Moving text

Mandya District Police

DAILY CRIME REPORT DATED : 21-06-2013


ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 21-06-2013 ರಂದು ಒಟ್ಟು 21 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ ಅಕ್ರಮ ಮರಳು ಗಣಿಗಾರಿಕೆ/ಸಂಗ್ರಹಣೆ/ಸಾಗಾಣಿಕೆ ಪ್ರಕರಣ, 1 ರಸ್ತೆ ಅಪಘಾತ ಪ್ರಕರಣ,  3 ಯು.ಡಿ.ಆರ್. ಪ್ರಕರಣಗಳು,  2 ಮನುಷ್ಯ ಕಾಣೆಯಾದ ಪ್ರಕರಣಗಳು,  1 ಕಳ್ಳತನ ಪ್ರಕರಣ,  1 ಸ್ಪೋಟಕ ವಸ್ತುಗಳ ಅಧಿನಿಯಮ ಕಾಯಿದೆ ಪ್ರಕರಣ, 1ಅಕ್ರಮ ಮರಳು ಕಳವು/ಸಾಗಾಣಿಕೆ ಪ್ರಕರಣ,   1 ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ ಹಾಗು 12 ಇತರೆ ಐ.ಪಿ.ಸಿ./ಕೆ.ಪಿ.ಆಕ್ಟ್./ಅಬಕಾರಿ ಕಾಯಿದೆ ಪ್ರಕರಣಗಳು ವರದಿಯಾಗಿರುತ್ತವೆ.  


ಅಕ್ರಮ ಮರಳು ಗಣಿಗಾರಿಕೆ/ಸಂಗ್ರಹಣೆ/ಸಾಗಾಣಿಕೆ ಪ್ರಕರಣ :

ನಾಗಮಂಗಲ ಪಟ್ಟಣ ಪೊಲೀಸ್ ಠಾಣೆ ಮೊ ಸಂ101/13 ಕಲಂ: ಕಲಂ 342. 44 ಎಂ.ಎಂ.ಸಿ.ಆರ್. 1994 ಹಾಗು 4 (1ಎ) 21 (1-5) ಎಂ.ಎಂ.ಆರ್.ಡಿ. 1957 ಕೂಡ 379 ಐ.ಪಿ.ಸಿ.

     ದಿನಾಂಕ:21-06-2013 ರಂದು ಪಿರ್ಯಾದಿ ಹೆಚ್.ಆರ್. ಮಲ್ಲಿಕಾರ್ಜುನಸ್ವಾ, ರಾಜಸ್ವನಿರೀಕ್ಷಕರು, ಕಸಬಾ ಹೋಬಳಿ, ನಾಗಮಂಗಲ ತಾಲ್ಲೂಕು ರವರು ನೀಡಿದ ದೂರಿನ ವಿವರವೇನೆಂದರೆ ನಾಗಮಂಗಲ ತಾಲ್ಲೂಕು ದಂಡಾಧಿಕಾರಿರವರ ಆದೇಶದಂತೆ ಅಕ್ರಮ ಮರಳು ಸಾಗಣಿಕೆ ಮಾಡುತ್ತಿರುವ ಲಾರಿಗಳನ್ನು ಪೊಲೀಸ್ ಸಬ್ ಇನ್ಸ್ಪೆಕ್ಟರ್ರವರು ಮತ್ತು ಅವರ ಸಿಬ್ಬಂದಿಯವರ ಸಹಾಯದೊಡನೆ ಹೋಗಿ ಅಕ್ರಮ ಮರಳು ಸಾಗಿಸುತ್ತಿರುವವರನ್ನು ಚಕ್ ಮಾಡಿ ಅವರ ಮೇಲೆ ಕ್ರಮ ತೆಗೆದುಕೊಳ್ಳುವಂತೆ ನೀಡಿದ ಆಧೇಶದ ಪ್ರಕಾರ  ಕೆ.ಎ.54-3906, ಲಾರಿಯ ಚಾಲಕನ ಹೆಸರು ವಿಳಾಸ ತಿಳಿಯ ಬೇಕಾಗಿರುತ್ತದೆ ಸದರಿ ಲಾರಿಯ ಚಾಲಕನನ್ನು ಪತ್ತೆ ಮಾಡಿ ಕಳ್ಳತನದಿಂದ ಅಕ್ರಮವಾಗಿ ಮರಳು ಸಾಗಣಿಕೆ ಮಾಡುತ್ತಿದ್ದ ಲಾರಿಯ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  

ರಸ್ತೆ ಅಪಘಾತ ಪ್ರಕರಣ :

ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 142/13 ಕಲಂ. 279-304(ಎ) ಐ.ಪಿ.ಸಿ.

