Moving text

Mandya District Police

DAILY CRIME REPORT DATED : 15-04-2013


ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 15-04-2013 ರಂದು ಒಟ್ಟು 39 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 3 ಯು.ಡಿ.ಆರ್. ಪ್ರಕರಣಗಳು,  1 ರಸ್ತೆ ಅಪಘಾತ ಪ್ರಕರಣ,  1 ಹೆಂಗಸು ಕಾಣೆಯಾದ ಪ್ರಕರಣ ಹಾಗು 34 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.  

ಯು.ಡಿ.ಆರ್. ಪ್ರಕರಣಗಳು :

1. ನಾಗಮಂಗಲ ಪಟ್ಟಣ ಪೊಲೀಸ್ ಠಾಣೆ ಯು.ಡಿ.ಆರ್. ನಂ. 04/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 15-04-2013 ರಂದು ಪಿರ್ಯಾದಿ ಮಮತ, 30ವರ್ಷ ಕೆ.ಮಲ್ಲೇನಹಳ್ಳಿ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಎಂ.ಎನ್. ರಾಜು 40 ವರ್ಷ ಕೆ.ಮಲ್ಲೇನಹಳ್ಳಿ ಗ್ರಾಮ  ರವರಿಗೆ ಪಿರ್ಯಾದಿಯವರ ಗಂಡನಿಗೆ ಕುಡಿಯುವ ಚಟವಿದ್ದು ಕುಡಿದು ಮನೆಯಲ್ಲಿ ಮಲಗಿದ್ದವರು ಊಟಕ್ಕೆ ಏದ್ದೇಳದ ಕಾರಣ ಹೋಗಿ ನೋಡಲಾಗಿ ಸುಸ್ತಾಗಿದ್ದವರನ್ನು ಚಿಕಿತ್ಸೆಗೆ ಎಂದು ನಾಗಮಂಗಲ ಸರ್ಕಾರಿ  ಅಸ್ಪತ್ರೆಗೆ ಕರೆ ತಂದು ಸೇರಿಸಿದ್ದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


2. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಯು.ಡಿ.ಆರ್.ನಂ. 22/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 15-04-2013 ರಂದು ಪಿರ್ಯಾದಿ ಚಂದುಲಾಲ್, 42 ವರ್ಷ, ದರಸಗುಪ್ಪೆ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಲಕ್ಷೀ, 75 ವರ್ಷ, ದರಸಗುಪ್ಪೆ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಲಕ್ಷ್ಮಮ್ಮರವರ ಸೀರೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಬೆಂಕಿ ಹತ್ತಿಕೊಂಡು ಮೈ ಕೈ ದೇಹವೆಲ್ಲ ಸುಟ್ಟ ಗಾಯಾಗಳಗಿದ್ದು ಚಿಕಿತ್ಸೆ ನೀಡಿದರು ಫಲಕಾರಿಯಾಗದೆ ಮೃತ ಪಟ್ಟಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


3. ಶಿವಳ್ಳಿ ಪೊಲೀಸ್ ಠಾಣೆ ಮೊ.ನಂ. 05/13 ಕಲಂ. 174 ಸಿ.ಅರ್.ಪಿ.ಸಿ.

 ದಿನಾಂಕ: 15-04-2013 ರಂದು ಪಿರ್ಯಾದಿ ಮಾಯಮ್ಮ, 50ವರ್ಷ, ಮೊಳೆಕೊಪ್ಪಲು ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 15-04-213 ರಂದು ಮದ್ಯಾಹ್ನ 12 ಗಂಟೆಯಲ್ಲಿ ಸುಧಾ, 30 ವರ್ಷ, ಮರಡಿಪುರ ಗ್ರಾಮ ರವರು ನೀಡಿದ ಪಿರ್ಯಾದಿನ ವಿವರವೇನೆಂದರೆ ದೀಪವು ಆಕಸ್ಮಿಕವಾಗಿ ಬಿದ್ದ ಕಾರಣ ಸೀರೆ ಬೆಂಕಿ ಹೊತ್ತಿಕೊಂಡು ಮೈಯೆಲ್ಲಾ ಸುಟ್ಟಗಾಯಗಳಾಗಿ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಕೆ.ಆರ್ .ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ರಸ್ತೆ ಅಪಘಾತ ಪ್ರಕರಣ :

ಹಲಗೂರು ಪೊಲೀಸ್ ಠಾಣೆ ಮೊ.ನಂ. 70/13 ಕಲಂ. 279, 304(ಎ) ಐಪಿಸಿ ಕೂಡ 187 ಐಎಂವಿ ಆಕ್ಟ್.

ದಿನಾಂಕ: 15-04-2013 ರಂದು ಪಿರ್ಯಾದಿ ಎಂ.ಎಸ್.ನಾಗರಾಜು, ಸಿದ್ದಾರ್ಥನಗರ, ಮಳವಳ್ಳಿಟೌನ್ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ಕೆಎ-01. ಸಿ-981 ಟಾಟಾ ಇಂಡಿಕಾ ಕಾರಿನ ಚಾಲಕ, ಹೆಸರು ಮತ್ತು ವಿಳಾಸ ತಿಳಿಯಬೇಕಾಗಿದೆ ಕಾರನ್ನು ಅತಿವೇಗ & ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಡಿಕ್ಕಿ ಹೊಡೆಸಿದ ಪರಿಣಾಮ ಮಂಡ್ಯ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾರೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಮನುಷ್ಯ ಕಾಣೆಯಾಗಿದ್ದಾನೆ :

ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 71/13 ಕಲಂ. ಹೆಂಗಸು ಕಾಣೆಯಾಗಿದ್ದಾಳೆ.

ದಿನಾಂಕ: 15-04-2013 ರಂದು ಪಿರ್ಯಾದಿ ನಿಂಗರಾಜು ಬಿ.ಎನ್. 36ವರ್ಷ, ಬೆಟ್ಟಹಳ್ಳಿ ಗ್ರಾಮ ರವರು ನೀಡಿದ ದೂರು ಏನೆಂದರೆ ಸಾವಿತ್ರಿ. 26 ವರ್ಷ, ಬೆಟ್ಟಹಳ್ಳಿ ಗ್ರಾಮ ರವರು ದಿನಾಂಕ: 10-04-2013 ರಂದು ಬೆಂಗಳೂರಿಗೆ ಹೋಗುತ್ತೇನೆಂದು ಹೋದವಳು ಇದುವರೆವಿಗೂ ವಾಪಸ್ ಮನೆಗೆ ಬಂದಿರುವುದಿಲ್ಲ ಎಲ್ಲಾ ಕಡೆ ಹುಡುಕಾಡಿದರು ಸಿಗದ ಕಾರಣ ಪತ್ತೆ ಮಾಡಿಕೊಡಿ ಎಂದು ದೂರು ನೀಡಿರುತ್ತಾರೆ ಈ ಬಗ್ಗೆ ಪ್ರಕರಣ ದಾಖಲಿಸಲಾಗಿದೆ.  

No comments:

Post a Comment