Moving text

Mandya District Police

DAILY CRIME REPORT DATED : 31-03-2013


ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 31-03-2013 ರಂದು ಒಟ್ಟು 45 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಕಳ್ಳತನ ಪ್ರಕರಣ,  1 ಕಳವು ಪ್ರಕರಣ,  1 ಯು.ಡಿ.ಆರ್. ಪ್ರಕರಣ,  4 ಮನುಷ್ಯ ಕಾಣೆಯಾದ ಪ್ರಕರಣಗಳು, 1 ಎಸ್.ಸಿ./ಎಸ್.ಟಿ. ದೌರ್ಜನ್ಯ ತಡೆ ಕಾಯಿದೆ ಅಧಿನಿಯಮ ಪ್ರಕರಣ ಹಾಗು 37 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.      

ಕಳ್ಳತನ ಪ್ರಕರಣ :

ಕೆರೆಗೋಡು ಪೊಲೀಸ್ ಠಾಣೆ ಮೊ.ನಂ. 45/13 ಕಲಂ. 457-380 ಐ.ಪಿ.ಸಿ.

ದಿನಾಂಕ: 31-03-2013 ರಂದು ಪಿರ್ಯಾದಿ ಡಿ.ಕೆ. ಬೋರಯ್ಯ ಬಿನ್. ಲೇಟ್. ಕುಳ್ಳಯ್ಯ, ಮುಖ್ಯ ಶಿಕ್ಷಕರು, ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆ, ಹೆಚ್. ಮಲ್ಲಿಗೆರೆ ಫಾರಂ, ಮಂಡ್ಯ ತಾ|| ರವರು ನೀಡಿದ ದೂರಿನ ವಿವರವೇನೆಂದರೆ ಯಾರೋ ಕಳ್ಳರು ಹೆಚ್. ಮಲ್ಲಿಗೆರೆ ಫಾರಂನ ಸರ್ಕಾರಿ  ಹಿರಿಯ ಪ್ರಾಥಮಿಕ ಶಾಲೆಯ ಬಾಗಿಲ ಬೀಗ ಹೊಡೆದು ಒಳಗೆ ಹೋಗಿ ಒಳಗಡೆ ಇಟ್ಟಿದ್ದ, ಬಿಸಿಯೂಟದ 02 ಗ್ಯಾಸ್ ಸಿಲಿಂಡರ್ಗಳನ್ನು ಕಳವು ಮಾಡಿಕೊಂಡು ಹೋಗಿದ್ದು, ಒಂದು ಭರ್ತಿ  ಹಾಗೂ ಮತ್ತು ಒಂದು ಅರ್ಧ ಗ್ಯಾಸ್ ಇದ್ದ ಸಿಲಿಂಡರ್ ಆಗಿರುತ್ತದೆ. ಪತ್ತೆ ಮಾಡಿಕೊಡಿ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


ಕಳವು ಪ್ರಕರಣ :

ಕಿಕ್ಕೇರಿ ಪೊಲೀಸ್ ಠಾಣೆ ಮೊ.ನಂ. 70/13 ಕಲಂ. 379 ಐ.ಪಿ.ಸಿ.

ದಿನಾಂಕ: 31-03-2013 ರಂದು ಪಿರ್ಯಾದಿ ಕೆ.ಸಿ.ಮಂಜುನಾಥ, ವ್ಯವಸಾಯಗಾರರು, ಬಿದರಹಳ್ಳಿ, ಹಾಲಿ ವಾಸ ಹೊಸ ಬೀದಿ, ಕಿಕ್ಕೇರಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಜಮೀನಿ -ನಲ್ಲಿ ಸುಮಾರು 10000/- ರೂ ಬೆಲೆವುಳ್ಳ 1] 35 ಮೀ ಉದ್ದದ, ಹೆಚ್.ಡಿ.ಪಿ.ಇ. 3 ಇಂಚು ದಪ್ಪದ ಪೈಪು, 2] ಕಿಲರ್ೋಸ್ಕರ್ ಕಂಪನಿಯ ಪುಟ್ವಾಲ್ಟ್ ಅಳವಡಿಸಿದ್ದು  ದಿನಾಂಕ: 27-03-2013 ರಂದು ಯಾರೋ ಕಳ್ಳರು ಮೇಲ್ಕಂಡ ವಸ್ತುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಯು.ಡಿ.ಆರ್. ಪ್ರಕರಣ :

