Moving text

Mandya District Police

DAILY CRIME REPORT DATED : 13-05-2013


ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 13-05-2013 ರಂದು ಒಟ್ಟು 16 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಯು.ಡಿ.ಆರ್. ಪ್ರಕರಣ,  2 ರಸ್ತೆ ಅಪಘಾತ ಪ್ರಕರಣಗಳು,  1 ಅಪಹರಣ ಪ್ರಕರಣ,  1 ವಂಚನೆ ಪ್ರಕರಣ ಹಾಗು 11 ಇತರೆ ಐ.ಪಿ.ಸಿ./ಸಿ.ಆರ್.ಪಿ.ಸಿ. ಪ್ರಕರಣಗಳು  ವರದಿಯಾಗಿರುತ್ತವೆ. 

 
ಯು.ಡಿ.ಆರ್. ಪ್ರಕರಣ :

ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 10/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 13-05-2013 ರಂದು ಪಿರ್ಯಾದಿ ಸುರೇಶ ಬಿನ್. ವಡಿವೇಲು, 8ನೇ ಕ್ರಾಸ್, ವಿ.ವಿ.ನಗರ, ಮಂಡ್ಯ ಸಿಟಿ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ಉಷಾ   ಬಿನ್ ಸಂಪತ್ತು, 14 ವರ್ಷ, 8ನೇ ಕ್ರಾಸ್, ವಿ.ವಿ.ನಗರ, ಮಂಡ್ಯ ಸಿಟಿ ರವರು ಕಳೆದ 2 ದಿವಸಗಳಿಂದ ಅತಿಯಾದ ವಾಂತಿಯಿಂದಾಗಿ ಮೃತಪಟ್ಟಿರುತ್ತಾಳೆ. ಈ ಬಗ್ಗೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ರಸ್ತೆ ಅಪಘಾತ ಪ್ರಕರಣಗಳು :

1. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 241/13 ಕಲಂ. 279, 304[ಎ] ಐ.ಪಿ.ಸಿ.

ದಿನಾಂಕ: 13-05-2013 ರಂದು ಪಿರ್ಯಾದಿ ಅಕರ್ೇಶ್ ಡಿ.ಎನ್ ಬಿನ್. ನಾಗರಾಜು, ವಿನಾಯಕ ಬಡಾವಣೆ, ಕಾರಸವಾಡಿ ರಸ್ತೆ, ಮಂಡ್ಯ ಸಿಟಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ನಂ. ಕೆಎ-11 ಕ್ಯೂ-780 ರ ಟಿ.ವಿ.ಎಸ್ ಮೊಪೆಡ್ ಸವಾರ ನಾಗರಾಜು, ಡಿ ವಿನಾಯಕ ಲೇಔಟ್, ಕಾರಸವಾಡಿ ರಸ್ತೆ, ಮಂಡ್ಯ ರವರು ದಿನಾಂಕ: 11-05-2013 ರಂದು
ನೊದೆಕೊಪ್ಪಲು ಬಳಿ ಮೊಪೆಡ್ ಅನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದ ಪರಿಣಾಮ ಸ್ಕಿಡ್ ಆಗಿ ತಾವಾಗಿಯೇ ಬಿದ್ದು ತಲೆಗೆ ಪೆಟ್ಟಾಗಿದ್ದು, ಅದೇ ದಿನ ಮಂಡ್ಯ ಜಿಲ್ಲಾ ಆಸ್ಪತ್ರೆಗೆ ದಾಖಲ್ಮಾಡಿದ್ದು, ವೈದ್ಯರ ಸಲಹೆಯಂತೆ ಅದೇ ದಿನ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ತೋರಿಸಿ ಅಲ್ಲಿಂದ ವೈದ್ಯರ ಸಲಹೆಯಂತೆ ವಾಪಸ್ಸು ಕರೆದುಕೊಂಡು ಬಂದು ದಿನಾಂಕ:12-5-2013 ರಂದು ಮಂಡ್ಯ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದಾಗ ಪ್ರಜ್ಞೆ ಇರಲಿಲ್ಲ. ದಿನಾಂಕ;13-5-2013 ರ ಬೆಳಗಿನ ಜಾವ 03-00 ಗಂಟೆಯಲ್ಲಿ ಮೃತಪಟ್ಟಿರುತ್ತಾರೆ. ಈ ಬಗ್ಗೆ ಕಾನೂನು ಕ್ರಮ ಜರುಗಿಸಿ ಎಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

