Moving text

Mandya District Police

DAILY CRIME REPORT DATED : 16-04-2013


ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 16-04-2013 ರಂದು ಒಟ್ಟು 23 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ರಾಬರಿ ಪ್ರಕರಣ,  1 ಯು.ಡಿ.ಆರ್. ಪ್ರಕರಣ,  1 ಕಳ್ಳತನ ಪ್ರಕರಣ,  1 ರಸ್ತೆ ಅಪಘಾತ ಪ್ರಕರಣ,  1 ಅಕ್ರಮ ಮರಳು ಕಳವು/ಸಾಗಾಣಿಕೆ ಪ್ರಕರಣ ಹಾಗು ಇತರೆ 18 ಇತರೆ ಪ್ರಕರಣಗಳಾದ, ಚುನಾವಣಾ ಮುಂಜಾಗ್ರತಾ ಪ್ರಕರಣಗಳು/ಅಬಕಾರಿ ಕಾಯಿದೆ ಪ್ರಕರಣಗಳು/ಸಿಆರ್.ಪಿ.ಸಿ. ಪ್ರಕರಣಗಳು/ಐ.ಪಿ.ಸಿ. ಪ್ರಕರಣಗಳು ವರದಿಯಾಗಿರುತ್ತವೆ. 


ರಾಬರಿ ಪ್ರಕರಣ :

ಕೆ.ಆರ್.ಸಾಗರ ಪೊಲೀಸ್ ಠಾಣೆ ಮೊ.ನಂ. 91/13 ಕಲಂ. 392  ಐ.ಪಿ.ಸಿ.

ದಿನಾಂಕ: 16-04-13 ರಂದು ಸಂಜೆ 05-30 ಗಂಟೆಯಲ್ಲಿ ಪಿರ್ಯಾದಿ ವಿಜಯಲಕ್ಷ್ಮಿ ಕೋಂ. ಬಾಬುರಾವ್, ಹೊಸ ಗುಡ್ಡದಹಳ್ಳಿ, ಬೆಂಗಳೂರು ರವರು ನೀಡಿದ ದೂರು ಏನೆಂದರೆ ಅವರು ದಿನಾಂಕ: 14-03-2013 ರಂದು ಸುಮಾರು ಸಂಜೆ 07-30 ಗಂಟೆಯಲ್ಲಿ ಬೃಂದಾವನ ಗಾರ್ಡನಲ್ಲಿ ಮ್ಯೂಸಿಕಲ್ ಪೌಂಟೆನ್  ಹತ್ತಿರ ವೀಕ್ಷಣೆ ಮಾಡುತ್ತಿದ್ದಾಗ ಸುಮಾರು 25 ವರ್ಷ ವಯಸ್ಸಿನ ಯಾರೋ ಒಬ್ಬ ಅಪರಿಚಿತ ಹುಡುಗನು ಪಿರ್ಯಾದಿಯವರ ಕತ್ತಿನಲ್ಲಿದ್ದ 52 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ಬಲವಂತವಾಗಿ ಕಿತ್ತುಕೊಂಡು ಜನಗಳ ಮಧ್ಯೆ ಓಡಿ ಹೋಗಿರುತ್ತಾನೆ ಅವನನ್ನು ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 



ಯು.ಡಿ.ಆರ್. ಪ್ರಕರಣ :

ಕೆ.ಆರ್. ಸಾಗರ ಪೊಲೀಸ್ ಠಾಣೆ ಯು.ಡಿ.ಆರ್. ನಂ. 14/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 16-04-13 ರಂದು ಪಿರ್ಯಾದಿ ಆರ್ ಶ್ರೀನಿವಾಸ ಬಿನ್. ರಂಗನಾಯ್ಕ್, ಮೈಸೂರು ರವರು ನೀಡಿದ ದೂರು ಏನೆಂದರೆ ದಿನಾಂಕ: 15-04-13 ರಂದು ಕೆ.ಆರ್.ಸಾಗರ ಅಣೆಕಟ್ಟೆಯ ಹಿನ್ನೀರಿನಲ್ಲಿ ಪಿರ್ಯಾದಿಯವರ ಮಗ ಶ್ರೀಹರ್ಷ ಬಿನ್. ಆರ್. ಶ್ರೀನಿವಾಸ, 20 ವರ್ಷ, ವಿದ್ಯಾರ್ಥಿ, ಮೈಸೂರು ರವರು ನೀರಿನಲ್ಲಿ ಈಜಾಡಲು ಹೋಗಿ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುತ್ತಾನೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  



ಕಳ್ಳತನ ಪ್ರಕರಣ :

ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ.72/13 ಕಲಂ. 457-380 ಐ.ಪಿ.ಸಿ.

