Moving text

Mandya District Police

DAILY CRIME REPORT DATED : 15-03-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 15-03-2013 ರಂದು ಒಟ್ಟು 26 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಹುಡುಗಿ ಕಾಣೆಯಾದ ಪ್ರಕರಣ,  2 ಯು.ಡಿ.ಆರ್. ಪ್ರಕರಣಗಳು,  1 ಕಳ್ಳತನ ಪ್ರಕರಣ,     2 ಕಳವು ಪ್ರಕರಣಗಳು,  1 ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ,  1 ವಂಚನೆ/ಹಣ ದುರುಪಯೋಗ ಪ್ರಕರಣ,  1 ಕೊಲೆ ಪ್ರಕರಣ,  1 ಅಪಹರಣ ಪ್ರಕರಣ ಹಾಗು 16 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.  


ಹುಡುಗಿ ಕಾಣೆಯಾದ ಪ್ರಕರಣ :

ಕೆ.ಎಂ. ದೊಡ್ಡಿ ಪೊಲೀಸ್ ಠಾಣೆ ಮೊ.ನಂ. 63/13 ಕಲಂ. ಹುಡುಗಿ ಕಾಣಿಯಾಗಿದ್ದಾಳೆ.

ದಿನಾಂಕ: 15-03-2013 ರಂದು ಪಿರ್ಯಾದಿ ಚಿಣ್ಣೇಗೌಡ, ಕಂಡಯ್ಯನಪಾಳ್ಯ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯವರ 18 ವರ್ಷದ ಮಗಳು ಕೆ.ಎಂ.ದೊಡ್ಡಿ ಟೌನಿಗೆ ಕಾಲೇಜಿಗೆ ಹೋಗುತ್ತೇನೆಂದು ಹೇಳಿ ಹೋದವಳು ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ.


ಯು.ಡಿ.ಆರ್. ಪ್ರಕರಣಗಳು :

1. ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಯು.ಡಿ.ಆರ್. ನಂ. 04/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 15-03-2013 ರಂದು ಪಿರ್ಯಾದಿ ದೊರೆರಾಜು, ನಂ. 2941, 7ನೇ ಕ್ರಾಸ್, ಗಾಂಧಿನಗರ, ಮಂಡ್ಯ ಸಿಟಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಕನರ್ಾಟಕ ಬಾರ್ ಸರ್ಕಲ್ ಹತ್ತಿರ ಈತ ದಿನ ಮಲಗಿಕೊಳ್ಳುತ್ತಿದ್ದ ಜಾಗದಲ್ಲಿ ಜನರು ಸುತ್ತುವರೆದು ನೋಡುತ್ತಿದ್ದು ನಾನು ಏನೆಂದು ನೋಡಲಾಗಿ ಸದರಿ ಆಸಾಮಿಯು ಸತ್ತು ಮಲಗಿದ್ದು ಈತ ಯಾವುದೋ ಖಾಯಿಲೆಯಿಂದ ಬಳಲಿ ದಿನಾಂಕ:14-03-2013 ರಂದು ರಾತ್ರಿ ವೇಳೆಯಲ್ಲಿ ಮೃತಪಟ್ಟಿರುವಂತೆ ಕಂಡುಬಂದಿರುತ್ತದೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  



2. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಯು.ಡಿ.ಆರ್. ನಂ. 13/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 15-03-2013 ರಂದು ಪಿರ್ಯಾದಿ ಕಾಂತರಾಜು ಬಿನ್. ಲೇಟ್. ದಿನದಯಾಳು ನಾಯ್ಡ, ರಾಜೇಂದ್ರನಗರ, ಮೈಸೂರು ರವರು ನೀಡಿದ ದೂರಿನ ವಿವರವೇನೆಂದರೆ ಅವರ ಅಣ್ಣ ಗೋಪಿ ಬಿನ್. ಲೇಟ್. ದಿನದಯಾಳುನಾಯ್ಡ, ರಾಜೇಂದ್ರನಗರ, ಮೈಸೂರು ರವರು ಬೆಂಕಿಕಾಂಯಿಸುವಾಗ ಆಕಸ್ಮಿಕವಾಗಿ ಎಡಮೊಗ್ಗುಲಿಗೆ ಬಿದ್ದು ಆಸ್ವತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾರೆಂದು ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಕಳ್ಳತನ ಪ್ರಕರಣ :

ಕೊಪ್ಪ ಪೊಲೀಸ್ ಠಾಣೆ ಮೊ.ನಂ. 40/13 ಕಲಂ. 380 ಐ.ಪಿ.ಸಿ.

