Moving text

Mandya District Police

DCR Dated 16-03-2013


ಈ ದಿನ ಮಂಡ್ಯ ಜಿಲ್ಲೆಯಲ್ಲಿ 25 ಪ್ರಕರಣಗಳು ವರದಿಯಾಗಿದ್ದು, ಅದರಲ್ಲಿ 3 ಅಪಘಾತ ಪ್ರಕರಣ, 2 ಯುಡಿಆರ್ 6 ಭದ್ರತಾ ಕಾಯ್ದೆ ಪ್ರಕರಣ, 2 ಹಲ್ಲೆ ಪ್ರಕರಣ, 1 ಕೌಟುಂಬಿಕ ದೌರ್ಜನ್ಯ ಪ್ರಕರಣ, 1 ನೀರಾವರಿ ಕಾಯ್ದೆ ಪ್ರಕರಣ ಹಾಗೂ 1 ಜಾನುವಾರು ಕಾಯ್ದೆ ಪ್ರಕರಣ ಮತ್ತು 9 ಇತರ ಪ್ರಕರಣಗಳು ವರದಿಯಾಗಿರುತ್ತದೆ. 

ಅಸ್ವಾಭಾವಿಕ ಸಾವು ಪ್ರಕರಣ

ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಯುಡಿಆರ್ ಸಂಖ್ಯೆ 08/13 ಕಲಂ 174 CrPC

ದಿ;16-03-2013 ರ ಸಂಜೆ 04-00 ಗಂಟೆಯ ಹಿಂದೆ, ಬೇವಿನಹಳ್ಳಿ ಗ್ರಾಮದಿಂದ ಎ.ಹುಲ್ಲಕೆರೆ ಗ್ರಾಮಕ್ಕೆ ತೆರಳುವ ಮಾರ್ಗ ಮಧ್ಯೆ ರಸ್ತೆಯ ಬದಿಯಲ್ಲಿ ವೃದ್ಧ ಮಹಿಳೆಯೊಬ್ಬರ ಅನಾಥ ಶವ ಬಿದ್ದಿದ್ದು, ಇವರಿಗೆ ಸುಮಾರು 70 ವರ್ಷ ವಯಸ್ಸಾಗಿದ್ದು, ಗುಲಾಬಿ ಸೀರೆ, ಗೋಲ್ಡನ್ ಬಣ್ಣದ ರವಿಕೆ ಧರಿಸಿರುತ್ತಾರೆ.  ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ನೀಡಿರುವ ದೂರಾಗಿರುತ್ತೆ.  

ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಯುಡಿಆರ್ ಸಂಖ್ಯೆ 14/13 ಕಲಂ 174 CrPC

16-03-13 ರಂದು ಮದ್ಯಾಹ್ನ 12-00  ಗಂಟೆಯ ಹಿಂದಿನ  ದಿನಗಳಲ್ಲಿ ಉತ್ತರ ಕಾವೇರಿ ಸೇತುವೆ ಬಳಿ ಕಾವೇರಿ ಹೊಳೆಗೆ ಸುಮಾರು 45-50 ವರ್ಷದ ಅಪರಿಚಿತ ಮಹಿಳೆ ಬಿದ್ದು ಮೃತ ಪಟ್ಟಿರುವುದಾಗಿ  ಕಂಡುಬಂದಿರುತ್ತೆ. ಮುಂದಿನ ಕ್ರಮ ಜರುಗಿಸ ಬೇಕಾಗಿ ಕೋರಿಕೆ ಎಂದು ಕೊಟ್ಟ ದೂರು

