Moving text

Mandya District Police

PRESS NOTE DATED : 13-12-2013


ಪೊಲೀಸ್ ಸೂಪರಿಂಟೆಂಡೆಂಟ್ ರವರ ಕಛೇರಿ
             ಮಂಡ್ಯ ಜಿಲ್ಲೆ, ಮಂಡ್ಯ
            ದಿನಾಂಕಃ 13-12-2013

ಪತ್ರಿಕಾ ಪ್ರಕಟಣೆ







ಮಂಡ್ಯ ಉಪ ವಿಭಾಗದ ಅಪರಾಧ ಪತ್ತೆ ದಳದಿಂದ ದರೋಡೆ ಮಾಡಲು ಹೊಂಚು ಹಾಕುತ್ತಿದ್ದ 6 ಜನ ಆಸಾಮಿಗಳ ಬಂಧನ ಇವರುಗಳಿಂದ ಅಪಾಯಕಾರವಾದ ಒಂದು ಡಿಬಿಬಿಎಲ್ ಬಂದೂಕ ಹಾಗೂ 2 ಕಾಟ್ರೋಜ್ಗಳು, ಕಬ್ಬಿಣದ ಲಾಂಗ್, ಕಾರದಪುಡಿ ಪಟ್ಟಣ ಮತ್ತಿತರೆ ವಸ್ತುಗಳ ವಶ

   ದಿನಾಂಕಃ 06-12-2013 ರಂದು ಮದ್ಯಾಹ್ನ 02-00 ಗಂಟೆ ಸಮಯದಲ್ಲಿ ಮಂಡ್ಯದ ಕೆರೆ ಅಂಗಳದಲ್ಲಿರುವ ದೊಡ್ಡ ಚರಂಡಿಯ ಪಕ್ಕದಲ್ಲಿ ಒಂದು ಟಾಟಾ ಇಂಡಿಕಾ ಕಾರ್ ನಂಬರ್ ಕೆಎ 05 ಎಡಿ 7020 ರಲ್ಲಿ 6-7 ಜನ ಆಸಾಮಿಗಳು ಮಂಡ್ಯ ನಗರದಲ್ಲಿ ಡಕಾಯಿತಿ ಮಾಡಲು ಹೊಂಚು ಹಾಕುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಮಂಡ್ಯ ಉಪ ವಿಭಾಗದ ಅಧಿಕಾರಿಗಳು ಹಾಗೂ ಸಿಬ್ಬಂಧಿಯವರು ಆಸಾಮಿಗಳ ಮೇಲೆ ದಾಳಿ ಮಾಡಿ ಅವರುಗಳಿಂದ ಅಪಾಯಕಾರಿ ಆಯುಧಗಳಾದ ಒಂದು ಡಿಬಿಬಿಎಲ್ ಬಂದೂಕ, 2 ಕಾಟ್ರೋಜ್ಗಳು, ಕಾರದಪುಡಿ ಪಟ್ಟಣ, ಕಬ್ಬಿಣದ ಲಾಂಗ್, ರಾಡು, ಚಗರೆ ಹಗ್ಗ, ಕಬ್ಬಿಣದ ಕಾಟ ಇವುಗಳನ್ನು ದಾಳಿ ಮಾಡಿ ವಶಪಡಿಸಿಕೊಂಡಿರುತ್ತಾರೆ.
ಆರೋಪಿಗಳ ಹೆಸರು ಮತ್ತು ವಿಳಾಸ
                            
