Moving text

Mandya District Police

PRESS NOTE DATED : 22-08-2013


                                                                                           ಪೊಲೀಸ್ ಸೂಪರಿಂಟೆಂಡೆಂಟ್ ರವರ ಕಛೇರಿ,
                                                                                                     ಮಂಡ್ಯ ಜಿಲ್ಲೆ,
                                                                                             ಮಂಡ್ಯ, ದಿನಾಂಕಃ 22-08-2013.

-ಃ ಪತ್ರಿಕಾ ಪ್ರಕಟಣೆ ಃ-

ಮತ ಎಣಿಕೆಯ ದಿನ ಏರ್ಪಡಿಸಲಾಗಿರುವ ಬಂದೋಬಸ್ತ್ನ ವಿವರ 

ಮಂಡ್ಯ ಜಿಲ್ಲೆಯಲ್ಲಿ ದಿನಾಂಕಃ 21-08-2013 ರಂದು ನಡೆದ ನಂ. 20 ಮಂಡ್ಯ ಲೋಕಸಭಾ ಉಪ ಚುನಾವಣೆಯ ಮತಗಳ ಎಣಿಕೆಯು ಮಂಡ್ಯ ನಗರದ ಸರ್ಕಾರಿ ಬಾಲಕರ  ಕಾಲೇಜಿನ ಕಟ್ಟಡ [ಸ್ವಾಯುತ್ತ] ಮತ್ತು ಪಿ.ಜಿ. ಕಟ್ಟಡದಲ್ಲಿ ದಿನಾಂಕಃ 24-08-2013 ರಂದು ನಡೆಯಲಿದೆ.

ಎಣಿಕಾ ಕೇಂದ್ರಗಳಿಗೆ ಪ್ರವೇಶಿಸಲು ಚುನಾವಣೆ ಎಣಿಕೆಯ ಅಧಿಕಾರಿಯವರು  ಮತ್ತು ಸಿಬ್ಬಂದಿಯವರು, ಚುನಾವಣಾ ಎಜೆಂಟರು ಮತ್ತು ಮತ ಎಣಿಕೆಯ ಎಜೆಂಟರು ಅಧಿಕೃತ ಪಾಸ್ ಗಳೊಂದಿಗೆ ದಿನಾಂಕಃ 24-08-2013 ರಂದು ಬೆಳಿಗ್ಗೆ ಈಗಾಗಲೇ ಜಿಲ್ಲಾ ಚುನಾವಣಾದಿಕಾರಿಗಳು ಸೂಚಿಸಿರುವ ನಿಗದಿತ ಸಮಯದೊಳಗೆ ಎಣಿಕಾ ಕೇಂದ್ರಗಳಿಗೆ ಪೊಲೀಸ್ ಇಲಾಖಾ ವತಿಯಿಂದ ಪ್ರವೇಶ ದ್ವಾರದಲ್ಲಿ ನಿರ್ಮಿಸಲಾಗಿರುವ ಲೋಹ ಪರಿಶೋದಕ ಯಂತ್ರಗಳ ಮೂಲಕ ಪರಿಶೀಲನೆಗೆ ಒಳಪಟ್ಟು ಪ್ರವೇಶಿಸಲು ಸೂಚಿಸಲಾಗಿದೆ.  ಎಣಿಕಾ ಕೇಂದ್ರಗಳಿಗೆ ಬರುವವರು ಯಾವುದೇ ಸೆಲ್ ಪೋನ್ ಗಳನ್ನು, ಅಪಾಯಕರ ಆಯುಧಗಳನ್ನು, ಸ್ಫೋಟಕ ವಸ್ತುಗಳು, ಬೆಂಕಿಪೆಟ್ಟಿಗೆ, ಬೀಡಿ-ಸಿಗರೇಟ್ ಗಳು, ಲೈಟರ್ ಗಳು ಹಾಗೂ ಇತರೆ ಯಾವುದೇ ಅಪಾಯಕರ ವಸ್ತುಗಳನ್ನು ತರಬಾರದೆಂದು ಈ ಮೂಲಕ ಸೂಚಿಸಲಾಗಿದೆ.  

ಚುನಾವಣಾ ಮತ ಎಣಿಕೆಯ ದಿನ ಈ ಕೆಳಕಂಡ ಅದಿಕಾರಿ, ಸಿಬ್ಬಂದಿ ಹಾಗೂ ಕಾಯ್ದಿಟ್ಟ ಪಡೆಗಳನ್ನು ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜಿಸಲಾಗಿರುತ್ತದೆ.


Addl. S.P.
DSP
CPI.
PSI
ASI
HC/PC
WPC
KSRP
DAR
CPMF
01
03
10
30
52
367
25
07
14
01 Coy
ಮಂಡ್ಯ ಲೋಕಸಬಾ ಕ್ಷೇತ್ರದ ಉಪ ಚುನಾವಣೆ - 2013 ರ ಸಂಬಂದ ಚಲಾವಣೆಯಾದ ಮೊಹರಾದ ವಿದ್ಯುನ್ಮಾನ ಮತಯಂತ್ರಗಳನ್ನು ಸಂಗ್ರಹಿಸಿಟ್ಟಿರುವ ಕಟ್ಟಡದ ಬಳಿ  ಏರ್ಪಡಿಸಲಾಗಿರುವ ಬಂದೋಬಸ್ತ್ನ ವಿವರ 

ಮಂಡ್ಯ ಲೋಕಸಬಾ ಕ್ಷೇತ್ರದ ಉಪ ಚುನಾವಣೆ - 2013 ರ ಸಂಬಂದ ಚಲಾವಣೆಯಾದ ಮೊಹರಾದ ವಿದ್ಯುನ್ಮಾನ ಮತಯಂತ್ರಗಳನ್ನು ಸಂಗ್ರಹಿಸಿಟ್ಟಿರುವ ಕಟ್ಟಡದ ಬಳಿ ಈ ಕೆಳಕಂಡ ಅದಿಕಾರಿ, ಸಿಬ್ಬಂದಿ ಹಾಗೂ ಕಾಯ್ದಿಟ್ಟ ಪಡೆಗಳನ್ನು ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜಿಸಲಾಗಿರುತ್ತದೆ.  ಈ ಅದಿಕಾರಿ ಮತ್ತು ಸಿಬ್ಬಂದಿಗಳು ಹಗಲು ಮತ್ತು ರಾತ್ರಿ ಪಾಳೆಯ ಅದಾರದ ಮೇಲೆ ಕರ್ತವ್ಯವನ್ನು ನಿರ್ವಹಿಸಲಿದ್ದಾರೆ.  



DSP
CPI.
PSI
ASI
HC/PC
WPC
KSRP
DAR
CPMF
02
10
30
52
367
25
07
14
01 Coy

No comments:

Post a Comment