ದಿನಾಂಕ: 16-04-13 ರಂದು ಪಿರ್ಯಾದಿ ಜಯಶಂಕರ ಹೆಚ್.ಎನ್, ಮುಖ್ಯ ಶಿಕ್ಷಕರು ಕರಡಹಳ್ಳಿ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 15-04-2013 ರಂದು ಯಾರೋ ಕಳ್ಳರು ಹೆಸರು ವಿಳಾಸ ತಿಳಿಯಬೇಕಾಗಿದೆ ಕರಡಹಳ್ಳಿ ಗ್ರಾಮದ ಪ್ರೌಡಶಾಲೆಯಲ್ಲಿ ಕಂಪ್ಯೂಟರ್ ಗೆ, ಅಳವಡಿಸಿದ್ದ 14 ಬ್ಯಾಟರಿಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಇವುಗಳ ಅಂದಾಜು ಬೆಲೆ 84.000/-ರೂ ಅಗಿರುತ್ತೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ರಸ್ತೆ ಅಪಘಾತ ಪ್ರಕರಣ :

ನಾಗಮಂಗಲ ಗ್ರಾಮಾಂತರ ಠಾಣೆ ಮೊ.ನಂ. 73/13 ಕಲಂ. 304 (ಎ) ಐ.ಪಿ.ಸಿ.

ದಿನಾಂಕ: 16-04-13 ರಂದು ಪಿರ್ಯಾದಿ ಈರಣ್ಣ ಬಿನ್. ಲೇಟ್. ರುದ್ರಪ್ಪ, 50ವರ್ಷ ರವರು ನೀಡಿದ ದೂರು ಏನೆಂದರೆ .ಶಿವಕುಮಾರ್, ಚೆಸ್ಕಾಂನಲ್ಲಿ ಜೆ.ಇ ಕೆಲಸ, ಚೀಣ್ಯಾ ಸೆಕ್ಷನ್, ನಾಗಮಂಗಲ ಉಪವಿಭಾಗ ಹಾಗು ಇತರರು ಇಜ್ಜಲಘಟ್ಟ ಗ್ರಾಮದಲ್ಲಿ ವಿದ್ಯುತ್ ತಗುಲಿ ಪಿರ್ಯಾದಿಯವರ ತಮ್ಮ ಶಂಕರರವರು ಮೃತಪಟ್ಟಿರುತ್ತಾರೆ, ಈ ಕೃತ್ಯವು ಚೀಣ್ಯಾ ಸೆಕ್ಷನ್ನ ಜೆ.ಇ. ಶಿವಕುಮಾರ್ರವರ ಹಾಗು ಲೈನ್ ಮ್ಯಾನ್ ಗಳ ನಿರ್ಲಕ್ಷತೆಯಿಂದ ಉಂಟಾಗಿರುತ್ತದೆ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಅಕ್ರಮ ಮರಳು ಕಳವು/ಸಾಗಾಣಿಕೆ ಪ್ರಕರಣ :

ಮದ್ದೂರು ಪೊಲೀಸ್ ಠಾಣೆ ಮೊ.ನಂ. 172/13 ಕಲಂ. 379-188 ಐ.ಪಿ.ಸಿ.

ದಿನಾಂಕ: 16-04-13 ರಂದು ಪಿರ್ಯಾದಿ ಪುಟ್ಟಮಾದಯ್ಯ ಸಿ.ಕೆ. ಗ್ರಾಮ, ಲೆಕ್ಕಿಗರು, ಮಾಲಗಾರನಹಳ್ಳಿ ವೃತ್ತ ರವರು ನೀಡಿದ ದೂರು ಏನೆಂದರೆ ದಿನಾಂಕ:15-04-2013 ರಂದು ರಾತ್ರಿ 12 ಗಂಟೆ ವೇಳೆಯಲ್ಲಿ ಮಾಲಗಾರನಹಳ್ಳಿ ಶಿಂಷಾ ನದಿ ಪಾತ್ರದಲ್ಲಿ 1) ಲಾರಿ ನಂ ಕೆ.ಎ.-01-ಬಿ-4371 ರ ಚಾಲಕ 2) ಲಾರಿ ನಂ ಕೆ.ಎ.-01-ಬಿ-4371 ರ ಮಾಲೀಕ ಇಬ್ಬರು ಲಾರಿಗೆ ಮರಳನ್ನು ಶಿಂಷಾನದಿಯಿಂದ ಅಕ್ರಮವಾಗಿ ತುಂಬುತ್ತಿರುವಾಗ ಪಿರ್ಯಾದಿರವರ ಜೀಪು ಹತ್ತಿರ ಹೋಗುತ್ತಿರುವುದನ್ನು ಕಂಡು ಅವರು ಲಾರಿಯನ್ನು ಚಾಲನೆ ಮಾಡಿಕೊಂಡು ಕತ್ತಲೆಯಲ್ಲಿ ಕಾಣದೆ ಪರಾರಿಯಾಗಿರುತ್ತಾರೆ ಸದರಿ ಲಾರಿ ಚಾಲಕ ಹಾಗು ಮಾಲೀಕನ ಮೇಲೆ ಸೂಕ್ತ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

No comments:

Post a Comment