Moving text

Mandya District Police

DAILY CRIME REPORT DATED : 16-06-2013

ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 16-06-2013 ರಂದು ಒಟ್ಟು 28 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 2 ಯು.ಡಿ.ಆರ್. ಪ್ರಕರಣಗಳು,  6 ಅಕ್ರಮ ಮರಳು ಸಂಗ್ರಹಣೆ/ಸಾಗಾಣಿಕೆ ಪ್ರಕರಣ,   2 ಮನುಷ್ಯ ಕಾಣೆಯಾದ ಪ್ರಕರಣಗಳು,  1 ಮಾಹಿತಿ ನೀಡದ ಹಾಗು ಸಾಕ್ಷಿಗಳ ನಾಶದ ಪ್ರಕರಣ,  1 ಕಳ್ಳತನ ಪ್ರಕರಣ,  1 ಕೊಲೆ ಪ್ರಕರಣ,  1 ಅಕ್ರಮ ಗಣಿಗಾರಿಕೆ/ಕಳವು/ಕರ್ನಾಟಕ ಭೂಕಂದಾಯ ಅಧಿನಿಯಮ ಪ್ರಕರಣ,  1 ಕಳವು ಪ್ರಕರಣ,  1 ಅಪಹರಣ/ರಾಬರಿ ಪ್ರಕರಣ ಹಾಗು 12 ಇತರೆ ಐ.ಪಿ.ಸಿ./ಸಿ.ಆರ್.ಪಿ.ಸಿ./ಕೆ.ಪಿ.ಆಕ್ಟ್ ಪ್ರಕರಣಗಳು ವರದಿಯಾಗಿರುತ್ತವೆ. 

   
ಯು.ಡಿ.ಆರ್. ಪ್ರಕರಣಗಳು :

1. ಮಳವಳ್ಳಿ ಪುರ ಪೊಲೀಸ್ ಠಾಣೆ ಯು.ಡಿ.ಅರ್. ನಂ.03/13 ಕಲಂ. 174ಕ್ಲಾಸ್ [3]ಸಿ.ಅರ್.ಪಿ.ಸಿ.

ದಿನಾಂಕ: 16-06-2013 ರಂದು ಪಿರ್ಯಾದಿ ವೀಣಾಯಾನೆ ಸುಮಿತ್ರ ಕೋಂ. ರವಿಕುಮಾರ್ ಚಂದ್ರವರ್ಕರ್, ದಾಂಡೇಲಿ, ಉತ್ತರಕನ್ನಡ ಜಿಲ್ಲೆ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅವರ ಗಂಡ ರವಿಕುಮಾರ್ ಚಂದ್ರವರ್ಕರ್ ಬಿನ್ ಲೇಟ್. ಕೃಷ್ಣಬಾಬು ಚಂದ್ರವರ್ಕರ್, 35 ವರ್ಷ, ಈದ್ಗಾಮೊಹಲ್ಲಾ, ಮಳವಳ್ಳಿ ರವರು ದಿನಾಂಕ: 14-06-2013 ರಂದು ರಾತ್ರಿ 08-30 ಗಂಟೆಯಲ್ಲಿ ಮಳವಳ್ಳಿ ಟೌನ್, ಈದ್ಗಾ ಮೊಹಲ್ಲಾದಲ್ಲಿರುವ ಮನೆಯಲ್ಲಿ ಮೃತರಾಗಿರುತ್ತಾರೆ ತನ್ನ ಗಂಡನ ಸಾವಿನ ಬಗ್ಗೆ ಸಂಶಯ ಇದೆ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2. ಹಲಗೂರು ಪೊಲೀಸ್ ಠಾಣೆ ಯು.ಡಿ.ಆರ್. ನಂ. 18/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ:16-06-2013 ರಂದು ಪಿರ್ಯಾದಿ ಬಿ.ನಾಗೇಂದ್ರ ಬಿನ್. ಬಸವೇಗೌಡ, 28 ವರ್ಷ, ಕೋಡಿಪುರ ಮಳವಳ್ಲಿ ತಾ||, ಮಂಡ್ಯ ಜಿಲ್ಲೆ ರವರು ನೀಡಿದ ದೂರಿನ ವಿವರವೇನೆಂದರೆ ಅವರ ಅಣ್ಣ ಶಿವಮಾದೇಗೌಡ ಕೆ.ಬಿ. ಬಿನ್. ಬಸವೇಗೌಡ, 35 ವರ್ಷ, ಕೋಡಿಪುರ ಗ್ರಾಮ, ಮಳವಳ್ಳಿತಾ||, ಮಂಡ್ಯ ಜಿಲ್ಲೆ ರವರು ದಿನಾಂಕಃ 08-06-23013ರಂದು ಬೆಳಗ್ಗೆ 07-00 ಗಂಟೆಯಲ್ಲಿ ಕೋಡಿಪುರ ಗ್ರಾಮದ ಪಿರ್ಯಾದಿಯವರ ಮನೆಯಲ್ಲಿ ಅವರ ಅಣ್ಣನಾದ ಎಂಬುವವರು  ದಿನಾಂಕ 08-06-2013 ರಂದು ಬೆಳಿಗ್ಗೆ 07-00 ಗಂಟೆಯಲ್ಲಿ ವಿಷ ಸೇವಿಸಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಜಿಲ್ಲಾ ಆಸ್ಪತ್ರೆಗೆ ಸೇರಿಸಿದ್ದು,  ಚಿಕಿತ್ಸೆ ಫಲಕಾರಿಯಾಗದೇ ನೆನ್ನೆ ದಿವಸ ದಿನಾಂಕ: 15-6-2013ರಂದು  ಸಂಜೆ 05-00ಗಂಟೆಯಲ್ಲಿ ಮೃತ ಹೊಂದಿರುತ್ತಾರೆ ಹಾಗೂ ಇತ್ಯಾದಿಯಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಅಕ್ರಮ ಮರಳು ಸಂಗ್ರಹಣೆ/ಸಾಗಾಣಿಕೆ ಪ್ರಕರಣಗಳು :

1. ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 129/13 ಕಲಂ. ಕೆ.ಎಂ.ಎಂ.ಸಿ.ಆರ್ 1994 ನಿಯಮ  3-42-44, ಎಂ.ಎಂ.ಆರ್.ಡಿ-1957 ನಿಯಮ 4(1ಎ)-21 (1 ರಿಂದ 5) ಕೂಡ 379 ಐ.ಪಿ.ಸಿ.

       ದಿನಾಂಕ: 16-06-2013 ರಂದು ಪಿರ್ಯಾದಿ ಬಿ.ಆರ್.ವೆಂಕಟರಂಗಯ್ಯ, ರಾಜಸ್ವ ನಿರೀಕ್ಷಕರು, ಹೊನಕೆರೆ ಹೋಬಳಿ, ನಾಗಮಂಗಲ ತಾಲ್ಲೂಕ್ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿಗಳಾದ 1.ನರಸಿಂಹರಾಜು, ಕೆ.ಎ 02/ಎಬಿ 4325ರ ಲಾರಿ ಚಾಲಕ, 2.ಲೋಕೇಶ, ಕೆ.ಎ 02/ಎಬಿ 8081ರ ಲಾರಿ ಚಾಲಕ, 3.ನಾಗರಾಜು, ಕೆ.ಎ 02/ಎಡಿ 546ರ ಲಾರಿ ಚಾಲಕ, 4.ಕುಮಾರ, ಕೆ.ಎ 02/ಎಸಿ 1889ರ ಲಾರಿ ಚಾಲಕ, 5.ಮಹೇಶ, ಕೆ.ಎ 19/ಸಿ 3255ರ ಲಾರಿ ಚಾಲಕ, 6.ಸತೀಶ, ಕೆ.ಎ 19/ಸಿ 510ರ ಲಾರಿ ಚಾಲಕ ರವರುಗಳು ದಿನಾಂಕ: 16-06-2013 ರಂದು ಪಿರ್ಯಾದಿಯವರು ಅಕ್ರಮ ಮರಳು ಸಾಗಾಣಿಕೆಯ ತಪಾಸಣೆಯ ಬಗ್ಗೆ ಬೋಗಾದಿ ಸಂತೆಬೋರೆಯಲ್ಲಿ ತಪಾಸಣೆ ಮಾಡುತ್ತಿದ್ದಾಗ ಆರು ಲಾರಿಗಳ ಚಾಲಕರು ಆರು ಲಾರಿಗಳಲ್ಲಿ ಅಕ್ರಮವಾಗಿ ಕದ್ದು ಮರಳು ಸಾಗಾಣಿಕೆ ಮಾಡುತ್ತಿರುವುದು ಕಂಡು ಬಂದಿರುತ್ತೆ ಎಂದು ಇತ್ಯಾದಿಯಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ನಾಗಮಂಗಲ ಪಟ್ಟಣ ಪೊಲೀಸ್ ಠಾಣೆ ಮೊ.ನಂ. 98/13 ಕಲಂ. 3. 42. 44. ಕೆ.ಎಂ.ಎಂ.ಸಿ.ಆರ್. 1994 ಹಾಗು 4. (1ಎ) 21(1-5) ಎಂ.ಎಂ.ಆರ್.ಡಿ. 1957 ಕಾಯಿದೆ ಕೂಡ 379 ಐ.ಪಿ.ಸಿ.  

