Moving text

Mandya District Police

Press Note 20-08-2017

                                                                                                  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಛೇರಿ,
                                                                                               ಮಂಡ್ಯ ಜಿಲ್ಲೆ, ಮಂಡ್ಯ ದಿನಾಂಕ: 20-08-2017


                                                                        -:ಪತ್ರಿಕಾ ಪ್ರಕಟಣೆ:-


ದಿಃ19/08/2017 ರಂದು ಸಂಜೆ ಶ್ರೀರಂಗಪಟ್ಟಣ ತಾಲ್ಲೂಕು ನಗುವನಹಳ್ಳಿ ಗೇಟ್ ಬಳಿ ಬೆಂಗಳೂರು-ಮೈಸೂರು ರಾಜ್ಯ ಹೆದ್ದಾರಿ ಪಕ್ಕದ ಪಾಲಹಳ್ಳಿಯ ರಜತ ಎಂಬುವರು  ‘ಮಾರ್ಗಡಾಬ’ ಹೋಟೆಲು ಮತ್ತು ಇದಕ್ಕೆ ಹೊಂದಿಕೊಂಡಿರುವ ರೂಮುಗಳನ್ನು ಇಟ್ಟುಕೊಂಡು ಅನೈತಿಕ ವ್ಯವಹರಣೆ ನಡೆಸುತಿದ್ದು, ಇವರ ಡಾಬಗೆ ಹೊಂದಿಕೊಂಡಿರುವ ರೂಮುಗಳಲ್ಲಿ ಮಹಿಳೆಯರನ್ನು ಇಟ್ಟುಕೊಂಡು ವೇಶ್ಯವಾಟಿಕೆ ನಡೆಸುತ್ತಿದ್ದಾರೆಂದು ದೊರೆತ ಮಾಹಿತಿಯಂತೆ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಸಮೇತ ದಾಳಿ ಮಾಡಿ ಪಂಚರ ಸಮಕ್ಷಮ ಪರಿಶೀಲಿಸಲು ಹೋದಾಗ, ಡಾಬಾ ಉಸ್ತುವಾರಿ ನೋಡಿಕೊಳ್ಳುತಿದ್ದವರು ಡಾಬಾ ಹೋಟೆಲಿಗೆ ಹೊಂದಿಕೊಂಡಿರುವ ರೂಮುಗಳ ಬಾಗಿಲುಗಳನ್ನು ಹಾಕಿಕೊಂಡಿದ್ದು, ನಂತರ ವಿಚಾರ ಮಾಡಿ ಬಾಗಿಲು ತೆರೆಸಿ ನೋಡಿದಾಗ ಡಾಬ ನೋಡಿಕೊಳ್ಳುವವರಲ್ಲದೆ ಒಟ್ಟು 19 ಜನ ಪುರಷ ವ್ಯಕ್ತಿಗಳನ್ನು ದಸ್ತಗಿರಿ ಮಾಡಲಾಗಿದೆ. ಇವರು ವೇಶ್ಯವಾಟಿಕೆಯಲ್ಲಿ ತೊಡಗಿದ್ದರೆಂದು ಕಂಡು ಬಂದಿದ್ದು, ಪರಿಶೀಲಿಸಿದಾಗ ರೂಮುಗಳಲ್ಲಿ ಯಾವ ಮಹಿಳೆಯರು ಇರಲಿಲ್ಲದ ಕಾರಣ ಅನುಮಾನ ಬಂದು ಪರಿಶೀಲಿಸಿದ ಕಾಲದಲ್ಲಿ, ರೂಮಿನ ಗೋಡೆಗೆ ಅಂಟಿಸಿದಂತೆ ಇದ್ದ ಗೋಡೆಯ ಟೈಲ್ಸ್‍ಗಳನ್ನು ತೆರವುಗೊಳಿಸಿ ನೋಡಿದಾಗ ಸಂದಿಯೊಳಗೆ ಕೊಠಡಿಯೊಂದು ಇದ್ದು ಅದರೊಳಗೆ 7 ಜನ ಮಹಿಳೆಯರು ಬಚ್ಚಿಟ್ಟುಕೊಂಡಿದ್ದುದು ತಿಳಿದು ಬಂದಿರುತ್ತದೆ. ವೇಶ್ಯವಾಟಿಕೆ ನಡೆಸುತಿದ್ದ ವ್ಯಕ್ತಿಗಳು ಪೊಲೀಸರು ದಾಳಿ ಮಾಡಿದ ಕಾಲದಲ್ಲಿ ಮಹಿಳೆಯರನ್ನು ಬಚ್ಚಿಟ್ಟುಕೊಳ್ಳಲು ಗುಹೆಯಂತಹ ಕೊಠಡಿಯನ್ನು ಪೂರ್ವಯೋಜಿತವಾಗಿ ನಿರ್ಮಿಸಿಕೊಂಡು, ದಾಳಿಮಾಡಿದವರಿಗೆ ಗೋಡೆ ಎಂದು ತಿಳಿದುಕೊಳ್ಳಲು ಮರೆಮಾಚಿರುವುದು ಕಂಡು ಬಂದಿರುತ್ತದೆ. ದಾಳಿ ಕಾಲದಲ್ಲಿ ಒಟ್ಟು 7 ಜನ ಮಹಿಳೆಯರನ್ನು ರಕ್ಷಣೆ ಮಾಡಿದ್ದು ನಿಯಮಾನುಸಾರ ಅವರುಗಳನ್ನು ವಾರಸುದಾರರು ಬಂದು ಕರೆದುಕೊಂಡು ಹೋಗುವವರೆಗೆ ಮಹಿಳಾ ಶಾಂತ್ವಾನ ಕೇಂದ್ರಕ್ಕೆ ಬಿಡಲಾಗುತ್ತಿದೆ. 

