Moving text

Mandya District Police

DAILY CRIME REPORT DATED : 01-06-2013


ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 01-06-2013 ರಂದು ಒಟ್ಟು 16 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 2 ವಾಹನ ಕಳವು ಪ್ರಕರಣಗಳು,  2 ಯು.ಡಿ.ಆರ್. ಪ್ರಕರಣಗಳು,  1 ಅಕ್ರಮ ಮರಳು ಕಳವು ಪ್ರಕರಣ/ಕರ್ನಾಟಕ  ಉಪಖನಿಜ ನಿಯಮಾವಳಿ-1994  ಹಾಗೂ ನಿಯಮ 4(1ಎ) ಮತ್ತು 21 (1 ರಿಂದ 5) ಎಂ.ಎಂ.ಆರ್.ಡಿ. ಕಾಯಿದೆ ಪ್ರಕರಣ,  1 ಮನುಷ್ಯ ಕಾಣೆಯಾದ ಪ್ರಕರಣ,  1 ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ ಹಾಗು 9 ಇತರೆ ಐ.ಪಿ.ಸಿ./ಸಿ.ಆರ್.ಪಿ.ಸಿ./ಕೆ.ಪಿ. ಆಕ್ಟ್. ಕಾಯಿದೆ ಪ್ರಕರಣಗಳು ವರದಿಯಾಗಿರುತ್ತವೆ. 


ವಾಹನ ಕಳವು ಪ್ರಕರಣಗಳು :

1. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 356/13 ಕಲಂ. 379 ಐ.ಪಿ.ಸಿ.

ದಿನಾಂಕ:01-06-2013ರಂದು ಪಿರ್ಯಾದಿ ಲಿಂಗರಾಜು, ಒಕ್ಕಲಿಗರು, ವಕೀಲರು, ಮುಂದಗಂದೊರು ಗ್ರಾಮ ರವರು ನೀಡಿದ ದೂರು ಏನೆಂದರೆ ದಿನಾಂಕ:24-05-2013 ರಂದು ಹಳೆ ಎಸ್.ಬಿ.ಎಂ ರಸ್ತೆ, ಶ್ರೀರಂಗಪಟ್ಟಣ ಟೌನ್ ನಲ್ಲಿ ಅವರು ಮೋಟರ್ ಸೈಕಲ್ನ್ನು ನಿಲ್ಲಿಸಿ ಒಳಗೆ ಹೋಗಿ ತಮ್ಮ ಕೆಲಸ ಮುಗಿಸಿಕೊಂಡು ವಾಪಸ್ ಬಂದು ನೋಡಲಾಗಿ  ಮೋಟಾರ್ ಸೈಕಲ್ ಇರಲಿಲ್ಲ ಇದರ ಬೆಲೆ ಸುಮಾರು 7000/-  ರೂ ಗಳಾಗಿರುತ್ತೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2. ಮಂಡ್ಯ. ಪೂರ್ವ ಪೊಲೀಸ್ ಠಾಣೆ ಮೊ.ನಂ. 238/13 ಕಲಂ. 379 ಐ.ಪಿ.ಸಿ.

