Moving text

Mandya District Police

Daily Crime Report 14-05-2013




ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 14-05-2013 ರಂದು ಒಟ್ಟು 31 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 2 ರಸ್ತೆ ಅಪಘಾತ ಪ್ರಕರಣಗಳು,  2 ಯು.ಡಿ.ಆರ್. ಪ್ರಕರಣಗಳು,  4 ಮನುಷ್ಯ ಕಾಣೆಯಾದ ಪ್ರಕರಣಗಳು,  1 ಕಳ್ಳತನ ಪ್ರಕರಣ, 1 ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ,  2 ವಾಹನ ಕಳವು ಪ್ರಕರಣ ಹಾಗು ಅಕ್ರಮ ಮರಳು ಕಳವು/ಸಾಗಾಣಿಕೆ ಪ್ರಕರಣಗಳು,   2 ರಾಬರಿ ಪ್ರಕರಣಗಳು ಹಾಗು 17 ಇತರೆ ಐ.ಪಿ.ಸಿ./ಸಿ.ಆರ್.ಪಿ.ಸಿ. ಪ್ರಕರಣಗಳು ದಾಖಲಾಗಿರುತ್ತವೆ.  


ರಸ್ತೆ ಅಪಘಾತ ಪ್ರಕರಣಗಳು :

1. ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 189/13 ಕಲಂ. 279-304[ಎ] ಐ.ಪಿ.ಸಿ.

ದಿನಾಂಕ: 14-05-2013 ರಂದು ಪಿರ್ಯಾದಿ ಪುಟ್ಟರಾಜು.ವಿ.ಆರ್. ಬಿನ್. ಲೇಟ್. ರಾಮೇಗೌಡ, ವಿಠಾಲಪುರ ಗ್ರಾಮ, ಬೂಕನಕೆರೆ ಹೋಬಳಿ, ಕೆ.ಆರ್.ಪೇಟೆ ತಾಲ್ಲೋಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 13-05-2013  ರಂದು ಮದ್ಯಾಹ್ನ 03-30ಗಂಟೆಯಲ್ಲಿ ,ಪಾಂಡವಪುರ ತಾಲ್ಲೋಕು ಬಸವನಗುಡಿ ಕೊಪ್ಪಲು ಬಳಿ ಆರೋಪಿ .ವಿಜಯ್ ವಿ.ಡಿ. ಬಿನ್ ದೇವೇಗೌಡ, ಕೆಎ-11-ಟಿ-6824 ರ ಟ್ರಾಕ್ಟರ್ ಚಾಲಕ, ವಿಠಾಲಪುರ ಗ್ರಾಮ ರವರು ಮರಳನ್ನು ತುಂಬಿಕೊಂಡು ಸಾಗಿಸುತ್ತಿದ್ದಾಗ ಟ್ರಾಕ್ಟರ್ ಅನ್ನು ನಮ್ಮ ಅಣ್ಣ ದೇವೇಗೌಡ ಎಂಬುವವರ ಮಗನಾದ ವಿಜಯ.ವಿ.ಡಿ. ಎಂಬುವರು ಚಾಲನೆ ಮಾಡುತ್ತಿದ್ದು, ಅವರ ಸಹಾಯಕರಾಗಿ ಕಾತರ್ಿಕ್ ಎಂಬುವವರು ತೆರಳಿರುತ್ತಾರೆ. ಈ ಸಂಧರ್ಬದಲ್ಲಿ ಮಾರ್ಗ ಮಧ್ಯೆದಲ್ಲಿ ಅಂದರೆ ಬಸವನಗುಡಿಕೊಪ್ಪಲು ಗ್ರಾಮದ ಬಳಿ ಟ್ರಾಕ್ಟರ್ನ ಬ್ರೇಕ್ ವೈಪಲ್ಯದಿಂದ ಚಾಲಕನ ನಿಯಂತ್ರಣ ತಪ್ಪಿ ವಿಧ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿರುತ್ತದೆ. ಈ ಸಂದರ್ಭದಲ್ಲಿ ವಿಜಯ್ ಎಂಬುವವರಿಗೆ ತೀವ್ರವಾಗಿ ಗಾಯಗೊಂಡು ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿ ಅವರು ಚಿಕಿತ್ಸೆ ಸ್ಪಂದಿಸದ ಕಾರಣ  ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ್ದಾರೆ. ಆದಕಾರಣ ತಾವು ಕಾನೂನು ರೀತ್ಯಾ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2.ಕೆ.ಆರ್.ಸಾಗರ ಪೊಲೀಸ್ ಠಾಣೆ ಮೊ.ನಂ. 131/13 ಕಲಂ. 279-337-304(ಎ) ಐ.ಪಿ.ಸಿ. ಕೂಡ 187 ಐ.ಎಂ.ವಿ. ಆಕ್ಟ್.

