Moving text

Mandya District Police

Press Note Date:27-01-2013


                                                                                            ಪೊಲೀಸ್ ಸೂಪರಿಂಟೆಂಡೆಂಟ್ ರವರ ಕಛೇರಿ,
                                                ಮಂಡ್ಯ ಜಿಲ್ಲೆ, ದಿನಾಂಕಃ 27-01-2013.
ಪತ್ರಿಕಾ ಪ್ರಕಟಣೆ

      ದಿನಾಂಕ 06-09-12 ರಂದು ಶ್ರೀ. ಎಸ್.ಜಿ. ಕಾಳೇಗೌಡ ಬಿನ್ ಗೌಡೇಗೌಡ, ಸುಂಕಾತೊಣ್ಣೂರು ಗ್ರಾಮ, ಪಾಂಡವಪುರ ತಾಲ್ಲೋಕು ರವರು ಪಾಂಡವಪುರ ಠಾಣೆಗೆ ಹಾಜರಾಗಿ ತನ್ನ ತಂಗಿಯಾದ ಸುನಂದಾಳು ದಿನಾಂಕ 05-09-12 ರಂದು ಸಂಜೆ 5-00 ಗಂಟೆಯಿಂದ ಕಾಣುತ್ತಿಲ್ಲವೆಂದು ನೀಡಿದ ಪಿಯರ್ಾದುವಿನ ಮೇರೆಗೆ ಹೆಂಗಸು ಕಾಣೆಯಾಗಿದ್ದಾಳೆ ರೀತ್ಯಾ ಪ್ರಕರಣವನ್ನು ಪಾಂಡವಪುರ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದರು. 