ಮಾರಣಾಂತಿಕ ಅಪಘಾತ ಪ್ರಕರಣ

ಶಿವಳ್ಳಿ ಠಾಣೆ ಪೊಲೀಸ್ ಠಾಣೆ ಮೊ ಸಂ 64/2013 ಕಲಂ 279-337-304(ಎ) ಐಪಿಸಿ

16-03-2013 ರಂದು  ಸಂಜೆ 4  ಗಂಟೆಯಲ್ಲಿ. ಮಂಡ್ಯ ಮೇಲು ಕೋಟೆ ಮುಖ್ಯ ರಸ್ತೆಯ ಮಲ್ಲೇನಹಳ್ಳಿಗೇಟ್ ಬಳಿ ಆರೋಪಿ ಕಾರ್ ಚಾಲಕ ಕೆ.ಎ-42-ಎಂ -1572  ಕಾರನ್ನು ಅತಿವೇಗವಾಗಿ ಹಾಗೂ ಅಜಾಗರೂಕತೆಯಿಂದ ಓಡಿಸಿಕೊಂಡು ನಾವುಗಳು ಹೋಗುತ್ತಿದ್ದ ಬೈಕ್ಗೆ ನಮ್ಮ ಕಡೆಗೆ ಆದಂತೆ ಬಂದು ಬಲವಾಗಿ ಡಿಕ್ಕಿ  ಹೂಡೆಸಿದರು. ಪಿರ್ಯಾದಿ ಸಾಗರ್ ರವರ ಜೊತೆ ಇದ್ದ ಸಿದ್ದ ಎಂಬುವವರು ಸ್ಥಳದಲ್ಲೇ ಮೃತಪಟ್ಟಿದ್ದು, ಪೆಟ್ಟಾಗಿದ್ದ ಸಾಗರ್ ರವರನ್ನು ಚಿಕಿತ್ಸೆಗಾಗಿ ಮಂಡ್ಯ ಜಿಲ್ಲಾ ಆಸ್ಪತ್ರೆಗೆ  ಸೇರಿಸಿದ್ದಾರೆ. ಈ ಅಪಾಘಾತಕ್ಕೆ ಕಾರಣನಾದ ಮೇಲ್ಕಂಡ  ಸದರಿ ಕಾರಿನ ಚಾಲಕನ ಮೇಲೆ ಕಾನೂನು ರಿತ್ಯಾ ಕ್ರಮ ಜರುಗಿಸಬೇಕೆಂದು ನೀಡಿದ ದೂರು


ಮಂಡ್ಯ ಸಂಚಾರಿ ಪೊಲೀಸ್ ಠಾಣೆ ಮೊ ಸಂ 17/2013 ಕಲಂ 279-304(ಎ) ಐಪಿಸಿ

ದಿನಾಂಕ.16/03/2013 ರಂದು ಸಂಜೆ 4-00ಗಂಟೆಯಲ್ಲಿ ಮಂಡ್ಯ ಸಿಟಿ ಕಡೆಯಿಂದ ಬನ್ನೂರು ಕಡೆಗೆ KSRTC ಬಸ್ಸು ಹೋಗುತ್ತಿದ್ದು ಅದರ ಚಾಲಕ ಅತಿವೇಗವಾಗಿ ಮತ್ತು ಎಡದಿಂದ ಏಕಾಏಕಿ ರಸ್ತೆಯ ಬಲಭಾಗಕ್ಕೆ ತನ್ನ ನಿರ್ಲಕ್ಷತೆಯಿಂದ ಓಡಿಸಿ ಬರುತ್ತಿದ್ದ. ನನ್ನ ತಾಯಿ ಹನುಮಮ್ಮಳಿಗೆ ಡಿಕ್ಕಿ ಹೊಡೆಸಿದ ರಭಸಕ್ಕೆ ನನ್ನ ತಾಯಿ ಕೆಳಗೆ ಬಿದ್ದೆಳು ತಕ್ಷಣ ಬಸ್ಸಿನ ಮುಂದಿನ ಬಲಭಾಗದ ಚಕ್ರ ನನ್ನ ತಾಯಿಯ ದೇಹದ ಮೇಲೆ ಹರಿದು ನಿಂತಿತು. ಆಗ ನಾನು ಮತ್ತು ಅಲ್ಲಿದ್ದ ಮರೀಗೌಡ ಬಡಾವಣೆಯ ಸುಬ್ಬಯ್ಯ ಹಾಗೂ ಸ್ಥಳದಲ್ಲಿದ್ದ ಇತರರು ಹತ್ತಿರ ಹೋಗಿ ನನ್ನ ತಾಯಿಯನ್ನು ಎತ್ತಿ ಉಪಚರಿಸಲಾಗಿ ನನ್ನ ತಾಯಿಯ ತಲೆ, ಬಲಗೈ ಮತ್ತು ಬಲಗಾಲಲ್ಲಿ ಜಜ್ಜಿದಂತ ಗಾಯಗಳಾಗಿ ಸ್ಥಳದಲ್ಲಿ ಸತ್ತು ಹೋಗಿದ್ದರು. ಈ ಅಪಾಘಾತಕ್ಕೆ ಕಾರಣನಾದ ಮೇಲ್ಕಂಡ  ಸದರಿ ಬಸ್ ಚಾಲಕನ ಮೇಲೆ ಕಾನೂನು ರಿತ್ಯಾ ಕ್ರಮ ಜರುಗಿಸಬೇಕೆಂದು ನೀಡಿದ ದೂರು