ದಿನಾಂಕ: 14-05-2013 ರಂದು ಪಿರ್ಯಾದಿ ಕುಮಾರ ಬಿನ್ ಲೇಟ್ ಚಿಕ್ಕಪಕೀರಯ್ಯ, ನಾರ್ಥಬ್ಯಾಂಕ್, ಪಾಂಡವಪುರ ತಾಲೋಕು ರವರು ನೀಡಿದ ದೂರು ಏನೆಂದರೆ ಆರೋಪಿ ಸಿಟಿಎಂ: 9223ರ ಲಾರಿ ಚಾಲಕ, ಹೆಸರು ವಿಳಾಸ ತಿಳಿಯಬೇಕಿದೆ ರವರು ಕಟ್ಟೇರಿ ಹೊಸೂರು ಸರ್ಕಲ್ ಬಳಿ, ಮಾದೇಗೌಡ ಮತ್ತು ಹರೀಶ ಎಂಬುವವರು ಕೆಟ್ಟು ಹೋಗಿರುವ ಕೆಎ-02-ವಿ-2458 ರ ಮೋಟಾರು ಸೈಕಲ್ ಅನ್ನು ರಿಪೇರಿಗಾಗಿ ರಸ್ತೆಯ ಎಡಭಾಗದಲ್ಲಿ ತಳ್ಳಿಕೊಂಡು ಹೋಗುತ್ತಿದ್ದಾಗ ಎದುರುಗಡೆಯಿಂದ ಲಾರಿ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಅಡ್ಡಾದಿಡ್ಡಿಯಾಗಿ ಓಡಿಸಿಕೊಂಡು ಡಿಕ್ಕಿಹೊಡೆಸಿದ್ದರಿಂದ ಇಬ್ಬರನ್ನು ಚಿಕಿತ್ಸೆಗಾಗಿ ಮೈಸೂರು ಕೆ.ಆರ್.ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಭಾನವಿ ಆಸ್ಪತ್ರೆಗೆ ಸೇರಿಸಿದ್ದು,, ಚಿಕಿತ್ಸೆ ಫಲಕಾರಿಯಾಗದೆ ಮಾದೇಗೌಡ ಮೃತಪಟ್ಟಿರುತ್ತಾನೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಯು.ಡಿ.ಆರ್. ಪ್ರಕರಣಗಳು :

1. ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 20/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 14-05-2013 ರಂದು ಪಿರ್ಯಾದಿ ಕುಮಾರ ಬಿನ್. ಚಿಕ್ಕಹನುಮೇಗೌಡ. ಎಲ್.ಎಸ್. ಲಕ್ಷ್ಮೀಸಾಗರ ಗ್ರಾಮ, ಪಾಂಡವಪುರ ತಾಲ್ಲೋಕು ರವರು ನೀಡಿದ ದೂರಿನ ವಿವರವೇನೆಂದರೆ ಅವರ ತಂದೆ ಚಿಕ್ಕಹನುಮೇಗೌಡ.ಎಲ್.ಎಸ್. 55 ವರ್ಷ, ಲಕ್ಷ್ಮೀಸಾಗರ ಗ್ರಾಮ, ಪಾಂಡವಪುರ ತಾಲ್ಲೋಕು ರವರಿಗೆ ಸ್ವಲ್ಪ ತಲೆ ಸರಿಇರಲಿಲ್ಲ.  ಅವರನ್ನು ಬೆಂಗಳೂರು ನಿಮ್ಹಾನ್ಸ್ಗೆ ಕರೆದುಕೊಂಡು ಹೋಗಬೇಕಾಗಿದ್ದು, ಹಿಂದಿನ ರಾತ್ರಿ  ನಾವೆಲ್ಲರೂ ರಾತ್ರಿ ಊಟ ಮಾಡಿ ಮಲಗಿಕೊಂಡೆವು. ರಾತ್ರಿ ಎಚ್ಚರವಾದಾಗ ನೋಡಿದಾಗ ಕಾಣಲಿಲ್ಲ. ಮೇಲುಕೋಟೆ ಠಾಣೆಗೆ ದೂರು ನೀಡಿದ್ದೆವು. ಅಲ್ಲಿ ಕಾಣೆಯಾದ ರೀತಿಯ ಕೇಸು ದಾಖಲಾಗಿರುತ್ತದೆ. ಅಲ್ಲಿಂದ ಬಂದು ಕೆರೆತಣ್ಣೂರು ಕರೆಯ ಕಡೆ ಹುಡುಕಲಾಗಿ ಮದ್ಯಾಹ್ನ ಕೆರೆಯ ತೂಬಿನ ಪಕ್ಕ  ನೀರಿನಲ್ಲಿ ಹೋಗಿ ನೋಡಲಾಗಿ ಅದು ನಮ್ಮ ತಂದೆ ಶವವಾಗಿ ಕಂಡುಬಂದಿದ್ದು, ನಮ್ಮ ತಂದೆ ಮಲವಿಸರ್ಜನೆಗೆ ಹೋಗಿ ಕಾಲು ಜಾರಿ ಬಿದ್ದು ಮೃತಪಟ್ಟಿರುವಂತೆ ಕಂಡು ಬಂದಿರುತ್ತದೆ ನಮ್ಮ ತಂದೆಯ ಸಾವಿನ ಬಗ್ಗೆ ಯಾವುದೇ ಅನುಮಾನ ಇರುವುದಿಲ್ಲ ಶವದ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ತಮ್ಮಲ್ಲಿ ಕೋರಿಕೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

2.ಬಸರಾಳು ಪೊಲೀಸ್ ಠಾಣೆ ಯು.ಡಿ.ಆರ್. ನಂ. 07/13 ಕಲಂ. 174 ಸಿ.ಅರ್.ಪಿ.ಸಿ.