ದಿನಾಂಕ:21-06-2013 ರಂದು ಪಿರ್ಯಾದಿ ನಂಜುಂಡಸ್ವಾಮಿ ಬಿನ್. ಲೇಟ್. ಚನ್ನವಿರಪ್ಪ. 39 ವರ್ಷ, ಲಿಂಗಾಯ್ತರು, ವ್ಯವಸಾಯ, ಕೋರೇಗಾಲ ಗ್ರಾಮ, ಕಸಬಾ ಹೋಬಳಿ. ಮಳವಳ್ಳಿ ತಾ|| ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ಕೆಎ 55 ಕೆ 1793  ರ ಮೋಟಾರ್ ಸೈಕಲ್ ಸವಾರ ಪುಟ್ಟಸ್ವಾಮಿ ರವರು ದಿನಾಂಕ : 20-06-2013 ರಂದು  ಬೆಳಿಗ್ಗೆ 09.00 ಗಂಟೆಯ ಸಮಯದಲ್ಲಿ ಮಳವಳ್ಳಿ - ಕನಕಪುರ ರಸ್ತೆಯ ಕ್ಯಾತೇಗೌಡನ ದೊಡ್ಡಿ ಹತ್ತಿರ  ಅವರ ಮೋಟಾರ್ಸೈಕಲ್ನ್ನು  ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದಾಗ ಒಂದು ನಾಯಿಯು ಮೋಟಾರ್ ಸೈಕಲ್ಗೆ ಅಡ್ಡಲಾಗಿ ನುಗ್ಗಿದಾಗ  ನಾಯಿಯನ್ನು ನಿಯಂತ್ತಿಸಲು ಹೋಗಿ ಮೋಟಾರ್ ಸೈಕಲ್  ನಿಯಂತ್ರಣಕ್ಕೆ ಸಿಗದೆ ರಸ್ತೆಯ ಬಲಬಾಗಕ್ಕೆ ಬಿದ್ದು  ಪುಟ್ಟಸ್ವಾಮಿಗೆ ಎಡಬಾಗದ ತಲೆ ಎಡತೋಳು  ಎಡಕಿವಿ ಮೂಗು ಮತ್ತು ಬಾಯಿಯಿಂದ  ರಕ್ತ  ಬಂದು ಚಿಕಿತ್ಸೆಗಾಗಿ ಮಳವಳ್ಳಿ ಸರ್ಕಾರಿ ಆಸ್ಪತೆಗೆ ಸೇರಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ  ಕಾವೇರಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸುತ್ತಿದ್ದು.ಚಿಕಿತ್ಸೆ ಫಲಕಾರಿಯಾಗದೆ  ಈ ದಿವಸ  ಬೆಳಗಿನ ಜಾವ 3.30 ಗಂಟೆಯ  ಸಮಯದಲ್ಲಿ ಮೃತಪಟ್ಟಿರುವುದಾಗಿ ಪಿರ್ಯಾದು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  

ಯು.ಡಿ.ಆರ್. ಪ್ರಕರಣಗಳು :

