Moving text

Mandya District Police

DAILY CRIME REPORT DATED : 21-05-2013ದಿನಾಂಕ: 21-05-2013 ರಂದು ಮಂಡ್ಯ ಜಿಲ್ಲೆಯಲ್ಲಿ ಒಟ್ಟು 08 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಕಳ್ಳತನ ಪ್ರಕರಣ, 1 ಮನುಷ್ಯ ಕಾಣೆಯಾದ ಪ್ರಕರಣ ಹಾಗು  6 ಇತರೆ ಪ್ರಕರಣಗಳು ದಾಖಲಾಗಿರುತ್ತವೆ. 

ಕಳ್ಳತನ ಪ್ರಕರಣ :

ಕೆರೆಗೋಡು ಪೊಲೀಸ್ ಠಾಣೆ ಮೊ.ನಂ. 73/13 ಕಲಂ. 457,380 ಐ.ಪಿ.ಸಿ.

      ದಿನಾಂಕ: 20-05-2013 ರಂದು ಪಿರ್ಯಾದಿ ಡಾ||. ದೊರೆಸ್ವಾಮಿ, ವೈಧ್ಯಾಧಿಕಾರಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರ,, ಹಲ್ಲೆಗೆರೆ, ಮಂಡ್ಯ ತಾ. ರವರು ನೀಡಿದ ದೂರಿನ ವಿವರವೇನೆಂದರೆ ಯಾರೋ ಕಳ್ಳರು ಹಲ್ಲೆಗೆರೆ ಗ್ರಾಮದಲ್ಲಿರುವ ಪ್ರಾಥಮಿಕ ಆರೋಗ್ಯ .ಕೇಂದ್ರದ ಜಾಲರಿಯನ್ನು ಕಿತ್ತುಹಾಕಿ ಒಳಗಿದ್ದ 1). UPS ( ವಿಡಿಯೋಕಾನ್ ಕಂಪನಿ), 2) ಬ್ಯಾಟರಿ ಯುನಿವರ್ಸೆಲ್. 3) CPU ವಿಪ್ರೋ 4). ಮಾನಿಟರ್ ವಿಪ್ರೋ. 5). ಮೌಸ್ ವಿಪ್ರೋ 6). ಬಿ.ಎಸ್.ಎನ್.ಎಲ್. ಮೊಡೆಮ್ ಈ ಮೇಲ್ಕಂಡ ಸ್ವತ್ತನ್ನು ಕಳುವು ಮಾಡಿಕೊಂಡು ಹೋಗಿದ್ದು, ಅಂದಾಜು ಬೆಲೆ 25,000/- ರೂ ಗಳಾಗಿರುತ್ತದೆ ಪತ್ತೆ ಮಾಡಿಕೊಡಿ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಮನುಷ್ಯ ಕಾಣೆಯಾದ ಪ್ರಕರಣ :

ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 332/13 ಕಲಂ. ಹೆಂಗಸು ಕಾಣೆಯಾಗಿದ್ದಾಳೆ.

      ದಿನಾಂಕ: 20-05-2013 ರಂದು ಪಿರ್ಯಾದಿ ವಿ. ಸ್ವಾಮಿಗೌಡ ಬಿನ್. ಲೇ|. ವೀರಭದ್ರೇಗೌಡ, ಹಳೆಯೂರು ಬೀದಿ,  ಕ್ಯಾತನಹಳ್ಳಿ  ಗ್ರಾಮ, ಪಾ,ಪುರ ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ಕೆಂಪಮ್ಮ, ವಯಸ್ಸು: 80 ವರ್ಷ ರವರು ಮನೆಯಿಂದ ಹೊರಗೆ ಹೋದವರು ವಾಪಸ್ ಬಂದಿರುವುದಿಲ್ಲಾ ಹಾಗೂ ಅವರು ಮೈಸೂರು ಕಡೆ ಹೋಗುವ ಬಸ್  ಹತ್ತಿರುವುದನ್ನು ಗ್ರಾಮಸ್ಥರು  ನೋಡಿರುತ್ತಾರೆ. ಅವರನ್ನು ಪತ್ತೆ ಮಾಡಿಕೊಡಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

No comments:

Post a Comment