Moving text

Mandya District Police

PRESS NOTE DATED 28-04-2014

WOMEN HELPLINE 


     ಪೊಲೀಸ್ ಸೂಪರಿಂಟೆಂಡೆಂಟ್  ರವರ ಕಛೇರಿ                 ಮಂಡ್ಯ ಜಿಲ್ಲೆ. ಮಂಡ್ಯ ದಿಃ-28-04-2014

ಪತ್ರಿಕಾ ಪ್ರಕಟಣೆ


     ಮಹಿಳೆಯರಿಗೆ ರಕ್ಷಣೆ ಒದಗಿಸುವ ನಿಟ್ಟಿನಲ್ಲಿ ಮಂಡ್ಯ ಜಿಲ್ಲಾ ವ್ಯಾಪ್ತಿಯಲ್ಲಿ ಮಹಿಳೆಯರಿಗೆ ಯಾವುದೇ ಸಮಯದಲ್ಲಾದರೂ ಸರಿ ಹಾಗೂ ಯಾವುದೇ ಸ್ಥಳದಲ್ಲಾದರೂ ಸರಿ ಯಾರಿಂದಲಾದರೂ ಸರಿ ತೊಂದರೆಯುಂಟಾದಲ್ಲಿ ಅವರ ಸಹಾಯಕ್ಕಾಗಿ ಕೂಡಲೇ ಬರುವ ಸಲುವಾಗಿ ಮಂಡ್ಯ ಜಿಲ್ಲಾ ಪೊಲೀಸ್ ಇಲಾಖಾ ವತಿಯಿಂದ ಮಹಿಳಾ ಸಹಾಯವಾಣಿಯನ್ನು [HELP LINE] ಪ್ರಾರಂಭ ಮಾಡಿದ್ದು, ಈ ಕೆಳಕಂಡ ವಿಚಾರಗಳ ಬಗ್ಗೆ ನೊಂದ ಮಹಿಳೆಯರು ಮಹಿಳಾ ಸಹಾಯವಾಣಿಯನ್ನು ಈ ಕೆಳಗೆ ಸೂಚಿಸಿರುವ ದೂರವಾಣಿಗೆ ತಾವುಗಳು ಇದ್ದ ಸ್ಥಳದಿಂದಲೇ ಸಂಪರ್ಕಿಸಿ ಸಹಾಯವನ್ನು ಪಡೆಯಬಹುದಾಗಿರುತ್ತದೆ.

1] ಶಾಲಾ - ಕಾಲೇಜು, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಆಸ್ಪತ್ರೆಗಳು, ಇತರೆ ಸಾರ್ವಜನಿಕ ಸ್ಥಳಗಳು, ಬಸ್ ಮತ್ತು ರೈಲುಗಳಲ್ಲಿ ಪ್ರಯಾಣ ಮಾಡುತ್ತಿದ್ದಲ್ಲಿ ಹಾಗೂ ಒಬ್ಬಂಟಿಯಾಗಿ ಮಹಿಳೆಯರು ರಾತ್ರಿ ವೇಳೆ ಯಾವುದೇ ಸ್ಥಳದಲ್ಲಿ ಸಂಚರಿಸುತ್ತಿದ್ದಲ್ಲಿ ಯಾವುದೇ ಕಿಡಿಗೇಡಿಗಳಿಂದ ತೊಂದರೆಯಾದಲ್ಲಿ ಈ ಮಹಿಳಾ ಸಹಾಯವಾಣಿ ಕೇಂದ್ರವನ್ನು ಇದ್ದ ಸ್ಥಳದಿಂದಲೇ ಸಂಪರ್ಕಿಸಿದ್ದಲ್ಲಿ ಸಹಾಯವಾಣಿ ಕೇಂದ್ರದವರು ನೊಂದ ಮಹಿಳೆಯರು ತೊಂದರೆಗೀಡಾದ ಸ್ಥಳದ ಸಮೀಪದ ಠಾಣೆಗಳಿಗೆ ಮಾಹಿತಿಯನ್ನು ನೀಡಿ ಆ ಠಾಣೆಯ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಕೆಲವೇ ನಿಮಿಷಗಳೊಳಗೆ ತೊಂದರೆಗೀಡಾದ ಮಹಿಳೆ ಇದ್ದ ಸ್ಥಳಕ್ಕೆ ಭೇಟಿ ನೀಡಿ ರಕ್ಷಣೆ ಒದಗಿಸಲು ಬರುವವರಿದ್ದಾರೆ.

2]  ಮಹಿಳಾ ಸಹಾಯವಾಣಿಯನ್ನು ಮಂಡ್ಯ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ತೆರೆಯಲಾಗಿದ್ದು, ಅದರ ದೂರವಾಣಿ ಸಂಖ್ಯೆ ಈ ಕೆಳಕಂಡಂತೆ ಇರುತ್ತದೆ.

1] 08232 - 220239
2] 08232 - 220242 
No comments:

Post a Comment