ದಿನಾಂಕ: 15-03-2013 ರಂದು ಪಿರ್ಯಾದಿ ಕೃಷ್ಣ ಬಿನ್. ಡಿ.ಮಲ್ಲಿಗೆರೆ, ಕೊಪ್ಪ ಹೋ, ಮದ್ದೂರು ತಾ. ರವರು ನೀಡಿದ ದೂರಿನ ವಿವರವೇನೆಂದರೆ ಯಾರೋ ವ್ಯಕ್ತಿಗಳು ಪಿರ್ಯಾದಿಯವರ ಮನೆಯ ಬೀರು ಮೇಲಿದ್ದ ಕೀ ತೆಗೆದು ಬೀರುವಿನಲ್ಲಿದ್ದ 8ಗ್ರಾಂ ಮುತ್ತಿನ ಓಲೆ, 30ಗ್ರಾಂ ಚಿನ್ನದ ಮಾಂಗಲ್ಯದ ಚೈನು, 15ಗ್ರಾಂ ಚಿನ್ನದ ಒಂದೆಳೆ ಸರ, ಒಂದು ಉಂಗುರಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದಾರೆ ಅವರನ್ನು ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


ಕಳವು ಪ್ರಕರಣಗಳು :

1. ಬೆಳ್ಳೂರು ಪೊಲೀಸ್ ಠಾಣೆ ಮೊ.ನಂ. 54/13 ಕಲಂ. 379 ಐ.ಪಿ.ಸಿ.

ದಿನಾಂಕ: 15-03-2013 ರಂದು ಪಿರ್ಯಾದಿ ತೀರ್ಥ ಬಿನ್. ನಿಂಗಪ್ಪ, 40 ವರ್ಷ, ಬೆಳ್ಳೂರು ಕ್ರಾಸ್ ರವರು ನೀಡಿದ ದೂರಿನ ವಿವರವೇನೆಂದರೆ ಈಗ್ಗೆ ಸುಮಾರು 6 ತಿಂಗಳ ಹಿಂದೆ ಪಿರ್ಯಾಧಿಯವರ ಬಾಬ್ತು ಕೆ.ಎ-54-ಇ-0327 ಬಜಾಜ್ ಪ್ಲಾಟೀನ ಮೋಟರ್ ಬೈಕ್ ನ್ನು, ಮನೆಯ ಮುಂದೆ ನಿಲ್ಲಿಸಿದ ಬೈಕನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2. ಹಲಗೂರು ಪೊಲೀಸ್ ಠಾಣೆ ಮೊ.ನಂ. 41/13 ಕಲಂ. 379 ಐ.ಪಿ.ಸಿ.

ದಿನಾಂಕ: 15-03-2013 ರಂದು ಪಿರ್ಯಾದಿ ಚಿಕ್ಕತಾಯಮ್ಮ ಕೋಂ ಮಹದೇವಯ್ಯ, ತಾಳೆಹಳ್ಳಿ ಗ್ರಾಮ, ಮಳವಳ್ಳಿ ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು ಪಿರ್ಯಾದಿಯವರ ಮನೆಯ ಬಳಿ ಇಟ್ಟಿದ್ದ ಒಂದು ಕಂಚಿನ ಹಂಡೆ, 20 ಕೋಳಿಗಳು, 1 ಟಾಪರ್ಾಲಿನ್, 10 ಮೂಟೆ ಭತ್ತ ಹಾಗೂ ಇತರೆ ಸಾಮಾನುಗಳನ್ನು ಕಳ್ಳತನ ಮಾಡಿರುತ್ತಾರೆ ಇವರುಗಳ ಬೆಲೆ 14,450/- ರೂಗಳಾಗಿರುತ್ತೆ ಇವುಗಳನ್ನು ಕಳ್ಳತನ ಮಾಡಿರುವವರು ನಮ್ಮ ಗ್ರಾಮದ ನಾಗ & ಕೃಷ್ಣ ಎಂಬುವವರ ಮೇಲೆ ಅನುಮಾನವಿರುತ್ತೆ ಎಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.   


ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ :

ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 83/13 ಕಲಂ. 498(ಎ)- 506  ಐ.ಪಿ.ಸಿ.

     ದಿನಾಂಕ: 15-03-2013 ರಂದು ಪಿರ್ಯಾದಿ ರಂಜಿತಾ ಎಂ.ಕೆ. ಬಿನ್. ಕೃಷ್ಣಪ್ಪ, 3 ನೇ ಕ್ರಾಸ್, ತಾವರೆಗೆರೆ, ಮಂಡ್ಯ ಸಿಟಿ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿಗಳು 1) ಗುರುಸ್ವಾಮಿ ಬಿನ್ ಶ್ರೀನಿವಾಸ್ ರಾಮನಗರ ಟೌನ್ ಹಾಗು 2) ಭಾಗ್ಯ ಕಾರಿನಲ್ಲಿ ನಮ್ಮ ಮನೆಯ ಹತ್ತಿರ ಬಂದು ನನಗೆ ಅವಾಚ್ಯ ಶಬ್ದಗಳಿಂದ ಬೈದು ನಿನ್ನನು ಯಾವುದಾದರು ರೀತಿಯಲ್ಲಿ ಕೊಲೆ ಮಾಡಿ ಸಾಯಿಸಿ ಮದುವೆ ವೇಳೆಯಲ್ಲಿ ಕೊಟ್ಟಿರುವ ನನ್ನ ವಡವೆಗಳು ಹಾಗು ಖರ್ಚು ಮಾಡಿರುವ ಹಣವನ್ನು ವಾಪಸ್ಸು ಪಡೆದುಕೊಳ್ಳತ್ತೇನೆ ಎಂದು ಬೆದರಿಕೆ ಹಾಕಿ ನನಗೆ ಮಾನಸಿಕವಾಗಿ ಕಿರುಕುಳುಕೊಡುತ್ತಿರುತ್ತಾರೆ ಹಾಗು ಕೊಲೆ ಬೆದರಿಕೆ ಸಹಾ ಹಾಕಿರುತ್ತಾನೆ ಇವರುಗಳ ಮೇಲೆ ಸೂಕ್ತ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ವಂಚನೆ/ಹಣ ದುರುಪಯೋಗ ಪ್ರಕರಣ :

ಮದ್ದೂರು ಪೊಲೀಸ್ ಠಾಣೆ ಮೊ.ನಂ. 108/13 ಕಲಂ. 408-409 ಐ.ಪಿ.ಸಿ.

ದಿನಾಂಕ: 15-03-2013 ರಂದು ಪಿರ್ಯಾದಿ ಕೆ.ಸುರೇಂದ್ರ ಹೆಗಡೆ, ಮ್ಯಾನೇಜರ್, ವಿಜಯಾ ಬ್ಯಾಂಕ್, ಮೈಸೂರು ರವರು ನೀಡಿದ ದೂರು ಏನೆಂದರೆ ಆರೋಪಿಗಳಾದ ಶಿವಣ್ಣ ಹಾಗೂ ಇತರೆ 6 ಜನ ವಿಜಯಾ ನೌಕರರು ವಿಜಯಾ ಬ್ಯಾಂಕಿನಲ್ಲಿ ಎಲ್.ಐ.ಸಿ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುವ ಬ್ಯಾಂಕಿನ ಕೆಲಸಗಾರರು 5 ಲಕ್ಷ ಹಣವನ್ನು ದುರುಪಯೋಗ ಮಾಡಿಕೊಂಡು ಬ್ಯಾಂಕಿಗೆ ವಂಚಿಸಿರುವುದಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


ಕೊಲೆ ಪ್ರಕರಣ :

ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 99/13 ಕಲಂ. 302 ಐ.ಪಿ.ಸಿ.

