Moving text

Mandya District Police

PRESS NOTE DATE 27-04-2014

ಕಿರುಗಾವಲು ಪೊಲೀಸ್ ಠಾಣೆ ಪ್ರಕರಣ ಸಂಖ್ಯೆ : 61/2014 ಕಲಂ 302 ಕೂಡ 34 ಐಪಿಸಿ ಪ್ರಕರಣದ  ಆರೋಪಿಗಳ ಬಂಧನ 

            ಪೊಲೀಸ್ ಸೂಪರಿಂಟೆಂಡೆಂಟ್ ರವರ ಕಛೇರಿ                                                         
                                                                                              ಮಂಡ್ಯ ಜಿಲ್ಲೆ. ಮಂಡ್ಯ ದಿಃ-27-04-2014

ಪತ್ರಿಕಾ ಪ್ರಕಟಣೆ

          ಕಿರುಗಾವಲು ಪೊಲೀಸ್ ಠಾಣಾ ಸರಹದ್ದಿನ ಕನ್ನಹಳ್ಳಿ ಗ್ರಾಮದ ಬಳಿ ದಿನಾಂಕಃ 24-04-2014 ರಂದು ಬೆಳಗಿನ ಜಾವ  ಶ್ರೀಮತಿ.ಶಿಲ್ಪಾ ಕೋಂ ಅಭಿಜಿತ್, 19 ವರ್ಷ, ಬೈರವೇಶ್ವರ ನಗರ, 2 ನೇ ಕ್ರಾಸ್, ಮೇಟಗಳ್ಳಿ, ಮೈಸೂರು ಎಂಬಾಕೆಯನ್ನು ಬೆಂಕಿ ಹಚ್ಚಿ ಕೊಲೆಗೆ ಪ್ರಯತ್ನಿಸಿದ್ದು, ನಂತರ ಆಕೆಯು ಆಸ್ಪತ್ರೆಯಲ್ಲಿ ಮೃತಪಟ್ಟಿರುವ ವಿಚಾರದಲ್ಲಿ ಆರೋಪಿಗಳನ್ನು ದಸ್ತಗಿರಿ ಮಾಡಿರುವ ಬಗ್ಗೆ.

     ಮಳವಳ್ಳಿ ಗ್ರಾಮಾಂತರ ವೃತ್ತ ವ್ಯಾಪ್ತಿಯ ಕಿರುಗಾವಲು ಪೊಲೀಸ್ ಠಾಣಾ ಸರಹದ್ದಿನ ಮೈಸೂರು ಮಳವಳ್ಳಿ ಮುಖ್ಯರಸ್ತೆಯ ಕನ್ನಹಳ್ಳಿ ಗ್ರಾಮದ ಮುಂದೆ ರಸ್ತೆಯ ಪಕ್ಕದಲ್ಲಿ ದಿನಾಂಕಃ 24-04-2014 ರಂದು ಬೆಳಗಿನ ಜಾವದ ಸಮಯದಲ್ಲಿ ಆರೋಪಿಗಳು ಶಿಲ್ಪಾ ಕೋಂ ಅಭಿಜಿತ್, 19 ವರ್ಷ, ಬೈರವೇಶ್ವರ ನಗರ, 2 ನೇ ಕ್ರಾಸ್, ಮೇಟಗಳ್ಳಿ, ಮೈಸೂರು ಎಂಬಾಕೆಯನ್ನು ಕೊಲೆ ಮಾಡುವ ಉದ್ದೇಶದಿಂದ ಕುತ್ತಿಗೆಗೆ ವೇಲನ್ನು ಬಿಗಿದು ನಂತರ ಶಿಲ್ಪಾಳ ಮುಖಕ್ಕೆ ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿ ಹೊರಟು ಹೋಗಿದ್ದು ಇದನ್ನು ಕಂಡ ಸಾರ್ವಜನಿಕರು ಈಕೆಯನ್ನು 108 ಸಹಾಯದಿಂದ ಮಳವಳ್ಳಿ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿದ್ದು ಗಾಯಾಳುವನ್ನು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಡ್ಯ ಜಿಲ್ಲಾಸ್ಪತ್ರೆಗೆ ರವಾನಿಸಿದ್ದು ಚಿಕಿತ್ಸೆ ಪಲಕಾರಿಯಾಗದೇ ಶಿಲ್ಪಾಳು ಮೃತ ಪಟ್ಟಿರುತ್ತಾಳೆ. ಈ ವಿಚಾರದಲ್ಲಿ ಶಿಲ್ಪಾಳು ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಗಳ ಸಮಕ್ಷಮ ಹೇಳಿಕೆಯನ್ನು ನೀಡಿದ್ದು ಈ ಬಗ್ಗೆ ಕಿರುಗಾವಲು ಠಾಣಾ ಮೊಸಂಃ 61/14 ಕಲಂ 302 ರೆವಿ 34 ಐಪಿಸಿ ರೀತ್ಯಾ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿತ್ತು. 