    ಸದರಿ ಪ್ರಕರಣದ ತನಿಖಾ ಕಾಲದಲ್ಲಿ  ಪಾಂಡವಪುರದ ಠಾಣೆಯ ಪಿಎಸ್ಐ ಶ್ರೀ. ಕೆ.ಮಂಜು ರವರು ಕಾಣೆಯಾದ ಶ್ರೀಮತಿ. ಸುನಂದಳು ಉಪಯೋಗಿಸುತ್ತಿದ್ದ ಮೊಬೈಲ್ನ ಐ.ಎಂ.ಇ.ಐ ನಂಬರ್ನ್ನು ಪಡೆದುಕೊಂಡು, ಅ ಮೊಬೈಲ್ನಲ್ಲಿ ಸಿಮ್ ಅಳವಡಿಸಿಕೊಂಡು ಉಪಯೋಗಿಸುತ್ತಿದ್ದ ಬಗ್ಗೆ ಕಾಲ್ ಡಿಟೈಲ್ಸ್ನ್ನು ಪಡೆದಿದ್ದು, ಮೇಲ್ಕಂಡ ಕಾಲ್ ಡಿಟೈಲ್ನ ಆದಾರದ ಮೇರೆಗೆ ಅದನ್ನು ಉಪಯೋಗಿಸಿರುವ ಸಿಮ್ ಅಸಾಮಿಯಾದ ಮಹೇಂದ್ರ ಬಿನ್ ನಾಗಣ್ಣ @ ನಾಗರಾಜು, ಚಿಕ್ಕಾಡೆ ಗ್ರಾಮ ರವರನ್ನು ದಿನಾಂಕಃ 24-01-2013 ರಂದು ಪತ್ತೆ ಹಚ್ಚಿ ಕರೆದುಕೊಂಡು ಬಂದು ಮೊಬೈಲ್ ಬಗ್ಗೆ ವಿಚಾರ ಮಾಡಲಾಗಿ ಸದರಿಯವರು ತಮ್ಮ ಸ್ವ ಇಚ್ಚಾ ಹೇಳಿಕೆಯಲ್ಲಿ ತನಗೆ ಹಾಗೂ ಆತನ ಸ್ನೇಹಿತ ವಿನೋದನಿಗೆ ಸಾಲ ಇರುತ್ತದೆ ಹಾಗೂ ಕುಡಿಯುವ ಹಾಗು ಹುಡುಗಿಯರ ಚಟ ಇದ್ದು ಸಾಲಗಾರರ ಕಾಟ ಜಾಸ್ತಿಯಾಗಿದ್ದರಿಂದಾಗಿ ಮೇಲ್ಕಂಡ ಸುನಂದಳು ಒಬ್ಬಳೆ ಪ್ರತಿ ದಿವಸ ಸಂಜೆ ಗದ್ದೆಯ ಕಡೆಗೆ ಒಬ್ಳಳೆ ಹೋಗಿ ಬರುತ್ತಿದುದ್ದನ್ನು ಹಾಗೂ ಅವಳ ಕತ್ತಿನಲ್ಲಿ ಯಾವಾಗಲು ಚಿನ್ನದ ಮಾಂಗಲ್ಯದ ಸರ ಇದ್ದುದನ್ನು ನೋಡಿದ್ದ ನಾವು ಹೇಗಾದರು ಮಾಡಿ ಇವಳನ್ನು ಕಬ್ಬಿನ ಗದ್ದೆಗೆ ಕರೆದುಕೊಂಡು ಹೋಗಿ, ಕೊಲೆ ಮಾಡಿ ಸರವನ್ನು ಮಾರಾಟ ಮಾಡಿ ಸಾಲ ತೀರಿಸಿಕೊಳ್ಳೋಣ ಎಂದು ತಿಮರ್ಾನಿಸಿ ಅದರಂತೆ ದಿನಾಂಕ 05-09-12 ರಂದು ಸುನಂದ ಗದ್ದೆಯ ಕಡೆಗೆ ಹೋದಾಗ ಹಿಂಬಾಲಿಸಿಕೊಂಡು ಹೋಗಿ ಪುಸಲಾಯಿಸಿ ಕಬ್ಬಿನ ಗದ್ದೆಯ ಕಡೆಗೆ ಕರೆದುಕೊಂಡು ಹೋಗಿ ಆಕೆಯನ್ನು ಕೊಲೆ ಮಾಡಿ ಹೆಣವನ್ನು ಹಳ್ಳದ ನೀರಿಗೆ ಬಿಸಾಡಿ ಅವಳ ಬಳಿ ಇದ್ದ ಒಂದು ಮೊಬೈಲ್ ಹ್ಯಾಂಡ್ಸೆಟ್ ಹಾಗೂ 500/- ರೂ ಹಣವನ್ನು ತಾನು ಇಟ್ಟುಕೊಂಡಿದ್ದಾಗಿ ಮಾಂಗಲ್ಯದ ಸರವನ್ನು ವಿನೋದ ಇಟ್ಟುಕೊಂಡಿದ್ದು ನಂತರ ಅದನ್ನು ಮಾರಾಟ ಮಾಡಲು ಪಾಂಡವಪುರದ ಸೇಟು ಬಳಿ ಹೋದಾಗ ಅದು ನಕಲಿ ಎಂದು ತಿಳಿದ ಮೇಲೆ ಅದನ್ನು ವಿನೋದನ ಮನೆಯಲ್ಲಿ ಇಟ್ಟುಕೊಂಡಿದ್ದು ಮೊಬೈಲ್ ತನ್ನ ಬಳಿ ಇರುವುದಾಗಿ ತಿಳಿಸಿರುತ್ತಾನೆ.

ನಂತರ ಸದರಿ ಪ್ರಕರಣದಲ್ಲಿ ಈಗಾಗಲೇ ದಾಖಲಾಗಿರುವ ಮೊ.ನಂ. 323/2012 ಕಲಂ ಹೆಂಗಸು ಕಾಣೆಯಾಗಿದ್ದಾಳೆ ಪ್ರಕರಣದಲ್ಲಿ ಮಾನ್ಯ ನ್ಯಾಯಾಲಯಕ್ಕೆ ವರದಿಯನ್ನು ತಯಾರಿಸಿ ಹೆಂಗಸು ಕಾಣೆಯಾಗಿದ್ದಾಳೆ ಎಂಬದರ ಬದಲು ಕಲಂ 302, 201, 404 ಕೂಡ 34 ಐಪಿಸಿಯನ್ನಾಗಿ ಬದಲಾವಣೆ ಮಾಡಿಕೊಂಡಿರುವ ಬಗ್ಗೆ ವರದಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಗು ಹಿರಿಯ ಅದಿಕಾರಿಗಳಿಗೆ ವರದಿಯನ್ನು ಸಲ್ಲಿಸಿಕೊಂಡು ತನಿಖೆ ಮುಂದುವರೆಸಿ,  ಆರೋಪಿ ಮಹೇಂದ್ರನನ್ನು ದಸ್ತಗಿರಿ ಮಾಡಿ, ಆತನು ತನ್ನ ಮನೆಯಲ್ಲಿಟ್ಟಿದ್ದ ಡ್ಯೂಯಲ್ ಸಿಮ್ನ ಒಂದು ಕಾರ್ಬನ್ ಮೊಬೈಲ್ ಅಮಾನತ್ತು ಪಡಿಸಿಕೊಂಡಿರುತ್ತದೆ.      
                                                        