2. ಬಿಂಡಿಗನವಿಲೆ ಪೊಲೀಸ್ ಠಾಣೆ ಮೊ.ನಂ. 77/13 ಕಲಂ. 279-304(ಎ) ಐ.ಪಿ.ಸಿ.

ದಿನಾಂಕ: 13-05-2013 ರಂದು ಪಿರ್ಯಾದಿ ವಿಜಯಕುಮಾರ್ ಬಿನ್. ಲೇಟ್. ಮಾಯಣ್ಣಗೌಡ, ಕಿರೀಸಾವೆ ಗ್ರಾಮ, ಹಿರೀಸಾವೆ ಹೋ, ನಾಗಮಂಗಲ ತಾಲ್ಲೂಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅದೇ ದಿನ ಸಂಜೆ 0400 ಗಂಟೆ ಸಮಯದಲ್ಲಿ ಕದಬಹಳ್ಳಿಯ ಆಸ್ಪತ್ರೆ ಮುಂಭಾಗ, ಎನ್.ಹೆಚ್.-75 ರಸ್ತೆಯಲ್ಲಿ ನಿಂತಿದ್ದರು ಆಗ ಎನ್.ಹೆಚ್. 75 ರಸ್ತೆಯ ಬೆಂಗಳೂರು-ಮಂಗಳೂರು ರಸ್ತೆಯಲ್ಲಿ ಅಂದರೆ ಕದಬಹಳ್ಳಿಯ ಆಸ್ಪತ್ರೆಯ ಮುಂಭಾಗ ರಸ್ತೆಯ ಎಡಗಡೆ ಒಬ್ಬ ವ್ಯಕ್ತಿ ನಿಂತಿದ್ದನು. ಬೆಂಗಳೂರು ಕಡೆಯಿಂದ ಹಾಸನ ಕಡೆಗಾದಂತೆ ಒಂದು ಕಾರು ಬಿಳಿ ಬಣ್ಣದಾಗಿದ್ದು ಅತಿವೇಗ ಮತ್ತು ಅಡ್ಡಾದಿಡ್ಡಿಯಾಗಿ ಕಾರಿನ ಚಾಲಕ ಕಾರನ್ನ ಚಾಲನೆ ಮಾಡಿಕೊಂಡು ಬಂದು ನಿಂತಿದ್ದ ಅಪರಿಚಿತ ವ್ಯಕ್ತಿಗೆ ಡಿಕ್ಕಿ ಮಾಡಿದನು. ನಂತರ ಹಿಂಭಾಗದಿಂದ ಬಂದು ಕೆ.ಎಸ್.ಆರ್.ಟಿ.ಸಿ. ವೊಲ್ವ ಬಸ್ಸು ಸಹ ಕಾಲಿನ ಮೇಲೆ ಹರಿದುಕೊಂಡು ಹೊಯಿತು. ಕಾರು ಡಿಕ್ಕಿ ಮಾಡಿದ ರಭಸಕ್ಕೆ ಕೆಳಗೆ ಬಿದ್ದಾಗ ನಾನು ಹೋಗಿ ನೋಡಲಾಗಿ ತಲೆಗೆ ಮತ್ತು ಕಾಲುಗಳಿಗೆ ಪೆಟ್ಟಾಗಿದ್ದು, ಅಪರಿಚಿತ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದು ಆ ವ್ಯಕ್ತಿಗೆ 25ವರ್ಷ, ವಯಸ್ಸಾಗಿತ್ತು. ಅಪಘಾತ ಮಾಡಿದ ಕಾರು ಮತ್ತು ಕೆ.ಎಸ್.ಆರ್.ಟಿ.ಸಿ. ವೊಲ್ವ ಬಸ್ ಚಾಲಕರು ವಾಹನವನ್ನು ಸ್ಥಳದಲ್ಲಿ ನಿಲ್ಲಿಸದೇ ವೇಗದಿಂದ ಚಾಲನೆ ಮಾಡಿಕೊಂಡು ಹೊರಟು ಹೋದರು. ನನಗೆ ಕಾರು, ಬಸ್ಸಿನ ನಂಬರು ನೋಡಲಾಗಲಿಲ್ಲ. ಆದ್ದರಿಂದ ಮೇಲ್ಕಂಡ ವಾಹನಗಳ ಚಾಲಕರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


