Moving text

Mandya District Police

DAILY CRIME REPORT 15-06-213


ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 15-06-2013 ರಂದು ಒಟ್ಟು 32 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಹೆಂಗಸು ಕಾಣೆಯಾದ ಪ್ರಕರಣ,  1 ಅಪಹರಣ ಪ್ರಕರಣ,  4 ರಾತ್ರಿ/ಹಗಲು ಕಳ್ಳತನ ಪ್ರಕರಣಗಳು,  1 ಅಕ್ರಮ ಮರಳು ಕಳವು/ಸಾಗಾಣಿಕೆ ಪ್ರಕರಣ,  3 ಯು.ಡಿ.ಆರ್. ಪ್ರಕರಣಗಳು,  1 ಸಾಮಾನ್ಯ ಕಳವು ಪ್ರಕರಣ,  1 ರಸ್ತೆ ಅಪಘಾತ ಪ್ರಕರಣ ಹಾಗು 20 ಇತರೆ ಐ.ಪಿ.ಸಿ./ಸಿ.ಆರ್.ಪಿ.ಸಿ./ಕೆ.ಪಿ.ಆಕ್ಟ್./ಅಬಕಾರಿ ಕಾಯಿದೆ ಪ್ರಕರಣಗಳು ವರದಿಯಾಗಿರುತ್ತವೆ. 


ಹೆಂಗಸು ಕಾಣೆಯಾದ ಪ್ರಕರಣ :

ಕೆ.ಎಂ. ದೊಡ್ಡಿ ಪೊಲೀಸ್ ಠಾಣೆ ಮೊ.ನಂ. 187/13 ಕಲಂ. ಹೆಂಗಸು ಕಾಣೆಯಾಗಿದ್ದಾಳೆ.

ದಿನಾಂಕ: 15-06-2013 ರಂದು ಪಿರ್ಯಾದಿ ಕೆ.ಎಂ.ರವಿ ಬಿನ್. ಮಾದಶೆಟ್ಟಿ, ಕಡಿಲುವಾಗಿಲು ಗ್ರಾಮ, ಮದ್ದೂರು ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 07-06-2013 ರಂದು ಬೆಳಿಗ್ಗೆ 06-00 ಗಂಟೆಯಲ್ಲಿ ಕಡಿಲುವಾಗಿಲು ಗ್ರಾಮದಲ್ಲಿ ಅವರ ಹೆಂಡತಿ ಲಕ್ಷ್ಮಿ ಎಂಬುವವರು ಕಡಿಲುವಾಗಿಲು ಗ್ರಾಮದಲ್ಲಿ ದಿನಾಂಕ:07-06-2013ರಂದು ಬೆಳಿಗ್ಗೆ 06-00 ಗಂಟೆಯಲ್ಲಿ ಮೂತ್ರ ವಿಸರ್ಜನೆಗೆಂದು ಹೊರಗೆ ಹೋದವಳು ಇದುವರೆವಿಗೂ ಮನೆಗೆ ಬಂದಿರುವುದಿಲ್ಲ ಅವಳನ್ನು ಪತ್ತೆ ಮಾಡಿಕೊಡಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

.
ರಾತ್ರಿ/ಹಗಲು ಕಳ್ಳತನ ಪ್ರಕರಣಗಳು :

1. ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 249/13 ಕಲಂ. 457-380 ಐ.ಪಿ.ಸಿ.

ದಿನಾಂಕ: 15-06-2013 ರಂದು ಪಿರ್ಯಾದಿ ಎ.ಎನ್.ರಾಮಚಂದ್ರ ಅಲ್ಸೆ ಬಿನ್. ಲೇಟ್ ಎ.ಆರ್.ನಾಗಪ್ಪ ಅಲ್ಸೆ, 50 ವರ್ಷ, ವಾಸ ನಂ. 12090, ಬನ್ನೂರು ರಸ್ತೆ, ಚಾಮುಂಡೇಶ್ವರಿನಗರ, ಮಂಡ್ಯ ಸಿಟಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 14-06-2013 ರ ರಾತ್ರಿವೇಳೆ ಶ್ರೀ ಗುರು ಡ್ರಗ್ ಹೌಸ್, ಬನ್ನೂರು ರಸ್ತೆ, 10ನೇ ಕ್ರಾಸ್, ಚಾಮುಂಡೇಶ್ವರಿನಗರ, ಮಂಡ್ಯ ಯಾರೋ ಕಳ್ಳರು ರಾತ್ರಿ ವೇಳೆಯಲ್ಲಿ ಯಾವುದೋ ಆಯುಧದಿಂದ ಅಂಗಡಿಯ ಶೆಲ್ಟರ್ ಬಾಗಿಲನ್ನು ಜಖಂಗೊಳಿಸಿ ಒಳಪ್ರವೇಶಿಸಿ ಕ್ಯಾಷ್ ಟೇಬಲ್ ಗಲ್ಲದಲ್ಲಿಟ್ಟಿದ್ದ 11,400/- ರೂ.ಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ನೊಂದಾಯಿಸಲಾಗಿದೆ.  


2. ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 250/13 ಕಲಂ. 454-380 ಐ.ಪಿ.ಸಿ.

ದಿನಾಂಕ: 15-06-2013 ರಂದು ಪಿರ್ಯಾದಿ ರಾಮಚಂದ್ರ ಬಿನ್. ನಾರಾಯಣಶೆಟ್ಟಿ, 37 ವರ್ಷ, ಗಾಣಿಗಶೆಟ್ಟರು, ಹೋಟೆಲ್ ವೃತ್ತಿ, ವಾಸ ಕಾಮನ ಸರ್ಕಲ್ ಬಳಿ, ಆನೆಕೆರೆ ಬೀದಿ, ಮಂಡ್ಯ ಸಿಟಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 15-06-2013 ರಂದು ಮಂಡ್ಯ ಸಿಟಿ, ಆನೆಕೆರೆ ಬೀದಿ, ಕಾಮನ ಸರ್ಕಲ್ ಹತ್ತಿರ, ಫಿರ್ಯಾದಿಯವರ ವಾಸದ ಮನೆಯಲ್ಲಿ ರಾತ್ರಿ ವೇಳೆಯಲ್ಲಿ ಗಾಡ್ರೇಜ್ ಬೀರುವಿನ ಬಾಗಿಲು ತೆರೆದಿದ್ದು ಅದರಲ್ಲಿದ್ದ 1] ಒಂದು ಚಿನ್ನದ ನೆಕ್ಲೇಸ್ 24 ಗ್ರಾಂ 2] ಉಂಗುರ 3 ಗ್ರಾಂ, 3] ಒಂದು ಜೊತೆ ಓಲೆ & ಹ್ಯಾಂಗಿಂಗ್ಸ್ 7 ಗ್ರಾಂ, 4] ಒಂದು ಜೊತೆ ಜುಮುಕಿ 3 ಗ್ರಾಂ, 5] ಹವಳದ ಓಲೆ 3 ಗ್ರಾಂ, 6] ಜುಮುಕಿ 2 ಗ್ರಾಂ, 7] ಚಿನ್ನದ ಪ್ಲೇಟ್ 1 ಗ್ರಾಂ, 8] ಮಕ್ಕಳ ಬೆಳ್ಳಿಯ ಕಾಲುಚೈನು 2 ಜೊತೆ, 9] ಒಂದು ವರಲಕ್ಷ್ಮಿ ಮುಖವಾಡ ಬೆಳ್ಳಿಯದು ಮತ್ತು ನಗದು ಹಣ 30,000-00 ರೂ.ಗಳನ್ನು ಯಾರೋ ಕಳ್ಳರು ಸ್ನಾನದ ಮನೆಯಲ್ಲಿ ಇಟ್ಟಿದ್ದ ಕೀಯನ್ನು ತೆಗೆದುಕೊಂಡು ಬಾಗಿಲು ತೆಗೆದು ಒಳಪ್ರವೇಶಿಸಿ ಕಳವು ಮಾಡಿಕೊಂಡು ಹೋಗಿರುತ್ತಾರೆ ಇವುಗಳ ಒಟ್ಟು ಅಂದಾಜು ಮೌಲ್ಯ 1,25,000/- ರೂ.ಗಳಾಗಿರುತ್ತದೆ. ಪತ್ತೆ ಮಾಡಿ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


3. ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 248/13 ಕಲಂ. 457,380 ಐ.ಪಿ.ಸಿ.