1. ಕಿಕ್ಕೇರಿ ಪೊಲೀಸ್ ಠಾಣೆ ಮೊ.ನಂ. 8/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ:21-06-2013 ರಂದು ಪಿರ್ಯಾದಿ ಕೆ.ಕೆ. ಪಲ್ಲವಿ ಕೋಂ. ಕೃಷ್ಣ, ಯಲಾದಹಳ್ಳಿ ಕೊಪ್ಪಲು ಗ್ರಾಮ, ಕಿಕ್ಕೇರಿ ಹೋಬಳಿ, ಕೆ.ಆರ್.ಪೇಟೆ ತಾಲ್ಲೋಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 20-06-2013 ರಂದು ಸಂಜೆ 07-00 ಗಂಟೆಯಲ್ಲಿ, ಯಾಲಾದಹಳ್ಳಿ ಗ್ರಾಮದ, ಕಿಕ್ಕೇರಿ ಹೋಬಳಿ, ಕೆ.ಆರ್. ಪೇಟೆ ತಾಲ್ಲೂಕಿನ ಸರ್ವೆ ನಂ. 111ರ ಜಮೀನಿನಲ್ಲಿ, ಕೃಷ್ಣ ಬಿನ್. ತಮ್ಮೇಗೌಡ, 26 ವರ್ಷ, ಯಲಾದಹಳ್ಳಿ ಕೊಪ್ಪಲು ಗ್ರಾಮ, ಕಿಕ್ಕೇರಿ ಹೋಬಳಿ, ಕೆ.ಆರ್.ಪೇಟೆ ತಾಲ್ಲೋಕು. ರವರು ಜಮೀನಿನಲ್ಲಿ ಹುಲ್ಲು ಕುಯ್ಯುವಾಗ ಹುಲ್ಲಿನ ಒಳಗಡೆ ಇದ್ದ ನಾಗರಹಾವು ಮೃತ ಕೃಷ್ಣರವರ ಎಡಕಾಲಿನ ಹೆಬ್ಬೆರಳಿಗೆ ಕಚ್ಚಿ ರಕ್ತಗಾಯವಾಗಿದ್ದು ಚಿಕಿತ್ಸೆಗಾಗಿ ಕರೆದುಕೊಂಡು ಹೋಗುವಾಗ ಮಾರ್ಗ ಮದ್ಯದಲ್ಲಿ ಮೃತಪಟ್ಟಿರುತ್ತಾರೆ ತಾವು ಬಂದು ಕ್ರಮ ತೆಗೆದುಕೊಳ್ಳಬೇಕೆಂದು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೆನೆ ಎಂದು ಇತ್ಯಾದಿಯಾಗಿ ದೂರು ನೀಡಿದ ಮೇರೆಗೆ ಪ್ರಕರಣ ನೊಂದಾಯಿಸಲಾಗಿದೆ.  

2. ಕಿಕ್ಕೇರಿ ಪೊಲೀಸ್ ಠಾಣೆ ಮೊ.ನಂ. 9/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ:21-06-2013 ರಂದು ಪಿರ್ಯಾದಿ ದೇವರಾಜು ಬಿನ್. ದೊಡ್ಡಮಾಗೇಗೌಡ, ವಡ್ಡರಹಳ್ಳಿ ಗ್ರಾಮ, ಕಸಬಾ ಹೋಬಳಿ, ಪಾಂಡವಪುರ ತಾಲ್ಲೊಕು ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 20-06-2013 ರಂದು ಕಿಕ್ಕರಿ ಅಮಾನಿಕರೆಯಲ್ಲಿ, ಕಿಕ್ಕೇರಿ ಟೌನ್,ಕೆ.ಆರ್ ಪೇಟೆ ತಾಲ್ಲೋಕಿನ ದೊಡ್ಡಮೊಗೇಗೌಡ, ವಡ್ಡರಹಳ್ಳಿ ಗ್ರಾಮ, ಕಸಬಾ ಹೋಬಳಿ, ಪಾಂಡವಪುರ ತಾಲ್ಲೋಕು ರವರಿಗೆ ಆಗಾಗ್ಗೆ ಬುದ್ದಿ ಭ್ರಮಣೆಯಂತೆ ಆಡುತ್ತಿದ್ದು ದಿನಾಂಕ:20-06-2013 ರಂದು ಯಾವುದೋ ವಾಹನದಲ್ಲಿ ಕಿಕ್ಕೇರಿಗೆ ಬಂದು ಕಿಕ್ಕೇರಿಯ ಅಮಾನಿಕೆರೆಯಲ್ಲಿ ನೀರು ತೆಗೆದುಕೊಳ್ಳಲೋ ಅಥವಾ ನೀರು ಕುಡಿಯಲೋ ಹೋಗಿ ಆಕಸ್ಮಿಕವಾಗಿ ಮೃತಪಟ್ಟಿರುತ್ತಾರೆಂದು ಇತ್ಯಾದಿಯಾಗಿ ದೂರು ನೀಡಿದ ಮೇರೆಗೆ ಕೇಸು ದಾಖಲಿಸಲಾಗಿದೆ. 