ದಿನಾಂಕ: 14-05-2013 ರಂದು ಪಿರ್ಯಾದಿ ಪ್ರಸನ್ನ ಎಂ.ಎಸ್. ಬಿನ್. ಲೇಟ್. ಶ್ರೀನಿವಾಸ ಶೆಟ್ಟಿ,  ಬಣಜಿಗ ಜನಾಂಗ, ರೈಲ್ವೆ ಸ್ಟೇಷನ್ ಹಿಂಭಾಗ, ಮಂಡ್ಯ ಸಿಟಿ ರವರು ನೀಡಿದ ದೂರಿನ ವಿವರವೇನೆಂದರೆ ದೊಡ್ಡಗರುಡನಹಳ್ಳಿ ಗ್ರಾಮದಲ್ಲಿ ಪಿರ್ಯಾಯವರ ತಂಗಿ ರೇಖಾ ಕೋಂ. ಸಿದ್ದರಾಜು, 25 ವರ್ಷ, ದೊಡ್ಡಗರುಡನಹಳ್ಳಿ ಗ್ರಾಮ,  ಮಂಡ್ಯ ತಾಲ್ಲೂಕು ರವರಿಗೆ ಆಗಾಗ್ಗೆ ಎದೆನೋವು  ತಲೆನೋವು ಕಾಣಿಸುತ್ತಿದ್ದು ಈ ಬಗ್ಗೆ ನಾವು ಹಾಗು ಆಕೆಯ ಗಂಡನಾದ ಸಿದ್ದರಾಜು ರವರನ್ನು ವೈದ್ಯರಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದೆವು, ದಿನಾಂಕ: 14-05-2013 ರಂದು 03-30 ಗಂಟೆಯ ಸಮಯದಲ್ಲಿ  ತಲೆ ನೋವು ಮತ್ತು ಎದೆನೋವು  ಇದ್ದರಿಂದ ಜೀವನದಲ್ಲಿ ಜಿಗುಪ್ಸೆ ಬಂದು  ರೇಖಾಳು ನೇಣು  ಹಾಕಿಕೊಂಡು ಮೃತ ಪಟ್ಟಿರುತ್ತಾಳೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

ಮನುಷ್ಯ ಕಾಣೆಯಾದ ಪ್ರಕರಣಗಳು :
1. ಮೇಲುಕೋಟೆ ಪೊಲೀಸ್ ಠಾಣೆ ಮೊ.ನಂ. 75/13 ಕಲಂ. ಮನುಷ್ಯ ಕಾಣೆಯಾಗಿದ್ದಾನೆ.

ದಿನಾಂಕ: 14-05-2013 ರಂದು ಪಿರ್ಯಾದಿ ಎಲ್.ಸಿ ಕುಮಾರ ಬಿನ್. ಎಲ್.ಎಸ್. ಚಿಕ್ಕಹನುಮೇಗೌಡ, 28ವರ್ಷ, ಲಕ್ಷ್ಮೀಸಾಗರ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯವರ ತಂದೆ ಚಿಕ್ಕಹನುಮೇಗೌಡ.ಎಲ್.ಎಸ್,55 ವರ್ಷ,  ಲಕ್ಷ್ಮೀಸಾಗರ ಗ್ರಾಮ ರವರು ಈಗ್ಗೆ ಮೂರು ನಾಲ್ಕು ದಿನಗಳಿಂದ ತಲೆ ಸರಿಯಲ್ಲದಂತೆ ವತರ್ಿಸುತ್ತಿದ್ದು  ಭಾನುವಾರ ರಾತ್ರಿ ನಾನು ಮತ್ತು ನಮ್ಮ ಮನೆಯವರು ನಮ್ಮ ತಂದೆಗೆ ಬೆಳಿಗ್ಗೆ ಬೆಂಗಳೂರು ನಿಮಾನ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗುವುದಾಗಿ ಹೇಳಿ ಊಟ ಮಾಡಿಸಿ ನಾನು, ನನ್ನ ತಮ್ಮ ಎಸ್.ಸಿ.ಶ್ರಿನಿವಾಸ,  ನನ್ನ ತಂದೆ ಎಲ್.ಎಸ್.ಚಿಕ್ಕಹನುಮೇಗೌಡ ಮೂರು ಜನರು ನಮ್ಮ ಮನೆಯ ಒಂದೆ ರೂಮ್ನಲ್ಲಿ ಮಲಗಿಕೊಂಡೆವು ನಾವುಗಳು ಮಧ್ಯರಾತ್ರಿ ಎಚ್ಚರವಾಗಿದ್ದು ನಮಗೆ ನಿದ್ದೆ ಬಂದಿದ್ದು ರಾತ್ರಿ   12-45 ಗಂಟೆ ಸಮಯದಲ್ಲಿ ಎಚ್ಚರವಾಗಿ ನೋಡಲಾಗಿ ನನ್ನ ತಂದೆ ಮಲಗಿದ್ದ ಜಾಗದಲ್ಲಿ ಇರಲಿಲ್ಲ. ನಂತರ ನಾನು ಮತ್ತು ನನ್ನ ತಮ್ಮ ಹಾಗೂ ನಮ್ಮ ಕಡೆಯವರೆಲ್ಲರೂ ಎಲ್ಲ ಕಡೆ ಹುಡುಕಲಾಗಿ ಸಿಗಲಿಲ್ಲ ಎಂದು ಇತ್ಯಾದಿಯಾಗಿ ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

2. ಕೆ.ಆರ್.ಸಾಗರ ಪೊಲೀಸ್ ಠಾಣೆ ಮೊ.ನಂ. 130/13 ಕಲಂ. ಹೆಂಗಸು ಮತ್ತು ಮಗು ಕಾಣೆಯಾಗಿದ್ದಾರೆ.

