Moving text

Mandya District Police

Press Note Dated: 29-11-2015

ಪೊಲೀಸ್ ಸೂಪರಿಂಟೆಂಡೆಂಟ್ ರವರ ಕಛೇರಿ,
ಮಂಡ್ಯ ಜಿಲ್ಲೆ, ಮಂಡ್ಯ, ದಿನಾಂಕ: 29-11-2015

ಪತ್ರಿಕಾ ಪ್ರಕಟಣೆ
ಖಾಸಗಿ ಶಾಲಾ ವಾಹನ ಚಾಲಕ ಹಾಗೂ ಖಾಸಗಿ ಬಸ್ ಚಾಲಕರಿಗೆ
ಚಾಲನಾ ಪರೀಕ್ಷೆ/ತರಬೇತಿ ಕಾರ್ಯಕ್ರಮ

          ಮಂಡ್ಯ ಜಿಲ್ಲೆಯಲ್ಲಿ ಖಾಸಗಿ ಬಸ್ಸುಗಳ ಅಪಘಾತಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಹಾಗೂ ಖಾಸಗಿ ಶಾಲಾ ಮಕ್ಕಳುಗಳ ವಾಹನಗಳ ಅಪಘಾತಗಳು ಕೂಡ ಜಿಲ್ಲೆಯ ಕೆಲವು ಭಾಗಗಳಲ್ಲಿ ವರದಿಯಾಗಿದ್ದ ಹಿನ್ನಲೆಯಲ್ಲಿ ಕೆ.ಎಸ್.ಆರ್.ಟಿ.ಸಿ., ಪೊಲೀಸ್ ಮತ್ತು ಪ್ರಾದೇಶಿಕ ಸಾರಿಗೆ ಇಲಾಖಾ ವತಿಯಿಂದ ಮಂಡ್ಯ ನಗರದಲ್ಲಿರುವ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪೊಲೀಸ್ ಪೆರೇಡ್ ಮೈದಾನದಲ್ಲಿ ಖಾಸಗಿ ಬಸ್ ಚಾಲಕರುಗಳ ಹಾಗೂ ಖಾಸಗಿ ಶಾಲಾ ಮಕ್ಕಳ ಬಸ್ ಚಾಲಕರ ಚಾಲನಾ ಪರೀಕ್ಷೆ/ತರಬೇತಿಯನ್ನು ಪರಿಣತಿ ಹೊಂದಿರುವ ಕೆ.ಎಸ್.ಆರ್.ಟಿ.ಸಿ. ಚಾಲಕರ ಮತ್ತು ಸಾರಿಗೆ ಇಲಾಖೆ ಅಧಿಕಾರಿಗಳ ಸಹಯೋಗದೊಡನೆ ನವೆಂಬರ್ ಮಾಹೆಯ ಪ್ರತಿ ಭಾನುವಾರ ಏರ್ಪಡಿಸಲಾಗಿತ್ತು.

               ತರಬೇತಿ ಕಾರ್ಯಕ್ರಮದಲ್ಲಿ ಕೆಳಕಂಡಂತೆ ಖಾಸಗಿ ಬಸ್ ಚಾಲಕರುಗಳ ಹಾಗೂ ಖಾಸಗಿ ಶಾಲಾ ಮಕ್ಕಳ ಬಸ್ ಚಾಲಕರು ಭಾಗವಹಿಸಿದ್ದು, ದಿನಾಂಕ: 08-11-2015 ರಂದು 48 ಜನ, ದಿ:15-11-2015 ರಂದು 35 ಜನ ಚಾಲಕರು, ದಿ: 22-11-2015 ರಂದು 64 ಜನ ಚಾಲಕರು ಮತ್ತು ದಿ:29-11-2015 ರಂದು 35 ಜನ ಚಾಲಕರು ತರಬೇತಿಯನ್ನು ಪಡೆದಿರುತ್ತಾರೆ. ಸದರಿ ತರಬೇತಿ ಕಾರ್ಯಕ್ರಮದಲ್ಲಿ ಶ್ರೀ ವೀರೇಶ್, ಇಂಜಿನಿಯರ್, ಕೆಎಸ್ಆರ್ಟಿಸಿ, ಮಂಡ್ಯ ವಿಭಾಗ, ಶ್ರೀ ಅನ್ವರ್ ಪಾಷಾ, ಸಾರಿಗೆ ಅಧಿಕಾರಿಗಳು, ಮಂಡ್ಯ ಜಿಲ್ಲೆ, ಶ್ರೀ.ಅಬ್ದುಲ್ ನಸೀಮ್, ಸಾರಿಗೆ ನಿರೀಕ್ಷಕರು, ಪ್ರಾದೇಶಿಕ ಸಾರಿಗೆ ಇಲಾಖೆ, ಶ್ರೀ ಸದರುಲ್ಲಾ ಷರೀಪ್, ಸಾರಿಗೆ ನಿರೀಕ್ಷಕರು, ಪ್ರಾದೇಶಿಕ ಸಾರಿಗೆ ಇಲಾಖೆ, ಶ್ರೀ ವಿನ್ಸೆಂಟ್, ಟ್ರಾಫಿಕ್ ವಾರ್ಡ್ನ್ ಹಾಗೂ ಮಂಡ್ಯ ಜಿಲ್ಲಾ ಖಾಸಗಿ ಬಸ್ ಮಾಲೀಕರ ಅಧ್ಯಕ್ಷರು ಮತ್ತು ಕಾರ್ಯದರ್ಶಿ ರವರುಗಳು ಭಾಗವಹಿಸಿರುತ್ತಾರೆ.

No comments:

Post a Comment