3. ಅರಕೆರೆ ಪೊಲೀಸ್ ಠಾಣೆ ಯು.ಡಿ.ಆರ್. ನಂ. 07/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 21-06-2013 ರಂದು ಪಿರ್ಯಾದಿ ನಾರಾಯಣ ಬಿನ್. ಲೇಟ್. ಚಿಕ್ಕದೇವೇಗೌಡ, 45 ವರ್ಷ, ಒಕ್ಕಲಿಗರು, ಮಂಡ್ಯಕೊಪ್ಪಲು ಗ್ರಾಮ,  ಶ್ರೀರಂಗಪಟ್ಟಣ ತಾ. ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕಃ 21-06-2013 ರಂದು ಬೆಳಿಗ್ಗೆ 08-00 ಗಂಟೆಯಲ್ಲಿ ಪಿರ್ಯಾದಿಯವರ ಬಾಬ್ತು ಸವರ್ೆ. ನಂ.773/ಪೈಕಿ2 ಮತ್ತು 772/ಪಿರ ಜಮೀನಿನಲಿ,್ಲ ಮಂಡ್ಯಕೊಪ್ಪಲು ಗ್ರಾಮ, ಅರಕೆರೆ ಹೋಬಳಿಯ ಅವರ ಜಮೀನಿನಲ್ಲಿ ರಾಗಿ ತೆನೆಯನ್ನು ಕುಯ್ಯುತ್ತಿದ್ದಾಗ ಮಳೆಗಾಳಿಯಿಂದ ಕಟ್ಟಾಗಿ ತನ್ನ ಜಮೀನಿನಲ್ಲಿ ಬಿದ್ದಿದ್ದ ವಿದ್ಯುತ್ತ್ ಸಂಪರ್ಕದ ವೈರು ಆಕಸ್ಮಿಕವಾಗಿ ಕರೀಗೌಡ @ ಶಂಕರೇಗೌಡನ ಬಲಗೈ ಮೊಣಕೈಗೆ ತಗುಲಿ ಶರೀರದಲ್ಲಿ ವಿದ್ಯುತ್ ಹರಿದು, ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

ಮನುಷ್ಯ ಕಾಣೆಯಾದ ಪ್ರಕರಣಗಳು :

1. ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 259/13 ಕಲಂ. ಹೆಂಗಸು ಕಾಣೆಯಾಗಿದ್ದಾಳೆ.

ದಿನಾಂಕ: 21-06-2013 ರಂದು ಪಿರ್ಯಾದಿ ಹನುಮಂತೇಗೌಡ ಬಿನ್. ಲೇಟ್. ಕಾಡೇಗೌಡ, ಕೆಂಪೇಗೌಡನಕೊಪ್ಪಲು ಗ್ರಾಮ, ಬನ್ನೂರು ಹೋಬಳಿ, ಟಿ.ನರಸೀಪುರ ತಾಲ್ಲೂಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ತಾರಾ ಬಿನ್. ಹನುಮಂತೇಗೌಡ, 19 ವರ್ಷ, ಕೆಂಪೇಗೌಡನಕೊಲು ಗ್ರಾಮ, ಬನ್ನೂರು ಹೋಬಳಿ, ಟಿ.ನರಸೀಪುರ ತಾಲ್ಲೂಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ಮಂಡ್ಯದ ಹೊಸಹಳ್ಳಿ ಸರ್ಕಲ್ಗೆ ಬಂದಾಗ ತಾರಾಳು ಚಿಕ್ಕತಾಯಮ್ಮಳಿಗೆ ನೀನು ಎಂ.ವಿ.ಜಿ. ಬೇಕರಿ ಹತ್ತಿರ ಇರು, ತಾನು ಸ್ನೇಹಿತರ ಮನೆಗೆ ಹೋಗಿ ಬರುತ್ತೇನೆಂದು ಹೇಳಿ ಹೊಸಹಳ್ಳಿ ಸರ್ಕಲ್ನಲ್ಲಿ ಬಸ್ಸಿನಿಂದ ಇಳಿದು ಹೋಗಿದ್ದು ಇದುವರೆಗೂ ವಾಪಸ್ ಬಾರದೆ ಕಾಣೆಯಾಗಿರುತ್ತಾಳೆ ಅವಳನ್ನು ಪತ್ತೆ ಮಾಡಿಕೊಡಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  

2. ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 260/13 ಕಲಂ. ಮನುಷ್ಯ ಕಾಣೆಯಾಗಿದ್ದಾನೆ.