1) ಸುನೀಲ್ ಕುಮಾರ್ ಬಿನ್ ಶಿವಣ್ಣ, 22ವರ್ಷ, ಕಾರ್ಚಾಲಕ, ವಾಸ: ಹೊಂಬಾಳೇಗೌಡನದೊಡ್ಡಿ, ಕೊಪ್ಪ ಹೋಬಳಿ, ಮದ್ದೂರು ತಾಲ್ಲೂಕು.
2) ಅರುಣ್ ಕುಮಾರ್  @ ಅರುಣ್ @ ಸೊಳ್ಳೆ ಬಿನ್ ಆನಂದ್ @ ಎಸ್ಟಿಡಿ ಆನಂದ  23ವರ್ಷ, ಕಾರ್ ಚಾಲಕ, ವಾಸ: ಬೆಸಗರಹಳ್ಳಿ ಗ್ರಾಮ, ಮದ್ದೂರು ತಾಲ್ಲೂಕು.
3) ಸ್ವಾಮಿ ಬಿನ್ ಹುಚ್ಚಪ್ಪ, 22ವರ್ಷ, ವಾಸ: ವೆಂಕಟರಾಯನದೊಡ್ಡಿ, ಸಾತನೂರು ಹೋಬಳಿ, ಕನಕಪುರ ತಾಲ್ಲೂಕು, ರಾಮನಗರ ಜಿಲ್ಲೆ.
4) ನಂದೀಶ ಬಿನ್ ಕಾಳಸಿಂಗೇಗೌಡ, 23ವರ್ಷ, ಕಾರ್ ಚಾಲಕ, ಡೋರ್ ನಂ: 1/1, ವ್ಯೆದ್ಯನಾಥೇಶ್ವರ ನಿಲಯ, 4ನೇ ಮೈನ್, ಬ್ಯಾಟರಾಯನಪುರ, ಮೈಸೂರು ರಸ್ತೆ, ಬೆಂಗಳೂರು ಸಿಟಿ.
5) ಮಂಜುನಾಥ್ ಬಿನ್ ಲೇಟ್, ನೀಲಯ್ಯ, 24ವರ್ಷ, ಹಬ್ಬೂರು ಗ್ರಾಮ, ಚನ್ನಪಟ್ಟಣ ತಾಲ್ಲೂಕು, ರಾಮನಗರ ಜಿಲ್ಲೆ.
6) ರಾಜೇಶ ಬಿನ್ ಲೇಟ್, ತಿಮ್ಮಯ್ಯ, 26ವರ್ಷ, ವಾಸ: ಬೆಂಡರವಾಡಿ ಗ್ರಾಮ, ಕಿರುಗಾವಲು ಹೋಬಳಿ, ಮಳವಳ್ಳಿ  ತಾಲ್ಲೂಕು.

     ಆರೋಪಿಗಳನ್ನು ದಿನಾಂಕಃ 06-12-2013 ರಂದು ದಸ್ತಗಿರಿ ಮಾಡಿ ದಿನಾಂಕ;7-12-13 ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಅಂದಿನಿಂದ ಆರೋಪಿಗಳು ಮಂಡ್ಯ ಉಪ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿರುತ್ತಾರೆ. ತಲೆ ಮರೆಸಿಕೊಂಡಿರುವ ಮತ್ತೊಬ್ಬ ಆರೋಪಿಗಾಗಿ ಪೊಲೀಸರು ಪತ್ತೆ ಕಾರ್ಯ ಮುಂದುವರೆಸಿರುತ್ತಾರೆ.

      ಈ ಕೇಸಿನ ಪತ್ತೆ ಕಾರ್ಯದಲ್ಲಿ ಮಂಡ್ಯ ಉಪ-ವಿಭಾಗದ ಆರಕ್ಷಕ ಉಪಾಧೀಕ್ಷಕರಾದ ಡಾ// ಶೋಭಾರಾಣಿ, ವಿ. ಜೆ. ಮಂಡ್ಯ ನಗರ ವೃತ್ತ ನಿರೀಕ್ಷಕರಾದ ಕೆ.ಎಂ.ಹರೀಶ್ ಬಾಬು, ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಯ, ಪಿಎಸ್ಐ, ಹೆಚ್.ಎನ್.ಬಾಲು, ಮಂಡ್ಯ ಉಪ-ವಿಭಾಗದ ಅಪರಾಧ ಪತ್ತೆ ದಳದ ಸಿಬ್ಬಂದಿಗಳಾದ ಎಎಸ್ಐ, ಸಿ. ಕೆ, ಪುಟ್ಟಸ್ವಾಮಿ, ಸಿ.ಹೆಚ್.ಸಿ ಗಳಾದ ನಿಂಗಣ್ಣ, ನಾರಾಯಣ, ಲಿಂಗರಾಜು, ಮುದ್ದುಮಲ್ಲಪ್ಪ, ನಟರಾಜು, ಸಂಪತ್, ಪಿಸಿಗಳಾದ ಇರ್ಪಾನ್ ಪಾಷ, ಪುಟ್ಟಸ್ವಾಮಿ, ಉಮೇಶ, ಮತ್ತು ಜೀಪ್ ಚಾಲಕರುಗಳಾದ ಬಲರಾಮೇಗೌಡ ಮತ್ತು ಯೋಗೇಶ ಕುಮಾರರವರು ಪಾಲ್ಗೊಂಡಿರುತ್ತಾರೆ.

    ಈ ಮೇಲ್ಕಂಡ ಪ್ರಕರಣದ ಆರೋಫಿಗಳನ್ನು ಪತ್ತೆ ಮಾಡಿದ ಮೇಲ್ಕಂಡ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಮಾನ್ಯ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಶಂಸಿರುತ್ತಾರೆ 

No comments:

Post a Comment