ದಿನಾಂಕ: 14-05-2013 ರಂದು ಪಿರ್ಯಾದಿ ಶ್ರೀನಿವಾಸ ಬಿನ್. ವೆಂಕಟೇಶ, ಸೀಬಯ್ಯನ ಮಂಟಿ, ಬೆಳಗೊಳ, ಶ್ರೀರಂಗಪಟ್ಟಣ ರವರು ನೀಡಿದ ದೂರು ಏನೆಂದರೆ ದಿನಾಂಕ:12-05-2013 ರಂದು ಬೆಳಗೊಳ ಗ್ರಾಮದ, ಲಲಿತಾಂಬನ ಕ್ಲಿನಿಕ್ ನಲ್ಲಿ ನಮ್ಮ ತಂದೆ ನನ್ನ ಮಗು ಅಜಯ್ಕುಮಾರ್ ಬಿನ್ ಶ್ರೀನಿವಾಸ್, 1 1/2 ವರ್ಷ ನನ್ನು, ಬೆಳಗೊಳ ಗ್ರಾಮ, ಶ್ರೀರಂಗಪಟ್ಟಣ ತಾ. ನ ಡಾಕ್ಟರ್ಗೆ ತೋರಿಸಿ, ಡಾಕ್ಟರ್ರವರ ಸಲಹೆಯ ಮೇರೆಗೆ ಟಾನಿಕನ್ನು ತರಲು ನನ್ನ ಹೆಂಡತಿ ದಶರ್ಿನಿ ಕೋಂ. ಶ್ರೀನಿವಾಸ, 16 ವರ್ಷ ರವರನ್ನು ಹಾಗು ಮಗುವನ್ನು ಕ್ಲಿನಿಕ್ ಬಳಿ ಇರುವಂತೆ ಹೇಳಿ ಕ್ಲಿನಿಕ್ಗೆ ಸ್ವಲ್ಪ ದೂರದಲ್ಲಿ ಇರುವ ಮೆಡಿಕಲ್ ಸ್ಟೋರ್ನಲ್ಲಿ ಟಾನಿಕನ್ನು ತೆಗೆದುಕೊಂಡು ವಾಪಸ್ ಕ್ಲಿನಿಕ್ ಬಳಿ ಬಂದಾಗ ನನ್ನ ಹೆಂಡತಿ ಮತ್ತು ಮಗು ಇರಲಿಲ್ಲ ಇಬ್ಬರು ಕಾಣೆಯಾಗಿರುತ್ತಾರೆ ಎಂದು ನಮ್ಮ ತಂದೆಯವರು ಮನೆಗೆ ಬಂದು ನನಗೆ ತಿಳಿಸಿದರು ಆಗ ನಾನು ಮತ್ತು ನಮ್ಮ ತಂದೆ ಇಬ್ಬರೂ ನೆಂಟರಿಷ್ಟರ ಮನೆಗೆ ಪೋನ್ ಮಾಡಿ ಮತ್ತು ನಮ್ಮ ಅತ್ತೆ ಮಾವರವರಿಗೂ ಸಹ ಪೋನ್ ಮಾಡಿ ಹುಡುಕಲಾಗಿ ನನ್ನ ಹೆಂಡತಿ ಮತ್ತು ಮಗು ಬಂದಿರುವುದಿಲ್ಲ ಎಂದು ತಿಳಿಸಿರುತ್ತಾರೆ ನನ್ನ ಹೆಂಡತಿ ಮತ್ತು ಮಗು ಕಾಣೆಯಾಗಿದ್ದು ಈ ದಿವಸ ತಡವಾಗಿ ಬಂದು ದೂರು ನೀಡಿರುತ್ತೇನೆ ಅವರನ್ನು ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


3. ಕೆ.ಆರ್.ಸಾಗರ ಪೊಲೀಸ್ ಠಾಣೆ ಮೊ.ನಂ. 129/13 ಕಲಂ. ಗಂಡಸು ಕಾಣೆಯಾಗಿದ್ದಾನೆ.

