Moving text

Mandya District Police

Press Note MDY RL 27012013


ಪೊಲೀಸ್ ಸೂಪರಿಂಟೆಂಡೆಂಟ್ ರವರ ಕಛೇರಿ,
ಮಂಡ್ಯ ಜಿಲ್ಲೆ, ದಿನಾಂಕಃ 27-01-2013.

ಪತ್ರಿಕಾ ಪ್ರಕಟಣೆ 

ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣಾ ಮೊ.ಸಂ  49/2012 ರ ಕೊಲೆ ಪ್ರಕರಣದ ಪತ್ತೆ ಬಗ್ಗೆ.





     ದಿನಾಂಕಃ 22-04-2011 ರಂದು ಬೆಳಿಗ್ಗೆ ಮಂಡ್ಯ ತಾಲ್ಲೂಕು ಹಳೇಬೂದನೂರು ಗ್ರಾಮದ ಹತ್ತಿರ ಮೈಸೂರು-ಬೆಂಗಳೂರು ರಾಜ್ಯ ಹೆದ್ದಾರಿಯಿಂದ ಸುಮಾರು 15 ಅಡಿ ಅಂತರದಲ್ಲಿ ಹಳೇಬೂದನೂರು ಗ್ರಾಮದ ರತ್ನಮ್ಮರವರ ಜಮೀನು ಕಡೆಗಾದಂತೆ ಖಾಲಿ ಜಾಗದಲ್ಲಿ ಒಂದು ಆಪರಿಚಿತ ಗಂಡಸಿನ ಶವ ಬಿದ್ದಿದ್ದು. ಎಡಗೈನಲ್ಲಿ ರೂಪ ಎಂಬ ಹಚ್ಚೆ ಇರುತ್ತದೆ.  ಶವವನ್ನು ನೋಡಿದರೆ ಸಾವಿನ ಬಗ್ಗೆ ಅನುಮಾನವಿರುತ್ತದೆ ಈ ಬಗ್ಗೆ ತಾವು ಸ್ಥಳಕ್ಕೆ ಬಂದು ಕ್ರಮ ಜರುಗಿಸಬೇಕೆಂದು ದಿನಾಂಕ: 22-4-2011 ರಂದು  ಹಳೇಬೂದೂರು ಗ್ರಾಮದ ವಾಸಿ ಶ್ರೀಮಾನ್ ಟೀ ಸ್ಟಾಲ್ ಮಾಲೀಕ ಮಾದೇಶ ಬಿನ್ ಲೇಟ್ ಸಿದ್ದಯ್ಯ ರವರು ಮಂಡ್ಯ ಗ್ರಾಮಾಂತರ ಠಾಣೆಗೆ ನೀಡಿದ ಪಿಯರ್ಾದುವಿನ ಮೇರೆಗೆ  ಯು.ಡಿ.ಆರ್. ನಂ. 14/2011 ಕಲಂ 174 (ಸಿ) ಸಿ.ಆರ್.ಪಿ.ಸಿ ರೀತ್ಯ ಕೇಸು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ವೈದ್ಯರ ಶವ ಪರೀಕ್ಷೆಯ ನಂತರ ಸದರಿ ಪ್ರಕರಣವನ್ನು ಕೊಲೆ ಪ್ರಕರಣವೆಂದು ದಾಖಲಿಸಿ ತನಿಖೆಯನ್ನು ಮುಂದುವರೆಸಿರುತ್ತಾರೆ. 

      ತನಿಖೆಯಲ್ಲಿ ಮೃತ ಅಪರಿಚಿತ ಗಂಡಸಿನ ಶವವು ಬೆಂಗಳೂರು ಯಶವಂತಪುರ ಪೊಲೀಸ್ ಠಾಣಾ ಮೊ.ನಂ. 141/11 ಕಲಂ.ಮನುಷ್ಯ ಕಾಣೆಯಾದ ಪ್ರಕರಣದಲ್ಲಿ ಕಾಣೆಯಾಗಿರುವ ವ್ಯಕ್ತಿ ಮಲ್ಲೇಶ್ರವರ ಚಹರೆ ಗುರುತಿಗೆ ಹೋಲಿಕೆಯಾಗಿದ್ದು ಆ ಮುಖಾಂತರ ಕಾಣೆಯಾಗಿರುವ ವ್ಯಕ್ತಿ ಮಲ್ಲೇಶರವರ ವಾರಸುದಾರರ ದೂರವಾಣಿ ನಂಬರ್ನ್ನು ಪಡೆದುಕೊಂಡು ಕಾಣೆಯಾದ ಮಲ್ಲೇಶನ ತಂದೆ ಶಿವಲಿಂಗಯ್ಯ, ನಿವೃತ್ತ ಪೊಲೀಸ್ ಸಬ್-ಇನ್ಸ್ಪೆಕ್ಟರ್ ಬೆಂಗಳೂರು ರವರಿಗೆ ಮೃತ ಅಪರಿಚಿತ ಗಂಡಸಿನ ಚಹರೆ ಮಾಹಿತಿ ತಿಳಿಸಲಾಯಿತು. ನಂತರ ಮೃತನ  ತಂದೆ ಮತ್ತು ಸಂಬಂಧಿಕರಿಂದ ಗುರುತಿಸಿ, ಮೃತ ಮಲ್ಲೇಶ ಬಿನ್ ಸಿ.ಎಲ್.ಶಿವಲಿಂಗಯ್ಯ 33ವರ್ಷ, ಒಕ್ಕಲಿಗರು, ನಂ. 81/48, 10 ನೇ ಮೈನ್, 1 ನೇ ಸ್ಟೇಜ್, 2ನೇ ಪೇಸ್, ಗೋಕುಲ್ ಎಕ್ಸ್ಟೆಷನ್. ಮತ್ತಿಕೆರೆ ಬೆಂಗಳೂರು-54 ನಿವಾಸಿಯಾಗಿರುವುದು ಪತ್ತೆಯಾಗಿರುತ್ತದೆ.