    ದಿನಾಂಕ:16-06-2013 ರಂದು ಪಿರ್ಯಾದಿ ಹೆಚ್.ಆರ್. ಮಲ್ಲಿಕಾಜರ್ುನಸ್ವಾಮಿ, ರಾಜಸ್ವನಿರೀಕ್ಷಕರು, ಕಸಬಾ  ಹೋಬಳಿ, ನಾಗಮಂಗಲ ತಾ. ರವರು ನೀಡಿದ ದೂರಿನ ವಿವರವೇನೆಂದರೆ      ದಿನಾಂಕ: 15/16-06-2013 ರಂದು ಬೆಳಗಿನ ಜಾವ ಆರೋಪಿಗಳಾದ 1) ಕೆ.ಎಲ್. 55-5159, ಜವರ ಬಿನ್. ಹೊನ್ನೇಗೌಡ, 2) ಕೆ.ಎ.04-ಬಿ-386, ಲಾರಿಯ ಚಾಲಕ, 3)ಕೆ.ಎ01.ಎ.ಬಿ. 9019. ವೆಂಕಟೇಶ್ ಬಿನ್. ರಾಮಣ್ಣ  4)ಕೆಎ.-02-ಎ.ಎ.506 ಲಾರಿಯ ಚಾಲಕ ಇವರುಗಳು ತಮ್ಮ ಲಾರಿಗಳಲ್ಲಿ ಅಕ್ರಮವಾಗಿ ಯಾವುದೇ ಪರವಾನಿಗೆ ಇಲ್ಲದೇ ಕಳ್ಳತನದಿಂದ ಮರಳು ಸಾಗಿಸುತ್ತಿದ್ದರಿಂದ ಅವರ ವಿರುದ್ದ ದೂರು ದಾಖಲಿಸಿದೆ. 


3. ಕೆಸ್ತೂರು ಪೊಲೀಸ್ ಠಾಣೆ ಮೊ.ನಂ. 135/13 ಕಲಂ. 188, 379, 353 ಐ.ಪಿ.ಸಿ.

      ದಿನಾಂಕ: 16-06-2013 ರಂದು ಪಿರ್ಯಾದಿ ಎಂ. ಜ್ಞಾನಪ್ರಕಾಶ್, ಪ್ರಭಾರ ಗ್ರಾಮಲೆಕ್ಕಿಗರು, ನವಿಲೆ ವೃತ್ತ, ಮದ್ದೂರು ತಾ. ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಕೆ.ಎ.-41-3989, ರ ಲಾರಿಯ ಚಾಲಕ ದಿನಾಂಕ: 15-06-2013 ರಾತ್ರಿ 10-00 ಗಂಟೆಯಲ್ಲಿ ಶಿಂಷಾ ನದಿಯ ಪಾತ್ರದಲ್ಲಿ ಪಿರ್ಯಾದಿಯವರು  ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಮೇಲ್ಕಂಡ ಲಾರಿ ಚಾಲಕನು ಶಿಂಷಾ ನದಿ ಪಾತ್ರದಲ್ಲಿ ನಿಷೇದಾಜ್ಞೆಯನ್ನು ಉಲ್ಲಂಘಿಸಿ ಸದರಿ ಲಾರಿಯಲ್ಲಿ ಯಾವುದೇ ಪರವಾನಗಿ ಇಲ್ಲದೆ ಮರಳನ್ನು ಕದ್ದು ಸಾಗಿಸುತ್ತಿದ್ದು ಕೇಳಲು ಹೋದ ಪಿರ್ಯಾದಿಯವರು ಕರ್ತವ್ಯ ನಿರ್ವಹಿಸಲು ಅಡ್ಡಿಪಡಿಸಿರುತ್ತಾರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


4. ಕೆಸ್ತೂರು ಪೊಲೀಸ್ ಠಾಣೆ ಮೊ.ನಂ. 136/13 ಕಲಂ. 188, 379, 353 ಐ.ಪಿ.ಸಿ.

      ದಿನಾಂಕ: 16-06-2013 ರಂದು ಪಿರ್ಯಾದಿ ಎಂ. ಜ್ಞಾನಪ್ರಕಾಶ್, ಪ್ರಭಾರ ಗ್ರಾಮಲೆಕ್ಕಿಗರು, ನವಿಲೆ ವೃತ್ತ, ಮದ್ದೂರು ತಾ. ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಕೆ.ಎ.-11-8484ರ ಲಾರಿಯ ಚಾಲಕ ದಿನಾಂಕ:15-06-2013 ರಾತ್ರಿ 12-15 ಗಂಟೆಯಲ್ಲಿ, ಶಿಂಷಾ ನದಿಯ ಪಾತ್ರದಲ್ಲಿ ಪಿರ್ಯಾದಿಯವರು ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಮೇಲ್ಕಂಡ ಲಾರಿ ಚಾಲಕನು ಶಿಂಷಾ ನದಿ ಪಾತ್ರದಲ್ಲಿ ನಿಷೇದಾಜ್ಞೆಯನ್ನು ಉಲ್ಲಂಘಿಸಿ ಸದರಿ ಲಾರಿಯಲ್ಲಿ ಯಾವುದೇ ಪರವಾನಗಿ ಇಲ್ಲದೆ ಮರಳನ್ನು ಕದ್ದು ಸಾಗಿಸುತ್ತಿದ್ದು ಕೇಳಲು ಹೋದ ಪಿರ್ಯಾದಿಯವರು ಕರ್ತವ್ಯ ನಿರ್ವಹಿಸಲು ಅಡ್ಡಿಪಡಿಸಿರುತ್ತಾರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


5. ಕೆಸ್ತೂರು ಪೊಲೀಸ್ ಠಾಣೆ ಮೊ.ನಂ. 137/13 ಕಲಂ. 188, 379, 353 ಐ.ಪಿ.ಸಿ.