ಈ ಮೇಲ್ಕಂಡ ಪ್ರಕರಣದ ಆರೋಪಿಗಳ ಪತ್ತೆ ಬಗ್ಗೆ ಡಾ|| ವಿ.ಜೆ ಶೋಬಾರಾಣಿ, ಡಿಎಸ್ಪಿ ಮಂಡ್ಯ ಉಪವಿಭಾಗ ಹಾಗೂ ಶ್ರೀ ಅಣ್ಣಪ್ಪನಾಯಕ ಡಿಎಸ್ಪಿ ಮಳವಳ್ಳಿ ಉಪವಿಭಾಗ ರವರ ನೇತೃತ್ವದಲ್ಲಿ ಮಳವಳ್ಳಿ ಗ್ರಾಮಾಂತರ ವೃತ್ತದ ಸಿ.ಪಿ.ಐ ಹೆಚ್.ಕೆ ಶಿವಸ್ವಾಮಿ ಶ್ರೀ ಬಿ.ದೇವರಾಜು, ಪಿ.ಎಸ್.ಐ, ಕಿರುಗಾವಲು ಪೊಲೀಸ್ ಠಾಣೆ, ಶ್ರೀ ವೆಂಕಟೇಗೌಡ ಪಿಎಸ್ಐ ಮಂಡ್ಯ ಪೂರ್ವ ಪೊಲೀಸ್ ಠಾಣೆ ಹಾಗೂ  ಇತರೆ ಸಿಬ್ಬಂದಿಗಳ ತನಿಖಾ ತಂಡವನ್ನು ರಚಿಸಿ, ಸದರಿ ತಂಡದವರು  ದಿನಾಂಕಃ24/04/2014 ರಂದು ಆರೋಪಿ ಸಂಖ್ಯೆ 3] ಪ್ರಮಿಳಾ ಕೊಂ ಪುಟ್ಟಸ್ವಾಮಿ, 33 ವರ್ಷ, ನೆಲಮಾಕನಹಳ್ಳಿ ಗ್ರಾಮ, ಮಳವಳ್ಳಿ ತಾಲ್ಲೂಕು, ಹಾಲಿ ವಾಸ ಬೈರವೇಶ್ವರ ನಗರ, ಮೇಟಗಳ್ಳಿ ಪೋಸ್ಟ್, ಮೈಸೂರುರವರನ್ನು ನೆಲಮಾಕನಹಳ್ಳಿ ಗ್ರಾಮದಲ್ಲಿ ವಶಕ್ಕೆ ಪಡೆದು ನಂತರ ಆರೋಪಿ ಸಂಖ್ಯೆ-4] ನಾಗಮ್ಮ ಕೊಂ ಬಿಲ್ಲಯ್ಯ, 38 ವರ್ಷ,  ನೆಲಮಾಕನಹಳ್ಳಿ ಗ್ರಾಮ, ಮಳವಳ್ಳಿ ತಾಲ್ಲೂಕು, ಹಾಲಿ ವಾಸ, ಜಯದೇವನಗರ, ಮೇಟಗಳ್ಳಿ ಪೋಸ್ಟ್, ಮೈಸೂರು ರವರನ್ನು ಮೈಸೂರಿನ ಜಯದೇವನಗರದಲ್ಲಿ ವಶಕ್ಕೆ ಪಡೆದು ದಸ್ತಗಿರಿ ಮಾಡಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ಹಾಜರ್ಪಡಿಸಿರುತ್ತಾರೆ. ನಂತರ ದಿನಾಂಕ: 26-04-2014 ರಂದು ಬೆಳಿಗ್ಗೆ ಆರೋಪಿ ಸಂಖ್ಯೆ-1 ಪುಟ್ಟಸ್ವಾಮಿ ಬಿನ್ ಬಿಲ್ಲಯ್ಯ, 36ವರ್ಷ, ವುಡ್ ಪಾಲಿಸ್ ಕೆಲಸ, 2ನೇ ಕ್ರಾಸ್, ಕಲ್ಪವೃಕ್ಷ ಬಾರ್ ಹಿಂಭಾಗ, ಬೈರವೇಶ್ವರ ನಗರ, ಮೇಟಗಳ್ಳಿ ಪೋಸ್ಟ್, ಮೈಸೂರು. ಆರೋಪಿ ಸಂಖ್ಯೆ-2 ಬಿಲ್ಲಯ್ಯ ಬಿನ್ ಬಿಲ್ಲಯ್ಯ, 44 ವರ್ಷ, ವುಡ್ ಪಾಲಿಸ್ ಕೆಲಸ, ಮನೆ ನಂ 08/1, 1 ನೇ ಕ್ರಾಸ್,  ಜಯದೇವನಗರ, ಮೇಟಗಳ್ಳಿ ಪೋಸ್ಟ್, ಮೈಸೂರು. ರವರನ್ನು ಬೆಂಗಳೂರಿನ ಹೆಬ್ಬಾಳದ ಬಸ್ನಿಲ್ದಾಣದ ಬಳಿ ವಶಕ್ಕೆ ಪಡೆದು ಕರೆತಂದು ವಿಚಾರಣೆ ಮಾಡಿ ದಸ್ತಗಿರಿ ಮಾಡಿ ಆರೋಪಿಗಳಿಂದ ಎರಡು ಮೊಬೈಲ್ಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ್ದ ಹೊಂಡಾ ಆಕ್ಟಿವಾ ಬೈಕ್ ಕೆ.