Moving text

Mandya District Police

DAILY CRIME REPORT DATED : 29-01-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 29-01-2013 ರಂದು ಒಟ್ಟು 17 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ರಸ್ತೆ ಅಪಘಾತ ಪ್ರಕರಣ,  2 ಯು.ಡಿ.ಆರ್. ಪ್ರಕರಣಗಳು,  1 ಕಳವು ಪ್ರಕರಣ,  1 ಹೆಂಗಸು ಕಾಣೆಯಾದ ಪ್ರಕರಣ,  1 ಕಳ್ಳತನ ಪ್ರಕರಣ ಹಾಗು 11 ಇತರೆ ಪ್ರಕರಣಗಳು ದಾಖಲಾಗಿರುತ್ತವೆ.   


ರಸ್ತೆ ಅಪಘಾತ ಪ್ರಕರಣ :

ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 51/13 ಕಲಂ. 279-304(ಎ) ಐ.ಪಿ.ಸಿ.

ದಿನಾಂಕ: 29-01-2013 ರಂದು ಪಿರ್ಯಾದಿ ಅಶೋಕ ಬಿನ್. ಚಿಕ್ಕಮರೀಗೌಡ, ಅರಳಕುಪ್ಪೆ ಗ್ರಾಮ, ಪಾಂಡವಪುರ ತಾ. ರವರು ನೀಡಿದ ದೂರು ಏನೆಂದರೆ ಮಹೇಂದ್ರ ಟ್ರಾಕ್ಟರ್ ಚಾಲಕ,  ಕೆಂಪು ಬಣ್ಣ, ವಾಹನದ ನಂಬರ್ ಗೊತ್ತಿರುವುದಿಲ್ಲ,  ಇಂಜಿನ್. ನಂ. ಎಸ್.ಎನ್.ಎಸ್. ಡಬ್ಯೂ-4742 ಡಿ-1 ರ ಚಾಲಕ ರಸೆ ದಾಟುತ್ತಿದ್ದಾಗ ಹಾರೋಹಳ್ಳಿ ಕಡೆಯಿಂದ ಬಂದ ಸದರೆ ಟ್ರಾಕ್ಟರ್ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಬಸವಶೆಟ್ಟಿ ಎಂಬುವವರಿಗೆ ಡಿಕ್ಕಿ ಮಾಡಿ ಬಲಭಾಗದ ಚಕ್ರ ಹರಿದಿದ್ದು ನಾನು ಹಾಗು ಇತರರು ಆಸ್ಪತ್ರೆಗೆ ಸೇರಿಸಿದೆವು ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದರು, ಟ್ರಾಕ್ಟರ್ ಚಾಲಕನ ಮೇಲೆ ಕ್ರಮ ಕೈಗೊಳ್ಳಲು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಯು.ಡಿ.ಆರ್. ಪ್ರಕರಣಗಳು :

1. ಮದ್ದೂರು ಪೊಲೀಸ್ ಠಾಣೆ ಯು.ಡಿ.ಆರ್. ಮೊ.ನಂ. 04/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 29-01-2013 ರಂದು ಪಿರ್ಯಾದಿ ರಾಜ ಬಿನ್ ಸತೀಶ, ಗೆಜ್ಜಲಗೆರೆ ಕಾಲೋನಿ, ಮದ್ದೂರು ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅಪರಿಚಿತ ಗಂಡಸು, 45 ವರ್ಷ, ಹೆಸರು, ವಿಳಾಸ ತಿಳಿದಿರುವುದಿಲ್ಲ ಈ ವ್ಯಕ್ತಿಯು ಗೆಜ್ಜಲಗೆರೆ ಕೈಗಾರಿಕಾ ಪ್ರದೇಶದ ಪೌಲಿಸನ್ ಕಬ್ಬಿಣದ ಕಾಖರ್ಾನೆ ಬಳಿ ಮೈಸೂರು-ಬೆಂಗಳೂರು ರಸ್ತೆಯ ಪಕ್ಕ ಯಾವುದೋ ಕಾಯಿಲೆಯಿಂದ ಬಳಲಿ ಸತ್ತು ಬಿದ್ದಿರುತ್ತಾನೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಮದ್ದೂರು ಪೊಲೀಸ್ ಠಾಣೆ ಯು.ಡಿ.ಆರ್. ಮೊ.ನಂ. 04/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 29-01-2013 ರಂದು ಪಿರ್ಯಾದಿ ಪದ್ಮ ಕೋಂ. ಮಲ್ಲಿಕಾರ್ಜುನಸ್ವಾಮಿ, ಮನೆ. ನಂ.03, ಟಿ.ಬಿ. ಸರ್ಕಲ್ ಸೇಟು ಬಿಲ್ಡಿಂಗ್ ಬಳಿ. ರವರು ನೀಡಿದ ಪಿರ್ಯಾದಿನ ವಿವರವೇನೆಂದರೆ ಅವರ ಗಂಡ ಮಲ್ಲಿಕಾರ್ಜುನಸ್ವಾಮಿ ರವರು ಮನೆಯಲ್ಲಿ ಇಲಿಗಳಿಗೆ ಪಾಷಣ ಹಾಕಿ ಇಟ್ಟಿದ್ದು ಗೊತ್ತಿಲ್ಲದೆ ತಿಂದು ಚಿಕಿತ್ಸೆ ಫಲಕಾರಿಯಾಗದೆ ಮಂಡ್ಯ ಜಿಲ್ಲಾ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಕಳವು ಪ್ರಕರಣ :

ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 27/13 ಕಲಂ. 379 ಐ.ಪಿ.ಸಿ.