ದಿನಾಂಕ: 21-06-2013 ರಂದು ಪಿರ್ಯಾದಿ ಭಾಗ್ಯ ಕೋಂ. ನಾಗರಾಜು, 1ನೇ ಮಹಡಿ, ಜಯಪ್ರಕಾಶ್ ರೈಸ್ಮಿಲ್, 13ನೇ ಕ್ರಾಸ್, ವಿ.ವಿ.ನಗರ, ಮಂಡ್ಯ ಸಿಟಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 18-06-13 ರಂದು ಫಿರ್ಯಾದಿಯವರ ಮನೆಯಿಂದ, 13ನೇ ಕ್ರಾಸ್, ವಿ.ವಿ.ನಗರ, ಮಂಡ್ಯ ಸಿಟಿ, ನಾಗರಾಜು, 32 ವರ್ಷ, ವಾಸ 1ನೇ ಮಹಡಿ, ಜಯಪ್ರಕಾಶ್ ರೈಸ್ಮಿಲ್, 13ನೇ ಕ್ರಾಸ್, ವಿ.ವಿ.ನಗರ, ಮಂಡ್ಯ ಸಿಟಿ ರವರು, ಅವರ ಬಾಬ್ತು ಕೆಎ-11-ಎಸ್.-3112 ನಂಬರಿನ ಹೀರೊಹೊಂಡ ಮೋಟಾರ್ ಸೈಕಲನ್ನು ತೆಗೆದುಕೊಂಡು ಹೋಗಿದ್ದು ಇದುವರೆಗೂ ವಾಪಸ್ ಮನೆಗೆ ಬಂದಿರುವುದಿಲ್ಲ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ನೊಂದಾಯಿಸಲಾಗಿದೆ.  

ಕಳ್ಳತನ ಪ್ರಕರಣ :

ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 218/13 ಕಲಂ. 457-380 ಐ.ಪಿ.ಸಿ.

ದಿನಾಂಕ: 21-06-2013 ರಂದು ಪಿರ್ಯಾದಿ ಮಹದೇವೇಗೌಡ ಬಿನ್. ನರಸೇಗೌಡ, ಚಂದ್ರೆ ಗ್ರಾಮ, ಪಾಂಡವಪುರ ತಾಲ್ಲೋಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 19-06-2013 ರ ರಾತ್ರಿ ವೇಳೆ, ಚಂದ್ರೆ ಗ್ರಾಮ, ಪಾಂಡವಪುರ ತಾಲ್ಲೋಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ಯಾರೋ ಕಳ್ಳರು ಅವರ ಬಾಬ್ತು ಮೋಟಾರ್    ಹಾರ್ಮಿಚರ್  ಇರುವ ಭಾಗ ಇತರೆ ವಸ್ತುಗಳು ಅವುಗಳ ಒಟ್ಟು ಅಂದಾಜು ಸುಮಾರು 20-ರಿಂದ 25 ಸಾವಿರ ಬೆಲೆ ಬಾಳುತ್ತವೆ. ನಾನು ಎಲ್ಲಾ ಕಡೆ ಹುಡುಕಿ ತಡವಾಗಿ ಬಂದು ದೂರು ನೀಡುತ್ತಿರುತ್ತೇನೆ. ಕಳವು ಆಗಿರುವ ವಿದ್ಯುತ್ ಮೋಟಾರ್ನ ತಾಮ್ರದ ಭಾಗದ ಹಾರ್ಮಿಚರ್ ಪತ್ತೆಮಾಡಿ, ಸಂಬಂಧಪಟ್ಟವರ ಮೇಲೆ ಸೂಕ್ತಕ್ರಮ ಕ್ಯೆಗೊಳ್ಳಲು ಕೋರಿ ನೀಡಿರುವ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಸ್ಪೋಟಕ ವಸ್ತುಗಳ ಅಧಿನಿಯಮ ಕಾಯಿದೆ ಪ್ರಕರಣ :

ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 219/13 ಕಲಂ. 285 ಐ.ಪಿ.ಸಿ. ಮತ್ತು 3  ಮತ್ತು 5 ಸ್ಪೋಟಕ ವಸ್ತುಗಳ ಅದಿನಿಯಮ 1908.

