Moving text

Mandya District Police

DAILY CRIME REPORT DATED : 25-06-2013


ಮಂಡ್ಯ ಜಿಲೆಯಲ್ಲಿ ದಿನಾಂಕ : 25-06-2013 ರಂದು ಒಟ್ಟು 22 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ರಸ್ತೆ ಅಪಘಾತ ಪ್ರಕರಣ, 1 ಮೋಸ/ವಂಚನೆ ಪ್ರಕರಣ, 4 ಕಾಣೆಯಾದ ಪ್ರಕರಣಗಳು, 1 ಅಕ್ರಮ ಮರಳು ಕಳ್ಳತನ/ಸಾಗಾಣಿಕೆ ಪ್ರಕರಣ, 1 ಅಪಹರಣ ಪ್ರಕರಣ,  1 ಯು.ಡಿ.ಆರ್. ಪ್ರಕರಣ,  1 ಕಳ್ಳತನ ಪ್ರಕರಣ, 1 ಎಸ್.ಸಿ./ಎಸ್.ಟಿ. ದೌರ್ಜನ್ಯ ತಡೆ ಕಾಯಿದೆ ಪ್ರಕರಣ ಹಾಗು ಇತರೆ 11   ಐ.ಪಿ.ಸಿ./ಕೆ,ಪಿ.ಆಕ್ಟ್./ಅಬಕಾರಿ ಕಾಯಿದೆ ಪ್ರಕರಣಗಳು ವರದಿಯಾಗಿರುತ್ತವೆ.


ರಸ್ತೆ ಅಪಘಾತ ಪ್ರಕರಣ :

ಮದ್ದೂರು ಸಂಚಾರ ಪೊಲೀಸ್ ಠಾಣೆ  ಮೊ ಸಂ: 82/13 ಕಲಂ: 279,337, 304(ಎ) ಐ.ಪಿ.ಸಿ. ಕೂಡ 187 ಐ.ಎಂ.ವಿ ಕಾಯ್ದೆ 

     ದಿನಾಂಕ: 25-06-2013 ರಂದು ಪಿರ್ಯಾದಿ ಸೋಮಶೇಖರ ಬಿನ್ ಲೇಟ್ ಸಿದ್ದೇಗೌಡ ಗೊರವನಹಳ್ಳಿ ರವರು ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ಆರೋಪಿ ಕೆ.ಎ.11-ಎ-2557 ರ ಲಾರಿ ಚಾಲಕ ಲಾರಿಯ ಚಾಲಕ ಯಾವುದೇ ಸೂಚನೆಯನ್ನು ನೀಡದೆ ಇದ್ದಕ್ಕಿದಂತೆ ಬ್ರೇಕ್ ಹಾಕಿ ಲಾರಿಯನ್ನು ನಿಧಾನಗೊಳಿಸಿದ ಹಿಂದಿನಿಂದ ಬಂದ ಜಿ.ಜೆ-18 ಎ.ಎಲ್-7643 ಮೋಟಾರ್ ಸೈಕಸವಾರ ಲಾರಿಯ ಹಿಂಬಾಗದ ಎಡಬಾಗಕ್ಕೆ ಡಿಕ್ಕಿ ಹೊಡೆಸಿಕೊಂಡು ಅಪಘಾತ ಉಂಟಾದ ಪರಿಣಾಮ ಮೋಟಾರ್ ಬೈಕ್ ಸವಾರ ಅರುಣ ಮಾರ್ಗ ಮದ್ಯದಲ್ಲಿ ಮೃತ ಪಟ್ಟಿರುತ್ತಾನೆ ಮತ್ತು ಸುರೇಶನನ್ನು ಮಂಡ್ಯ ಆಸ್ಪತ್ರೆಗೆ ದಾಖಲು ಮಾಡಲಾರುತ್ತೆ  ಎಂದು ನೀಡಿದ ದೂರನ್ನು ಸ್ವಿಕರಿಸಿ ಪ್ರಕರಣ ದಾಖಲು ಮಾಡಿರುತ್ತೆ.

ಮೋಸ/ವಂಚನೆ ಪ್ರಕರಣ :

ನಾಗಮಂಗಲ ಪಟ್ಟಣ ಪೊಲೀಸ್ ಠಾಣೆ ಮೊ.ನಂ. 103/13 ಕಲಂ. 406-408-409-420 ಐ.ಪಿ.ಸಿ.

