Moving text

Mandya District Police

DAILY CRIME REPORT DATED : 20-05-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 20-05-2013 ರಂದು ಒಟ್ಟು 21 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 2 ಯು.ಡಿ.ಆರ್. ಪ್ರಕರಣಗಳು,  1 ಮನೆ ಕಳ್ಳತನ ಪ್ರಕರಣ,  2 ವಾಹನ ಕಳವು ಪ್ರಕರಣಗಳು,  3 ಮನುಷ್ಯ ಕಾಣೆಯಾದ ಪ್ರಕರಣಗಳು ಹಾಗು 13 ಇತರೆ ಐ.ಪಿ.ಸಿ./ಸಿ.ಆರ್.ಪಿ.ಸಿ. ಹಾಗು ಇತರೆ ಪ್ರಕರಣಗಳು ವರದಿಯಾಗಿರುತ್ತವೆ. 


ಯು.ಡಿ.ಆರ್. ಪ್ರಕರಣಗಳು :

1. ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 13/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 20-05-2013 ರಂದು ಪಿರ್ಯಾದಿ ಎಂ,ಎಸ್ ದೇವರಾಜು ಬಿನ್. ಲೇಟ್. ಕೆ,ವಿ ಶ್ರೀನಿವಾಸ ಶೆಟ್ಟಿ, 58 ವರ್ಷ, ನಂ,1420, 5ನೇಕ್ರಾಸ್, ಅಶೋಕ ನಗರ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಸುಬ್ಬು ಅಪರಿಚಿತ, 75 ವರ್ಷ, ಪೂರ್ಣ ವಿಳಾಸ ತಿಳಿಯಬೇಕಾಗಿದೆ ಇವರು ದಿನಾಂಕ: 20-05-2013 ರಂದು ಮದ್ಯಾಹ್ನ 01-30 ಗಂಟೆಯಲ್ಲಿ ಯಾವುದೋ ಖಾಯಿಲೆಯಿಂದಲೋ ಅಥವಾ ಹೃದಯಘಾತದಿಂದಲೋ ಮೃತಪಟ್ಟಿರುವುದು ಕಂಡು ಬಂದಿದ್ದು ಮೃತನ ಮೈಮೇಲೆ ಬಿಳಿ ಬನಿಯನ್ ಹಾಗೂ ಕಾಟನ್ ನಿಕ್ಕರ್ ಇದ್ದು ಸಾದಾರಣ ಮೈಕಟ್ಟು ಎಣ್ಣೆಗೆಂಪು ಬಣ್ಣವುಳ್ಳವನಾಗಿದ್ದು ಮೃತನ ವಿಳಾಸ ತಿಳಿದು ಬಂದಿಲ್ಲ ಮುಂದಿನ ಕ್ರಮ ಜರುಗಿಸಿ ಎಂದು ಕೊಟ್ಟ ಪಿರ್ಯಾದಿ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2. ಕೆ.ಆರ್.ಸಾಗರ ಪೊಲೀಸ್ ಠಾಣೆ ಯು.ಡಿ.ಆರ್. ನಂ. 16/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 20-05-2013 ರಂದು ಪಿರ್ಯಾದಿ ಯಾರಬ್ ಬಿನ್. ಸೈಯ್ಯದ್ ಬಾಷಾ, ಆಂದ್ರ ಕಾಲೋನಿ, ಎ ನಾರಾಯಣಪುರ, ಕೆ,ಆರ್,ಪುರಂ ರೈಲ್ವೇಸ್ಟೇಷನ್, ಬೆಂಗಳೂರು-16 ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 19-05-2013 ರಂದು ಬಲುಮುರಿ ಪಾಲ್ಸ್, ಬೆಳಗೊಳ, ಶ್ರೀರಂಗಪಟ್ಟಣ ತಾಲ್ಲೂಕು ರವರು ಬಲಮುರಿಯ ನದಿ ನೀರಿನಲ್ಲಿ ಈಜಾಡುವಾಗ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಹೋದನೆಂದು ತನ್ನ ತಮ್ಮನ ಸ್ನೇಹಿತರು ತಿಳಿಸಿದ ಮೇರೆ ನಾನು ಬಲಮುರಿಗೆ ಬಂದು ಹುಡುಕಿದರೂ ನನ್ನ ತಮ್ಮನ ಶವ ಸಿಗಲಿಲ್ಲ ಈ ದಿನ ಅಂದರೆ ದಿನಾಂಕ: :-19-05-2013 ರಂದು ಬೆಳಿಗ್ಗೆ ಸುಮಾರು 8-00 ಗಂಟೆ ಸಮಯದಲ್ಲಿ ಬಲಮುರಿ ನೀರಿನಲ್ಲಿ ನನ್ನ ತಮ್ಮನ ಶವ ಸಿಕ್ಕಿರುತ್ತೆ. ಆದ್ದರಿಂದ ನನ್ನ ತಮ್ಮ ಜಾಕೀರ್ ಹುಸೇನ್ ಶವದ ಮೇಲೆ ಕಾನೂನಿನ ಕ್ರಮ ಕೈಗೊಳ್ಳಬೇಕೆಂದು ಇತ್ಯಾದಿ ನೀಡಿದ ದೂರಿನ ಮೇರೆಗೆ  ಪ್ರಕರಣ ದಾಖಲಿಸಲಾಗಿದೆ. 


