Moving text

Mandya District Police

Press note 25-08-2013 - Bendaravadi Village

ಪತ್ರಿಕಾ ಪ್ರಕಟಣೆ

           ದಿನಾಂಕ:-20-08-2013ರಂದು ರಾತ್ರ್ರಿ ಸಮಯದಲ್ಲಿ ಮಳವಳ್ಳಿ ತಾಲ್ಲೋಕು ಬೆಂಡರವಾಡಿ ಗ್ರಾಮದ ಸಮುದಾಯ ಭವನದ ಹತ್ತಿರವಿದ್ದ ಡಾ.ಅಂಬೇಡ್ಕರ್ ಭಾವಚಿತ್ರಕ್ಕೆ  ಅಪಮಾನ ಮಾಡಿದ ವಿಚಾರದಲ್ಲಿ ದಿನಾಂಕ: 21-08-2013 ರಂದು ಪಿಯರ್ಾದಿ ಶ್ರೀ.ಚಂದ್ರಶೇಖರ್, ಕಾರ್ಯದಶರ್ಿ ಡಾ:ಅಂಬೇಡ್ಕರ್ ಸಮುದಾಯ ಭವನ ಬೆಂಡರವಾಡಿ ಗ್ರಾಮರವರು ನೀಡಿದ ಪಿರ್ಯಾದುವಿನ ಮೇರೆಗೆ ಕಿರುಗಾವಲು ಮೊ.ಸಂ. 113/2013 ಕಲಂ: 295-447 ಐ.ಪಿ.ಸಿ. ರೀತ್ಯಾ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದರು.

           ಈ ಪ್ರಕರಣದ ತನಿಖೆಯನ್ನು ಕೈಗೊಂಡಿದ್ದ ಮಳವಳ್ಳಿ ಉಪವಿಭಾಗದ ಡಿ.ಎಸ್.ಪಿ., ಮಳವಳ್ಳಿ ಗ್ರಾಮಾಂತರ ವೃತ್ತದ ಸಿ.ಪಿ.ಐ ಶ್ರೀ.ಎಂ.ಪ್ರತಾಪ್ ರೆಡ್ಡಿ, ಕೆ.ಎಂ.ದೊಡ್ಡಿ ಠಾಣೆಯ ಪಿ.ಎಸ್.ಐ ಶ್ರೀ.ಮುದ್ದುಮಾದೇವ ಹಾಗೂ ಸಿಬ್ಬಂದಿಗಳು ಆರೋಪಿಗಳನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ತೊಡಗಿ ಮಾಹಿತಿ ಸಂಗ್ರಹಿಸಲಾಗಿ ಅದೇ ಬೆಂಡರವಾಡಿ ಗ್ರಾಮದ ಆರೋಪಿ ಚೆನ್ನಪ್ಪ ಬಿನ್ ಲೇ. ಕುನ್ನಯ್ಯ ಎಂಬುವರನ್ನು ವಿಚಾರಣೆ ಸಲುವಾಗಿ ಕರೆದುಕೊಂಡು ಬಂದು ತೀವ್ರ ವಿಚಾರಣೆಗೊಳಪಡಿಸಲಾಗಿ ಸದರಿ ಚೆನ್ನಪ್ಪನು ತಮ್ಮ ಗ್ರಾಮದಲ್ಲಿನ ಇತರೆ ಜನಾಂಗದ ವೈಯಕ್ತಿಕ ದ್ವೇಷದ ಹಿನ್ನಲೆಯಲ್ಲಿ ಸದರಿ ಚಪ್ಪಲಿಗಳನ್ನು ಈ ರೀತಿ ಭಾವಚಿತ್ರಕ್ಕೆ ಪ್ಲಾಸ್ಟಿಕ್ ಕವರ್ನಲ್ಲಿ ಕಟ್ಟಿ ನೇತು ಹಾಕಿದ್ದಾಗಿ ತಿಳಿಸಿರುತ್ತಾನೆ. ನಂತರ ಆತನನ್ನು ಸದರಿ ಪೊಲೀಸ್ ಅಧಿಕಾರಿಗಳು ದಸ್ತಗಿರಿ ಮಾಡಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ. 

    ಸದರಿ ಪ್ರಕರಣದ ಪತ್ತೆ ಕಾರ್ಯದಲ್ಲಿ ಪಾಲ್ಗೊಂಡಿದ್ದ ಮೆಲ್ಕಂಡ  ಅದಿಕಾರಿ ಮತ್ತು ಸಿಬ್ಬಂದಿಗಳನ್ನು ಮಂಡ್ಯ ಜಿಲ್ಲಾ ಪೊಲೀಸ್ ಅದಿಕಾರಿಗಳಾದ ಶ್ರೀಭೂಷಣ್ ಜಿ ಬೊರಸೆ ರವರು ಪ್ರಶಂಸಿರುತ್ತಾರೆ.

No comments:

Post a Comment