ದಿನಾಂಕ: 15-06-2013 ರಂದು ಪಿರ್ಯಾದಿ ಟಿ.ಸಿ. ಪ್ರಸನ್ನ ಕುಮಾರ ಬಿನ್. ಚೆನ್ನೇಗೌಡ, ಶ್ರೀರಾಮ್ ಮೊಬೈಲ್ ಗ್ಯಾಲರಿ ಅಂಗಡಿ ಮಾಲೀಕರು ವಿ.ವಿ.ರಸ್ತೆ, ಮಂಡ್ಯ, 6ನೇಕ್ರಾಸ್ ಗಾಂದಿನಗರ, ಮಂಡ್ಯ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 14-06-2013 ರಂದು ಶ್ರೀರಾಮ್ ಮೊಬೈಲ್ ಅಂಗಡಿಯ ರೋಲಿಂಗ್ ಶೆಟ್ಟರ್ ನ್ನು ಎತ್ತಿ ಬೆಂಡ್ ಮಾಡಿ ಒಳ ಹೋಗಿ ಷೋಕೇಸ್ ನಲ್ಲಿ ಇಟ್ಟದ್ದ  11 ಮೈಕ್ರೋ ಮ್ಯಾಕ್ಸ್ ಮೊಬೈಲ್ ಸೆಟ್ ಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಬೆಲೆ 24000/- ರೂಗಳಾಗುತ್ತೆ. ಎಂದು ಪತ್ತೆ ಮಾಡಿಕೊಡಿ ಎಂದು ನೀಡಿದ ದೂರು ಮೇರೆಗೆ ಪ್ರಕರಣ ನೊಂದಾಯಿಸಲಾಗಿದೆ. 


4. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 297/13 ಕಲಂ. 457-380 ಐ.ಪಿ.ಸಿ.

ದಿನಾಂಕ: 15-06-2013 ರಂದು ಪಿರ್ಯಾದಿ ವರದಮ್ಮ ಕೋಂ ಚಿಕ್ಕಮೊಗ, ನಂ 14, 1ನೇ ಬೀದಿ, ಶ್ರೀನಿವಾಸಪುರ, ಮಂಡ್ಯ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 14-06-2013 ರ ರಾತ್ರಿ ಮಂಡ್ಯ ತಾಃ ಅಸಿಟೇಟ್ ಟೌನ್ ನಲ್ಲಿರುವ ಅಂಗನವಾಡಿ ಕೇಂದ್ರದ  ಮೇಲ್ಬಾಗದ ಹೆಂಚನ್ನು ತೆಗೆದು ಒಳನುಗ್ಗಿ 1] ಭಾರತ್ ಗ್ಯಾಸ್ ಸಿಲಿಂಡರ್ ಬೆಲೆ ಸುಮಾರು 2]ಅಕಾಯ್ ಡಬಲ್ ಒಲೆ. 3] 1 3ಕೆಜಿ ಸಿಲ್ವರ್ ಪಾತ್ರೆ . 4]7 ಪಾಕೆಟ್ ಅಡುಗೆ ಎಣ್ಣೆ   5] 131 ಕೆಜಿ ಅಕ್ಕಿ, 6]ಏಳು ಲೀಟರ್ ಪ್ರೆಸ್ಟೀಜ್ ಕುಕ್ಕರ್,  ಸುಮಾರು ಅಂದಾಜು ಬೆಲೆ 3500/- ವಸ್ತುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುವುದಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಅಕ್ರಮ ಮರಳು ಕಳವು/ಸಾಗಾಣಿಕೆ ಪ್ರಕರಣ :

ಬೆಳಕವಾಡಿ ಪೊಲೀಸ್ ಠಾಣೆ ಮೊ.ನಂ. 72/13 ಕಲಂ. 379-511 ಐ.ಪಿ.ಸಿ.

