Moving text

Mandya District Police

DAILY CRIME REPORT DATED : 28-01-2013


ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 28-01-2013 ರಂದು ಒಟ್ಟು 15 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 3 ಮನೆ/ಶಾಲೆ ಕಳ್ಳತನ ಪ್ರಕರಣಗಳು,  1 ಎಸ್.ಸಿ./ಎಸ್.ಟಿ. ದೌರ್ಜನ್ಯ ತಡೆ ಕಾಯಿದೆ ಪ್ರಕರಣ ಹಾಗು 11 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.  


ಮನೆ/ಶಾಲೆ ಕಳ್ಳತನ ಪ್ರಕರಣಗಳು :

1. ಕೆ.ಆರ್. ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ. 23/13 ಕಲಂ. 457-380 ಐ.ಪಿ.ಸಿ.

ದಿನಾಂಕ: 28-01-13 ರಂದು ಪಿರ್ಯಾದಿ ಲೋಕೇಶ, ಹಳೆ ಕಿಕ್ಕೇರಿ ರಸ್ತೆ, ಕೆ.ಆರ್. ಪೇಟೆ ಟೌನ್ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಮನೆಯ ಬಾಗಿಲು ತೆರೆದಿರುವುದು ಕಂಡಿತು ನಂತರ ಪಿರ್ಯಾದಿ ಮನೆಯ ಒಳಗೆ ಹೋಗಿ ನೋಡಿದಾಗ ಮನೆಯ ಒಳಬಾಗ ಹಾಲ್ನಲ್ಲಿ ಇಟ್ಟಿದ್ದ ಟಿವಿ ಷೋಕೆಸ್ ಹೊಡೆದು ಹಾಕಿದ್ದು ಮತ್ತು ಗೋಡೆ ಬೀರು ತೆಗೆದು ಬಟ್ಟೆಗಳನ್ನು ಚೆಲ್ಲಾಪಿಲ್ಲಿಯಾಗಿ ಬಿಸಾಡಿದ್ದು ಬೀರುವನ್ನು ಯಾವುದೋ ಆಯುದದಿಂದ ಮೀಟಿ ಬೀರುವಿನಲ್ಲಿದ್ದ ಸುಮಾರು 22 ಸಾವಿರ ಬೆಲೆ ಬಾಳುವ 1 ಚಿನ್ನದ ಚೈನು. ಹಾಗು ಒಂದು ಜೊತೆ ಬೆಳ್ಳಿ ಚೈನುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಈ ಬಗ್ಗೆ ತನಿಖೆ ನಡೆಸಬೇಕೆಂದು ಇತ್ಯಾದಿಯಾಗಿ ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2. ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 46/13 ಕಲಂ. 457-380 ಐ.ಪಿ.ಸಿ.

ದಿನಾಂಕ: 28-01-13 ರಂದು ಪಿರ್ಯಾದಿ ಮಹದೇವೇಗೌಡ. ಎನ್. ಮುಖ್ಯೋಪಾಧ್ಯಾಯರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೋಡಾಲ ಗ್ರಾಮ, ಪಾಂಡವಪುರ ತಾಲ್ಲೋಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ಯಾರೋ ಕಳ್ಳರು ಅಕ್ಷರ ದಾಸೋಹ ಕೊಠಡಿಯ ಬಾಗಿಲಿಗೆ ಹಾಕಿದ್ದ ಬೀಗ ಹೊಡೆದು ಒಂದು ಸಿಲಿಂಡರ್ ಮತ್ತು ಒಂದು ಚಿಕ್ಕ ಗ್ಯಾಸ್ ಒಲೆಯನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಕಳ್ಳತನವಾಗಿರುವ ವಸ್ತುಗಳ ಬೆಲೆ ಅಂದಾಜು 2250-00 ರೂಗಳಾಗಿದ್ದು, ಪತ್ತೆ ಮಾಡಿಕೊಡಿ ಎಂದು ಇತ್ಯಾದಿಯಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


3. ಮೇಲುಕೋಟೆ ಪೊಲೀಸ್ ಠಾಣೆ ಮೊ.ನಂ. 14/13 ಕಲಂ. 457, 380 ಐ.ಪಿ.ಸಿ.