ಮನೆ ಕಳ್ಳತನ ಪ್ರಕರಣ :

ಬೆಸಗರಹಳ್ಳಿ ಪೊಲೀಸ್ ಠಾಣೆ ಮೊ.ನಂ. 100/13 ಕಲಂ. 457-380 ಐ.ಪಿ.ಸಿ.

ದಿನಾಂಕ: 20-05-2013 ರಂದು ಪಿರ್ಯಾದಿ ಸಿಬಿಗತ್ ವುಲ್ಲಾ ಬೇಗ್, ಬಿನ್. ಗಫಾರ್ ಬೇಗ್. ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 19-05-2013 ರಂದು ರಾತ್ರಿ ವೇಳೆಯಲ್ಲಿ ಕೊಪ್ಪ ಹೋಬಳಿ ಹೊಸಕೆರೆ ಗ್ರಾಮದಲ್ಲಿ, ಮದ್ಯರಾತ್ರಿ ಯಾರೋ ಕಳ್ಳರು ಪಿರ್ಯಾದಿಯವರ ತೋಟದ ಮನೆಯ ಹೆಂಚುಗಳನ್ನು ತೆಗೆದು ಅಲ್ಲಿ ಇದ್ದ ಕೊಳವೆ ಬಾವಿಯ 150 ಮೀಟರ್ ವೈರ್ ಮತ್ತು ಎರಡು ಬಂಡಲ್ ಮುಳ್ಳು ತಂತಿಯನ್ನು ಕಳ್ಳತನ ಮಾಡಿರುತ್ತಾರೆ ಇದರ ಬೆಲೆ ಸುಮಾರು 20000/- ರೂ ಪತ್ತೆ ಮಾಡಿಕೊಡಬೇಕೆಂದು ಕೊಟ್ಟ ಪಿರ್ಯಾದು.


ವಾಹನ ಕಳವು ಪ್ರಕರಣಗಳು :

1. ಮದ್ದೂರು ಪೊಲೀಸ್ ಠಾಣೆ ಮೊ.ನಂ. 232/13 ಕಲಂ. 379 ಐ.ಪಿ.ಸಿ.