ದಿನಾಂಕ: 15-06-2013 ರಂದು ಪಿರ್ಯಾದಿ ಎಂ.ಆರ್. ರಾಜೇಶ್, ತಹಶೀಲ್ದಾರ್, ಮಳವಳ್ಳಿ ತಾ|| ರವರು ನೀಡಿದ ದೂರು ಏನೆಂದರೆ ಪಿರ್ಯಾದಿಯವರು ಮಾನ್ಯ ಎಸ್.ಪಿ. ಸಾಹೇಬರವರು, ಮಾನ್ಯ ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳು ಮತ್ತು ಇತರೆ ಸಿಬ್ಬಂದಿಗಳೊಡನೆ ಅನಿರೀಕ್ಷಿತವಾಗಿ ಪೂರಿಗಾಲಿ ಗ್ರಾಮದ ಕಾವೇರಿ ನದಿ ಪಾತ್ರಕ್ಕೆ ಭೇಟಿ ನೀಡಿದಾಗ ಅನೇಕ ಜನರು ಕಾವೇರಿ ನದಿಯಲ್ಲಿ ಕೊಪ್ಪರಿಕೆಗಳಲ್ಲಿ ಅಕ್ರಮವಾಗಿ ಕಳ್ಳತನದಿಂದ ಮರಳು ತೆಗೆಯುತ್ತಿದ್ದು, ಪಿರ್ಯಾದಿ ಮತ್ತು ಅವರ ಜೊತೆಯಲ್ಲಿ ಬಂದಿದ್ದ ಅಧಿಕಾರಿಗಳನ್ನು ಕಂಡು ಎಲ್ಲರೂ ಓಡಿಹೋಗಿರುತ್ತಾರೆ. ಆದ್ದರಿಂದ ಕಾವೇರಿ ನದಿಯಲ್ಲಿ ಮರಳನ್ನು ಕಳ್ಳತನ ಮಾಡಲು ಪ್ರಯತ್ನಪಟ್ಟ ವ್ಯಕ್ತಿಗಳನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರಿನ ಮೇರೆಗೆ. ಪ್ರಕರಣ ದಾಖಲಿಸಲಾಗಿದೆ. 


ಯು.ಡಿ.ಆರ್. ಪ್ರಕರಣಗಳು :

1. ಮಳವಳ್ಳಿ ಪುರ ಪೊಲೀಸ್ ಠಾಣೆ ಯು.ಡಿ.ಆರ್. ನಂ. 03/13 ಕಲಂ. 174 ಕ್ಲಾಸ್.(3) ಸಿ..ಆರ್.ಪಿ.ಸಿ.

ದಿನಾಂಕ: 15-06-2013 ರಂದು ಪಿರ್ಯಾದಿ ವೀಣಾಯಾನೆ ಸುಮಿತ್ರ ಕೋಂ. ರವಿಕುಮಾರ್ ಚಂದ್ರವರ್ಕರ್, ದಾಂಡೇಲಿ, ಉತ್ತರಕನ್ನದ ಜಿಲ್ಲೆ ರವರು ನೀಡಿದ ದೂರು ಏನೆಂದರೆ ದಿನಾಂಕ: 14-06-13 ರಂದು ರಾತ್ರಿ 08-30 ಗಂಟೆಯಲ್ಲಿ ಮಳವಳ್ಳಿ ಟೌನ್, ಈದ್ಗಾ ಮೊಹಲ್ಲಾದಲ್ಲಿರುವ ರವಿಕುಮಾರ್ ಚಂದ್ರವರ್ಕರ್ರವರ ಮನೆಯಲ್ಲಿ ಪಿರ್ಯಾದಿಯವರ ಗಂಡ   ರವಿಕುಮಾರ್ ಚಂದ್ರವರ್ಕರ್ ಬಿನ್. ಲೇಟ್. ಕೃಷ್ಣಬಾಬು ಚಂದ್ರವರ್ಕರ್, 35 ವರ್ಷ, ಈದ್ಗಾಮೊಹಲ್ಲಾ, ಮಳವಳ್ಳಿ ಟೌನ್ ರವರು ತೀರಿಕೊಂಡ ಬಗ್ಗೆ ತಿಳಿಯಿತು. ಈ ಬಗ್ಗೆ ವಿಚಾರಿಸಿದ್ದಲ್ಲಿ ಯಾರು ಸರಿಯಾಗಿ ನನಗೆ ಮಾಹಿತಿ ಸಹ ನೀಡಲಿಲ್ಲ, ನಾನು ದಾಂಡೇಲಿಯಿಂದ ಬರುವ ಪೂರ್ವದಲ್ಲಿ ಶವಸಂಸ್ಕಾರ ಮಾಡಲು ತಯಾರಿ ನಡೆಸಿದ್ದು, ನನ್ನ ಗಂಡನ ಸಾವಿನ ಬಗ್ಗೆ ನನಗೆ ಸಂಶಯ ಇದ್ದು, ತಾವು ಸ್ಥಳಕ್ಕೆ ಬಂದು ಶವ ಪರೀಕ್ಷೆ ನಡೆಸಿ, ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ನೀಡಿದ ದೂರನ್ನು ಸ್ವೀಕರಿಸಿಕೊಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.