     ದಿನಾಂಕ: 25-06-2013 ರಂದು ಪಿರ್ಯಾದಿ  ಪಿ, ಶ್ರೀಧರ, ಹಿರಿಯ ವಿಭಾಗದಿಕಾರಿಗಳು, ಬಾರತೀಯ ಜೀವ ವಿಮಾ ನಿಗಮ, ವಿಭಾಗೀಯ ಕಛೇರಿ, ಬನ್ನಿಮಂಟಪ್ಪ, ಮೈಸೂರು ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 22-06-2013ರ ಹಿಂದಿನ ದಿನಗಳಲ್ಲಿ ಮೈಕ್ರೋ ಇನ್ಸೂರೆನ್ಸ್ ಪ್ರತಿನಿಧಿ ಕಚೇರಿ, ನಾಗಮಂಗಲ ಟೌನ್ ರವರು ನೀಡಿದ ದೂರು ಏನೆಂದರೆ ಮೊಃಹನ್, ಕಾರ್ಯದಶರ್ಿ, ಭೂಮಿಕ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ದಿ ಸಂಸ್ಥೆ. 2] ಟಿ.ಎಸ್.ಸಂತೋಷ್ ಕುಮಾರ್, ಕಾರ್ಯದಶರ್ಿ, ಬಾಳಿಗೊಂದು ಗುರಿ, ಗ್ರಾಮೀಣಾಭಿವೃದ್ಧಿ ಸಂಸ್ಥೆ,  ತುಮಕೂರು ಜಿಲ್ಲೆ ಹಾಗು ಇತರೆ 19 ಜನರುಗಳು ಸಾರ್ವಜನಿಕರಿಂದ ಸಂಗ್ರಹಿಸಿದ ವಿಮಾ ಕಂತುಗಳ ಹಣದಲ್ಲಿ 5,74,013 ರೂ. ಮೊತ್ತದ ಹಣವನ್ನು ಪಾಲಿಸಿದಾರರ ಖಾತೆಗೆ ಜಮಾ  ಮಾಡಲು ಎಲ್.ಐ.ಸಿ. ಸಂಸ್ಥೆಗೆ ಕಟ್ಟದೆ ಅಥವಾ ಪಾಲಿಸಿದಾರರಿಗೂ ವಾಪಸ್ ನೀಡದೇ ಪಾಲಿಸಿದಾರರಿಗೆ ಹಾಗೂ ಎಲ್.ಐ.ಸಿ. ಸಂಸ್ಥೆಗೆ ನಂಬಿಕೆ ದ್ರೋಹವೆಸಗಿ ವಂಚನೆ ಮಾಡಿರುತ್ತಾರೆಂದು ಹಾಗೂ ಈ ಎರಡೂ ಸಂಸ್ಥೆಗಳು ನಕಲಿ ದಾಖಲೆ/ ನಕಲಿ ಮರಣ ಪ್ರಮಾಣ ಪತ್ರಗಳನ್ನು ಸೃಷ್ಟಿಸಿ ರೂ. 4,89,427 ರೂ,. ಮೊತ್ತವನ್ನು  ಮರಣದಾವೆ ಮೂಲಕ ಪಡೆದುಕೊಂಡು ಎಲ್.ಐ.ಸಿಗೆ ಮೋಸ ಮಾಡಿರುತ್ತಾರೆಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಥಮ ವರ್ತಮಾನ ವರದಿ ದಾಖಲಿಸಲಾಗಿದೆ.


ಕಾಣೆಯಾದ ಪ್ರಕರಣಗಳು :

1. ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 183/13 ಕಲಂ. ಹೆಂಗಸು ಕಾಣೆಯಾಗಿದ್ದಾಳೆ.

     ದಿನಾಂಕ: 25-06-2013 ರಂದು ಪಿರ್ಯಾದಿ  ಗೋವಿಂದೇಗೌಡ ಬಿನ್. ಲೇಟ್. ಗಿರಿಗೌಡ, ಹರಿಹರಪುರ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅವರ ಹೆಂಡತಿ ಮಂಜುಳಮ್ಮ ಕೋಂ. ಗೋವಿಂದೇಗೌಡ, 25, ಹರಿಹರಪುರ ಗ್ರಾಮ  ರವರು ದಿನಾಂಕ: 19-06-2013ರಂದು ಮದ್ಯಾಹ್ನ 02-00 ಗಂಟೆಯಲ್ಲಿ, ಹರಿಹರಪುರ ಗ್ರಾಮದಿಂದ ಅವಳ ತವರಿಗೆ ಹೋಗಿಬರುತ್ತೇನೆಂದು ಮಕ್ಕಳಿಗೆ ಹೇಳಿ ಹೋದವಳು ವಾಪಸ್ ಬಂದಿಲ್ಲಾ ಪತ್ತೆಮಾಡಿಕೊಡಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ನೊಂದಾಯಿಸಲಾಗಿದೆ. 

2. ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 184/13 ಕಲಂ. ಹುಡುಗ ಕಾಣೆಯಾಗಿದ್ದಾನೆ.

ದಿನಾಂಕ: 25-06-2013 ರಂದು ಪಿರ್ಯಾದಿ  ರಾಜೇಗೌಡ ಬಿನ್. ಪಾಂಡುರಂಗೇಗೌಡ, ಲಕ್ಷ್ಮಿಪುರ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪವನ್ ಎಲ್.ಆರ್. ಬಿನ್. ರಾಜೇಗೌಡ, 14 ವಿದ್ಯಾಥರ್, ಲಕ್ಷ್ಮಿಪುರ ಗ್ರಾಮ,   ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯವರ ಮಗ ಪವನ್ ಬೊಮ್ಮೇನಹಳ್ಳಿ ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆಯಲ್ಲಿ 10ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು ಪ್ರತಿದಿನ ಗ್ರಾಮದಿಂದ ಹೋಗಿ ಬರುತ್ತಿದ್ದು ದಿನಾಂಕ 19-06-2013ರಂದು ಬೆಳಗ್ಗೆ 09-00 ಗಂಟೆಯಲ್ಲಿ ಮಾಮೂಲಿನಂತೆ ಶಾಲೆಗೆ ಹೋದವನು ಪುನಃ ಮನೆಗೆ ಬಂದಿರುವುದಿಲ್ಲಾ ಪತ್ತೆಮಾಡಿಕೊಡಿ ಎಂದು ದೂರು ನೀಡಿದ ಮೇರೆಗೆ ಕೇಸು ದಾಖಲಿಸಲಾಗಿದೆ.

3. ಕೆ ಆರ್ ಪೇಟೆ ಟೌನ್ ಪೊಲೀಸ್  ಠಾಣೆ ಮೊ ಸಂ: 192/13 ಕಲಂ: ಮನುಷ್ಯ ಕಾಣೆಯಾಗಿದ್ದಾನೆ. 

     ದಿನಾಂಕ: 25-06-2013 ರಂದು ಪಿರ್ಯಾದಿ ಉಮೇಶ ಬಿನ್ ಚೌಡಯ್ಯ ಊಚನಹಳ್ಳಿ ಗ್ರಾಮ ಕೆಆರ್ ಪೇಟೆ ತಾ| ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ  20.06.2013 ಬೆಳಿಗ್ಗೆ 09.00 ಗಂಟೆ ಊಚನಹಳ್ಳಿ ಗ್ರಾಮ ಕೆಆರ್ ಫೇಟೆ ತಾ|| ರವರು ನೀಡಿದ ದೂರಿನ ವಿವರವೇನೆಂದರೆ ಅವರ ತಂದೆ ಚೌಡಯ್ಯ 55 ವರ್ಷ, ಊಚನಹಳ್ಳಿ ಗ್ರಾಮ,  ಕೆಆರ್ ಪೇಟೆ ತಾ|| ರವರು ಕೆ.ಆರ್.ಪೇಟೆಗೆ ಹೋಗುತ್ತೇನೆಂದು ನಮ್ಮ ತಂದೆಯವರು ಮನೆಯಿಂದ ಹೋದವರು ಇಲ್ಲಿಯವರೆಗೂ ಪತ್ತೆಯಾಗಿರುವುದಿಲ್ಲಾ ನಾವುಗಳು ನೆಂಟರ ಮನೆಯನ್ನೆಲ್ಲಾ ಹುಡುಕಾಡಲಾಗಿ ಎಲ್ಲೂ ಪತ್ತೆಯಾಗಿರುವುದಿಲ್ಲ ಆದ್ದರಿಂದ ಕಾಣೆಯಾಗಿರುವ ನಮ್ಮ ತಂದೆ ಚೌಡಯ್ಯ ರವರನ್ನು ಪತ್ತೆಮಾಡಿಕೊಡಿ ಎಂದು ಈ ದಿವಸ ತಡವಾಗಿ ಬಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.

4. ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 225/13 ಕಲಂ. ಮಕ್ಕಳು ಕಾಣೆಯಾಗಿದ್ದಾರೆ.

