Moving text

Mandya District Police

DAILY CRIME REPORT DATE : 17-06-2013


ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 17-06-2013 ರಂದು ಒಟ್ಟು 21 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ  5. ಮನುಷ್ಯ ಕಾಣೆಯಾದ ಪ್ರಕರಣಗಳು,  2 ವಂಚನೆ ಪ್ರಕರಣಗಳು,  1 ದರೋಡೆ ಪ್ರಕರಣ, 1  ಕಳವು ಪ್ರಕರಣ ಹಾಗು 12 ಇತರೆ ಐ.ಪಿ.ಸಿ./ಕೆ.ಪಿ.ಆಕ್ಟ್/ ಸಿ.ಆರ್.ಪಿ.ಸಿ  ಪ್ರಕರಣಗಳು ವರದಿಯಾಗಿರುತ್ತವೆ. 

 ಮನುಷ್ಯ ಕಾಣೆಯಾದ ಪ್ರಕರಣಗಳು:

1. ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 131/13 ಮನುಷ್ಯ ಕಾಣೆಯಾಗಿದ್ದಾನೆ.

  ದಿನಾಂಕ: 17-06-2013 ರಂದು ಪಿರ್ಯಾದಿ ರಾಜು 25ವರ್ಷ, ಸೋಲಿಗರ ಕೊಪ್ಪಲು ಗ್ರಾಮ, ರವರು ನೀಡಿದ ದೂರಿನ ಸಾರಾಂಶವೆನೆಂದರೆ ನನ್ನ ತಮ್ಮ ರವಿರವರು ದಿನಾಂಕ 13/06/2013 ರಂದು ಬೆಳಗಿನ ಜಾವ 05-00 ಸಮಯದಲ್ಲಿ ಮನೆಯಿಂದ ಹೋದವರು ಇದುವರೆವಿಗೂ ವಾಪಸ್ ಮನೆಗೆ ಬಂದಿರುವುದಿಲ್ಲ, ಎಲ್ಲಾ ಕಡೆ ಹುಡುಕಾಡಲಾಗಿ ಎಲ್ಲೂ ಪತ್ತೆಯಾಗಿರುವುದಿಲ್ಲ. ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲು ಮಾಡಿರುತ್ತೆ.


2. ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 132/13 ಮನುಷ್ಯ ಕಾಣೆಯಾಗಿದ್ದಾನೆ.

ದಿನಾಂಕ: 17-06-2013 ರಂದು ಪಿಯರ್ಾದಿ ಜಯಮ್ಮ ಕೊಂ ವೆಂಕಟೇಶ, ಬೊಮ್ಮನಾಯಕನ ಹಳ್ಳಿ ಗ್ರಾಮ, ನಾಗಮಂಗಲರವರು ನೀಡಿದ ದೂರು ಏನೆಂದರೆ ನನ್ನ ಮಗ ಬಿ.ವಿ.ನಟರಾಜರವರು ದಿನಾಂಕ 04-10-2011 ರಂದು ಮನೆಯಿಂದ ಹೋದವನು ಇದುವರೆವಿಗೂ ವಾಪಸ್ ಮನೆಗೆ ಬಂದಿರುವುದಿಲ್ಲ, ಎಲ್ಲಾ ಕಡೆ ಹುಡುಕಾಡಲಾಗಿ ಎಲ್ಲೂ ಪತ್ತೆಯಾಗಿರುವುದಿಲ್ಲ. ಪತ್ತೆಮಾಡಿಕೊಡಿ ಎಂದು ನೀಡಿದ ಪಿಯರ್ಾದುವಿನ ಮೇರೆಗೆ ಪ್ರಕರಣವನ್ನು ನೊಂದಾಯಿಸಿರುತ್ತೆ.

3. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ಸಂ. 382/12 ಕಲಂ ಹುಡುಗಿ ಕಾಣೆಯಾಗಿದ್ದಾಳೆ.