     ಮಾನ್ಯ ಜಿಲ್ಲಾ ಪೊಲೀಸ್ ವರಷ್ಠಾಧಿಕಾರಿಗಳಾಗಿದ್ದ ಶ್ರೀ. ಕೌಶಲೇಂದ್ರಕುಮಾರ್ ಐಪಿಎಸ್ ರವರ ಆದೇಶದಂತೆ ದಿ:01-12-2012 ರಂದು ಮಂಡ್ಯ ಗ್ರಾಮಾಂತರ ವೃತ್ತದ ಪ್ರಬಾರವನ್ನು ಪೊಲೀಸ್ ಇನ್ಸ್ಪೆಕ್ಟರ್ ಎನ್.ಸಿ.ನಾಗೇಗೌಡರವರು ವಹಿಸಿಕೊಂಡು, ಅಪರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಾದ ಶ್ರೀ ಎ.ಎನ್. ರಾಜಣ್ಣ ರವರ ಮಾರ್ಗದರ್ಶನದಲ್ಲಿ ತನಿಖೆಯನ್ನು ಮುಂದುವರೆಸಿ, ದಿನಾಂಕಃ 25-01-2013 ರಂದು ಮೃತನ ಸ್ವಂತ ಮಂಜುನಾಥ ಎಂಬುವವನ್ನು ವಿಚಾರಣೆಗೊಳಪಡಿಸಲಾಗಿ, ಆತನು  ಹಳೇ ದ್ವೇಷ ಹಾಗು ತಂದೆ ಮಾಡಿದ ಆಸ್ತಿ ಸಂಪೂರ್ಣ ತಾನೆ ಅನುಭವಿಸಬೇಕೆಂಬ ದುರಾಸೆಯಿಂದ ಈ ಕೆಳಕಂಡ ತನ್ನ ಸ್ನೇಹಿತರೊಡಗೂಡಿ ಮಲ್ಲೇಶನನ್ನು ಕೊಲೆ ಮಾಡುವ ಸಂಚು ರೂಪಿಸಿ, ಕೊಲೆ ಮಾಡಿರುವುದಾಗಿ ತಿಳಿಸಿರುತ್ತಾನೆ.  ಈತನ ಸುಳಿವಿನ ಮೇರೆಗೆ ಈ ಕೆಳಕಂಡ ಎಲ್ಲ ಆರೋಪಿಗಳನ್ನು ಅ ದಿನ ರಾತ್ರಿಯೇ ತನಿಖಾದಿಕಾರಿಗಳು ದಸ್ತಗಿರಿ ಮಾಡಿರುತ್ತಾರೆ. 