ಎ.09-ಇ.ಎಸ್-1284 ಹಾಗೂ ಬಜಾಜ್ ಡಿಸ್ಕವರ್ ಮೋಟಾರ್ ಬೈಕ್ ಕೆ.ಎ.09-ಇವಿ-8233 ಗಳನ್ನು ಅಮಾನತ್ತುಪಡಿಸಿಕೊಂಡಿರುತ್ತಾರೆ. ಆರೋಪಿಗಳ ವಿಚಾರಣಾ ವೇಳೆಯಲ್ಲಿ ಮೃತೆ ಶಿಲ್ಪಾಳು ಅಭಿಜಿತ್ ನೊಂದಿಗೆ ಅಂರ್ತಜಾತಿ ಪ್ರೇಮ ವಿವಾಹವಾಗಿದ್ದು ಮೃತೆ ಶಿಲ್ಪಾಳ ಅತ್ತೆ ನಾಗಮ್ಮ ಮಾವ ಬಿಲ್ಲಯ್ಯನವರಿಗೆ ಇಷ್ಟವಿಲ್ಲದೇ ಇದ್ದು ಆರೋಪಿ ಸಂಖ್ಯೆ-2 ಬಿಲ್ಲಯ್ಯ ರವರ ಮಗಳು ಅಭಿಲಾಷ್ ರವರ ಮದುವೆ ನಿಶ್ಚಯವಾದಲ್ಲಿ ಈಕೆಯ ತಮ್ಮನಾದ ಅಭಿಜಿತ್ ಅಂರ್ತಜಾತಿ ಹುಡುಗಿಯ ಜೊತೆ ಮದುವೆಯಾಗಿರುವುದರಿಂದ ತಮ್ಮ ಮಗಳ ಮದುವೆಗೆ ಅಡ್ಡಿಯಾಗುತ್ತದೆಂಬ ಕಾರಣದಿಂದ ಒಂದು ವಾರದ ಮುಂಚೆ ಆರೋಪಿಗಳೆಲ್ಲರೂ ಶಿಲ್ಪಾಳನ್ನು ಕೊಲೆ ಮಾಡುವ ಸಂಚು ಮಾಡಿ ಮೈಸೂರು ಮಳವಳ್ಳಿ ಮುಖ್ಯರಸ್ತೆಯ ಪಕ್ಕದ ಕನ್ನಹಳ್ಳಿ ಗ್ರಾಮದ ಬಳಿ ಆರೋಪಿಗಳಾದ ಪುಟ್ಟಸ್ವಾಮಿ ಮತ್ತು ಪ್ರಮೀಳಾ ಇಬ್ಬರು ಸೇರಿ ಶಿಲ್ಪಾಳಿಗೆ ವೇಲ್ನಿಂದ ಕುತ್ತಿಗೆಗೆ ಬಿಗಿದು ಮುಖಕ್ಕೆ ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿ ಕೊಲೆ ಮಾಡಿರುವುದಾಗಿ ತನಿಖಾ ಕಾಲದಲ್ಲಿ ತಿಳಿಸಿರುತ್ತಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರ್ಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿರುತ್ತದೆ. 

ಈ ಪತ್ತೆ ಕಾರ್ಯದಲ್ಲಿ ಪಾಲ್ಗೊಂಡಿದ್ದ ಪೊಲೀಸ್ ಅದಿಕಾರಿ ಮತ್ತು ಸಿಬ್ಬಂದಿಗಳನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಶಂಸಿರುತ್ತಾರೆ


No comments:

Post a Comment