       ದಿನಾಂಕ: 14-05-2013 ರಂದು ಪಿರ್ಯಾದಿ ಖಾದರ್ ಷರೀಪ್, ಬಿನ್. ಮೆಹಬೂಬ್ ಷರೀಪ್, ಕೆ.ಆರ್. ಸಾಗರ, ಶ್ರೀರಂಗಪಟ್ಟಣ ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ಜಾವೇದ್ ಷರೀಪ್, ಬಿನ್ ಮೆಹಬೂಬ್ ಷರೀಪ್ 32 ವರ್ಷ,ಮುಸ್ಲಿಂ ಜನಾಂಗ, ಕೆ.ಆರ್. ಸಾಗರ ರವರು, ಕುರಿ ಮೇಕೆಯನ್ನು ಸಾಲವಾಗಿ ತಂದಿದ್ದ ಹಣವನ್ನು ಸಂಬಂದಪಟ್ಟವರಿಗೆ ಕೊಡಲು ಹೋಗುತ್ತೇನೆ ಎಂದು ಹೇಳಿ ಹೋದವರು ವಾಪಸ್ಸು ಬಂದಿರುವುದಿಲ್ಲ ಹಾಗೂ ಈ ದಿವಸ ಎಲ್ಲಾ ಕಡೆ ಹುಡುಕಲಾಗಿ ನಮ್ಮ ನೆಂಟರ ಮನೆ, ಸ್ನೇಹಿತರ ಮನೆ ಹಾಗು ಮಾಂಸದ ಅಂಗಡಿಯವರಿಗೂ ದೂರವಾಣಿ ಮಾಡಿ ಕೇಳಲಾಗಿ ನನ್ನ ಅಣ್ಣ ಬಂದಿಲ್ಲ ಎಂದು ತಿಳಿಸಿದರು, ಸದರಿ ನನ್ನ ಅಣ್ಣ ಜಾವೇದ್ ಷರೀಪ್ ರವರು ಕಾಣೆಯಾಗಿರುತ್ತಾರೆ, ಅವರನ್ನು ಪತ್ತೆ ಮಾಡಿಕೊಡಬೇಕೆಂದು ನೀಡಿದ ದೂರಿನ  ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

4.ಮದ್ದೂರು ಪೊಲೀಸ್ ಠಾಣೆ ಮೊ.ನಂ. 222/13 ಕಲಂ. ಹೆಂಗಸು ಕಾಣೆಯಾಗಿದ್ದಾಳೆ.

ದಿನಾಂಕ: 14-05-2013 ರಂದು ಪಿರ್ಯಾದಿ ರವಿ ಸಿ. ಬಿನ್. ಲೇಟ್. ಚೌಡಯ್ಯ, ಕೆ. ಹೊನ್ನಲಗೆರೆ ಗ್ರಾಮ, ಮದ್ದೂರು ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 11-05-2013 ರಂದು ಪಿರ್ಯಾದಿಯವರ ತಂಗಿ ತಂಗಿ ಮಲಕಮ್ಮ ರವರ ಮಗಳು ಶೃತಿಯನ್ನು ಚನ್ನಪಟ್ಟಣ ತಾ. ಮಳೂರು ಪಟ್ಟಣದ ಕೆ. ಬಸವರಾಜು ರವರ ಮಗ ಪ್ರತಾಪ್ ಎಂಬುವರಿಗೆ ಮದುವೆ ಮಾಡಿದ್ದು, ಶೃತಿ ಈಗ್ಗೆ 5 ದಿನಗಳ ಹಿಂದೆ ತನಗೆ ಹೊಟ್ಟೆನೋವು ಇದೆ ಎಂದು ತನ್ನ ಗಂಡನ ಮನೆಯಿಂದ ನಮ್ಮೂರಿಗೆ ಬಂದಿದ್ದು, ದಿನಾಂಕಃ 11-05-2013 ರಂದು ಶೃತಿಯು ಬೆಳಿಗ್ಗೆ 09-00 ಗಂಟೆಯಲ್ಲಿ ನಮ್ಮ ಮನೆಯಿಂದ ಹೊರಗಡೆ ಹೋದವಳು ವಾಪಸ್ ಮನೆಗೆ ಬಾರದೆ ಕಾಣೆಯಾಗಿದ್ದು, ನಾವು ಈವರೆಗೂ ಆಕೆಯ ಗಂಡನ ಮನೆ ಮತ್ತು ನೆಂಟರ ಹಾಗೂ ಸ್ನೇಹಿತರ ಊರು ಮತ್ತು ಮನೆಗಳಲ್ಲಿ ಹುಡುಕಿದರೂ ಸಿಕ್ಕಿರುವುದಿಲ್ಲವಾದ್ದರಿಂದ ಶೃತಿಯನ್ನು ಪತ್ತೆ ಮಾಡಿಕೊಡಿ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಕೇಸು ದಾಖಲಿಸಲಾಗಿದೆ.

ಕಳ್ಳತನ ಪ್ರಕರಣ : 

ಬಸರಾಳು ಪೊಲೀಸ್ ಠಾಣೆ ಮೊ.ನಂ. 76/13 ಕಲಂ. 457-380 ಐಪಿಸಿ ಕೂಡ ಸಬ್ ಸೆಕ್ಷನ್. (1) (19) ಆಮರ್್ ಆಕ್ಟ್ 1958.