‘ಮಾರ್ಗ ಡಾಬ’ ದ ರೂಮುಗಳಿಗೆ ಸಂತೋಷ ಎಂ. @ ಸಂದೇಶ ಬನ್ನಿಮಂಟಪ ಮೈಸೂರು, ನಂದಕುಮಾರ್ ಹೆಚ್.ಡಿ. @ ನಂದನ್ ಹುಚ್ಚೇಗೌಡನದೊಡ್ಡಿ ಗ್ರಾಮ ಮಳವಳ್ಳಿ ತಾಲ್ಲೂಕು, ನಾಗೇಶ ನಾಗಮಂಗಲ ಟೌನ್ ಮತ್ತು ಕಿರಣ ಎಂಬುವರು ಮಹಿಳೆಯರನ್ನು ವೇಶ್ಯವಾಟಿಕೆ ಉದ್ದೇಶಕ್ಕಾಗಿ ಕರೆತರುತಿದ್ದರೆಂದು ತಿಳಿದು ಬಂದಿರುತ್ತದೆ. ಜಗದೀಶ ಉತ್ತರಕನ್ನಡ ಜಿಲೆ,್ಲ ದರ್ಶನ ಕೆ.ಎನ್. ಕದಬಳ್ಳಿ ಗ್ರಾಮ ನಾಗಮಂಗಲ ತಾಲ್ಲೂಕು. ಭರತೇಶ ಹೆಚ್.ಸಿ. ಹೊನ್ನಶೆಟ್ಟಹಳ್ಳಿ ಗ್ರಾಮ ಚನ್ನರಾಯಪಟ್ಟಣ ತಾಲ್ಲೂಕು,  ಮಣಿ @ ತಿಪ್ಪೇಶ ಹೊಸಹಳ್ಳಿ ಗ್ರಾಮ ದಾವಣಗೆರೆ ತಾಲ್ಲೂಕು, ಹುಲಿಗಪ್ಪ ಮಲ್ಲಪ್ಪ ನರಗುಂದ ಸುರುಕೋಡು ಗ್ರಾಮ ನರಗುಂದ ತಾಲ್ಲೂಕು ರವರುಗಳು ಡಾಬ ರೂಮುಗಳ ಉಸ್ತುವಾರಿ ನೋಡಿಕೊಂಡು ಗುಹೆಯಂತಹ ಕೊಠಡಿಯಲ್ಲಿ ಮಹಿಳೆಯರನ್ನು ಇಟ್ಟುಕೊಂಡು ವೇಶ್ಯವಾಟಿಕೆ ನಡೆಸಿ ಹಣ ಸಂಪಾದಿಸಿ ಮಾಲೀಕರು ಸೇರಿದಂತೆ ಎಲ್ಲರೂ ಹಂಚಿಕೊಂಡು ಜೀವನ ನಡುಸುತಿದ್ದರೆಂದು ಕಂಡು ಬಂದಿದೆ. ಈ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಗಿರಾಕಿಗಳಾದ ಸುರೇಶ, ಮಹಮದ್ ಬಸೀರ್, ಜೆಸಿಲ್ ಟಿ.ಕೆ ಷಹಾಹನ್, ಹರೀಶ ಕುಮಾರ್ ಕೇರಳ ರಾಜ್ಯರವರಾಗಿದ್ದು ಮಿತೀಶ್ ರಂಜನ್ ಜಾರ್ಖಂಡ್ ರಾಜ್ಯ, ನಾಗರಾಜು ತುಮಕೂರು ಜಿಲ್ಲೆ, ಮೆಹಬೂಬ್ ಪಾಷ, ರಾಯಿಲ್ ಖಾನ್, ಸೈಯದ್ ಮುಜಾಹಿಲ್, ಖಾದಿರ್ ಖಾನ್ ಮೈಸೂರು ನಗರದವರಾಗಿರುತ್ತಾರೆ.