ದಿನಾಂಕ: 29-01-2013 ರಂದು ಪಿರ್ಯಾದಿ ಶ್ರೀಕಾಂತ್ ಎ.ಪಿ. ಬಿನ್. ಜಿ.ಪ್ರಕಾಶ್, 29 ವರ್ಷ, ಅಂಗಡಿ ಬೀದಿ, ಹಳೆ ಪಂಚಾಯ್ತಿ ಆಫೀಸ್ ಹಿಂದೆ, ಅರಕೆರೆ ಪಟ್ಟಣ ರವರು ನೀಡಿದ ದೂರು ಏನೆಂದರೆ ದಿನಾಂಕ: 19-01-2013 ರಂದು ಅವರ ಬಾಬ್ತು ಹಿರೋಹೊಂಡ ಪ್ಯಾಷನ್ ಪ್ಲಸ್ ನಂ. ಕೆಎ-11-ಎಸ್-6954 ಮೋಟಾರ್ ಸೈಕಲ್ ನ್ನು ಪಿರ್ಯಾದಿಯವರು ಕಾವೇರಿ ನಸರ್ಿಂಗ ಹೋಂ, ಅಶೋಕ ನಗರ, 1 ನೇ ಕ್ರಾಸ್, ಮಂಡ್ಯ ನಗರ ಅಲ್ಲಿ ಪುಟ್ ಪಾತ್ ನಲ್ಲಿ ನಿಲ್ಲಿಸಿದ್ದು ಬಂದು ನೋಡಲಾಗಿ ಮೋಟಾರ್ ಸೈಕಲ್ ಇರಲಿಲ್ಲ, ಎಲ್ಲಾ ಕಡೆ ಹುಡುಕಾಡಿದರು ಸಿಕ್ಕಿರುವುದಿಲ್ಲ, ಯಾರೋ ಕಳ್ಳರು ಕಳ್ಳತನ ಮಾಡಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಹೆಂಗಸು ಕಾಣೆಯಾದ ಪ್ರಕರಣ :

ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ. 27/13 ಕಲಂ. ಹೆಂಗಸು ಕಾಣೆಯಾಗಿದ್ದಾಳೆ.

ದಿನಾಂಕ: 29-01-2013 ರಂದು ಪಿರ್ಯಾದಿ ಕೆಂಗಮ್ಮ ಕೋಂ. ಮರೀಗೌಡ, ಅಮಚಹಳ್ಳಿ ಗ್ರಾಮ, ಕೆ.ಆರ್. ಪೇಟಿ ತಾ. ರವರು ನೀಡಿದ ಪಿರ್ಯಾದು ಏನೆಂದರೆ ಅವರ ಮಗಳು ಮಂಜುಳ ಕೊಂ. ಸ್ವಾಮಿ, 25 ವರ್ಷ, ಅಮಚಹಳ್ಳಿ ರವರು ದಿನಾಂಕ: 25-01-2013 ರಂದು ಗಂಡನ ಮನೆಯಾದ ಮಾವಿನಕಟ್ಟೆ ಗ್ರಾಮಕ್ಕೆ ಹೋಗುತ್ತೇನೆಂದು ಹೇಳಿ ಹೋದವಳು ಗಂಡನ ಮನೆಗೆ ಹೋಗದೆ ಎಲ್ಲಿಯೋ ಕಾಣೆಯಾಗಿರುತ್ತಾರೆ ಅವರನ್ನು ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಕಳ್ಳತನ ಪ್ರಕರಣ :

ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 50/13 ಕಲಂ. 457-380 ಐ.ಪಿ.ಸಿ.

ದಿನಾಂಕ: 29-01-2013 ರಂದು ಪಿರ್ಯಾದಿ ಹೆಚ್.ಸಿ. ಸೋಮು ಬಿನ್. ಚನ್ನೇಗೌಡ, ಪಾಂಡವಪುರ ತಾ. ರವರು ನೀಡಿದ ದೂರು ಏನೆಂದರೆ ದಿನಾಂಕ: 28-01-2013 ರಂದು ಯಾರೋ ಕಳ್ಳರು ಪಿರ್ಯಾದಿಯವರ ಪಂಪ್ ಸೆಟ್ ಮನೆಯ ಬಾಗಿಲು ಮುರಿದು 7 ಹೆಚ್.ಪಿ. ಮೋಟಾರ್ ನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಇದರ ಬೆಲೆ ರೂ. 16,000/- ಆಗುತ್ತದೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  

No comments:

Post a Comment