ಕೌಟುಂಬಿಕ ದೌರ್ಜನ್ಯ ಪ್ರಕರಣ

ಮದ್ದೂರು ಪೊಲೀಸ್ ಠಾಣೆ ಮೊ ಸಂ 110/2013 ಕಲಂ 498(ಎ)-323-506 ಐಪಿಸಿ 

ಪಿರ್ಯಾದಿ ಸಿ.ಎಂ. ಉಮಾ ಕೋಂ ಟಿ. ಚನ್ನಪ್ಪ ರವರ ಗಂಡ ಐ.ಟಿ.ಬಿ.ಪಿ. ಪ್ಯಾರಾ ಮಿಲಿಟರಿಯಲ್ಲಿ ಕೆಲಸ ಮಾಡುತ್ತಿದ್ದು, ರಜಾ ದಿನಗಳಲ್ಲಿ ಬಂದಾಗಲೆಲ್ಲಾ ನನಗೆ ಮಾನಸಿಕ ಮತ್ತು ದೈಹಿಕವಾಗಿ ಕಿರುಕುಳ ನೀಡಿ ಹೊಡೆದು ಅವಾಚ್ಯ ಶಬ್ದಗಳಿಂದ ನಿಂದಿಸಿ ನಿಮ್ಮ ತಂದೆಯ ಮನೆಯಿಂದ ಹಣವನ್ನು ತೆಗೆದುಕೊಂಡು ಬಾ ಎಂದು ಕಿರುಕುಳ ನೀಡುತ್ತಿರುತ್ತಾರೆ. ಈ ಬಗ್ಗೆ ನಾವು ಪಂಚಾಯಿತಿ ಮಾಡಿ ಠಾಣೆಗೂ ಸಹ ಸುಮಾರು ಸಲ ದೂರು ನೀಡಿದ್ದು, ದೂರಿನ ಮೇರೆಗೆ ಆತನನ್ನು ಠಾಣೆಗೆ ಕರೆಸಿ ವಿಚಾರಣೆ ಮಾಡಿರುತ್ತಾರೆ. ದಿಃ16-03-13 ರ ಬೆಳಿಗ್ಗೆ 8-30 ರ ಸಮಯದಲ್ಲಿ ನನಗೆ ಹೊಡೆದು ನನ್ನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುತ್ತಾರೆ. ಆದ್ದರಿಂದ ಈತನ ವಿರುದ್ದ ಕಾನೂನು ರೀತ್ಯಾ ಕ್ರಮ ಕೈಗೊಳ್ಳು ಕೋರಿ

ನೀರಾವರಿ ಕಾಯ್ದೆ 

ಕಿಕ್ಕೇರಿ ಪೊಲೀಸ್ ಠಾಣೆ ಮೊ ಸಂ 51/2013 ಕಲಂ ಕಲಂ 430-427 ಐಪಿಸಿ ಕೂಡ 61(ಎ) ಮತ್ತು 61(ಬಿ) ಕನರ್ಾಟಕ ನೀರಾವರಿ ಕಾಯ್ದೆ.

ಆರೋಪಿಗಳಾದ 1] ಅಶೋಕ ಬಿನ್ ಪುಟ್ಟೇಗೌಡ, ಬೋರಾಪುರ ಹಾಗೂ ಇತರರು, ಎಲ್ಲರೂ ಕೆ.ಆರ್.ಪೇಟೆ ತಾಲೋಕು. ನಾಲೆಯಿಂದ ಅನಧಿಕೃತವಾಗಿ ನೀರನ್ನು ಪಡೆಯಲು ನಾಲಾ ಏರಿಯನ್ನು ಅಗೆದು 6 ಅಂಗುಲ ವ್ಯಾಸದ ಪೈಪನ್ನು ಹೂಳಿರುತ್ತಾರೆ. ದಿನಾಂಕಃ 12-03-2013 ರಂದು ಬೆಳಿಗ್ಗೆ 11-00 ಘಂಟೆಗೆ ನಾಲಾ ತಪಾಸಣೆ ವೇಳೆ ಸ್ಥಳ ಪರಿಶೀಲನೆ ಮಾಡಿದಾಗ ನಾಲಾ ಏರಿಯನ್ನು ಅಗೆದು ಪೈಪನ್ನು ಅಳವಡಿಸಿಕೊಂಡಿರುವುದು ಕಂಡು ಬಂದಿದೆ. ಸದರಿ ಅಗೆತದಿಂದ ಸಕರ್ಾರಿ ಸ್ವತ್ತಿಗೆ ರೂ 14081/- ಗಳಷ್ಟು ಹಾನಿ ಆಗಿದೆ ಎಂದು ಎಸ್.ಇ ನಿಂಗಪ್ಪ, ಅಸಿಸ್ಟಂಟ್ ಇಂಜಿನಿಯರ್, ನಂಜ 5 HLBC ಉಪವಿಭಾಗ, ಕೆ.ಆರ್ ಪೇಟೆ.ರವರು ನೀಡಿದ ದೂರು