ಕಿಕ್ಕೇರಿ ಪೊಲೀಸ್ ಠಾಣೆ ಮೊ.ನಂ. 03/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 31-03-2013 ರಂದು ಪಿರ್ಯಾದಿ ಮಂಜಮ್ಮ ಕೋಂ. ಕಾಳಪ್ಪ, ಕೃಷ್ಣಾಪುರ ಗ್ರಾಮ, ಕೆ.ಆರ್.ಪೇಟೆ ತಾಲ್ಲೋಕು ರವರು ನೀಡಿದ ದೂರಿನ ವಿವರವೇನೆಂದರೆ ಅವರ ಮಗಳು ವನಜ ಬಿನ್. ಕಾಳಪ್ಪ, 17 ವರ್ಷ, ವಿದ್ಯಾಥರ್ಿನಿ, ಅಲೆಮಾರಿ ಜನಾಂಗ, ಕೃಷ್ಣಾಪುರ ಗ್ರಾಮ, ಕಿಕ್ಕೇರಿ ರವರು ಪಿಯುಸಿಯಲ್ಲಿ ಫೇಲ್ ಆಗಿದ್ದು, ಫೇಲ್ ಆಗಿರುವುದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಅವರ ಮನೆಯಲ್ಲಿ ಸೀಮೆಎಣ್ಣೆಯನ್ನು ಮೈ ಮೇಲೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುತ್ತಾಳೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಮನುಷ್ಯ ಕಾಣೆಯಾದ ಪ್ರಕರಣಗಳು :

1. ಮಂಡ್ಯ. ಪೂರ್ವ ಪೊಲೀಸ್ ಠಾಣೆ ಮೊ.ನಂ. 100/13 ಕಲಂ. ಹುಡುಗರು ಕಾಣೆಯಾಗಿದ್ದಾರೆ

       ದಿನಾಂಕ: 31-03-2013 ರಂದು ಪಿರ್ಯಾದಿ ಮಹೇಶ ಹೆಚ್,ಸಿ ಬಿನ್. ಲೇಟ್. ಚಿಕ್ಕಪುಟ್ಟಯ್ಯ, ಮಾರುತಿನಗರ, 7ನೇ ಕ್ರಾಸ್, ಮಂಡ್ಯ ಸಿಟಿ ರವರು ನೀಡಿದ ದೂರಿನ ವಿವರವೇನೆಂದರೆ  ಅವರ ಮಗ ಕೇಶವ, 12 ವರ್ಷ, 6ನೇ ತರಗತಿ, ರವರು ಹಾಗು ವಿಶ್ವನಾಥ ಬಿನ್. ರಾಜು, 11 ವರ್ಷ ರವರುಗಳು ದಿನಾಂಕ:29-03-2013 04-30 ಗಂಟೆ 7ನೇ ಕ್ರಾಸ್, ಮಾರುತಿನಗರಮಂಡ್ಯ ಸಿಟಿ ಪಿರ್ಯಾದಿಯವರ ಮನೆಯ ಮುಂದೆ ಆಟವಾಡುತ್ತಿದ್ದಾಗ ಆಟವಾಡಿಕೊಂಡಿದ್ದವರು ರಾತ್ರಿಯಾದರೂ ವಾಪಸ್ ಮನೆಗೆ ಬಂದಿರುವುದಿಲ್ಲ. ರಾಜುರವರ ಮಗ ವಿಶ್ವಾಥನು ಜೊತೆಯಲ್ಲಿ ಸೈಕಲ್ ತೆಗೆದುಕೊಂಡು ಹೋಗಿರುತ್ತಾನೆ ಪತ್ತೆ ಮಾಡಿಕೊಡಬೇಕೆಂದು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


2. ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 86/13 ಕಲಂ. ಮನುಷ್ಯ ಕಾಣೆಯಾಗಿದ್ದಾನೆ.