        ದಿನಾಂಕ: 16-06-2013 ರಂದು ಪಿರ್ಯಾದಿ ಎಂ. ಜ್ಞಾನಪ್ರಕಾಶ್, ಪ್ರಭಾರ, ಗ್ರಾಮಲೆಕ್ಕಿಗರು, ನವಿಲೆ ವೃತ್ತ, ಮದ್ದೂರು ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ಕೆ.ಎ.-04-ಸಿ- 2019ರ ಲಾರಿಯ ಚಾಲಕ ದಿನಾಂಕ:16-06-2013 ರಂದು ಬೆಳಿಗ್ಗಿನ ಜಾವ 02-15 ಗಂಟೆಯಲ್ಲಿ, ಶಿಂಷಾ ನದಿ ಪಾತ್ರದ ಬಳಿ ಪಿರ್ಯಾದಿಯವರು ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಮೇಲ್ಕಂಡ ಲಾರಿ ಚಾಲಕನು ಶಿಂಷಾ ನದಿ ಪಾತ್ರದಲ್ಲಿ ನಿಷೇದಾಜ್ಞೆಯನ್ನು ಉಲ್ಲಂಘಿಸಿ ಸದರಿ ಲಾರಿಯಲ್ಲಿ ಯಾವುದೇ ಪರವಾನಗಿ ಇಲ್ಲದೆ ಮರಳನ್ನು ಕದ್ದು ಸಾಗಿಸುತ್ತಿದ್ದು ಕೇಳಲು ಹೋದ ಪಿರ್ಯಾದಿಯವರಿಗೆ ಕರ್ತವ್ಯ ನಿರ್ವಹಿಸಲು ಅಡ್ಡಿಪಡಿಸಿರುತ್ತಾರೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ನೊಂದಾಯಿಸಲಾಗಿದೆ. 


6. ಮದ್ದೂರು ಪೊಲೀಸ್ ಠಾಣೆ ಮೊ.ನಂ. 271/13 ಕಲಂ. 188-379 ಐ.ಪಿ.ಸಿ.

ದಿನಾಂಕ:16-06-2013ರಂದು ಪಿರ್ಯಾದಿ ಚಿಕ್ಕಮಲ್ಲು ಸಿ.ಪಿ.ಸಿ.-696, ಮದ್ದೂರು ಪೊಲೀಸ್ ಠಾಣೆ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 16-6-2013 ರಂದು ಆರೋಪಿಗಳು ಮದ್ದೂರಿನ ಹೊಳೆ ಅಂಜನೇಯಸ್ವಾಮಿ ದೇವಸ್ಥಾನದ ಶಿಂಷಾನದಿ ಪಾತ್ರದಲ್ಲಿ ಆರೋಪಿ 1)ಕೆಎ-42ಟಿ-3258/ಟಿ3259 ಟ್ರ್ಯಾಕ್ಟರ್ ಮತ್ತು ಟ್ರೈಲರ್ ಚಾಲಕರುಗಳು ದಿನಾಂ:16-6-2013ರಂದು ತಮ್ಮ ವಾಹನಗಳಿಗೆ ಯಾವುದೇ ಪರವಾನಗಿ ಪಡೆಯದೆ ಸರ್ಕಾರದ ನೀಷೇಧಾಜ್ಞೆಯನ್ನು ಉಲ್ಲಂಘಿಸಿ ಶಿಂಷಾ ನದಿ ಪಾತ್ರದಲ್ಲಿ ಅಕ್ರಮವಾಗಿ ಮರಳು ತೆಗೆದು ಕಳ್ಳತನದಿಂದ ತುಂಬುತ್ತಿದ್ದ ಮೇರಗೆ ಪ್ರಕರಣ ದಾಖಲಿಸಲಾಗಿದೆ. 


ಮನುಷ್ಯ ಕಾಣೆಯಾದ ಪ್ರಕರಣಗಳು :

1. ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 130/13 ಕಲಂ. ಹೆಂಗಸು ಮತ್ತು ಮಗು ಕಾಣೆಯಾಗಿದ್ದಾರೆ.