ಪಾಲಹಳ್ಳಿ ಗ್ರಾಮದ ಪಿ.ವಿ.ಶೇಷಪ್ಪ ರವರು ಇದಕ್ಕಾಗಿ ‘ಟೂರಿಸ್ಟ್ ಹೋಂ’ ಎಂಬ ಹೆಸರಿನಲ್ಲಿ ತಮ್ಮ ಜಮೀನಿನಲ್ಲಿ ರೂಮುಗಳನ್ನು ನಿರ್ಮಿಸಿ, ಮೈಸೂರು ಸಿಟಿ ಟೀಚರ್ಸ್ ಬಡಾವಣೆಯ ಸಿ.ಎಸ್.ಮನು ಎಂಬುವರು ಬಾಡಿಗೆ ಕರಾರು ಮಾಡಿಕೊಂಡು ಇವರೆಲ್ಲರೂ ತಿಳಿದು ತಿಳಿದೇ ಕಾನೂನು ಬಾಹಿರವಾಗಿ ವೇಶ್ಯವಾಟಿಕೆ ಚಟುವಟಿಗೆ ನಡೆಸಿ ಸಂಪಾದಿಸಿದ ಹಣವನ್ನು ಹಂಚಿಕೊಂಡು ವ್ಯವಹಾರ ನಡೆಸುತಿದ್ದರೆಂದು ಕಂಡು ಬಂದಿರುತ್ತದೆ ಹಾಗೂ ತಲೆ ಮರೆಸಿಕೊಂಡಿರುತ್ತಾನೆ.

ದಾಳಿ ಮಾಡಿದ ಕಾಲದಲ್ಲಿ ವೇಶ್ಯವಾಟಿಕೆ ಉದ್ದೇಶಕ್ಕಾಗಿ ಇಟ್ಟುಕೊಂಡಿದ್ದ ಒಟ್ಟು ನಗದು 50345/- ರೂ ನಗದು, 17 ಮೊಬೈಲ್ ಪೋನುಗಳು, 1 ಚವರ್ಲೆಟ್ ತವೆರಾ ಕಾರು, 4 ಮೊಟಾರು ಬೈಕುಗಳು, ಸ್ಥಳದಲ್ಲಿ ದೊರೆತ ಹಲವಾರು ಕಾಂಡೂಮ್ಸ್ ಪ್ಯಾಕೆಟುಗಳನ್ನು ವಶಪಡಿಸಿಕೊಂಡು ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುತ್ತಿದೆ. ಮುಖ್ಯ ಆರೋಪಿ ಪಾಲಹಳ್ಳಿ ರಜತ ಮತ್ತು ಕಿರಣ್ ತಲೆಮರೆಸಿಕೊಂಡಿರುತ್ತಾರೆ.

ಸದರಿ ದಾಳಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ವರಾದ ಶ್ರೀಮತಿ ರಾಧಿಕ, ಐ.ಪಿ.ಎಸ್., ಅಡಿಷನಲ್ ಎಸ್.ಪಿ., ಶ್ರೀಮತಿ ಲಾವಣ್ಯ.ಬಿ.ಎನ್.,ಕೆ.ಎಸ್.ಪಿ.ಎಸ್., ರವರ ಮಾರ್ಗದರ್ಶನದಲ್ಲಿ ಶ್ರೀರಂಗಪಟ್ಟಣ ಆರಕ್ಷಕ ಉಪಾಧೀಕ್ಷಕರಾದ ಶ್ರೀ ವಿಶ್ವನಾಥ್ ರವರು ಪಿಎಸ್‍ಐ ಶ್ರೀರಂಗಪಟ್ಟಣ ಟೌನ್, ಗ್ರಾಮಾಂತರ, ಕೆ.ಆರ್.ಸಾಗರ ಮತ್ತು ವಿಶೇಷವಾಗಿ ಮಹಿಳಾ ಪಿಎಸ್‍ಐ ಅರಕೆರೆ ಠಾಣೆ ಹಾಗೂ ಸಿಬ್ಬಂದಿಗಳು ಬಾಗಿಯಾಗಿ ಮರೆಮಾಚಲು ಗುಹೆಯಂತಹ ಕೊಠಡಿಯಲ್ಲಿದ್ದ ಮಹಿಳೆಯರನ್ನು ಪತ್ತೆ ಮಾಡಿ ರಕ್ಷಿಸಿ ಆರೋಪಿಗಳನ್ನು ದಸ್ತಗಿರಿ ಮಾಡಿರುತ್ತಾರೆ.  

No comments:

Post a Comment