     ದಿನಾಂಕ: 17-06-2013 ರಂದು ಪಿರ್ಯಾದಿ ಕೆ.ಎನ್. ಸುಂದರ್ ರಾಜು ಕ್ಯಾತನಹಳ್ಳಿ ಗ್ರಾಮ, ಪಾಂಡವಪುರ ತಾಲ್ಲೂಕುರವರು ನೀಡಿದ ಪಿರ್ಯಾದು ಏನೆಂದರೆ, ಎಸ್.ಎಸ್. ವಿವೇಕಾನಂದ ವಿಶ್ವೇಶ್ವರಯ್ಯ ಪದವಿ ಪೂರ್ವ ಕಾಲೇಜಿನಲ್ಲಿ ದೈಹಿಕ ಶಿಕ್ಷಕರು ರವರನ್ನು ನಮ್ಮ ಮಗಳು ಎಲ್ಲಿ ಎಂದು ಕೇಳಿದ್ದಕ್ಕೆ ನಿಮ್ಮ ಮಗಳು ಮಾವನ ಮನೆಗೆ ಹೋಗುವುದಾಗಿ ಹೇಳಿ ಹೊದಳು ಎಂದು ತಿಳಿಸಿರುತ್ತಾರೆ. ವಿವೇಕನಂದ ರವರ ಮೇಲೆ ಅನುಮಾನ ವಿದ್ದು ಕಾಣೆಯಾಗಿರುವ  ನಮ್ಮ ಮಗಳನ್ನು ಪತ್ತೆ ಮಾಡಿ ಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲು ಮಾಡಿರುತ್ತೆ.

4. ಮದ್ದೂರು  ಪೊಲೀಸ್ ಠಾಣೆ ಮೊ.ಸಂ.273/13 ಕಲಂ. ಹೆಂಗಸು ಕಾಣೆಯಾಗಿದ್ದಾಳೆ.

    ದಿನಾಂಕ: 17-06-2013 ರಂದು ಪಿರ್ಯಾದಿ ಶಿವು ಬಿನ್ ಲೇಟ್ ಗಂಗಯ್ಯ, ಕೆ. ಹೊನ್ನಲಗೆರೆ ಗ್ರಾಮ, ಮದ್ದೂರುರವರು ನೀಡಿದ ದೂರು ಏನೆಂದರೆ ದಿನಾಂಕ: 13-06-2013 ರಂದು ನನ್ನ ಹೆಂಡತಿ ಸುಮ ಮನೆಯಲ್ಲಿ ಬಟ್ಟೆ ಹೊಲಿಸಿಕೊಂಡು ಬರಲು ಟೈಲರ್ ಅಂಗಡಿಗೆ ಹೋಗಿ ಬರುವುದಾಗಿ ಹೇಳಿ ಹೋದವಳು ವಾಪಸ್ ಮನೆಗೆ ಬಾರದೇ ಕಾಣೆಯಾಗಿದ್ದು ಪತ್ತೆಮಾಡಿಕೊಡಬೇಕೆಂದು  ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲು ಮಾಡಿರುತ್ತೆ.

5. ಕೆ.ಎಂ. ದೊಡ್ಡಿ ಪೊಲೀಸ್ ಠಾಣೆ ಮೊ.ಸಂ. ಹುಡುಗಿ ಕಾಣೆಯಾಗಿದ್ದಾಳೆ.
 
  ದಿನಾಂಕ: 17-06-2013 ರಂದು ಪಿರ್ಯಾದಿ  ಶ್ರೀ.ಪ್ರಭುದೇವ ಬಿನ್ ಗುತ್ತಲೇಗೌಡ, ಅಣ್ಣೂರು ಗ್ರಾಮ, ಮದ್ದೂರು ತಾ.ರವರು ನೀಡಿದ ದೂರು ಏನೆಂದರೆ ದಿನಾಂಕ: 16-06-2013 ರಂದು ನನ್ನ ಮಗಳು ಶೃತಿ ಮನೆಯಿಂದ ಕಾಣಿಯಾಗಿರುತ್ತಾಳೆ. ಅದೇ ಗ್ರಾಮದ ಸಿದ್ದಪ್ಪಾಜಿ (ಪವಿ) ಎಂಬುವನು ಸಹ ಗ್ರಾಮದಲ್ಲಿ ಕಾಣುತ್ತಿಲ್ಲ. ಹಣ, ಒಡವೆ ಮತ್ತು ಬಟ್ಟೆಗಳನ್ನು ತೆಗೆದುಕೊಂದು ಹೋಗಿರುತ್ತಾರೆ ಇವರನ್ನು ಪತ್ತೆಮಾಡಿಕೊಡಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ನೊಂದಾಯಿಸಿರುತ್ತೆ.

