Moving text

Mandya District Police
ಪೊಲೀಸ್ ಸೂಪರಿಂಟೆಂಡೆಂಟ್ ರವರ ಕಛೇರಿ,
ಮಂಡ್ಯ ಜಿಲ್ಲೆ, ಮಂಡ್ಯ ದಿನಾಂಕ: 08.01.2018
ಪತ್ರಿಕಾ ಪ್ರಕಟಣೆ

ಮಂಡ್ಯ ಜಿಲ್ಲಾ ಅಪರಾಧ ವಿಭಾಗ ಪೊಲೀಸರಿಂದ ಜೂಜುಕೋರರ ಬಂಧನ
² ² ²

ದಿನಾಂಕ: 07-01-2018 ರಂದು ಜಿಲ್ಲಾ ಅಪರಾಧ ವಿಭಾಗದ ಪಿ.ಐ ಶ್ರೀ. ರಾಜು.ಜಿ.ಸಿ ರವರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ, ಶ್ರೀರಂಗಪಟ್ಟಣ ತಾಲ್ಲೋಕು, ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಬಂಗಾರದೊಡ್ಡಿ ನಾಲೆಯ ಕಾವೇರಿ ನದಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್ ಎಂಬ ಇಸ್ಪೀಟ್ ಆಟ ಆಡುತ್ತಿದ್ದವರನ್ನು ಸಿಬ್ಬಂದಿರವರೊಡನೆ ಧಾಳಿ ಮಾಡಿ ಜೂಜಾಟದಲ್ಲಿ ಹಣವನ್ನು ಪಣವಾಗಿ ಇಟ್ಟುಕೊಂಡು ಅಂದರ್ ಬಾಹರ್ ಆಟದಲ್ಲಿ ತೊಡಗಿದ್ದ 1] ಮಹಮ್ಮದ್ ಮುಜಾಹಿದ್ ಬಿನ್ ಪೀರಸಾಭ್ 46 ವರ್ಷ, ಮೈಸೂರು ನಗರ 2] ಸುಭಾಷ್ ಪಿ @ ರಾಜು ಬಿನ್ ಪುಟ್ಟಸ್ವಾಮಿಗೌಡ, 32 ವರ್ಷ, ಮೈಸೂರು ನಗರ 3] ಅಮೀತ್ ಬಿನ್ ಪ್ರಭಾಕರ್, 25 ವರ್ಷ, ಮೈಸೂರು ನಗರ 4] ಅಶೋಕ ಕೆ. ಬಿನ್ ಲೇಟ್ ಕಪನೀಗೌಡ, 49 ವರ್ಷ, ಮೈಸೂರು ನಗರ 5] ಪುಟ್ಟ ಬಿನ್ ಪುಟ್ಟೇಗೌಡ, 47 ವರ್ಷ,ಪಾಲಹಳ್ಳಿ ಗ್ರಾಮ 6] ಮಹೇಶ್ ವಿ. ಬಿನ್ ಲೇಟ್ ವೆಂಕಟೇಶ್, 21 ವರ್ಷ, ಪಾಲಹಳ್ಳಿ ಗ್ರಾಮ 7] ಸತೀಶ್ ಬಿನ್ ಗೋಪಾಲಗೌಡ, 37 ವರ್ಷ, ಚಿಕ್ಕನಹಳ್ಳಿ ಗ್ರಾಮ, ಮೈಸೂರು, 8] ಸ್ವಾಮೀಗೌಡ ಬಿನ್ ಚಿಕ್ಕಸಿದ್ದೇಗೌಡ, 45 ವರ್ಷ, ಯಲಚಹಳ್ಳಿ ಗ್ರಾಮ ಮೈಸೂರು ಜಲ್ಲೆ 9] ಗುಣಸಾಗರ್ ಆರ್ ಬಿನ್ ರಾಮೇಗೌಡ, 26 ವರ್ಷ, ದರಸಗುಪ್ಪೆ ಗ್ರಾಮ ಇವರೆಲ್ಲರೂ ಪಣವಾಗಿ ಇಟ್ಟಿದ್ದ ಹಣ 8790/- ರೂ ಹಾಗೂ 9 ಮೊಬೈಲ್‍ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಈ ಅಂದರ್ ಬಾಹರ್ ಜೂಜಾಟವನ್ನು ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣೆಯ ರೌಡಿ ಶೀಟರ್ ಪಾಲಹಳ್ಳಿ ರಘು ಎಂಬುವವನು ನಡೆಸುತ್ತಿದ್ದು ಈತನು ದಾಳಿಯ ವೇಳೆಯಲ್ಲಿ ಓಡಿ ಹೋಗಿರುತ್ತಾನೆ. ಉಳಿದೆಲ್ಲಾ ಮೇಲ್ಕಂಡವರನ್ನು ದಸ್ತಗಿರಿ ಮಾಡಲಾಗಿದೆ ಈ ಬಗ್ಗೆ ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣೆಯಲ್ಲಿ ಮೊ.ನಂಃ05/2018 ಕಲಂಃ87 ಕೆ.ಪಿ.ಆಕ್ಟ್ ರೀತ್ಯಾ ಪ್ರಕರಣ ದಾಖಲಾಗಿರುತ್ತದೆ.

ಅಕ್ರಮ ಜೂಜು ಅಡ್ಡೆ ದಾಳಿಯಲ್ಲಿ ಮಂಡ್ಯ ಜಿಲ್ಲಾ ಅಪರಾಧ ವಿಭಾಗದ ಪಿ.ಐ ಶ್ರೀ ರಾಜು.ಜಿ.ಸಿ ರವರ ನೇತೃತ್ವದಲ್ಲಿ, ಸಿಬ್ಬಂದಿಯವರಾದ ದೇವರಾಜು, ಶಶಿಕುಮಾರ, ಗುರುಬಾಳಪ್ಪ, ಹರೀಶ, ಚನ್ನಪ್ಪ, ಈರಣ್ಣ, ರವಿ ಹಾಗೂ ಚಾಲಕರಾದ ವಿಜಯ್ ರವರು ಪಾಲ್ಗೊಂಡಿದ್ದರು. ಈ ತಂಡದ ಕಾರ್ಯವನ್ನು ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀಮತಿ ರಾಧಿಕಾ. ಜಿ. ಐಪಿಎಸ್ ರವರು ಪ್ರಶಂಸಿರುತ್ತಾರೆ.

No comments:

Post a Comment