ್ ಬೈಕ್ನ್ನು ನಿಲ್ಲಿಸಿ ಅವರಲ್ಲಿ ಒಬ್ಬನು ಕೆಳಗೆ ಇಳಿದು ಬಂದವನೆ ನನ್ನ ಕತ್ತಿಗೆ ಕೈ ಹಾಕಿ  ನನ್ನ ಮಾಂಗಲ್ಯ ಸರವನ್ನು ಅರ್ಧ ಭಾಗದಷ್ಟು ಸರವನ್ನು ಕಿತ್ತುಕೊಂಡಿದ್ದು, ಸುಮಾರು 10 ಗ್ರಾಂ ತೂಕದಷ್ಟಿದ್ದು ಅದನ್ನು ಪತ್ತೆ ಮಾಡಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

No comments:

Post a Comment