     ದಿನಾಂಕ:14-05-2013 ರಂದು ಪಿರ್ಯಾದಿ ನಾಗರಾಜು ವಿ.ಅರ್. ಸಹಾಯಕ ಸಂರಕ್ಷಣಾಧಿಕಾರಿ, ಬಾರತೀಯ ಪುರಾತತ್ವ  ಇಲಾಖೆ, ಶ್ರೀರಂಗಪಟ್ಟಣ ಉಪವಲಯ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 13-05-2013 ರಂದು ರಾತ್ರಿ ವೇಳೆಯಲ್ಲಿ ಬಸರಾಳು ಗ್ರಾಮದ ಪುರಾತತ್ವ ಇಲಾಖೆಗೆ ಸೇರಿದ ಶ್ರೀ ಮಲ್ಲಿಕಾಜರ್ುನ ಸ್ವಾಮಿ ದೇವಸ್ಥಾನದ ಮಹಾದ್ವಾರದ ಎಡಬಾಗದಲ್ಲಿ ಬಿನ್ನವಾಗಿಟ್ಟಿದ್ದ ಶಿವಲಿಂಗವನ್ನು ಯಾರೋ ಕಳ್ಳರು ದೇವಸ್ತಾನದ ಗೇಟನ್ನು ಹಾರಿ ಒಳನುಗ್ಗಿ ರಾತ್ರಿ ವೇಳೆಯಲ್ಲಿ ಕಳವು ಮಾಡಿಕೊಂಡು ಹೋಗಿರುತ್ತಾರೆ ಸ್ಮಾರಕದ ವಸ್ತು ಆದ್ದರಿಂದ ಇದರ ಬೆಲೆ ನಿಗದಿಪಡಿಸಲು ಸಾದ್ಯವಿಲ್ಲ ಆದ್ದರಿಂದ ಕಳುವಾಗಿರುವ ಶಿವಲಿಂಗವನ್ನು ಪತ್ತೆ ಹಚ್ಚಿ ಕಳವು ಮಾಡಿರುವವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ :

ಬಸರಾಳು ಪೊಲೀಸ್ ಠಾಣೆ ಮೊ.ನಂ. 77/13 ಕಲಂ. 498(ಎ)-307 ಐ.ಪಿ.ಸಿ. ಮತ್ತು 3 & 4 ಡಿ.ಪಿ. ಆಕ್ಟ್.

ದಿನಾಂಕ:14-05-2013 ರಂದು ಪಿರ್ಯಾದಿ ದೀಪಿಕ ಕೋಂ. ಸೋಮಚಾರಿ, 24 ವರ್ಷ, ತಿರುಮಲಪುರ ಗ್ರಾಮ, ಬಸರಾಳು ಹೋಬಳಿ, ಮಂಡ್ಯ ತಾಲ್ಲೂಕು ರವರು ನೀಡಿದ ದೂರಿನ ವಿವರವೇನೆಂದರೆ ಅವರ ಗಂಡ ಸೋಮಚಾರಿ ಬಿನ್. ರಂಗಾಚಾರಿ ಹಾಗು ಅತ್ತೆ ಗೌರಮ್ಮ ಕೋಂ. ರಂಗಚಾರಿ, ತಿರುಮಲಪುರ ಗ್ರಾಮ, ಹೋಬಳಿ, ಮಂಡ್ಯ ತಾಲ್ಲೂಕು ರವರುಗಳು ಅವರಿಗೆ       ಮಾನಸಿಕವಾಗಿ ಹಾಗೂ ದ್ಯೆಹಿಕವಾಗಿ ಕಿರುಕುಳ ನೀಡಿ ವರದಕ್ಷಿಣೆ ಹಣ ತರುವಂತೆ ಹಿಂಸೆ ನೀಡಿ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಲು ಪ್ರಯತ್ನಪಟ್ಟಿದ್ದು (ಕೊಲೆಮಾಡುವ ಉದ್ದೇಶದಿಂದ)ಹಾಗೂ ನನ್ನ ಇಬ್ಬರು ಮಕ್ಕಳನ್ನು ನನಗೆ ನೀಡದೆ ಮನೆಯಿಂದ ಹೊರಗೆ ತಳ್ಳಿರುತ್ತಾರೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ವಾಹನ ಕಳವು ಪ್ರಕರಣ ಹಾಗು ಅಕ್ರಮ ಮರಳು ಕಳವು/ಸಾಗಾಣಿಕೆ ಪ್ರಕರಣಗಳು :

1. ಮದ್ದೂರು ಪೊಲೀಸ್ ಠಾಣೆ ಮೊ.ನಂ. 221/13 ಕಲಂ. 379 ಐ.ಪಿ.ಸಿ.
      ದಿನಾಂಕ: 14-05-2013 ರಂದು ಪಿರ್ಯಾದಿ ಶಿವಲಿಂಗಯ್ಯ ಬಿನ್. ಲೇಟ್. ಚನ್ನಯ್ಯ, ಉಪ್ಪಿನಕೆರೆ ಗ್ರಾಮ, ಮದ್ದೂರು ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ:    11-05-2013 ರಂದು ಮದ್ದೂರು ಟೌನ್ನ. ಶ್ರೀ. ಅನ್ನಪೂಣರ್ೇಶ್ವರಿ ಛತ್ರದ ಬಳಿ ಮೋಟಾರ್ ಸೈಕಲ್ನಲ್ಲಿ ಬಂದಿದ್ದು, ಬೆಳಿಗ್ಗೆ 07-30 ರ ಸಮಯದಲ್ಲಿ ಮದ್ದೂರಿನ ಅನ್ನಪೂಣರ್ೇಶ್ವರಿ ಕಲ್ಯಾಣ ಮಂಟಪದ ಮುಂಭಾಗ ನಿಲ್ಲಿಸಿ, ಲಾಕ್ ಮಾಡಿಕೊಂಡು ನಾನು ಗ್ಯಾಸ್ ತೆಗೆದುಕೊಳ್ಳಲು ಹೋಗಿ ಗ್ಯಾಸ್ ತೆಗೆದುಕೊಂಡು (ಸಿಲಿಂಡರ್) ವಾಪಸ್ಸು ನಾನು ಮೊಟಾರ್ ಸೈಕಲ್ ನಿಲ್ಲಿಸಿದ ಸ್ಥಳಕ್ಕೆ ಹೋಗಿ, ನೋಡಿದಾಗ ಮೋಟಾರ್ ಸೈಕಲ್ ಕಾಣಲಿಲ್ಲ. ನನ್ನ ಮೋಟಾರ್ ಸೈಕಲ್ನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಇದರ ಬೆಲೆ ಸುಮಾರು 35000/- ರೂ ಆಗಿರುತ್ತೆ. ಪತ್ತೆಮಾಡಿಕೊಡಿ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

2. ಕೊಪ್ಪ ಪೊಲೀಸ್ ಠಾಣೆ ಮೊ.ನಂ. 106/13 ಕಲಂ. 379, 511, 353 ರೆವಿ 188 ಐ.ಪಿ.ಸಿ.