ಅಪಹರಣ ಪ್ರಕರಣ :

ಬೆಳಕವಾಡಿ ಪೊಲೀಸ್ ಠಾಣೆ ಮೊ.ನಂ. 58/13 ಕಲಂ. 363 ಐ.ಪಿ.ಸಿ.

ದಿನಾಂಕ: 13-05-2013 ರಂದು ಪಿರ್ಯಾದಿ ಬಸವಣ್ಣ ಬಿನ್. ಲೇ|| ಬೋರಮಾದಯ್ಯ @ ಬೋರಯ್ಯ, ದ್ಯಾವಪಟ್ಟಣ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ವಸಂತಕುಮಾರ್ ಬಿನ್. ನಿಂಗಯ್ಯ, ದ್ಯಾವಪಟ್ಟಣ ಗ್ರಾಮ ರವರು ಪಿರ್ಯಾದಿಯವರ 16 ವರ್ಷದ ಮಗಳು ಅಪರ್ಿತಾಳನ್ನು ಮದುವೆಯಾಗುತ್ತೇನೆಂದು ಪುಸಲಾಯಿಸಿ ಪಿರ್ಯಾದಿಯವರು ಇಲ್ಲದ ಸಮಯದಲ್ಲಿ ದಿನಾಂಕ:07-05-2013 ರಂದು ಅವರ ಮನೆಯಿಂದ ಕರೆದುಕೊಂಡು ಹೋಗಿರುತ್ತಾನೆಂದು ಅವರುಗಳನ್ನು ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ನೊಂದಾಯಿಸಲಾಗಿದೆ. 


ವಂಚನೆ ಪ್ರಕರಣ :

 ಮಳವಳ್ಳಿ ಪುರ ಪೊಲೀಸ್ ಠಾಣೆ ಮೊ.ನಂ. 131/13 ಕಲಂ. 420 ಐ.ಪಿ.ಸಿ.

ದಿನಾಂಕ: 13-05-2013 ರಂದು ಪಿರ್ಯಾದಿ ಎಂ.ಎಸ್. ತೇಜವತಿ ಬಿನ್. ಸಿದ್ದಯ್ಯ, 2ನೇ ಕ್ರಾಸ್, ಹಳೇಕೋರ್ಟ್  ಹಿಂಭಾಗ, ಮಳವಳ್ಳಿ ಟೌನ್ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ಶಿವಕುಮಾರ್ ಬಿನ್. ಗೋವಿಂದಸ್ವಾಮಿ, ಗೊಲ್ಲರಹಳ್ಳಿ ಗ್ರಾಮ, ಮಳವಳ್ಳಿ ತಾಲ್ಲೋಕು ರವರು ಮಳವಳ್ಳಿ ಟೌನ್, 2ನೇ ಕ್ರಾಸ್, ಹಳೇಕೋರ್ಟ್  ಹಿಂಭಾಗ ಮುಗ್ದ ಜನರ ಬಳಿ ಕೆಲಸ ಕೊಡಿಸುವುದಾಗಿ, ಸಾಲ ಮಾಡಿಸಿಕೊಡುವುದಾಗಿ, ವರ್ಗಾವಣೆ  ಮಾಡಿಸಿಕೊಡುವುದಾಗಿ ಹೇಳಿ ನಂಬಿಸಿ ಹಣ ಪಡೆದುಕೊಂಡಿರುತ್ತಾನೆ,  ಆತನ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರನ್ನು ಸ್ವೀಕರಿಸಿಕೊಂಡು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.

No comments:

Post a Comment