ದಿನಾಂಕ: 21-06-2013 ರಂದು ಪಿರ್ಯಾದಿ ಕೆ.ನರೇಂದ್ರ ಕುಮಾರ್. ಪಿ.ಎಸ್.ಐ. ಪಾಂಡವಪುರ ಠಾಣೆ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ:21-06-2013ರ ಸಂಜೆ 05-15 ರಿಂದ 06-15. ಗಂಟೆಯವರೆಗೆ, ಹೊನಗಾನಹಳ್ಳಿ ಎಲ್ಲೆಗೆ ಸೇರಿದ ರಾಮಣ್ಣ ಬಿನ್. ಮರಿಲಿಂಗಪ್ಪ ರವರಿಗೆ ಸೇರಿದ ಕಲ್ಲುಕೋರೆಯಲ್ಲಿ ಆರೋಪಿಗಳಾದ ]] ಮಾರಿಮುತ್ತು ಬಿನ್. ಲೇಟ್. ಕೊಳಂದೆ,  ಬೋವಿ ಜನಾಂಗ, ಕಲ್ಲುಕೆಲಸ, ಸ್ವಂತ ಊರು ತಾರಕಾ ಡ್ಯಾಂ, ಹೆಚ್.ಡಿ.ಕೋಟೆ ತಾ, ಮೈಸೂರು ಜಿಲ್ಲೆ, ಹಾಲಿ ವಾಸ ಹೊನಗಾನಹಳ್ಳಿ ಗ್ರಾಮ ಹಾಗು 2] ರಾಮಣ್ಣ ಬಿನ್. ಮರಿಲಿಂಗಪ್ಪ, ಹೊನಗಾನಹಳ್ಳಿ ಗ್ರಾಮ, ಪಾಂಡವಪುರ ತಾ. ರವರು ಗಳು ರೈತಾಪಿ ವರ್ಗದವರು ಕೆಲಸ ಮಾಡುವ ಹಾಗೂ ಓಡಾಡುವ ಸ್ಥಳದಲ್ಲಿ ಯಾವುದೇ ಸುರಕ್ಷತೆಯ ಮುಂಜಾಗ್ರತೆಯನ್ನು ಕೈಗೊಳ್ಳದೇ ಅನಧಿಕೃತವಾಗಿ ಕಲ್ಲು ಬಂಡೆಗಳನ್ನು ಸಿಡಿಸಲು ಸಿದ್ದತೆ ಮಾಡಿಕೊಂಡಿರುವುದರಿಂದ ಸ್ಥಳದಲ್ಲಿ ಮಹಜರ್ ಕ್ರಮವನ್ನು ಸಂಜೆ 5-15 ಗಂಟೆಯಿಂದ 6-15 ಗಂಟೆಯವರೆಗೆ ಜರುಗಿಸಿಕೊಂಡು ಮಾಲು ಮತ್ತು ಆರೋಪಿ ಮಾರಿಮುತ್ತುವನ್ನು ವಶಕ್ಕೆ ಪಡೆದುಕೊಂಡಿರುತ್ತೆ ಎಂದು ಹೇಳಿ ವರದಿ, ಅಮಾನತ್ತುಪಡಿಸಿದ ವಸ್ತುಗಳು ಹಾಗು ಆರೋಪಿ-1 ರವರನ್ನು ಹಾಜರ್ ಪಡಿಸಿದ ಮೇರೆಗೆ ದೂರು ಸ್ವೀಕರಿಸಿಕೊಂಡು ಮೇಲ್ಕಂಡ ಉಲ್ಲೇಖದ ರೀತ್ಯಾ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ. 