         ದಿನಾಂಕ: 16-06-2013 ರಂದು ಪಿರ್ಯಾದಿ ಮಹೇಶ ಬಿನ್. ರಾಮಸ್ವಾಮಿ, ತಿರುಗನಹಳ್ಳಿ ಗ್ರಾಮ, ಹೊಣಕೆರೆ ಹೋಬಳಿ. ನಾಗಮಂಗಲ ತಾಲ್ಲೋಕು ರವರು ನೀಡಿದ ದೂರಿನ ವಿವರವೇನೆಂದರೆ ಪಸುಮದಿ, ಕೊಂ. ಮಹೇಶ, 25ವರ್ಷ, ಹಾಗು ಮಗು ಭುವನೇಶ್ ಬಿನ್. ಮಹೇಶ, 02ವರ್ಷ, ಬೋವಿ ಜನಾಂಗ, ತಿರಗುನಹಳ್ಳಿ ಹೊಣಕೆರೆ ಹೋಬಳಿ. ನಾಗಮಂಗಲ ರವರು ದಿನಾಂಕಃ 07-06-2013ರಂದು ಪಿರ್ಯಾದಿಯವರ ಮನೆಯಿಂದ ಹೋದವರು ಇಲ್ಲ್ಲಿಯವರೆಗೆ ವಾಪಸ್ ಮನೆಗೆ ಬಂದಿರುವುದಿಲ್ಲ ಎಲ್ಲಾ ಕಡೆ ಹುಡುಕಾಡಿ ಸಿಗದ ಕಾರಣ ಈ ದಿನ ತಡವಾಗಿ ಬಂದು ದೂರು ನೀಡಿರುತ್ತಾರೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2. ಬೆಳ್ಳೂರು ಪೊಲೀಸ್ ಠಾಣೆ ಮೊ.ನಂ. 174/13 ಕಲಂ. ಹೆಂಗಸು ಕಾಣೆಯಾಗಿದ್ದಾರೆ.

       ದಿನಾಂಕ: 16-06-2013 ರಂದು ಪಿರ್ಯಾದಿ ಬಸವರಾಜು ಬಿನ್. ಬೋರಯ್ಯ, ಗೊಂದಿಹಳ್ಳಿ ಗ್ರಾಮ, ಬೆಳ್ಳೂರು ಹೋಬಳಿ, ನಾಗಮಂಗಲ ತಾ. ರವರು ನೀಡಿದ ದೂರಿನ ವಿವರವೇನೆಂದರೆ ಲಕ್ಷ್ಮಿ ಬಿನ್. ಬಸವರಾಜು, 19 ವರ್ಷ, 2 ನೇ ಪಿಯುಸಿ ವ್ಯಾಸಂಗ ಮಾಡಿದ್ದು, ಕನ್ನಡ ಮಾತನಾಡುತ್ತಾಳೆ,  4.3/4 ಅಡಿ ಎತ್ತರ ಎಣ್ಣೆಗೆಂಪು ಬಣ್ಣ, ದೃಢಕಾಯ ಶರೀರ, ಹೋಗುವಾಗ ಹಸಿರು ಬಣ್ಣದ ಚೂಡಿದಾರ ತೊಟ್ಟಿರುತ್ತಾಳೆ. ನೀಲಿ ಬಣ್ಣದ ಸ್ಪೇಟರ್ ಧರಿಸಿರುತ್ತಾಳೆ ಗೊಂದಿಹಳ್ಳಿ ಗ್ರಾಮ ಬೆಳ್ಳೂರು ರವರು ದಿನಾಂಕ:15-06-2013ರಂದು ಪಿರ್ಯಾದಿಯವರ ಮನೆಯಿಂದ ಅಜ್ಜಿ ಮನೆಗೆ ಹೋಗಿ ಬರುತ್ತೇನೆಚಿದು  ಹೋದವಳು ಎಷ್ಟು ಹೊತ್ತಾದರು ಬರದಿದ್ದ ಕಾರಣ ನಾವು ಎಲ್ಲಾ ಕಡೆ ಹುಡುಕಾಡಿದೆವು ಪತ್ತೆಯಾಗಲಿಲ್ಲ ಆದ್ದರಿಂದ ಕಾಣೆಯಾಗಿರುವ ನನ್ನ ಮಗಳನ್ನು ಹುಡುಕಿಕೊಡಬೇಕೆಂದು ಕೋರಿ ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಮಾಹಿತಿ ನೀಡದ ಹಾಗು ಸಾಕ್ಷಿನಾಶದ ಪ್ರಕರಣ :

ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 300/13 ಕಲಂ. 176-201 ಐ.ಪಿ.ಸಿ.