2. ಕೆ.ಆರ್. ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ. 183/13 ಕಲಂ. 201 ಐ.ಪಿ.ಸಿ. ಕೂಡ 174 ಸಿ.ಆರ್.ಪಿ.ಸಿ.

ದಿನಾಂಕ: 15-06-2013 ರಂದು ಪಿರ್ಯಾದಿ ಚಂದ್ರಶೇಖರ ಬಿನ್. ಕೆಂಪೇಗೌಡ, ಗಣಪತಿ ಟೆಂಪಲ್ ಹತ್ತಿರ ಕೆ.ಆರ್.ಪೇಟೆ ಟೌನ್ ರವರು ನೀಡಿದ ದೂರು ಏನೆಂದರೆ ದಿನಾಂಕ 14-06-13 ರಂದು ನನ್ನ ಹೆಂಡತಿ ರುಕ್ಮೀಣಿ ಮನೆಯಲ್ಲಿದ್ದಾಗ ಬೆಳಿಗ್ಗೆ 11-00 ಗಂಟೆಯಲ್ಲಿ ನನಗೆ ಪರಿಚಯವಿದ್ದ ಪ್ರಭಾವತಿ ಮಗಳು ಪ್ರಿಯಾಂಕ ರವರು ಒಂದನೇ ಪಿಯುಸಿಯಲ್ಲಿ ಓದುತ್ತಿದ್ದು. ನಮ್ಮ ಮನೆಗೆ ಅಗಾಗ್ಗೆ ಹೋಗಿ ಬಂದು ಮಾಡುತ್ತಿದ್ದು. ಈ ದಿವಸ ಪ್ರಿಯಾಂಕ ನಮ್ಮ ಮನೆಗೆ ಬಂದು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು. ಸದರಿ ವಿಚಾರವನ್ನು ಪ್ರಿಯಾಂಕ ತಾಯಿ ಮತ್ತು ಅವರ ಸಂಬಂಧಿಕರಿಗೆ ತಿಳಿಸಿದ್ದು. ನಂತರ ಪ್ರಿಯಾಂಕಳ ತಾಯಿ ಪ್ರಭಾವತಿ, ಚಿಕ್ಕಪ್ಪ ಜಗದೀಶ್ ಹಾಗೂ ಆಕೆಯ ಸಂಬಂಧಿಕರು ಹೊನ್ನಪ್ಪ ಮತ್ತು ಯೋಗೇಶ್ ಎಲ್ಲರು ರಾಯಸಮುದ್ರ ಗ್ರಾಮ, ಕೆ.ಆರ್.ಪೇಟೆ ತಾ| ರವರುಗಳು ಬಂದು ಪ್ರಿಯಾಂಕಳ ಶವವನ್ನು ತೆಗೆದುಕೊಂಡು ಹೋಗುತ್ತಿದ್ದಾಗ ಅವರಿಗೆ ನಾನು ಪೊಲೀಸರಿಗೆ ದೂರು ನೀಡಿ ಪಿಎಂ ಮಾಡಿಸಬೇಕೆಂದು ತಿಳಿಸಿದ್ದರು ಸಹ ಅವರು ಪ್ರಿಯಾಂಕಳಿಗೆ ನಾವೇ ವಾರಸುದಾರರು ಏನು ಬೇಕಾಗಲಿಲ್ಲ ಎಂದು ಪ್ರಿಯಾಂಕಳ ಶವವನ್ನು ಆಟೋದಲ್ಲಿ ತಮ್ಮ ಗ್ರಾಮ ರಾಯಸಮುದ್ರಕ್ಕೆ ತೆಗೆದುಕೊಂಡು ಹೋಗಿ ಸುಟ್ಟು ಹಾಕಿರುತ್ತಾರೆ ಈ ರೀತಿ ಅಸ್ವಾಭಾವಿಕ ಮರಣ ಹೊಂದಿದ್ದ ಬಗ್ಗೆ ಪೊಲೀಸರಿಗೆ ದೂರು ದಾಖಲಿಸದೇ ಹಾಗೂ ಮಾಹಿತಿಯನ್ನು ನೀಡದೇ ಮೇಲ್ಕಂಡ ರವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