ಸಾರ್ವಜನಿಕ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಬಗ್ಗೆ 

ಮಂಡ್ಯ ಪಶ್ಚಿಮ ಠಾಣೆ 68/13 353, 506, 188 ರೆ/ವಿ 34 ಐಪಿಸಿ 

16-03-13  1-30 ಪಿಎಂ ರಿಂದ 1-45 ಪಿಎಂ ನಲ್ಲಿ ಕೆಎಸ್ಆರ್ಟಿಸಿ ಬಸ್ ನಿಲ್ದಾಣ, ಮಂಡ್ಯ ಸಿಟಿ ಆರೋಪಿಗಳು ಫಿರ್ಯಾದಿ ಕೆ.ಮಲ್ಲೇಶ ಬಿನ್ ಲೇಟ್ ಕಾಡೇಗೌಡ, ಸಹಾಯಕ ಭದ್ರತಾ ನಿರೀಕ್ಷಕರು, ಕೆಎಸ್ಆರ್ಟಿಸಿ, ಮಂಡ್ಯ ವಿಭಾಗ, ಮಂಡ್ಯ ಸಿಟಿ,  ರವರನ್ನು ಕುರಿತು ನೀನು ಏನಾದರೂ ಇನ್ನೊಂದು ಸಾರಿ ನಮ್ಮ ಬಸ್ಸನ್ನು ಅಲ್ಲಿಂದ ತೆರವುಗೊಳಿಸಿದರೆ ನಿನ್ನನ್ನು ಅಲ್ಲಿಯೇ ಕೊಂದು ಬಿಡುತ್ತೇವೆಂದು ಬೆದರಿಕೆ ಹಾಕಿ ಸಕರ್ಾರಿ ಕೆಲಸ ನಿರ್ವಹಿಸದಂತೆ ಅಡ್ಡಿಪಡಿಸಿರುತ್ತಾರೆ. ಈ ಬಗ್ಗೆ ಆರೋಪಿಗಳಾದ 1] ಸುಧಾಕರ ಬಿನ್ ಕುಳ್ಳೇಗೌಡ, ಕೆಎ-11 8582 ರ ಖಾಸಗಿ ಬಸ್ಸಿನ ಕಂಡಕ್ಟರ್, ವಾಸ ಕೊಪ್ಪ, ಮದ್ದೂರು ತಾಲ್ಲೂಕು. 2] ಶಶಿ ಬಿನ್ ಶಿವಣ್ಣ, ಬಸ್ ಏಜೆಂಟ್, ವಾಸ ಕಲ್ಲಹಳ್ಳಿ, ಮಂಡ್ಯ ಸಿಟಿ. ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಇತ್ಯಾದಿಯಾಗಿ ನೀಡಿದ ದೂರು


ಬೆಳ್ಳೂರು ಪೊಲೀಸ್ ಠಾಣೆ ಮೊ ಸಂ 56/2013 ಕಲಂ 11 [1] [ಡಿ] [ಇ] ಆಫ್ ಪ್ರಿವೆನ್ಷನ್ ಆಫ್ ಕ್ರುಯಲ್ಟಿಟು ಅನಿಮಲ್ ಆಕ್ಟ್ ಸೆಕ್ಷನ್ 4 & 11 ಆಫ್ ಕೌ ಸ್ಲಾಫಟರ್ ಆಕ್ಟ್ & ಕ್ಯಾಟಲ್ ಪ್ರಿವೆನ್ಷನ್ ಆಕ್ಟ್ 1964

ದಿನಾಂಕಃ 16-03-2013 ರಂದು ಬೆಳಿಗ್ಗೆ 5-00 ಗಂಟೆಯಲ್ಲಿ ಲ್ಯಾಂಕೋ ಚೆಕ್ ಪೋಸ್ಟ್ ಬಳಿ, ಎನ್.ಹೆಚ್.  48 ರಸ್ತೆಯಲ್ಲಿ. ಆರೋಪಿಗಳಾದ 1] ಸ್ವಾಮಿ, ನಾಗರಹಳ್ಳಿ ಅರಸೀಕೆರೆ ತಾಲ್ಲೂಕು, ಹಾಸನ ಜಿಲ್ಲೆ, 2]ಶಿವಕುಮಾರ್ ಕೆಎ-20-ಎ-9198ರ 909ಗೂಡ್ಸ್ ವಾಹನದ ಚಾಲಕ ವಾಸ ಗಂಡಸಿ ಗ್ರಾಮ ಅರಸೀಕೆರೆ ತಾ ಹಾಸನ ಜಿಲ್ಲೆ, ರವರುಗಳು ರಾಸುಗಳನ್ನು ತುಂಬಿಕೊಂಡು ಪರವಾನಿಗೆ ಇಲ್ಲದೆ ಸಾಗಣೆ ಮಾಡುತ್ತಿದ್ದು,ಸದರಿ ವಾಹನವನ್ನು, ಚಾಲಕ ಮತು ರಾಸುಗಳನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ಬಂದು ನೀಡಿದ ವರದಿ ಮೇರೆಗೆ.


No comments:

Post a Comment