ದಿನಾಂಕ: 16-06-2013 ರಂದು ಪಿರ್ಯಾದಿ ಆನಂದೇಗೌಡ ಪಿ.ಎಸ್.ಐ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ರವರು ನೀಡಿದ ದೂರಿನ ವಿವರವೇನೆಂದರೆ ಶಿವಲಿಂಗಯ್ಯ ಮತ್ತು ಈತನ ಪತ್ನಿ ಪಾರ್ವತಮ್ಮ ರವರು ಜೀವನದಲ್ಲಿ ಜಿಗುಪ್ಸೆ ಹೊಂದಿ ದಿನಾಂಕ:15-06-2013ರಂದು ಆತ್ಮಹತ್ಯೆ ಮಾಡಿಕೊಂಡು ಅಸ್ವಾಭಾವಿಕ ಮರಣ ಹೊಂದಿರುವುದು ಈ ಬಗ್ಗೆ ಆರೋಪಿ ಶಶಿಕುಮಾರ್ ಬಿನ್ ಲೇಟ್. ಶಿವಲಿಂಗಯ್ಯ, ಕಟ್ಟೆದೊಡ್ಡಿ ಗ್ರಾಮ, ಮಂಡ್ಯ ತಾ: ಮತ್ತು ಇತರರು  ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಗೆ ಮಾಹಿತಿ ನೀಡದೆ ಮೃತರ ಶವಗಳನ್ನು ಅವರದೆ ಸ್ವಂತ ಜಮೀನಿನಲ್ಲಿ ಬೆಂಕಿಯಲ್ಲಿ ಸುಟ್ಟುಹಾಕಿ ಸಾಕ್ಷಿ ಪುರಾವೆಗಳು ಸಿಗದಂತೆ ನಾಶಪಡಿಸಿರುವುದು ನಿಜವಾಗಿರುತ್ತೆ ಈ ಸಂಬಂಧ ಪ್ರಕರಣ ದಾಖಲಿಸಿದೆ.


ಕಳ್ಳತನ ಪ್ರಕರಣ :

ಮೇಲುಕೋಟೆ  ಪೊಲೀಸ್ ಠಾಣೆ ಮೊ.ನಂ. 103/13 ಕಲಂ. 380 ಐ.ಪಿ.ಸಿ.

  ದಿನಾಂಕ:16-06-2013 ರಂದು ಪಿರ್ಯಾದಿ ಕೋಮಲ ಕೋಂ ತಮ್ಮೇಗೌಡ, 30 ವರ್ಷ, ಒಕ್ಕಲಿಗರು, ಅಂಗನವಾಡಿ ಕಾರ್ಯಕರ್ತೆ, ಲಕ್ಷ್ಮೀಪುರ ಗ್ರಾಮ, ಮೇಲುಕೋಟೆ ಹೋಬಳಿ, ಪಾಂಡವಪುರ ರವರು ನೀಡಿದ ದೂರು ಏನೆಂದರೆ ದಿನಾಂಕ: ದಿಃ06-06-2013 ರಿಂದ 14-06-2013ರ ನಡುವೆ ಮೇಲುಕೋಟೆಯ ಪಿರ್ಯಾದಿಯವರ ತಂದೆಯ ಮನೆಯಲ್ಲಿ ಗಾಡ್ರೇಜ್ ಬೀರುವಿನಲಿಟ್ಟಿದ್ದ್ಲ 1] 01 ಜೊತೆ 04 ಗ್ರಾಂ ತೂಕದ ಹ್ಯಾಂಗೀಸ್ 2] 01 ಜೊತೆ ಚಿನ್ನದ 03 ಗ್ರಾಂ ಮಾಟಿ 3] 01 ಗ್ರಾಂ ತೂಕದ ಸೈತಮಾಟಿ 4] 5 ಗ್ರಾಂ ಜಿ.ಎಸ್ ಎಂಬ ಹೆಸರಿನ  ಚಿನ್ನದ ಉಂಗುರ 5] ನಗದು ಹಣ 300 ರೂ.ಗಳು, ಒಟ್ಟು ಮೌಲ್ಯ-29.100 ರೂ.ಗಳು. ಮೇಲ್ಕಂಡವುಗಳನ್ನು ಯಾರೋ ಕಳ್ಳರು ಕಳವುಮಾಡಿಕೊಂಡು ಹೋಗಿರುತ್ತಾರೆಂದು ಇತ್ಯಾದಿಯಾಗಿ ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಕೊಲೆ ಪ್ರಕರಣ :

ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 302-201 ಐ.ಪಿ.ಸಿ

      ದಿನಾಂಕ: 16-06-2013 ರಂದು ಪಿರ್ಯಾದಿ ಮಹೇಶ ಬಿನ್. ರಾಮಲಿಂಗು, ಶ್ರೀನಿವಾಸ ಅಗ್ರಹಾರ, ಶ್ರೀರಂಗಪಟ್ಟಣ ತಾಲ್ಲೂಕು ರವರ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 13-06-2013 ರಿಂದ 16-06-2013 ರವರೆಗೆ ಬೆಂಗಳೂರು - ಮೈಸೂರು ರಸ್ತೆ ಲೋಕಪಾವನಿ ಬ್ರಿಡ್ಜ್ ಹತ್ತಿರ ಅಪರಿಚಿತ ಗಂಡಸಿನ ಶವ ಅಂಗಾತವಾಗಿ ಬಿದ್ದಿದ್ದು ವಯಸ್ಸು ಸುಮಾರು 35 ರಿಂದ 40 ವರ್ಷ ಆಗಿದ್ದು ಯಾರೋ ದುಷ್ಕಮರ್ಿಗಳು ಎಲ್ಲಿಯೋ ಹೊಡೆದು ಸಾಯಿಸಿ ಸೀರೆ ಬಟ್ಟೆಗಳಿಂದ ಸುತ್ತಿಕೊಂಡು ಸಾಕ್ಷಿ ಆಧಾರಗಳನ್ನು ನಾಶಪಡಿಸುವ ಉದ್ದೇಶದಿಂದ ತಂದು  ಬಿಸಾಡಿ ಹೋಗಿರುತ್ತಾರೆ  ಶವದ ಮೈ ಮೇಲೆ ಒಂದು ಬಿಸ್ಕೆಟ್ ಬಣ್ಣದ ತುಂಬು ತೋಳಿನ ಶರ್ಟ್, ನೀಲಿ ಪ್ಯಾಂಟ್ ಹಾಗೂ ನೀಲಿ ಬನಿಯನ್ ಇರುತ್ತದೆ ಎಂಬ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಅಕ್ರಮ ಗಣಿಗಾರಿಕೆ/ಕಳವು/ಕರ್ನಾಟಕ  ಭೂಕಂದಾಯ ಅಧಿನಿಯಮ ಪ್ರಕರಣ :

ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 175/13 ಕಲಂ. 379 ಐ.ಪಿ.ಸಿ. ಕೂಡ ಕಲಂ.70-73 ಕರ್ನಾಟಕ  ಭೂಕಂದಾಯ ಅಧಿನಿಯಮ.

  ದಿನಾಂಕ:16-06-2013ರಂದು ಪಿರ್ಯಾದಿ ದಾಸೇಗೌಡ, ಪ್ರಭಾರ ಉಪ-ವಿಭಾಗಾದಿಕಾರಿಗಳು, ಪಾಂಡವಪುರ ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪೂವನಹಳ್ಳಿಕೊಪ್ಪಲು,  ಗ್ರಾಮದಲ್ಲಿ ಕಳ್ಳತನಮಾಡಿ ಮರಳು ಸಾಗಣೆ ಸಂಗ್ರಹಣೆ ಮಾಡಿರುವವವರ ಹೆಸರು ವಿಳಾಸ ತಿಳಿಯಬೇಕಾಗಿದೆ ದಿನಾಂಕ:15-06-2013 ರಂದು ಬೂಕನಕೆರೆ ಹೋಬಳಿ ಗಂಜಿಗೆರೆ ವೃತ್ತದ ಪೂವನಹಳ್ಳಿ ಕೊಪ್ಪಲು ಗ್ರಾಮದಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದ್ದು ಪಿರ್ಯಾದಿಯವರು ದಾಳಿಮಾಡಿ ಅಕ್ರಮ ಮರಳು ಸಂಗ್ರಹ ಮತ್ತು ಬಳಕೆಯಾಗುತ್ತಿದ್ದ 45ಸಂಖ್ಯೆಯ ಕಬ್ಬಿಣದ ಪೈಪ್ಗಳು ಮತ್ತು 17 ಖಾಲಿ ಡೀಸಲ್ ಡ್ರಂ ಗಳನ್ನು ಜಪ್ತಿಮಾಡಿ ಕ್ರಮ ಕೈಗೊಳ್ಳಬೇಕೆಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಕಳವು ಪ್ರಕರಣಗಳು :

1. ಮದ್ದೂರು ಪೊಲೀಸ್ ಠಾಣೆ ಮೊ.ನಂ. 269/13 ಕಲಂ. 379 ಐ.ಪಿ.ಸಿ.

ದಿನಾಂಕ:16-06-2013ರಂದು ಪಿರ್ಯಾದಿ ಶಿವರಾಜು.ಎಂ. ಅಸಿಸ್ಟೆಂಟ್ ಮ್ಯಾನೇಜರ್, ಪೇಸ್ ಪವರ್ ಸಿಸ್ಟಂ, ಕುಂಬಳಗೂಡು, ಮೈಸೂರು ರಸ್ತೆ, ಬೆಂಗಳೂರು ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 11-06-2013 ರಂದು ಶಿವಪುರದ ಸತ್ಯಾಗ್ರಹ ಸೌಧದಬಳಿ ಯಾರೋ ಕಳ್ಳರು ಶಿವಪುರದ ಟವರ್ ನಲ್ಲಿ ಬ್ಯಾಟರಿ ಬ್ಯಾಂಕ್ ಕಳುವು ಮಾಡಿದ್ದು, ಇದರಲ್ಲಿ 2ವೋಲ್ಟ್ನ 43ಸೆಲ್ಗಳು ಕಳುವಾಗಿತ್ತು. ಇದರ ಅಂದಾಜು ಬೆಲೆ 1,35,000 (ಒಂದು ಲಕ್ಷದ ಮೂವತ್ತೈದು ಸಾವಿರ) ರೂಗಳು ಆಗಬಹುದು ಬ್ಯಾಟರಿ ಬ್ಯಾಂಕ್ಗೆ ಬೀಗದ ವ್ಯವಸ್ಥೆ ಹಾಗೂ ಬಾಗಿಲುಗಳಿರುವುದಿಲ್ಲ,  ಈ ಬಗ್ಗೆ ಮುಂದಿನ ಕ್ರಮ ಜರುಗಿಸಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಕೆ.ಆರ್.ಸಾಗರ ಪೊಲೀಸ್ ಠಾಣೆ ಮೊ.ನಂ. 158/13 ಕಲಂ. 379 ಐ.ಪಿ.ಸಿ.