ಅಕ್ರಮ ಮರಳು ಕಳವು/ಸಾಗಾಣಿಕೆ ಪ್ರಕರಣ :

ಮದ್ದೂರು ಪೊಲೀಸ್ ಠಾಣೆ ಮೊ.ನಂ. 276/13 ಕಲಂ. 188-379 ಐ.ಪಿ.ಸಿ.

ದಿನಾಂಕ:21-06-2013 ರಂದು ಪಿರ್ಯಾದಿ ಡಿ. ತಿಮ್ಮಯ್ಯ, ಗ್ರಾಮಲೆಕ್ಕಿಗರು, ವೈದ್ಯನಾಥಪುರ ಗ್ರಾಮ, ಮದ್ದೂರು ತಾಲ್ಲೋಕು, ಕಂದಾಯ ಇಲಾಖೆ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 21-06-2013 ಮದ್ದೂರು ತಾ. ಶಿಂಷಾ ನದಿ ಪಾತ್ರದಲ್ಲಿ ವೈದ್ಯನಾಥಪುರ ಗ್ರಾಮದ .ಆರೋಪಿ 1)ನಂಬರ್ ಇಲ್ಲದ ಟ್ರ್ಯಾಕ್ಟರ್ ಮತ್ತು ಟ್ರೈಲರ್ಗಳು ಚಾಲಕ ಮತ್ತು ಮಾಲಿಕ. ಹಾಗು 2)ನಂಬರ್ ಇಲ್ಲದ ಟ್ರ್ಯಾಕ್ಟರ್ ಮತ್ತು ಟ್ರೈಲರ್ಗಳು ಚಾಲಕ ಮತ್ತು ಮಾಲೀಕ ರವರುಗಳು ಸರ್ಕಾರದ ನಿಷೇದಾಜ್ಞೆಯನ್ನು ಉಲ್ಲಂಘಿಸಿ ಶಿಂಷಾ ನದಿಯ ಪಾತ್ರದಲ್ಲಿ ಆಕ್ರಮವಾಗಿ ಮರಳು ತೆಗೆದು ಟ್ರಾಕ್ಟರ್ಗಳಿಗೆ ತುಂಬಿಕೊಂಡು ಕಳ್ಳತದಿಂದ ಸಾಗಾಣಿಕೆ ಮಾಡುತಿದ್ದ ಮೇರೆಗೆ ದೂರು ದಾಖಲಿಸಿಕೊಳ್ಳಲಾಗಿದೆ. 

ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ :

ಕೆ.ಆರ್.ಸಾಗರ ಪೊಲೀಸ್ ಠಾಣೆ ಮೊ.ನಂ. 162/13 ಕಲಂ. 307-498(ಎ)-324-506 ಐ.ಪಿ.ಸಿ.

     ದಿನಾಂಕ: 21-06-2013 ರಂದು ಪಿರ್ಯಾದಿ ಮಹಾಲಕ್ಷ್ಮಿ ಕೋಂ. ಕುಳ್ಳಿ @ ವೀರಭದ್ರ, ಗ್ಯಾಂಗ್ಪೈಲ್, ಕೆ.ಆರ್.ಸಾಗರ, ಶ್ರೀರಂಗಪಟ್ಟಣ ತಾಲೋಕು ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿತ ಅವರ ಗಂಡ ಕುಳ್ಳಿ @ ವೀರಭದ್ರ ಬಿನ್. ಸತ್ಯಪ್ಪ, ಗ್ಯಾಂಗ್ಪೈಲ್, ಕೆ.ಆರ್.ಸಾಗರ ಗ್ರಾಮ, ಶ್ರೀರಂಗಪಟ್ಟಣ ತಾಲೋಕು ರವರು ನನಗೆ ದೈಹಿಕವಾಗಿ ಹಾಗೂ ಮಾನಸಿ- ಕವಾಗಿ ಕಿರುಕುಳ ಕೊಡುತ್ತಿದ್ದಾನೆ ನೆನ್ನೆ ರಾತ್ರಿ ನನಗೆ ಮದ್ಯಪಾನ ಕುಡಿಸಿ ನನಗೆ ಸೌದೆ ಸೀಳಿನಿಂದ ಹೊಡೆದು ಗಾಯ ಮಾಡಿದ್ದಾರೆ ಎಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

No comments:

Post a Comment