     ದಿನಾಂಕ: 14-05-2013 ರಂದು ಪಿರ್ಯಾದಿ ದೇವರಸೇಗೌಡ, ರೆವಿನ್ಯೂ ಅಧಿಕಾರಿ, ತಗ್ಗಹಳ್ಳಿ ವೃತ್ತ, ಕೊಪ್ಪ ಹೋ, ಮದ್ದೂರು ತಾಲ್ಲೂಕು ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿಗಳಾದ 1) ಚಿಕ್ಕಮಲ್ಲಯ್ಯ ಬಿನ್ ಕಳಸೇಗೌಡ, ಅರಗಿನಮೇಳೆ ಗ್ರಾಮ, 2] ಕೆ.ಎ-41 ಎ-6576ರ ಲಾರಿ ಚಾಲಕ ಮತ್ತು ಮಾಲೀಕರು, 3] ಕೆ.ಎ.-41 ಎ-7191 ಲಾರಿ ಚಾಲಕ ಮತ್ತು ಮಾಲೀಕರು ಇವರುಗಳು ಶಿಂಷಾ ನದಿಯಿಂದ ಅರಗಿನಮೇಳೆಗೆ ಹಾದು ಹೋಗುವ ನದಿಯಲ್ಲಿ ಚಿಕ್ಕಮಲ್ಲಯ್ಯ ಬಿನ್. ಕಳಸೇಗೌಡ ಆದ ಇವನು ಇವರ ಜಮೀನಿನಲ್ಲಿ ಜಾಡೋಂದನ್ನು ಮಾಡಿಕೊಂಡು ಅಲ್ಲಿ ನಡೆಯುವಂತಹ ಅಕ್ರಮ ಮರಳು ದಂಧೆಯಲ್ಲಿ ಪಾಲ್ಗೊಂಡಿದ್ದಾನೆ. ಈ ಎರಡು ಲಾರಿಗಳ ಮಾಲೀಕರು ಹಾಗು ಲಾರಿಗಳ ಮೇಲೆ ಕಾನೂನು ಕ್ರಮ ಜರುಗಿಸಲು ಹಾಗೂ ಲಾರಿಗಳನ್ನು ನಿಮ್ಮ ವಶಕ್ಕೆ ತೆಗೆದುಕೊಂಡು ಲಾರಿ ಚಾಲಕರು ಹಾಗೂ ಮಾಲೀಕರ ಮೇಲೆ ಮರಳು ದಂದೆಗೆ ಕಾರಣ ಕರ್ತನಾದ ಚಿಕ್ಕಮಲ್ಲಯ್ಯ ಬಿನ್ ಕಳಸೇಗೌಡನ ಮೇಲೆ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

ರಾಬರಿ ಪ್ರಕರಣಗಳು :
1. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 320/13 ಕಲಂ. 394 ಐ.ಪಿ.ಸಿ.