3. ಅರಕೆರೆ ಪೊಲೀಸ್ ಠಾಣೆ ಯು.ಡಿ.ಆರ್. ನಂ. 06/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 15-06-2013 ರಂದು ಪಿರ್ಯಾದಿ ಎನ್.ಎಂ.ಪೂಣಚ್ಚ, ಪಿಎಸ್ಐ, ಅರಕೆರೆ ಪೊಲೀಸ್ ಠಾಣೆ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: ದಿನಾಂಕಃ 15-06-2013 ರ ಹಿಂದಿನ ದಿನಗಳಲ್ಲ್ಲಿ, ಶ್ರೀರಂಗಪಟ್ಟಣ ತಾಲ್ಲೂಕು, ಕಸಬಾ ಹೋಬಳಿ, ಬೊಂತಗಳ್ಳಿ ಗ್ರಾಮದ ಮಲ್ಲಯ್ಯನ ಕೊಳದ ಹತ್ತಿರ ದಿನಾಂಕ: 13-06-2013 ರಂದು ಬೆಳಗಿನ ಜಾವದಲ್ಲಿ ಶಿವಣ್ಣನು ಮೈಸೂರಿಗೆ ಹೋಗಲು ಮಲಮೂತ್ರ ಮಾಡಿ ಕೊಳದ ನೀರಿನಲ್ಲಿ ನೀರು ತೆಗೆದುಕೊಳ್ಳಲು ಹೋಗಿ ಆಕಸ್ಮಿಕವಾಗಿ ಕಾಲು ಜಾರಿ ಕೊಳದ ನೀರಿನಲ್ಲಿ ಮುಳುಗಿ ನೀರು ಕುಡಿದು ಸತ್ತಿದ್ದು, ಮುಂದಿನ ಕ್ರಮ ಜರುಗಿಸಬೇಕೆಂದು ಇತ್ಯಾದಿಯಾಗಿ ಕೊಟ್ಟ ದೂರಿನ ಮೇರೆಗೆ ಪ್ರಕರಣ ನೊಂದಾಯಿಸಲಾಗಿದೆ. 

ಸಾಮಾನ್ಯ ಕಳವು ಪ್ರಕರಣ :

ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 298/13 ಕಲಂ. 379 ಐ.ಪಿ.ಸಿ.

ದಿನಾಂಕ: 15-06-2013 ರಂದು ಪಿರ್ಯಾದಿ ನಂಜುಂಡಸ್ವಾಮಿ. ಕೆ.ಎಂ. ಭಮರಾಂಭಿಕ, ಕ್ಯಾತುಂಗೆರೆ, ಮಂಡ್ಯ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕಃ-11-06-2013 ರಂದು  ರಾತ್ರಿ 10-30 ಗಂಟೆ ಸಮಯದಲ್ಲಿ ಈ ಕೇಸಿನ ಪಿರ್ಯಾದಿರವರ ಬಾಬ್ತು ಹರಕ್ಯೂಲಸ್, ಸೈಕಲ್ 4500/- ರೂ ಬೆಲೆ ಇದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುವುದಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

ರಸ್ತೆ ಅಪಘಾತ ಪ್ರಕರಣ :

ಮದ್ದುರು ಸಂಚಾರಿ ಪೊಲೀಸ್ ಠಾಣೆ ಮೊ.ನಂ. 73/13 ಕಲಂ. 279-304[ಎ] ಐಪಿಸಿ ಕೂಡ 187 ಐ.ಎಮ್.ವಿ. ಆಕ್ಟ್,

ದಿನಾಂಕ: 15-06-2013 ರಂದು ಪಿರ್ಯಾದಿ ಪ್ರಭು ಸಿ.ಎಚ್.ಸಿ-334, ಮದ್ದೂರು ಸಂಚಾರಿ ಠಾಣೆ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ:07-06-2013 ರಂದು 07-30 
ಗಂಟೆಯಲ್ಲಿ, ಗೆಜ್ಜಲಗೆರೆ ಬಳಿ ಸ್ಕೂಟರ್ ನಲ್ಲಿ ಹೋಗುತ್ತಿದ್ದಾಗ ಯಾವುದೋ ಅಪರಿಚಿತ ವಾಹನ ಅತಿವೇಗ ಮತ್ತು ಅಜಾಗುರಾಕತೆಯಿಂದ ಬಂದು ಡಿಕ್ಕಿ ಹೊಡೆಸಿದ ಪರಿಣಾಮ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದ ಕಾರಣ ಮೃತಪಟ್ಟಿರುತ್ತಾರೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  

No comments:

Post a Comment