ದಿನಾಂಕ: 20-05-2013 ರಂದು ಪಿರ್ಯಾದಿ ಹರ್ಷ ಆರ್. ರುದ್ರಾಕ್ಷಿಪುರ ಗ್ರಾಮ, ಮದ್ದೂರು ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 16-05-2013 ರಂದು ಪಿರ್ಯಾದಿ ಟೀ ಕುಡಿಯಲು ಮೋಟಾರ್ ಸೈಕಲ್  ನಿಲ್ಲಿಸಿದ್ದಾಗ ಯಾರೂ  ಮೆರಿಂಡಾ ಕೂಲ್ ಡ್ರಿಂಕ್ಸ್  ನೀಡಿದರು, ಅದನ್ನು ಕುಡಿದ ಮೇಲೆ ಪಿರ್ಯಾದಿಗೆ ಪ್ರಜ್ಞೆ ತಪ್ಪಿದಂತಾಗಿ ಅಲ್ಲೆ ಮಲಗಿಕೊಂಡಿದ್ದಾರೆ ಆನಂತರ ಅವರ ಬೈಕ್ ಅನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅದನ್ನು ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 252/13 ಕಲಂ. 379 ಐ.ಪಿ.ಸಿ.

ದಿನಾಂಕ: 20-05-2013 ರಂದು ಪಿರ್ಯಾದಿ ಕಾಳಪ್ಪ ಬಿನ್. ಯಲ್ಲಪ್ಪ, ನಾಲಬಂದವಾಡಿ, ಮಂಡ್ಯ ಸಿಟಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿರವರ ಬಾಬ್ತು ಹಂದಿಶೆಡ್ಡಿನ ಮುಂಭಾಗ ನಿಲ್ಲಿಸಿ ಹಂದಿಗಳಿಗೆ ನೀರು ತರಲು ತಮ್ಮ ಮನೆಗೆ ಹೊಗಿ ಬರುವಷ್ಟರಲ್ಲಿ ತಾನು ಬೀಗ ಹಾಕಿ ನಿಲ್ಲಿಸಿದ್ದ ಕೆಎ-11-ಎಕ್ಸ್-8081 ಮಹೇಂದ್ರ ಡ್ಯೂರೋ ಮೋಟಾರ್ ಸೈಕಲ್ ಸದರಿ ಸ್ಥಳದಲ್ಲಿ ಇರಲಿಲ್ಲ, ನಾನು ತಕ್ಷಣ ಅಕ್ಕಪಕ್ಕ ಹುಡುಕಿ ಸಿಗದ ಕಾರಣ ಈ ದಿನ ತಡವಾಗಿ ಬಂದು ಕಳುವಾಗಿರುವ ತನ್ನ ಬಾಬ್ತು ಮೋಟಾರ್ ಸೈಕಲ್ ಬೆಲೆ ಅಂದಾಜು 37000/- ರೂಗಳಾಗುತ್ತದೆ  ಪತ್ತೆ ಮಾಡಿಕೊಡಿ ಎಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.    


ಮನುಷ್ಯ ಕಾಣೆಯಾದ ಪ್ರಕರಣಗಳು :

1. ಬೆಳ್ಳೂರು ಪೊಲೀಸ್ ಠಾಣೆ ಮೊ.ನಂ. 154/13 ಕಲಂ. ಹುಡುಗ ಕಾಣೆಯಾಗಿದ್ದಾನೆ.

ದಿನಾಂಕ: 20-05-2013 ರಂದು ಪಿರ್ಯಾದಿ ಶ್ರೀ.ಲಕ್ಷ್ಮಣಗೌಡ, ಕಾಡುಅಂಕನಹಳ್ಳಿ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 18-05-2013 ರಂದು ಬೆಳಿಗ್ಗೆ 08-30 ಗಂಟೆಯಲ್ಲಿ ನಂಜುಂಡ @ ಸಂಜಯ ಬಿನ್ ಎ.ವಿ.ಲಕ್ಷ್ಮಣಗೌಡ, ಸುಮಾರು 08ವರ್ಷ, ವಕ್ಕಲಿಗರು, ವಾಸ ಅಂಗಳಪರಮೇಶ್ವರಿ ದೇವಸ್ಥಾನದ ಹಿಂಭಾಗ, ಮಾಗಡಿ ಮುಖ್ಯ ರಸ್ತೆ, ಚಿಕ್ಕಗೊಲ್ಲರಹಟ್ಟಿ, ಇಂದಿರಾಕಾಲೋನಿ ರವರು ತಂದೆ ತಾಯಿಯವರ ಮನೆಯಿಂದ ಎಲ್ಲಿಗೆ ಹೋಗಿದ್ದಾನೆ ಎಂಬುದು ತಿಳಿದು ಬಂದಿಲ್ಲ ಈ ಬಗ್ಗೆ ನಾವುಗಳು ನೆಂಟರ ಮತ್ತು ಬಳಗದವರ ಮನೆಯಲ್ಲಿ ಹುಡುಕಿದರು ಸಹ ಕಾಣೆಯಾಗಿರುತ್ತಾನೆ ಅವನನ್ನು ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 330/13 ಕಲಂ. ಮನುಷ್ಯ ಕಾಣೆಯಾಗಿದ್ದಾನೆ.

