Moving text

Mandya District Police
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಛೇರಿ,
ಮಂಡ್ಯ ಜಿಲ್ಲೆ, ಮಂಡ್ಯ, ದಿನಾಂಕ: 11-05-2017.
ಪತ್ರಿಕಾ ಪ್ರಕಟಣೆ

                ಇತ್ತೀಚೆಗೆ ಬೀಗ ಹಾಕಿದ ಮನೆಗಳ ಕಳ್ಳತನ ಪ್ರಕರಣಗಳು ವರದಿಯಾಗುತ್ತಿದ್ದು ಸಾರ್ವಜನಿಕರು ಒಂದು ದಿನದ ಮೇಲ್ಪಟ್ಟು ತಮ್ಮ ಮನೆಗೆ ಬೀಗ ಹಾಕಿಕೊಂಡು ಬೇರೆ ಊರಿಗೆ ಹೋಗುವಾಗ ತಪ್ಪದೆ ನಿಮ್ಮ ಮನೆಯ ವಿಳಾಸ ಮತ್ತು ದೂರವಾಣಿ ಸಂಖ್ಯೆಯನ್ನು ಸ್ಥಳೀಯ ಪೊಲೀಸ್ ಠಾಣೆಗೆ ನೀಡುವುದು ಮತ್ತು ಮಂಡ್ಯ ಕಂಟ್ರೋಲ್ ರೂಂನ ದೂರವಾಣಿ ಸಂಖ್ಯೆ 9480804800 ಗೆ ನಿಮ್ಮ ಮೊಬೈಲ್ ವಾಟ್ಸಾಪ್ನಿಂದ ನಿಮ್ಮ ಮನೆಯ ಲೊಕೇಶನ್ ನೊಂದಿಗೆ ವಿಳಾಸವನ್ನು ವಾಟ್ಸಾಪ್ ಮಾಡುವುದು. ಪೊಲೀಸ್ ಇಲಾಖಾ ವತಿಯಿಂದ ಅಂತಹ ಸ್ಥಳಗಳಲ್ಲಿ ರಾತ್ರಿ ಗಸ್ತನ್ನು ಬಿಗಿಗೊಳಿಸಲಾಗುವುದು. ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಂಡು ಮನೆ ಕಳ್ಳತನಗಳನ್ನು ತಡೆಯುವಲ್ಲಿ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಪೊಲೀಸ್ ಇಲಾಖಾ ವತಿಯಿಂದ ಕೋರಲಾಗಿದೆ.

No comments:

Post a Comment