ದಿನಾಂಕ: 31-03-2013 ರಂದು ಪಿರ್ಯಾದಿ ವೈ.ಎಂ.ಯೋಗಾನಂದ ಬಿನ್. ಲೇಟ್. ವೈ.ಕೆ.ಮರಿಸಿದ್ದೇಗೌಡ, ವಾಸ ನಂ. 1550, 7ನೇ ಕ್ರಾಸ್, ಚಾಮುಂಡೇಶ್ವರಿನಗರ, ಮಂಡ್ಯ ಸಿಟಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ವೈ.ಎಂ.ಚೇತನಾನಂದ, 40 ವರ್ಷ, ಒಕ್ಕಲಿಗರು, ಮಾನಸಿಕ ಅಸ್ವಸ್ಥ, ವಾಸ ನಂ. 1550, 7ನೇ ಕ್ರಾಸ್, ಚಾಮುಂಡೇಶ್ವರಿ-ನಗರ, ಮಂಡ್ಯ ಸಿಟಿ ರವರು ದಿನಾಂಕ: 01-03-13  ರಂದು 03-00 ಗಂಟೆಯಲ್ಲಿ ಫಿರ್ಯಾದಿಯವರ ಮನೆ, 7ನೇ ಕ್ರಾಸ್, ಚಾಮುಂಡೇಶ್ವರಿನಗರ, ಮಂಡ್ಯ ಸಿಟಿಯಿಂದ ಕಾಣೆಯಾಗಿರುತ್ತಾರೆ ಅವರನ್ನು ಪತ್ತೆಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


3. ಕೆ.ಎಂ.ದೊಡ್ಡಿ ಪೊಲೀಸ್ ಠಾಣೆ ಮೊ.ನಂ. 91/13 ಕಲಂ. ಹುಡುಗಿ ಕಾಣಿಯಾಗಿದ್ದಾಳೆ.

ದಿನಾಂಕ: 31-03-2013 ರಂದು ಪಿರ್ಯಾದಿ ಜಯಕುಮಾರ್ ಬಿನ್. ಕಾಡೇಗೌಡ, ಮಾದರಹಳ್ಳಿ ಗ್ರಾಮ, ಸಿ.ಎ.ಕೆರೆ ಹೋಬಳಿ. ಮದ್ದೂರು ತಾ. ರವರು ನೀಡಿದ ದೂರಿನ ವಿವರವೇನೆಂದರೆ ಅವರ 20 ವರ್ಷದ ಮಗಳು ದಿನಾಂಕ: 28-03-2013 ರಂದು ಮದ್ಯಾಹ್ನ 02-30 ಗಂಟೆಯಲ್ಲಿ, ಕೆ.ಶೆಟ್ಟಹಳ್ಳಿ ಗೇಟ್ (ವೇಬ್ರಿಡ್ಜ್ ) ನಿಂದ ತನ್ನ ಅಜ್ಜಿ ಮನೆಗೆ ಹೋಗುತ್ತೇನೆಂದು ಹೋದವಳು ಕಾಣೆಯಾಗಿರುತ್ತಾಳೆ ಅವಳನ್ನು ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


4. ಬೆಸಗರಹಳ್ಳಿ ಪೊಲೀಸ್ ಠಾಣೆ ಮೊ.ನಂ. 34/13 ಕಲಂ. ಹುಡುಗಿ ಕಾಣಿಯಾಗಿದ್ದಾಳೆ.

ದಿನಾಂಕ: 31-03-2013 ರಂದು ಪಿರ್ಯಾದಿ ಮಾಸ್ತಯ್ಯ ಬಿನ್. ಚಿಕ್ಕೋನು, ಬೆಸಗರಹಳ್ಳಿ ಗ್ರಾಮ, ಮದ್ದೂರು ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅವರ 20 ವರ್ಷದ ಮಗಳು ದಿನಾಂಕ: 28-03-2013 ರಂದು ಬೆಸಗರಹಳ್ಳಿ ಗ್ರಾಮ, ಮದ್ದೂರು ತಾ. ನಿಂದ ಕಾಣೆಯಾಗಿರುತ್ತಾರೆ ಅವರನ್ನು ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಎಸ್.ಸಿ./ಎಸ್.ಟಿ. ದೌರ್ಜನ್ಯ ತಡೆ ಕಾಯಿದೆ ಅಧಿನಿಯಮ ಪ್ರಕರಣ :  

ಶಿವಳ್ಳಿ ಪೊಲೀಸ್ ಠಾಣೆ ಮೊ.ನಂ. 79/13 ಕಲಂ. 3 ಕ್ಸಾಸ್. (V) (X) (XI) ಎಸ್.ಸಿ./ಎಸ್.ಟಿ. ದೌರ್ಜನ್ಯ ತಡೆ ಕಾಯಿದೆ ಅಧಿನಿಯಮ ಪ್ರಕರಣ ಹಾಗು 324 ಕೂಡ 34 ಐ.ಪಿ.ಸಿ.

