Moving text

Mandya District Police
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಛೇರಿ
ಮಂಡ್ಯ ಜಿಲ್ಲೆ, ಮಂಡ್ಯ ದಿನಾಂಕ:29-12-2016

ಪತ್ರಿಕಾ ಪ್ರಕಟಣೆ


ಮದ್ದೂರು ತಾಲ್ಲೂಕು ತೊಪ್ಪನಹಳ್ಳಿ ಗ್ರಾಮದಲ್ಲಿ ದಿನಾಂಕ: 25-12-2016 ರಂದು ನಡೆದ ಗುಂಪುಘರ್ಷಣೆ ಸಮಯದಲ್ಲಿ ಮದ್ದೂರು ಠಾಣೆಯಲ್ಲಿ ದಾಖಲಾಗಿದ್ದ ಕೊಲೆ ಪ್ರಕರಣದಲ್ಲಿ ಈವರೆಗೆ ಪೊಲೀಸ್ ಅಧಿಕಾರಿಗಳು 13 ಜನ ಆರೋಪಿಗಳನ್ನು ದಸ್ತಗಿರಿ ಮಾಡಿರುತ್ತಾರೆ. ಕೆ.ಹೊನ್ನಲಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾದ ಶ್ರೀಮತಿ ಶೋಭಾರವರನ್ನು ಪ್ರಕರಣದಲ್ಲಿ ವಿಚಾರಣೆಗೆ ಒಳಪಡಿಸಲಾಗಿರುತ್ತದೆ. ಅವರನ್ನು ಈವರೆಗೆ ದಸ್ತಗಿರಿ ಮಾಡಿರುವುದಿಲ್ಲ. ಪ್ರಕರಣದಲ್ಲಿ ಇನ್ನೂ ಕೆಲವರು ತಲೆಮರೆಸಿಕೊಂಡಿದ್ದು ಅವರನ್ನು ದಸ್ತಗಿರಿ ಮಾಡಬೇಕಾಗಿರುತ್ತದೆ. ತಲೆ ಮರೆಸಿಕೊಂಡಿರುವವರ ಪತ್ತೆ ಕಾರ್ಯ ಮುಂದುವರೆದಿರುತ್ತದೆ. ಹಾಲಿ ಗ್ರಾಮದಲ್ಲಿ ಪರಿಸ್ಥಿತಿ ಶಾಂತವಾಗಿದ್ದು ಪೊಲೀಸ್ ಬಂದೋಬಸ್ತ್ ಮುಂದುವರೆಸಲಾಗಿರುತ್ತದೆ.

No comments:

Post a Comment