ದಿನಾಂಕ: 14-05-2013 ರಂದು ಪಿರ್ಯಾದಿ ಡಿ.ಎಸ್.ಮಂಜುನಾಥ ಬಿನ್. ಶಾಂತವೀರಪ್ಪ, 27 ವರ್ಷ, ಕುಡ್ಲೂರು ಗ್ರಾಮ, ಸೋಮವಾರ ಪೇಟೆ ತಾಲ್ಲೋಕು, ಕುಡಿಗೆ ಪೋಸ್ಟ್, ಕೊಡುಗು ಜಿಲ್ಲೆ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ಕೆ.ಎ.46-ಎಂ-1000 ಟಾಟಾ ಸುಮೋ ಕಾರಿನಲ್ಲಿ ಬಂದ ಅಪರಿಚಿತ 4 ಜನ ವ್ಯೆಕ್ತಿಗಳು, ಎಲ್ಲರೂ ಕನ್ನಡ ಭಾಷಯಲ್ಲಿ ಮಾತನಾಡುತ್ತಾರೆ. ವಯಸ್ಸು ಸುಮಾರು 25 ವರ್ಷದಿಂದ 30 ವರ್ಷದವರಾಗಿರುತ್ತಾರೆ ಇವರುಗಳು, ನಾನು ಕೆ.ಆರ್.ಎಸ್ ರಸ್ತೆಯಲ್ಲಿ ಬರುತ್ತಿರುವಾಗ ನನ್ನ ಹಿಂದಿನಿಂದ ಒಂದು ಟಾಟಾ ಸುಮೋ ಕಾರು ನನ್ನ ಹಿಂದೆ ಬರುತ್ತಿದ್ದು ನಂತರ ಪಿ.ಹೊಸಹಳ್ಳಿ ಗೇಟ್ ಬಳಿ ನನ್ನ ಲಾರಿಯನ್ನು ಓವರ್ ಟೇಕ್ ಮಾಡಿ ಅಡ್ಡಗಟ್ಟಿ ನಿಲ್ಲಿಸಿದರು. ಟಾಟಾಸುಮೋದಿಂದ 3 ಜನರು ಕೆಳಗಿಳಿದು ನನ್ನನ್ನು ಲಾರಿಯಿಂದ ಕೆಳಗೆ ಎಳೆದುಕೊಂಡು, ಪೈಕಿ ಕೆಂಪು ಟೀ ಶಟರ್್ ಹಾಕಿರುವವನು , ಕೈಯಿಂದ ಹೊಡೆದು ತನ್ನ ಕೈಯಲ್ಲಿದ್ದ ಚಾಕುವನ್ನು ನನ್ನ ಕತ್ತಿನ ಬಳಿ ಹಿಡಿದುಕೊಂಡು ದುಡ್ಡುಕೊಡು ಮಗನೇ ಎಂದು ಹೆದುರಿಸಿದ. ಇನ್ನಿಬ್ಬರು ಲಾರಿಯ ಕ್ಯಾಬಿನ್ಗೆ ಹತ್ತಿ ಹುಡುಕಿ ಡ್ಯಾಸ್ ಬೋಡರ್್ ಬಳಿ ಇಟ್ಟಿದ್ದ ಪಸರ್್ನ್ನು ತೆಗೆದುಕೊಂಡು ಅದರಲ್ಲಿ ಇದ್ದ 9000 ರೂಗಳನ್ನು ಸುಲಿಗೆ ಮಾಡಿದರು ಹಾಗೂ     ಕ್ಲೀನರ್ ಮಲ್ಲಿಕಾಜರ್ುನ ಬಳಿ ಇದ್ದ 65 ರೂಪಾಯಿಗಳನ್ನು ಸಹ ಕಿತ್ತುಕೊಂಡರು ಹಾಗೂ ನನ್ನ ಕತ್ತಿನ ಬಳಿ ಚಾಕುವನ್ನು ಇಟ್ಟು ಹೆದರಿಸಿ 10 ಲೀಟರ್ ಡೀಸೆಲ್ ಅನ್ನು ನನ್ನ ಲಾರಿಯಿಂದ ಕ್ಯಾನ್ಗೆ ಹಾಕಿಸಿಕೊಂಡು ಕಾರಿನಲ್ಲಿ ಒಬ್ಬ ಕುಳಿತಿದ್ದ ನಂತರ ಅವರು ಯಾರಿಗೂ ಹೇಳಬೇಡ ಹೇಳಿದರೆ ಇದೇ ರೋಡ್ನಲ್ಲಿ ಬರುವಾಗ ಚಾಕುವಿನಿಂದ ಚುಚ್ಚಿ ಕೊಲೆ ಮಾಡುತ್ತೀವಿ ಎಂದು ಹೆದರಿಸಿ ಹೊರಟು ಹೋದರು ಎಂದು ನೀಡಿ ಪಿರ್ಯಾದಿನ ಮೇಲೆ ಕೇಸು ನೊಂದಾಯಿಸಿರುತ್ತೆ. 

2. ಹಲಗೂರು ಪೊಲೀಸ್ ಠಾಣೆ ಮೊ.ನಂ. 108/13 ಕಲಂ. 457-380-392 ಐ.ಪಿ.ಸಿ.
ದಿನಾಂಕ: 14-05-2013 ರಂದು ಪಿರ್ಯಾದಿ ಎಂ.ಪಿ.ಚಂದ್ರಶೇಖರ್ ಬಿನ್. ಲೇಟ್. ಎಸ್.ಪುಟ್ಟಸ್ವಾಮಿ, ಮಾರಗೌಡನಹಳ್ಳಿ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಯಾರೋ ಇಬ್ಬರು ಅಪರಿಚಿತ ವ್ಯಕ್ತಿಗಳು ಪಿರ್ಯಾದಿಯವರ ಮನೆಯಲ್ಲಿ ಕಳುವು ಮಾಡಲು ಹಿಂಬಾಗಿಲ ಚಿಲಕ ಮೀಟಿ ಒಳಗೆ ಬಂದು ಪ್ಯಾಂಟ್ ಜೇಬಿನಲ್ಲಿದ್ದ 18 ಸಾವಿರ ಹಣ, ದೇವರ ಮನೆಯಲ್ಲಿದ್ದ 2800/- ರೂ ಹಣ ತೆಗೆದುಕೊಂಡು ನನ್ನ ಪತ್ನಿಯ ಕತ್ತಿನಲ್ಲಿದ್ದ 30ಗ್ರಾಂ ಮಾಂಗಲ್ಯ ಸರ ಹಾಗೂ ಒಂದು ನೋಕಿಯಾ ಮೊಬೈಲ್ ಹ್ಯಾಂಡ್ಸೆಟ್ ಒಟ್ಟು 90 ಸಾವಿರ ರೂ ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುವ ವ್ಯಕ್ತಿಗಳನ್ನು ಪತ್ತೆಮಾಡಿ ಕ್ರಮ ಜರುಗಿಸಿ ಎಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  

No comments:

Post a Comment