ದಿನಾಂಕ: 28-01-2013 ರಂದು ಪಿರ್ಯಾದಿ ಮುಶ್ರಫ್ ಜಾನ್ ಕೋಂ. ರಫಿ ಮಹಮ್ಮದ್, 55 ವರ್ಷ, ಮುಖ್ಯ ಶಿಕ್ಷಕಿ, ಸರ್ಕಾರಿ  ಫ್ರೌಡ ಶಾಲೆ,  ಲಕ್ಷ್ಮೀಸಾಗರ ಗ್ರಾಮ,  ಮೇಲುಕೋಟೆ  ಹೋಬಳಿ ಪಾಂಡವಪುರ  ತಾಲ್ಲೋಕು, ಹಾಲಿ ವಾಸ ಮೈಸೂರು ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕಃ 28-01-2013 ರಂದು ಪಿರ್ಯಾದಿಯವರು ಕೊಟ್ಟ ಲಿಖಿತ ದೂರೆನೆಂದರೆ ಸರ್ಕಾರಿ  ಪ್ರೌಢಶಾಲೆ ಲಕ್ಷ್ಮೀಸಾಗರ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟಕ್ಕೆಂದು 7(ಏಳು) ಸಿಲಿಂಡರ್ ಗಳು  ಸರಬರಾಜು ಮಾಡಿದ್ದು ದಿನಾಂಕಃ 27-01-2013 ರ ಭಾನುವಾರ ರಾತ್ರಿ ಅಡುಗೆ ಮನೆಯ ಬೀಗ ಮತ್ತು ಬಾಗಿಲನ್ನು ಒಡೆದು ಎರಡು ಸಿಲಿಂಡರ್ಗಳು ಹಾಗೂ ಒಂದು ಸ್ಟೀಲ್ ಬಕೆಟ್, ಒಂದು ದೊಡ್ಡ ನೀರು ತುಂಬುವ ಡ್ರಮ್  [ ಎರಡು ಸಿಲಿಂಡರ್ ಗಳು ಭರ್ತಿಯಾಗಿದ್ದವು ] ಕಳುವಾಗಿದ್ದು  ದಿನಾಂಕಃ 28-01-2013 ರ ಬೆಳಿಗ್ಗೆ 08-15 ಕ್ಕೆ ನಮ್ಮ ಗಮನಕ್ಕೆ ಬಂದಿದ್ದು ಅವುಗಳನ್ನು ಹುಡುಕಿಸಿ ಕೊಡಬೇಕೆಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಎಸ್.ಸಿ./ಎಸ್.ಟಿ. ದೌರ್ಜನ್ಯ ತಡೆ ಕಾಯಿದೆ ಪ್ರಕರಣ :

ಕೆ.ಎಂ ದೊಡ್ಡಿ ಪೊಲೀಸ್ ಠಾಣೆ ಮೊ.ನಂ. 22/13 ಕಲಂ. 143,504,355 ಕೂಡ 149 ಐ.ಪಿ.ಸಿ. ಹಾಗು 3 ಸಬ್ ಸಿಐಎಸ್ (11) ಎಸ್.ಸಿ./ಎಸ್.ಟಿ. ಕಾಯಿದೆ 1989.

       ದಿನಾಂಕ: 28-01-2013 ರಂದು ಪಿರ್ಯಾದಿ ದೇವಿರಮ್ಮ ಕೊಂ. ಶಿವಣ್ಣ, 40 ವರ್ಷ, ಪರಿಶಿಷ್ಟ ಜಾತಿ, ಕಡಿಲುವಾಗಿಲು ಗ್ರಾಮ ಪಂಚಾಯ್ತಿ ಸದಸ್ಯರು ಹಾಗು ಮಾಜೀ ಅಧ್ಯಕ್ಷರು, ಮಾದರಹಳ್ಳಿ ಗ್ರಾಮ ಪಂಚಾಯ್ತಿ, ಮದ್ದೂರು ತಾಲ್ಲೂಕು ರವರುಗಳು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯವರು ಗ್ರಾಮ ಪಂಚಾಯಿತಿ ಚುನಾಯಿತ ಸದಸ್ಯರಾಗಿದು, ತಮ್ಮ ಕ್ಷೇತ್ರದಲ್ಲಿನ ಸ್ವಚ್ಚತೆ ಮತ್ತು ನೈರ್ಮಲತೆಯ ಪರಿಶೀಲನೆಗಾಗಿ ದಿನಾಂಕ;28-01-13 ರಂದು ಬೆಳಿಗ್ಗೆ 8.30 ಗಂಟೆಯಿಂದ ಬೆಳಿಗ್ಗೆ 9.00 ಗಂಟೆ ಸಮುದಾಯದಲ್ಲಿ ಕಡಿಲುವಾಗಿಲು ಗ್ರಾಮದ ಮಸಣಮ್ಮ ದೇವಸ್ಥಾನದ ಬೀದಿಯಲ್ಲಿ ಪರಿಶೀಲನೆಗೆ ಹೋಗುತ್ತಿದ್ದಾಗ ಆರೋಪಿಗಳಾದ 1]ಬೋರಯ್ಯ ಬಿನ್. ಚಿಕ್ಕಬೋರಯ್ಯ ಇತರೆ 6 ಜನರು ಎಲ್ಲರೂ ಕಡಿಲುವಾಗಿಲು ಗ್ರಾಮ, ಮದ್ದೂರು ತಾಲ್ಲೂಕು, ರವರುಗಳು ಪಿರ್ಯಾದಿಯವರನ್ನು ಉದ್ದೆಶಿಸಿ ಅವಾಚ್ಯವಾಗಿ ಬೈಯ್ದು ಚಪ್ಪಲಿ ತೋರಿಸಿ ಜಾತಿ ನಿಂದನೆ ಮಾಡಿರುತ್ತಾರೆ ಎಂಬಿತ್ಯಾದಿಯಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.

No comments:

Post a Comment