ದಿನಾಂಕ:01-06-2013ರಂದು ಪಿರ್ಯಾದಿ ಎಂ.ಎಲ್. ಲಿಂಗಯ್ಯ ಬಿನ್. ಲೇಟ್. ಲಿಂಗೇಗೌಡ, ನಂ. 3905, 3 ನೇಕ್ರಾಸ್ ಶಂಕರನಗರ ,ಮಂಡ್ಯಸಿಟಿ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 30-05-2013 ರ ರಾತ್ರಿ 08-00 ರಿಂದ ರಾತ್ರಿ 08-45 ಗಂಟೆ ಸಮಯದಲ್ಲಿ ಪಿರ್ಯಾದಿಯವರ ಬಾಬ್ತು ನಂ. ಕೆ.ಎ.11-ಜೆ-7062ರ ಹೀರೋಹೋಂಡಾ ಸ್ಪ್ಲೆಂಡರ್ ಮೋಟಾರ್ ಸೈಕಲ್, ಬೆಲೆ 10,000/- ರೂ.ಗಳು ಈ ಬೈಕ್ ನ್ನು ಯಾರೋ ಮಿಸ್ ಆಗಿ ತೆಗೆದುಕೊಂಡು ಹೋಗಿರಬಹುದೆಂದು ಈ ತನಕ ಕಾದು ಹುಡುಕಾಡಿ ನೋಡಿದೆನು ಸಿಕ್ಕಿರುವುದಿಲ್ಲ. ಆದ್ದರಿಂದ ಯಾರೊ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಪತ್ತೆ ಮಾಡಿಕೊಡಲು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಯು.ಡಿ.ಆರ್. ಪ್ರಕರಣಗಳು :

1. ಕೊಪ್ಪ ಪೊಲೀಸ್ ಠಾಣೆ ಯು.ಡಿ.ಆರ್. ನಂ. 05/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ:01-06-2013ರಂದು ಪಿರ್ಯಾದಿ ಪವಿತ್ರ ಕೊಂ. ಧನಂಜಯ, ಡಿ.ಹೊಸಹಳ್ಳಿ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 27--05-2013 ರಂದು ಸಂಜೆ 05-30 ಗಂಟೆಯಲ್ಲಿ  ಧನಂಜಯ ಬಿನ್ ಜವರಪ್ಪ, 38 ವರ್ಷ, ಒಕ್ಕಲಿಗರು, ವಾಸ ಡಿ.ಹೊಸಹಳ್ಳಿ ಗ್ರಾಮ ಎಂಬುವವರು ಯಾವುದೋ ವಿಷವನ್ನು ಸೇವನೆ ಮಾಡಿದ್ದು ಚಿಕಿತ್ಸೆಗಾಗಿ ಮಂಡ್ಯ ಜಿಲ್ಲಾ ಆಸ್ಪತ್ರೆಗೆ ಸೇರಿದ್ದು ಚಿಕಿತ್ಸೆ ಫಲಕಾರಿಯಾಗದೆ ದಿನಾಂಕಃ 01-06-2013ರಂದು ಬೆಳಗಿನ ಜಾವ 03-40ಗಂಟೆ ಸಮಯದಲ್ಲಿ ಮೃತಪಟ್ಟಿದ್ದು ಸದರಿ ಮೃತ ದೇಹದ ಮೇಲೆ  ಮುಂದಿನ ಕ್ರಮ ಕೈಗೊಳ್ಳುವಂತೆ ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ನೊಂದಾಯಿಸಲಾಗಿದೆ. 


2. ಕಿಕ್ಕೇರಿ ಪೊಲೀಸ್ ಠಾಣೆ ಯು.ಡಿ.ಆರ್. ನಂ. 07/13 ಕಲಂ. 174 ಸಿ.ಆರ್.ಪಿ..ಸಿ.