 ವಂಚನೆ ಪ್ರಕರಣಗಳು:  

1. ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ಸಂ. 252/13 ಕಲಂ 420 ಐ.ಪಿ.ಸಿ
 
  ದಿನಾಂಕ:17-06-2013 ರಂದು  ಪಿರ್ಯಾದಿ  ಜಿ. ಪ್ರಸಾದ್ 28 ವರ್ಷ,  ನಂ. 18, ಸಾಗ್ಯ ಗ್ರಾಮ, ಕೊಳ್ಳೇಗಾಲ ತಾಲ್ಲೂಕು, ಚಾಮರಾಜನಗರ ಜಿಲ್ಲೆರವರು ಆರೋಪಿತ ಈಶನಾಯ್ಕ, 38 ವರ್ಷ, ಜೂನಿಯರ್ ಇಂಜಿನಿಯರ್, ಎಂ.ಜಿ.ರೋಡ್, ತರೀಕೆರೆ, ಚಿಕ್ಕಮಗಳೂರುರವರಿಗೆ ಶೇಕಡ 2 ರಷ್ಟು ಬಡ್ಡಿಯಂತೆ 50,000-00 ರೂ. ಸಾಲ ಪಡೆದುಕೊಂಡಿದ್ದು ಸದರಿ ಸಾಲದ ಹಣವನ್ನು 3 ತಿಂಗಳಲ್ಲಿ ವಾಪಸ್ ಮಾಡುವುದಾಗಿ ತಿಳಿಸಿದ್ದು 3 ತಿಂಗಳು ಕಳೆದ ನಂತರ ಫಿರ್ಯಾದಿಯವರು ಸದರಿ ಹಣವನ್ನು ವಾಪಸ್ ಮಾಡುವಂತೆ ಕೇಳಿದಾಗ ಆರೋಪಿಯು 50,000-00 ರೂ.ಗಳ ಎಸ್ಬಿಎಂ ಚೆಕ್ ನಂ. 629479 ಅನ್ನು ನೀಡಿರುತ್ತಾನೆ. ನಂತರ ತನಗೆ ತೊಂದರೆ ಇರುವುದರಿಂದ ಇನ್ನು ಒಂದು ವರ್ಷ ಕಾಲಾವಕಾಶ ಬೇಕೆಂದು ಕೋರಿಕೊಂಡಿದ್ದು ಅದರಂತೆ ಸದರಿ ಚೆಕ್ ಅನ್ನು ಬ್ಯಾಂಕಿಗೆ ಹಣ ಡ್ರಾ ಮಾಡಲು ಕೊಟ್ಟಾಗ ಸದರಿ ಚೆಕ್ನಲ್ಲಿ ಹಣವಿರುವುದಿಲ್ಲವೆಂದು ಬ್ಯಾಂಕಿನವರು ತಿಳಿಸಿದ್ದು ಈ ಬಗ್ಗೆ ಫಿರ್ಯಾದಿಯವರು ಆರೋಪಿಗೆ ಲೀಗಲ್ ನೋಟಿಸ್ ನೀಡಿದ್ದರೂ ಸಹ ಇದುವರೆಗೂ ಸದರಿ ಹಣವನ್ನು ವಾಪಸ್ ನೀಡದೆ ಮೋಸ ಮಾಡಿರುತ್ತಾನೆ. ಈ ಬಗ್ಗೆ ಆರೋಪಿಯ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ನೀಡಿದ ಪಿರ್ಯಾದುವಿನ ಮೇರೆಗೆ ಪ್ರಕರಣ ನೊಂದಾಯಿಸಿಕೊಂಡಿರುತ್ತೆ.

 2. ಬೆಳ್ಳೂರು ಪೊಲೀಸ್ ಠಾಣೆ ಮೊ.ಸಂ. 177/2013 ಕಲಂ. 408,420 ಐ.ಪಿಸಿ.