ದಿನಾಂಕ: 20-05-2013 ರಂದು ಪಿರ್ಯಾದಿ ದೇವೇಗೌಡ ಬಿನ್. ಲೇಟ್. ಕೆಂಪೇಗೌಡ, 50 ವರ್ಷ, ಅರಳಕುಪ್ಪೆ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ರವಿಕುಮಾರ ಬಿನ್. ಲೇಟ್. ಕೆಂಪೇಗೌಡ, 36 ವರ್ಷ, ಅರಳಕುಪ್ಪೆ ಗ್ರಾಮ ರವರು ದಿನಾಂಕ: 18-05-2013 ರಂದು ಮದ್ಯಾಹ್ನ  02-00 ಗಂಟೆಯಲ್ಲಿ ಟ್ರಾಕ್ಟರ್ ಗೆ ಡೀಸಲ್  ತರುತ್ತೇನೆ ಎಂದು ಹೇಳಿ ಹೋದವರು  ವಾಪಸ್ ಬಂದಿರುವುದಿಲ್ಲಾ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


3. ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 229/13 ಕಲಂ. ಮನುಷ್ಯ ಕಾಣೆಯಾಗಿದ್ದಾನೆ.

       ದಿನಾಂಕ: 20-05-2013 ರಂದು ಪಿರ್ಯಾದಿ ರಾಧ ಕೋಂ. ಹಂಸ, ಜಯಲಕ್ಷ್ಮೀ ಟಾಕೀಸ್ ಮುಂಬಾಗ, 1ನೇ ಕ್ರಾಸ್, ಮಂಡ್ಯ (ರಾಮಕೃಷ್ಣರವರ ಮನೆ ಬಾಡಿಗೆ) ನಗರ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 16-04-2013 ರಂದು ಬೆಳಿಗ್ಗೆ 06-00 ಗಂಟೆಯ ನಂತರ ರಾತ್ರಿ 08-30 ರ ಪಿರ್ಯಾದಿಯವರು ವಾಸವಿರುವ ಮನೆಯಿಂದ ದಿನಾಂಕ: 22-04-2013 ರಂದು ಬಂದ ಮೇಸೆಜ್ ನಲ್ಲಿ, ನಾನು ಒಂದು ತಿಂಗಳು ನಂತರ ಬರುತ್ತೇನೆ ಎಂಬುದಾಗಿ ಬಂದಿದ್ದು ನನ್ನ ಗಂಡ ಇಲ್ಲಿಯ ತನಕ ವಾಪಸ್ಸು ಬಂದಿರುವುದಿಲ್ಲ ನನ್ನ ಗಂಡ ಎಲ್ಲಿದ್ದನೋ ಗೊತ್ತಿಲ್ಲ ಆದ್ದರಿಂದ ನನ್ನ ಗಂಡನನ್ನು ಪತ್ತೆ ಮಾಡಿಕೊಡಬೇಕೆಂದು ತಮ್ಮಲ್ಲಿ ಕೋರಿಕೊಳ್ಳುತ್ತೇನೆ ಎಂದು ನೀಡಿದ ದೂರಿನ ಮೇರೆಗೆ ಪ್ರಥಮ ವರ್ತಮಾನ ವರದಿ ದಾಖಲಿಸಲಾಗಿದೆ. 

No comments:

Post a Comment