     ದಿನಾಂಕ: 25-06-2013 ರಂದು ಪಿರ್ಯಾದಿ ಚಾಮುಂಡಿ ಕೋಂ. ಲೇಟ್. ನರಸಿಂಹ, ಕೆನ್ನಾಳು ಗ್ರಾಮ, ಪಾಂಡವಪುರ ತಾ. ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ 1]ವಿಶ್ವನಾಥ, 10 ವರ್ಷ. 2] ಚಂದ್ರ ಬಿನ್. ನರಸಿಂಹ, 4 ವರ್ಷ, ಇಬ್ಬರೂ ಕೆನ್ನಾಳು ಗ್ರಾಮ ರವರುಗಳು ದಿನಾಂಕ: 16-06-2013 ರಂದು ಸಂಜೆ 07-00 ಗಂಟೆಯಲ್ಲಿ ಕೆನ್ನಾಳು ಗ್ರಾಮ. ಪಾಂಡವಪುರ ತಾ. ನಲ್ಲಿರುವ ನಮ್ಮ ಮನೆಯ ಮುಂದೆ ಆಟವಾಡುತ್ತಿದ್ದು. ನಂತರ 08-30 ಗಂಟೆ ಸಮಯದಲ್ಲಿ  ಮಕ್ಕಳು ಮನೆಗೆ ಬರಲಿಲ್ಲವೆಂದು ಹೊರಗೆ ಬಂದು ನೋಡಿದಾಗ ಮಕ್ಕಳು ಕಾಣಿಸಲಿಲ್ಲ ನಾನು ಗಾಬರಿಯಿಂದ ಎಲ್ಲಾ ಕಡೆ ಹುಡುಕಾಡಿ ನೋಡಿದರು ಸಿಕ್ಕಲಿಲ್ಲ ಅವರನ್ನು ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಕಾಣೆಯಾದ ಪ್ರಕರಣ ದಾಖಲಿಸಲಾಗಿದೆ.


ಅಕ್ರಮ ಮರಳು ಕಳವು/ಸಾಗಾಣಿಕೆ ಪ್ರಕರಣ :

ಮದ್ದೂರು ಪೊಲೀಸ್ ಠಾಣೆ ಮೊ.ನಂ. 280/13 ಕಲಂ. 279-379-188 ಐ.ಪಿ.ಸಿ.

     ದಿನಾಂಕ: 25-06-2013 ರಂದು ಪಿರ್ಯಾದಿ  ಬಿ.ಎಸ್. ಶ್ರೀಧರ್ ಪಿ.ಎಸ್.ಐ. ಮದ್ದೂರು ಪೊಲೀಸ್ ಠಾಣೆ, ಮದ್ದೂರು ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿಗಳು ಅವರ ಬಾಬ್ತು ನಂ. ಕೆಎ-11-ಟಿ-8169ರ ಟ್ರ್ಯಾಕ್ಟರ್ ಚಾಲಕ ಮತ್ತು ಮಾಲಿಕ ಹೆಸರು ಮತ್ತು ವಿಳಾಸ ತಿಳಿಯಬೇಕಾಗಿದೆ ರವರು ದಿನಾಂಕ: 25-06-2013 ರಂದು ಮದ್ದೂರು ತಾ. ಕೆ.ಕೋಡಿಹಳ್ಳಿ ಗ್ರಾಮದ ಬಳಿ ಶಿಂಷಾ ನದಿಯಲ್ಲಿ ಸಕರ್ಾರದ ನಿಷೇದಾಜ್ಞೆಯನ್ನು ಉಲ್ಲಂಘಿಸಿ ಶಿಂಷಾ ನದಿ ಪಾತ್ರದಲ್ಲಿ ಆಕ್ರಮವಾಗಿ ಮರಳು ತೆಗೆದು ಟ್ರಾಕ್ಟರ್ಗೆ ತುಂಬಿಕೊಂಡು ಕಳ್ಳತದಿಂದ ಸಾಗಾಣಿಕೆ ಮಾಡುತ್ತಿದ್ದಾಗ ಹಿಡಿಯಲು ಹೋದಾಗ ಟ್ರ್ಯಾಕ್ಟರ್ ಚಾಲಕ ಅತಿವೇಗವಾಗಿ ಅಜಾಗರೂಕತೆಯಿಂದ ಟ್ರ್ಯಾಕ್ಟರ್ ಚಾಲನೆ ಮಾಡಿರುತ್ತಾನೆ ಈ ಬಗ್ಗೆ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

ಅಪಹರಣ ಪ್ರಕರಣ :

ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 146/13 ಕಲಂ. 366-506-114 ಐ.ಪಿ.ಸಿ.