ದಿನಾಂಕ: 17-06-2013 ರಂದು ಪಿರ್ಯಾದಿ  ಶ್ರೀ ಪುನೀತ್ ವರ್ಮ ಉತ್ತರಹಳ್ಳಿ ಮುಖ್ಯರಸ್ತೆ,ಚಿಕ್ಕಲುಸಂದ್ರ, ಬೆಂಗಳೂರುರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 19-05-2013 ಹಿಂದಿನ ದಿನಗಳಲ್ಲಿ ಮತ್ತು ಬಿ.ಜಿ.ಎಸ್.ಗೆ ಸೇರಿದ ಸಸ್ಯಕಾಶಿಯಲ್ಲಿನ ಕರ್ನಾಟಕ  ಇಂಡಸ್ಟ್ರಿಯಲ್ ನ   ಪ್ಯಾಕ್ಟರಿಯ ಟೇಬಲ್ ಮೇಲೆ ಸ್ಟಿಚ್ ಮಾಡಿ ಇಟ್ಟಿದ 50 ತುಂಬು ತೋಳಿನ ರೆಡಿಮೇಡ್ ಶರ್ಟ್ ಮತ್ತು ಗ್ಲೌಸ್ ಮಾಡುವ 20 ಕೆ.ಜಿ ಬಟ್ಟೆಗಳು  ಮೇಲ್ಕಂಡವರು ನನಗೆ ಮೋಸಮಾಡುವ ಉದ್ದೇಶದಿಂದ ಮೇಲ್ಕಂಡ ಬಟ್ಟೆಗಳನ್ನು ಎಲ್ಲಿಯೋ ತೆಗೆದುಕೊಂಡು ಹೋಗಿ ನನಗೆ ವಂಚಿಸಿರುತ್ತಾರೆ., ಇವುಗಳ ಅಂದಾಜು ಬೆಲೆ ಸುಮಾರು 60,000/- ರೂಗಳಾಗಿರುತ್ತವೆ. ಸದರಿ ಫ್ಯಾಕ್ಟರಿಯ ಬೀಗದ ಕೀ ಸೆಕ್ಯೂರಿಟಿ ಪಾಂಡುರಂಗ ರವರ ಬಳಿ ಇದ್ದು. ನಮ್ಮ ಪ್ಯಾಕ್ಟರಿಯ ಬಾಗಿಲನ್ನು ಕೀ ಯಿಂದ ತೆಗೆದು ನಮ್ಮ ಪ್ಯಾಕ್ಟರಿಯಲ್ಲಿ ಕೆಲಸ ಮಾಡುವ  ಮ್ಯಾನೇಜರ್ ಮುರುಗೇಶ್, ಸಹಾಯಕ ಮ್ಯಾನೇಜರ್ ಕರ್ಣ ಮತ್ತು ಸೆಕ್ಯೂರಿಟಿ ಗಾಡರ್್ ಪಾಂಡುರಂಗ ಈ 3 ಜನರು ಈ ಕೃತ್ಯ ಕ್ಕೆ ಬಾಗಿಯಾಗಿರುತ್ತಾರೆ ಎಂದು ನನಗೆ ಅನುಮಾನವಿರುತ್ತೆ. ಆರೋಪಿತರ ಮೇಲೆ ಸೂಕ್ತ ಕ್ರಮ ಜರುಗಿಸಲು ನೀಡಿದ ದೂರಿನ ಮೇರೆಗೆ ಪ್ರಕರಣ ನೊಂದಾಯಿಸಿರುತ್ತೆ.

ದರೋಡೆ ಪ್ರಕರಣ :