       ದಿನಾಂಕ: 15-03-2013 ರಂದು ಪಿರ್ಯಾದಿ ಶಿವ ಬಿನ್. ಮಾರಯ್ಯ,  32 ವರ್ಷ,  ಕೂಲಿ ಕೆಲಸ,  ಆಲಭುಜನಹಳ್ಳಿ ಗ್ರಾಮ, ಮದ್ದೂರು ತಾಲೊಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ಈಕೆಯ ಗಂಡ ಕರಿಯಪ್ಪ ಬಿನ್ ಲೇ; ಪೋತ್ತಯ್ಯ, 45ವರ್ಷ, ಗಂಗಾಮತ ಜನಾಂಗ, ಗಾರೆ ಕೆಲಸ, ವಾಸ ಕನಲಿ ಗ್ರಾಮ, ಮಂಡ್ಯ. ತಾಲೊಕು ರವರು ತನ್ನ  ಪತ್ನಿಯ  ಶೀಲದ ಬಗ್ಗೆ ಶಂಕಿಸಿ ಈ  ಕಾರಣದಿಂದ  ಆಗಾಗ್ಗೆ  ಅವಳಿಗೆ ಗಲಾಟೆ  ಮಾಡಿ ಹೊಡೆದು ಮನೆಯಿಂದ  ಹೊರಗೆ ಹಾಕಿದ್ದು ಈ ಬಗ್ಗೆ  ನಮ್ಮ  ತಂದೆ  ಗ್ರಾಮದ  ಮುಖಂಡರ ಮೂಲಕ  ನನ್ನ  ತಂಗಿಯನ್ನು ಕರೆದುಕೊಂಡು ಹೋಗಿ ಗಂಡನ ಮನೆಗೆ ಬಿಟ್ಟು ಬಂದಿದ್ದು  ಮೇಲ್ಕಂಡ  ಕಾರಣದಿಂದ  ದಿನಾಂಕಃ-15-03-2013  ರಂದು  ಮದ್ಯಾಹ್ನ  12-30 ರಿಂದ 02-00 ಗಂಟೆಯ  ಸಮಯದಲ್ಲಿ  ತಮ್ಮ ಭಾವ  ಆತನ ಹೆಂಡತಿ ಜ್ಯೋತಿ ಮನೆಯಲ್ಲಿ  ಮಲಗಿರುವಾಗ ಆಕೆಯ ಕತ್ತನ್ನು  ಚಾಕುವಿನಿಂದ ಕೂಯ್ದು  ಕೊಲೆ ಮಾಡಿರುತ್ತಾನೆಂದು ಈ ಬಗ್ಗೆ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಕೊಟ್ಟ ಲಿಖಿತ ದೂರಿನ ಮೇರೆಗೆ ಜರೂರು ಪ್ರಕರಣ ದಾಖಲಿಸಲಾಗಿದೆ. 


ಅಪಹರಣ ಪ್ರಕರಣ :

ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 128/13 ಕಲಂ. 363 ಕೂಡ 34 ಐ.ಪಿ.ಸಿ.

       ದಿನಾಂಕ: 15-03-2013 ರಂದು ಪಿರ್ಯಾದಿ ಗೋಸೇಗೌಡ ಬಿನ್. ತಿಮ್ಮೇಗೌಡ ಪಿ. ಹೊಸಹಳ್ಳಿ ಗ್ರಾಮ, ಶ್ರೀ ರಂಗಪಟ್ಟಣ ತಾಲ್ಲೂಕು ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿಗಳಾದ ಯದುಕುಮಾರ ಇತರೆ ಇಬ್ಬರು, ಎಲ್ಲೂರು ಪಿ.ಹೊಸಹಳ್ಳಿ ಗ್ರಾಮ, ಶ್ರೀರಂಗಪಟ್ಟಣ ತಾಲ್ಲೂಕು ರವರುಗಳು ಪಿರ್ಯಾದಿಯವರ ಮಗನನ್ನು ಅಪಹರಿಸಿಕೊಂಡು ಹೋಗಿದ್ದಾರೆಂದು ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  

No comments:

Post a Comment