ದಿನಾಂಕ: 25-06-2013 ರಂದು ಪಿರ್ಯಾದಿ ರಾಮಕೃಷ್ಣ, ವ್ಯವಸಾಯ, ಕೋರೇಗಾಲ ಗ್ರಾಮ, ಮಳವಳ್ಳಿ ತಾ. ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿಗಳಾದ 1) ಕೆ.ಎನ್.ರವಿ, 2) ಶ್ರೀನಿವಾಸ, 3)ನಾರಾಯಣಪ್ಪ, 4) ಆನಂದ ಹಾಗು 5. ರತ್ನಮ್ಮ ಕೋರೇಗಾಲ ಗ್ರಾಮ ರವರುಗಳು ದಿನಾಂಕ: 20-06-2013ರಂದು ಬೆಳಿಗ್ಗೆ ಕೋರೇಗಾಲ ಗ್ರಾಮ, ಮಳವಳ್ಳಿ ತಾಲ್ಲೊಕು ರವರುಗಳು ಪಿರ್ಯಾದಿಯವರ ಮಗಳನ್ನು ಬಲವಂತವಾಗಿ ಅಪಹರಿಸಿಕೊಂಡು ಹೋಗಿರುತ್ತಾನೆ ಹಾಗು ಕೊಲೆ ಹಾಕಿರುತ್ತಾನೆಂದು ಹಾಗೂ ಇದಕ್ಕೆಲ್ಲಾ ಕುಮ್ಮಕ್ಕು ನೀಡಿರುತ್ತಾರೆಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ನೊಂದಾಯಿಸಲಾಗಿದೆ.

ಯು.ಡಿ.ಆರ್. ಪ್ರಕರಣ :

ಮಳವಳ್ಳಿ ಪುರ ಪೊಲೀಸ್ ಠಾಣೆ ಯು.ಡಿ.ಆರ್. ನಂ. 04/13 ಕಲಂ. . 174 ಸಿ.ಅರ್.ಪಿ.ಸಿ.

ದಿನಾಂಕ: 25-06-2013 ರಂದು ಪಿರ್ಯಾದಿ ಮಹದೇವಮ್ಮ, ದುಗ್ಗನಹಳ್ಳಿ ಗ್ರಾಮ, ಮಳವಳ್ಳಿ ತಾಲ್ಲೋಕು ರವರು ನೀಡಿದ ದೂರು ಏನೆಂದರೆ ದಿನಾಂಕ: 24-06-2013 ರಂದು ಮಳವಳ್ಳಿ ಟೌನ್, ತಾಲ್ಲೋಕು ಕಛೇರಿಯ ಪಕ್ಕದ ಗಣೇಶ ದೇವಸ್ಥಾನದ ಬಳಿ ಮಂಜುಳಾ. ಹುಚ್ಚನದೊಡ್ಡಿ ಗ್ರಾಮ, ಮಳವಳ್ಳಿ ತಾಲ್ಲೋಕು ಎಂಬುವವರು ಹೊಟ್ಟೆನೋವು ತಾಳಲಾರದೇ ಯಾವುದೋ ಕ್ರಿಮಿನಾಷಕ ಔಷಧಿಯನ್ನು ಕುಡಿದು ಒದ್ದಾಡುತ್ತಿದ್ದವಳನ್ನು ಮಳವಳ್ಳಿ ಸರ್ಕಾರಿ ಅಸ್ಪತ್ರೆಗೆ ಚಿಕಿತ್ಸೆಗೆ ಸೇರಿಸಿ, ನಂತರ ಹೆಚ್ಚಿನ ಚಿಕಿತ್ಸೆಗೆ ಮಂಡ್ಯ ಜಿಲ್ಲಾ ಅಸ್ಪತ್ರೆಗೆ ಚಿಕಿತ್ಸೆಗೆ ಸೇರಿಸಿ, ಚಿಕಿತ್ಸೆ ಫಲಕಾರಿಯಾಗದೇ ನನ್ನ ಮಗಳು ದಿನಾಂಕ: 24-06-2013 ರಂದು ರಾತ್ರಿ 09-15 ಗಂಟೆ ಸಮಯದಲ್ಲಿ ಮೃತಪಟ್ಟಿರುತ್ತಾಳೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ನೊಂದಾಯಿಸಲಾಗಿದೆ.