ದಿನಾಂಕ:01-06-2013ರಂದು ಪಿರ್ಯಾದಿ ಗಾಯತ್ರಿ @ ಶಿವರಂಜಿನಿ ಕೋಂ. ಸ್ವಾಮಿ, ಕಾಳೇನಹಳ್ಳಿ ಗ್ರಾಮ, ಕಿಕ್ಕೇರಿ ಹೋಬಳಿ ರವರು ನೀಡಿದ ದೂರು ಏನೆಂದರೆ ಸ್ವಾಮಿ ಬಿನ್ ಕೃಷ್ಣೇಗೌಡ, ಕಾಳೇನಹಳ್ಳಿ ಗ್ರಾಮ, ಕಿಕ್ಕೇರಿ ಹೋಬಳಿ ಎಂಬುವವರು ಜೀವನದಲ್ಲಿ ಜಿಗುಪ್ಸೆಗೊಂಡು ಸಂಜೆ 05-00 ಗಂಟೆಯಲ್ಲಿ ಸಮಯದಲ್ಲಿ ಅವರ ತಂದೆ ಮನೆಯ ಚಿಲಕ ಹಾಕಿಕೊಂಡು ಅವರ ಮನೆಯಲ್ಲಿದ್ದ ಲುಂಗಿಯಿಂದ ತೆಂಗಿನ ತೀರಿಗೆ ನೇಣು ಬಿಗಿದುಕೊಂಡು ಒದ್ದಾಡುತ್ತಿದ್ದಾಗ ಯಾರೋ ನೋಡಿ ಲುಂಗಿಯಿಂದ ಕೆಳಗೆ ಇಳಿಸಿ ನೋಡಿದಾಗ ಸ್ವಾಮಿರವರು ಮೃತಪಟ್ಟಿದ್ದು ಈ ಬಗ್ಗೆ ಪ್ರಕರಣ ದಾಖಲಿಸಲಾಗಿದೆ. 



ಅಕ್ರಮ ಮರಳು ಕಳವು ಪ್ರಕರಣ/ಕನರ್ಾಟಕ ಉಪಖನಿಜ ನಿಯಮಾವಳಿ-1994  ಹಾಗೂ ನಿಯಮ 4(1ಎ) ಮತ್ತು 21 (1 ರಿಂದ 5) ಎಂ.ಎಂ.ಆರ್.ಡಿ. ಕಾಯಿದೆ ಪ್ರಕರಣ :

ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 154/13 ಕಲಂ. 188-379 ಐ.ಪಿ.ಸಿ. ಕೂಡ ನಿಯಮ 3, 42 ಮತ್ತು 44 ಕರ್ನಾಟಕ  ಉಪಖನಿಜ ನಿಯಮಾವಳಿ-1994  ಹಾಗೂ ನಿಯಮ 4(1ಎ) ಮತ್ತು 21 (1 ರಿಂದ 5) ಎಂ.ಎಂ.ಆರ್.ಡಿ. ಕಾಯಿದೆ 

ದಿನಾಂಕ: 01-06-2013 ರಂದು ಪಿರ್ಯಾದಿ ನವೀನ್, ಭೂ ವಿಜ್ಞಾನಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಮಂಡ್ಯ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿಗಳಾದ 1)ಕೆಎ-09 ಬಿ-7922 ಲಾರಿ ಚಾಲಕ ಮತ್ತು ಮಾಲೀಕ  2)ಕೆಎ-54-3409 ಟಿಪ್ಪರ್ ಲಾರಿ ಚಾಲಕ ಮತ್ತು ಮಾಲೀಕ,  3)4 ಇಟಾಚಿಗಳ ಚಾಲಕ ಮತ್ತು ಮಾಲೀಕರು ಇವರುಗಳ ಹೆಸರು, ವಿಳಾಸವನ್ನು ತಿಳಿಯಬೇಕಾಗಿರುತ್ತೆ. ಈ ಆರೋಪಿತರುಗಳು ಲಾರಿಗಳು ಮತ್ತು 4 ಹಿಟಾಚಿಗಳನ್ನು ಉಪಯೋಗಿಸಿ ಕೆ.ಆರ್.ಪೇಟೆ ತಹಶೀಲ್ದಾರ್ರವರು ಸದರಿ ಪ್ರದೇಶದಲ್ಲಿ ಮರಳು ತೆಗೆಯುವುದನ್ನು ನಿಷೇಧಾಜ್ಞಯನ್ನು ಹೊರಡಿಸಿದ್ದರೂ ಸಹ ಅಕ್ರಮವಾಗಿ ಮರಳನ್ನು ತಳ್ಳತನದಿಂದ ಸಾಗಿಸುತ್ತದ್ದಿರಂದ 2 ಲಾರಿ ಮತ್ತು 4 ಹಿಟಾಚಿಗಳನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲುಮಾಡಿರುತ್ತೆ.