ದಿನಾಂಕ: 31-03-2013 ರಂದು ಪಿರ್ಯಾದಿ ಕೆ ನಾಗಮ್ಮ, ಕಿರಿಯ ಮಹಿಳಾ ಆರೋಗ್ಯ ಸಹಾಯಕಿ, ಶಿವಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ, ಶಿವಳ್ಳಿ ರವರು ನೀಡಿದ ದೂರು ಏನೆಂದರೆ ಪಿರ್ಯಾದಿರವರು ಪ್ರಾಥಮಿಕ ಆರೋಗ್ಯ ಕೇಂದ್ರ ಶಿವಳ್ಳಿಯಲ್ಲಿ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಪ್ರಾಥಮಿಕ ಆರೋಗ್ಯ ಕೇಂದ್ರದ ವಸತಿ ಗೃಹದಲ್ಲಿ ತಮ್ಮ ಮಗಳಾದ ಹೆಚ್,ಆರ್ ಶ್ವೇತಾರಾಣಿರವರೊಂದಿಗೆ ವಾಸವಾಗಿರುತ್ತಾರೆ. ದಿನಾಂಕ: 31-03-13 ರಂದು ಬೆಳಿಗ್ಗೆ 9-00 ಗಂಟೆಗೆ ನಲ್ಲಿಯಲ್ಲಿ ನೀರು ಹಿಡಿಯಲು ಪಿರ್ಯಾದಿಯವರ ಮಗಳು ಹೋಗಿದ್ದು, ಅದೇ ವಸತಿ ಗೃಹದಲ್ಲಿ ವಾಸವಾಗಿರುವ ಲಲಿತಮ್ಮರವರ ಸಂಬಂದಿ ಶರತ್, ತಾಯಿ ಹಾಗೂ ಲ್ಯಾಬ್ ಟೆಕ್ನೀಷಿಯನ್ ಸವಿತಾರವರು ನಲ್ಲಿಯಲ್ಲಿ ನೀರು ಹಿಡಿಯಬೇಡ ಎಂದು ಹೇಳುತ್ತಿರುವಾಗ ಪಿರ್ಯಾದುದಾರರು ಪ್ರಶ್ನಿಸಿದರು. ಆಗ ಆರೋಪಿಗಳಾದ 1]ಡಿ.ಲಲಿತಮ್ಮ, 2]ಶರತ್. 3]ಲಲಿತಮ್ಮರ ತಾಯಿ ಹಾಗೂ 4]ಸವಿತಾ ರವರು ಪಿರ್ಯಾದಿ ಹಾಗೂ ಆವರ ಮಗಳನ್ನು ಏನೆ ಹೊಲೆಯ ಬಡ್ಡೀರಾ ಎಂದು ಜಾತಿ ನಿಂದನೆ ಮಾಡಿ ತಡೆದು ಅಲ್ಲೇ ಪಕ್ಕದಲ್ಲಿ ಬಿದ್ದಿದ್ದ ಒಂದು ಕಲ್ಲಿನಿಂದ ಹಾಗೂ ಕೈಯಿಂದ ಹೊಡೆದು ಹಲ್ಲೆ ಮಾಡಿ ನೊವುಂಟುಮಾಡಿದರು ಆಗ ಅಲ್ಲೇ ಇದ್ದ ಸುಗುಣ ಬೋರೇಗೌಡ ಎಸ್.ಕೆ.ಪ್ರಕಾಶ್ ಜಗಳ ಬಿಡಿಸಿ ಸಮಾಧಾನಪಡಿಸಿದರು ಅದಾಗ್ಯೂ ಲಲಿತಮ್ಮ ಃಎ ಹೊಲೆಯ ಬಡ್ಡಿ ನಿನಗೆ ಇಷ್ಟಕ್ಕೇ ಮುಗಿಯಲಿಲ್ಲ ಜೈಲಿಗೆ ಹೋದರೂ ಸರಿಯೇ ನಿನ್ನನ್ನು ಕೊಲೆ ಮಾಡುತ್ತೇನೆಂದು ಕೊಲೆ ಬೆದರಿಕೆ ಹಾಕಿರುತ್ತಾಳೆ ಎಂದು ಇತ್ಯಾದಿಯಾಗಿ ನೀಡಿದ ಪಿರ್ಯಾದು ಮೇರೆಗೆ ಪ್ರಕರಣ ದಾಖಲಿಸಲಾಗಿದೆ.   

No comments:

Post a Comment