ಎ1] ಮಂಜುನಾಥ . ಎಲ್,ಎಸ್. ಬಿನ್ ಎಲ್. ಶಿವಲಿಂಗಯ್ಯ, 25 ವರ್ಷ, ಸಾಪ್ಟವೇರ್ ಇಂಜಿನಿಯರ್. ನಂ. 81/48,
       10 ನೇ ಮೈನ್, 1 ನೇ ಸ್ಟೇಜ್, 2ನೇ ಪೇಸ್, ಗೋಕುಲ್ ಎಕ್ಸ್ಟೆಷನ್. ಮತ್ತಿಕೆರೆ (ಯಶವಂತಪುರ ) ಬೆಂಗಳೂರು-54
ಎ2] ಬಸವರಾಜು. ಎನ್. ಕೆ. ಬಿನ್ ಬಿ. ಕೆ  ನಾಗಪ್ಪ, 25 ವರ್ಷ, ಡ್ರೈವರ್ ಕೆಲಸ, ನಂ-139/ಬಿ, ರೈಲ್ವೇ   ಕ್ವಾಟ್ರಾಸ್,    
       ಯಶವಂತಪುರ, ಬೆಂಗಳೂರು-22
ಎ3] ಶ್ರೀಕಾಂತ .ಎಸ್. ಬಿನ್ ಲೇಟ್ ಶ್ರೀನಿವಾಸ್ .ಟಿ. , 25 ವರ್ಷ, ಅಲ್ಲ್ಯೂಮಿನಿಯಂ ಫ್ಯಾಬಿಕೇಶನ್ , ನಂ. 746,
    4 ನೇ ಕ್ರಾಸ್, ಗೋಕುಲ್ ಮೊದಲನೆ ಹಂತ, 2 ನೇ ಫ್ಯಾಸ್, ಗೋಕುಲ್, ಯಶವಂತಪುರ ಬೆಂಗಳೂರು-54
ಎ4] ಸಂತೋಷ ಬಿ.ಎ. ಬಿನ್ ಆನಂದಪ್ಪ , 27 ವರ್ಷ, ಕಾರು ಚಾಲಕ ವೃತ್ತಿ, ನಂ.45/3, 11 ನೇ ಕ್ರಾಸ್, 2ನೇ ಮೆಯಿನ್ ರಸ್ತೆ,
       ಎಲ್.ಸಿ.ಆರ್. ಸ್ಕೂಲ್ ಎದುರು, ಯಶವಂತಪುರ ಬೆಂಗಳೂರು,

       ಮೇಲ್ಕಂಡವರುಗಳು ಮಲ್ಲೇಶನನ್ನು ಕೊಲೆ ಮಾಡಲು ಸಂಚು ರೂಪಿಸಿ ದಿನಾಂಕ: 19-04-2011 ರಂದು ಬೆಂಗಳೂರಿನಿಂದ ಮೈಸೂರು ಕಡೆಗೆ ನಂ. ಕೆಎ-05-ಎನ್-86 ರ ಮಾರುತ್ತಿ ಎಸ್ಟೀಂ ಕಾರಿನಲ್ಲಿ ಮೃತ ಮಲ್ಲೇಶನನ್ನು ಕರೆದುಕೊಂಡು ಬಂದು ಬಲಮುರಿ, ಶ್ರೀರಂಗಪಟ್ಟಣ , ಮೈಸೂರು ಕಡೆಗಳಲ್ಲಿ ಸುತ್ತಾಡಿ ದಿನಾಂಕ: 21/22-04-2011 ರಂದು ಮದ್ಯರಾತ್ರಿ ಕೊಲೆ ಮಾಡಿ, ಕೊಲೆಯನ್ನು ಮರೆಮಾಚಲು ಶವವನ್ನು ಮಂಡ್ಯ ತಾಲ್ಲೂಕು ಹಳೇಬೂದನೂರು ಗ್ರಾಮದ ಮೈಸೂರು-ಬೆಂಗಳೂರು ರಾಜ್ಯ ಹೆದ್ದಾರಿಯಿಂದ ಸುಮಾರು 15 ಅಡಿ ಅಂತರದಲ್ಲಿ ಹಳೇಬೂದನೂರು ಗ್ರಾಮದ ರತ್ನಮ್ಮ ರವರ ಜಮೀನು ಕಡೆಗಾದಂತೆ ಬಿಸಾಡಿ ಹೋಗಿದ್ದಾಗಿ ತಿಳಿಸಿರುತ್ತಾರೆ.  ನಾಲ್ಕು ಜನ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂದನಕ್ಕೆ ಒಪ್ಪಿಸಿರುತ್ತದೆ.

ಮೇಲ್ಕಂಡ ಪ್ರಕರಣದ ಪತ್ತೆ ಕಾರ್ಯಕ್ರದಲ್ಲಿ ಪಾಲ್ಗೊಂಡಿದ್ದ ವೃತ್ತ ನಿರೀಕ್ಷರಾದ ಶ್ರೀ. ಎನ್.ಸಿ.ನಾಗೇಗೌಡ, ಪ್ರೊಬೇಷನರಿ ಪಿ.ಎಸ್.ಐ. ಬ್ಯಾಟರಾಯಗೌಡ, ಸಿಬ್ಬಂದಿಯವರಾದ ಹೇಮಂತಕುಮಾರ್. ರಘುಪ್ರಕಾಶ್, ಮಹೇಶ, ರಾಮಣ್ಣ, ಆನಂದ, ರವರುಗಳನ್ನು ಜಿಲ್ಲಾ ಪೊಲೀಸ್ ಅದಿಕಾರಿಗಳು ಪ್ರಶಂಸಿಸಿರುತ್ತಾರೆ. 

No comments:

Post a Comment