ಮನುಷ್ಯ ಕಾಣೆಯಾದ ಪ್ರಕರಣ :

ಹಲಗೂರು ಪೊಲೀಸ್ ಠಾಣೆ ಮೊ.ನಂ. 114/13 ಕಲಂ. ಹುಡುಗ ಕಾಣೆಯಾಗಿದ್ದಾನೆ.

ದಿನಾಂಕ: 01-06-2013 ರಂದು ಪಿರ್ಯಾದಿ ವಿ.ಬಸಾಪುರ, ಹಲಗೂರು ಹೋಬಳಿ, ಮಳವಳ್ಳಿ ತಾ. ರವರು ನೀಡಿದ ದೂರಿನ ವಿವರವೇನೆಂದರೆ ಹನುಮಂತೇಗೌಡ ವ್ಯವಸಾಯ, ವಿ.ಬಸಾಪುರ ಗ್ರಾಮ, ಹಲಗೂರು ಹೋಬಳಿ, ಮಳವಳ್ಳಿ ತಾ. ಎಂಬುವವರು ದಿನಾಂಕಃ 27-05-13 ರಂದು ಬೆಳಿಗ್ಗೆ 8-00 ಗಂಟೆಯಂದು ಮನೆಯಿಂದ ಹೋದವನು ಕಾಲೇಜಿಗೂ ಸಹ ಹೋಗದೆ ಮನೆಗೂ ಬಾರದೆ ಕಾಣೆಯಾಗಿರುತ್ತಾನೆ. ಕಾಲೇಜು, ಸಂಬಂಧಿಕರು ಹಾಗು ಅವರ ಸ್ನೇಹಿತರ ಮನೆಗಳಲ್ಲಿ ಹುಡುಕಿದರೂ ಸಹ ಸಿಕ್ಕಿರುವುದಿಲ್ಲ ಅವರನ್ನು ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  



ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ :

ಕಿಕ್ಕೇರಿ ಪೊಲೀಸ್ ಠಾಣೆ ಯು.ಡಿ.ಆರ್. ಮೊ..ನಂ. 136/13 ಕಲಂ. 498(ಎ)-504-324-506 ಐ.ಪಿ.ಸಿ.

ದಿನಾಂಕ: 01-06-2013 ರಂದು ಪಿರ್ಯಾದಿ ಹೇಮ ಕೋಂ. ಸೋಮಶೇಖರ, ನರಸಿಂಹಸ್ವಾಮಿ ದೇವಸ್ಥಾನದ ಬೀದಿ, ಕಿಕ್ಕೇರಿ ಟೌನ್ ರವರು ನೀಡಿದ ದೂರು ಏನೆಂದರೆ ಅವರ ಗಂಡ ಆರೋಪಿ ಸೋಮಶೇಖರ ಬಿನ್. ಈರೇಗೌಡ, ಕಿಕ್ಕೇರಿ ಟೌನ್, ಕಿಕ್ಕೇರಿ ಹೋಬಳಿ ಎಂಬುವವರು ಪಿರ್ಯಾಧಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ಕಿರುಕುಳ ನೀಡುತ್ತಿದ್ದು ದಿನಾಂಕಃ31-05-2013 ರಂದು ಸಂಜೆ 05-30 ಗಂಟೆ ಸಮಯದಲ್ಲಿ ಪಿರ್ಯಾಧಿಯವರು ಮನೆ ಮುಂದೆ ಇದ್ದಾಗ ಆರೋಪಿತನು ಅಲ್ಲಿಗೆ ಬಂದು ಅವಾಚ್ಯ ಶಬ್ದಗಳಿಂದ ಬೈದು ಕಲ್ಲಿನಿಂದ ತಲೆಯ ಮೇಲೆ ಹೊಡೆದು ಪ್ರಾಣ ಬೆದರಿಕೆ ಹಾಕಿರುತ್ತಾನೆಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

No comments:

Post a Comment