ಮತ್ತೊಬ್ಬ ಆರೋಪಿ ವಿನೋದ ಎಂಬುವವನ್ನು ಸಹ ದಿನಾಂಕಃ 24-01-2013 ರಂದು ಮದ್ಯಾಹ್ನ ದಸ್ತಗಿರಿ ಮಾಡಿ, ಕೂಲಂಕುಶವಾಗಿ ವಿಚಾರ ಮಾಡಿ ಆತನು ನೀಡಿದ ಸ್ವ ಇಚ್ಚಾ ಹೇಳಿಕೆಯನ್ನು ಪಡೆದುಕೊಂಡಿದ್ದು, ಆತನು ಸಹ ಈ ಕೊಲೆಯಲ್ಲಿ ಬಾಗಿಯಾಗಿರುವುದಾಗಿ ಹಾಗೂ ತನ್ನ ಮನೆಯ ಅಟ್ಟದ ಮೇಲೆ ಮೃತೆಯ ತಾಳಿ ಸಮೇತ ಇರುವ ಚೈನ್ನ್ನು ಇಟ್ಟಿರುವುದಾಗಿ ತಿಳಿಸಿ, ಅ ವಾಸದ ಮನೆಗೆ ಕರೆದುಕೊಂಡು ಹೋಗಿ ತಮ್ಮ ಮನೆಯ ಅಟ್ಟದ ಮೇಲೆ ಇಟ್ಟಿದ್ದ ತಾಳಿ ಸಮೇತ ಇರುವ ಮಾಂಗಲ್ಯದ ಸರವನ್ನು ಹಾಜರು ಪಡಿಸಿದ್ದನ್ನು ತನಿಖಾದಿಕಾರಿಗಳು ಅಮಾನತ್ತು ಪಡಿಸಿಕೊಂಡಿರುತ್ತಾರೆ.   

    ಸದರಿ ಪ್ರಕರಣದಲ್ಲಿ ಆರೋಪಿತರು ತೋರಿಸಿದ ಕೃತ್ಯ ನಡೆದ ಜಾಗಕ್ಕೆ ತನಿಖಾದಿಕಾರಿಗಳು ಸಿಬ್ಬಂದಿಗಳ ಸಮೇತ ತೆರಳಿ ಮೃತೆಯ ಶವದ ಪತ್ತೆ ಬಗ್ಗೆ ಕ್ರಮ ಕೈಗೊಂಡಿರುತ್ತಾರೆ. ಈವರೆಗೂ ಮೇಲ್ಕಂಡ ಮೃತೆ ಸುನಂದಳ ಶವ ದೊರಕಿರುವುದಿಲ್ಲ. ನಂತರ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರ್ಪಡಿಸಿದ್ದು ನ್ಯಾಯಾಲಯವು ಆರೋಪಿಗಳನ್ನು ನ್ಯಾಯಾಂಗ ಬಂದನಕ್ಕೆ ಆದೇಶಿಸಿರುತ್ತದೆ.  

      ನಾಲ್ಕು ತಿಂಗಳಿನಿಂದ ಪತ್ತೆಯಾಗದೇ ಇದ್ದ ಮೇಲ್ಕಂಡ ಪ್ರಕರಣದ ಪತ್ತೆ ಕಾರ್ಯದಲ್ಲಿ ಪಾಲ್ಗೊಂಡಿದ್ದ ಪಾಂಡವಪುರ ಪೊಲೀಸ್ ಠಾಣೆಯ ಪಿಎಸ್ಐ ಶ್ರೀ ಕೆ.ಎಂ.ಮಂಜು ಮತ್ತು ಸಿಬ್ಬಂದಿಗಳನ್ನು ಜಿಲ್ಲಾ ಪೊಲೀಸ್ ಅದಿಕಾರಿಗಳು ಪ್ರಶಂಸಿರುತ್ತಾರೆ.  

No comments:

Post a Comment