ಕೆ.ಆರ್. ಪೇಟೆ ಟೌನ್ ಪೊಲೀಸ್ ಠಾಣೆ ಮೊ.ಸಂ. 185/13 ಕಲಂ. 392 ಐ.ಪಿ.ಸಿ

     ದಿನಾಂಕ: 17-06-2013 ರಂದು ಪಿರ್ಯಾದಿ  ಅಶ್ವಿನಿ ಕೋಂ ರಾಮಕೃಷ್ಣ ಗೋವಿಂದೇಗೌಡನಕೊಪ್ಪಲು ಗ್ರಾಮ ಕೆ.ಆರ್.ಪೇಟೆ ತಾ||ರವರು ಠಾಣೆಗೆ ಹಾಜರಾಗಿ ನೀಡಿದ ದೂರು ಏನೆಂದರೆ ದಿನಾಂಕ: 15.06.2013 ಬೆಳಗ್ಗೆ 11-15 ಗಂಟೆ ಸಕರ್ಾರಿ ಆಸ್ಪತ್ರೆ ಹಿಂಭಾಗ ಕೆ.ಆರ್.ಪೇಟೆ ಟೌನ್ನಲ್ಲಿ ಆರೋಪಿತರುಗಳಾದ ಸುನೀಲ್ ಕುಮಾರನು ಪಿರ್ಯಾದಿಗೆ  ನನ್ನ  ಜೊತೆ ಬಾ ಎಂದು, ನೀನು ಬರದಿದ್ದರೆ ನಿನ್ನ  ಕುಂಟುಂಬವನ್ನು ಕೊಚ್ಚಿ ಹಾಕುತ್ತೆನೆಂದು ಬೆದರಿಕೆ ಹಾಕಿ, ಕೃಷ್ಣಮೂತರ್ಿ, ಹರೀಶ ಮತ್ತು  ಸುನೀಲ್ಕುಮಾರವರುಗಳು  ಪಿರ್ಯಾದಿಯ ಮುಖಕ್ಕೆ ಆಸಿಡ್ ಹಾಕುತ್ತೇವೆಂದು ಬೆದರಿಸಿ ಕತ್ತಿನಲ್ಲಿದ್ದ 90,000-00 ರೂ ಬೆಲೆ ಬಾಳುವ 30 ಗ್ರಾಂ ಚಿನ್ನದ ಸರವನ್ನು ಕಿತ್ತು ಜೇಬಿಗೆ ಇಟ್ಟುಕೊಂಡು ಹರೀಶ ಮತ್ತು  ಕೃಷ್ಣಮೂರ್ತಿ ಇಬ್ಬರು ಹಿಂದೆ ಕೊಟ್ಟಿರುವ  ಕೇಸನ್ನು ವಾಪಸ್ಸು ತೆಗೆದುಕೊಂಡರೆ ಚೈನ್ ಕೊಡುತ್ತೆವೆ ಇಲ್ಲವಾದರೆ ನನ್ನ ಮಾನ ಕಳೆದು ತಲೆ ಎತ್ತದಂತೆ ಮಾಡುತ್ತೆವೆಂದು ಬೆದರಿಕೆ ಹಾಕಿ ಪಿರ್ಯಾದಿಯನ್ನು ಹಿಡಿದು ಎಳೆದಾಡಿರುತ್ತಾರೆಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.
                 
 ಕಳ್ಳತನ ಪ್ರಕರಣ :

ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 136/2013 ಕಲಂ 454-380 ಐ.ಪಿ.ಸಿ  

     ದಿನಾಂಕ: 17-06-2013 ರಂದು ಪಿರ್ಯಾದಿ ನಾಗರಾಜು ಬಿನ್ ಪ||  ಈರಂಕೇಗೌಡ ಕಲ್ಲುವೀರನಹಳಿ ಗ್ರಾಮರವರು ನೀಡಿದ ದೂರು ಏನೆಂದರೆ ದಿನಾಂಕ: 16-06-2013 ರ ಹಿಂದಿನ ದಿನಗಳಲ್ಲಿ ಯಾರೋ ಕಳ್ಳರು ಮನೆಯಲ್ಲಿ ಬೀರುವಿನ ವ್ಯಾನಿಟಿ ಬ್ಯಾಗಿನಲ್ಲಿ ಇಟ್ಟಿದ್ದ 1 ಪದಕ ಬಿಳಿಕಲ್ಲು(ಬಿಳಿ ಡಾಲರ್) 120 ಗ್ರಾಂ, ಬ್ರಾಸ್ಲೈಟ್ 25ಗ್ರಾಂ, 2ಗಂಡು 10ಗ್ರಾಂ, 1ಉಂಗುರು  2ಗ್ರಾಂ (ಮಗುವಿನದು) ಒಟ್ಟು 158 ಗ್ರಾಂ ತೂಕದ ಚಿನ್ನದ ಒಡವೆಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿ ಕೊಂಡು  ಹೋಗಿದ್ದಾ ರೆಂದು ಇವುಗಳ ಒಟ್ಟು ಮೌಲ್ಯ  4.75.000ರೂ ಗಳಾಗುತ್ತದೆ. ಪತ್ತೆ ಮಾಡಿಕೊಡಿ ಎಂದು ನೀಡಿದ ಪಿರ್ಯಾದುವಿನ  ಮೇರೆಗೆ ಪ್ರಕರಣ ದಾಖಲು ಮಾಡಿರುತ್ತೆ.

No comments:

Post a Comment