ದಿನಾಂಕ:16-06-2013ರಂದು ಪಿರ್ಯಾದಿ ಪುಟ್ಟಸಿದ್ದಮ್ಮ ಕೋಂ. ಜವರಯ್ಯ ಎಂ.ಎನ್.ಪಿ.ಎಂ. ಕಾಲೋನಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: ದಿನಾಂಕ:16-06-2013ರಂದು ಮದ್ಯಾಹ್ನ 01-30 ಗಂಟೆಯಲ್ಲಿ ಕೆ.ಆರ್.ಸಾಗರದ ಸಂತೆಮಾಳದ ಬಳಿ ನಿಂತಿದ್ದಾಗ 25 ವರ್ಷದ ಅಪರಿಚಿತ ಹೆಂಗಸು ಪಿರ್ಯಾದಿಯವರ ತಲೆ ಸವರಿ ಕತ್ತಿನಲ್ಲಿದ್ದ ಸುಮಾರು 75 ಸಾವಿರ ಬೆಲೆ ಬಾಳುವ 25 ಗ್ರಾಂ ಚಿನ್ನದ ಸರವನ್ನು ಕಳವು ಮಾಡಿಕೊಂಡು ಹೋಗಿರುತ್ತಾಳೆ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಅಪಹರಣ/ರಾಬರಿ ಪ್ರಕರಣ :

ಕೆ.ಆರ್.ಸಾಗರ ಪೊಲೀಸ್ ಠಾಣೆ ಮೊ.ನಂ. 157/13 ಕಲಂ. 364(ಎ)-395-342 ಐ.ಪಿ.ಸಿ.

      ದಿನಾಂಕ: 16-06-2013ರಂದು ಪಿರ್ಯಾದಿ ಜೆ.ರಾಜು ಬಿನ್. ಜಯರಾಮ್, ಬೆಂಗಳೂರು ರವರು ನೀಡಿದ ದೂರಿನ ವಿವರ-ವೇನೆಂದರೆ ರೆಹಮಾನ್ ಮತ್ತು ಇತರ 5 ರಿಂದ 6 ಜನ ಅಪರಿಚಿತ ಗಂಡಸರು ದಿನಾಂಕ:15-06-2013 ರಂದು ರಾತ್ರಿ 10-30 ಗಂಟೆಯಲ್ಲಿ ಪಂಪ್ ಹೌಸ್ ಸರ್ಕಲ್ ಬಳಿ ಪಿರ್ಯಾದಿಯು ತಮ್ಮ ಬಾಬ್ತು ನಂ.ಕೆಎ16-2612 ಇಂಡಿಕಾ ಕಾರಿನಲ್ಲಿ ತಮ್ಮ ಸ್ನೇಹಿತ ಬಾಲಾಜಿ ಜೊತೆ ಹೋಗುತ್ತಿರುವಾಗ ಕೆಎ12-8629 ಮಾರುತಿ ಓಮಿನಿ ಕಾರಿನಲ್ಲಿ ಬಂದ ಸದರಿ ಆರೋಪಿಗಳು ನನ್ನನ್ನು ಅಪಹ-ರಣ  ಹಾಗೂ ದರೋಡೆ ಮಾಡುವ ಉದ್ದೇಶದಿಂದ ಚಾಕು ತೋರಿಸಿ ನನ್ನ ಕತ್ತಿನಲ್ಲಿದ್ದ 8 ಗ್ರಾಂ ಚಿನ್ನದ ಸರ, 5 ಗ್ರಾಂ. ಉಂಗುರ 3000/- ರೂ ಹಣ 2 ಎ.ಟಿ.ಎಂ. ಕಾರ್ಡ್, 2 ಮೊಬೈಲ್ ಹಾಗೂ ಬಾಲಾಜಿಯ 2 ಮೊಬೈಲ್ ಮತ್ತು 4700/- ರೂ, 4 ಎ.ಟಿ.ಎಂ. ಕಾರ್ಡ್,  ಪರ್ಸ್ ನ್ನು  ಕಿತ್ತುಕೊಂಡರು  ನಾನು ಅವರಿಂದ  ತಪ್ಪಿಸಿಕೊಂಡು ಬಂದೆನು  ಈ  ಬಗ್ಗೆ ಸೂಕ್ತ  ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

No comments:

Post a Comment