ಕಳ್ಳತನ ಪ್ರಕರಣ :

ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 262/13 ಕಲಂ. 454-457-380 ಐ.ಪಿ.ಸಿ.

ದಿನಾಂಕ: 25-06-2013 ರಂದು ಪಿರ್ಯಾದಿ  ಡಾ|| ಕೆ.ನರಸಿಂಹಾಚಾರ್, ಪ್ರಾದ್ಯಾಪಕರು, ಪಿ.ಇ.ಎಸ್.ಇಂಜಿನಿಯರಿಂಗ್ ಕಾಲೇಜು, ಮಂಡ್ಯ, ಮನೆ ನಂ. 484, 18ನೇ ಕ್ರಾಸ್, ವಿ.ವಿ.ನಗರ ರವರು ನೀಡಿದ ದೂರು ಏನೆಂದರೆ ದಿನಾಂಕ: 25-06-2013 ರಂದು ಯಾರೋ ಕಳ್ಳರು ಅವರ ಮನೆಯ ಕಬ್ಬಿಣದ ಜಾಲರಿಯ ಬೀಗವನ್ನು ಜಖಂ ಮಾಡಿ ಒಳಗಡೆ ಪ್ರವೇಶ ಮಾಡಿ ಹಿಂಭಾಗದ ಬಾಗಿಲ ಡೋರ್ ಲಾಕ್ ಅನ್ನು ಜಖಂ ಮಾಡಿ ಒಳಗಡೆ ಬಂದು ರೂಮಿನ ಡೋರ್ ಲಾಕ್ಗಳನ್ನು ಜಖಂ ಮಾಡಿ ಒಳಗಡೆ ಪ್ರವೇಶ ಮಾಡಿ ರೂಮಿನಲ್ಲಿದ್ದ ಚಿನ್ನದ ಒಡವೆಗಳನ್ನು ಮತ್ತು ನಗದು ಹಣವನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಚಿನ್ನದ ಒಡವೆಗಳ ಒಟ್ಟು ತೂಕ 153 ಗ್ರಾಂ ಇದ್ದು ಇವುಗಳ ಒಟ್ಟು ಮೌಲ್ಯ 3,75,000-00 ರೂ.ಗಳಾಗಿರುತ್ತದೆ ಅವುಗಳನ್ನು. ಪತ್ತೆಮಾಡಿ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಎಸ್.ಸಿ./ಎಸ್.ಟಿ. ದೌರ್ಜನ್ಯ ತಡೆ ಕಾಯಿದೆ ಪ್ರಕರಣ :

ಶಿವಳ್ಳಿ ಪೊಲೀಸ್ ಠಾಣೆ ಮೊ.ನಂ. 111/13 ಕಲಂ. 447-504-324-323-354-341-506 ಕೂಡ 34 ಐ.ಪಿ.ಸಿ ಹಾಗೂ ಎಸ್.ಸಿ 3ಕ್ಲಾಸ್ [1] [10], [11] ಎಸ್.ಸಿ/ಎಸ್.ಟಿ ಪಿ ಎ ಆಕ್ಟ್, 1989 ಐ.ಪಿ.ಸಿ.

ದಿನಾಂಕ: 25-06-2013 ರಂದು ಪಿರ್ಯಾದಿ  ಡಿ. ಪದ್ಮ ಕೊಂ. ಕುಮಾರ್, ಹುಳ್ಳೇನಹಳ್ಳಿ ಗ್ರಾಮ, ದುದ್ದ ಹೋಬಳಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ಹೆಚ್.ಸಿ ನರಸಿಂಹರಾಜ ಉ!! ರಾಜ ಬಿನ್ ಹೆಚ್.ಸಿ ಚನ್ನೇಗೌಡ ಎಂಬುವವರು ಪಿರ್ಯಾದಿಯವರಿಗೆ ಲೇ ಒಲೆಯ ಬಡ್ಡಿ, ನಿನಗೆ ಇಷ್ಟಕ್ಕೆ ಮುಗಿಯಲಿಲ್ಲ, ನೀನು ಈ ನೀಲಗಿರಿ ಮರದ ವಿಚಾರವಾಗಿ ನನ್ನನ್ನು ಕೇಳಿಕೊಂಡು ಬಂದರೆ ನಾನು ಜೈಲಿಗೆ ಹೋದರೂ ಸರಿಯೇ, ನಿನ್ನ್ನನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿರುತ್ತಾನೆ.ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲು ಮಾಡಿರುತ್ತೆ.

No comments:

Post a Comment