Moving text

Mandya District Police

DAILY CRIME REPORT DATED : 26-06-2013

ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 25-06-2013 ರಂದು ಒಟ್ಟು 27 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 2 ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ,  1 ಎಸ್.ಸಿ./ಎಸ್.ಟಿ. ದೌರ್ಜನ್ಯ ತಡೆ ಕಾಯಿದೆ ಪ್ರಕರಣ,  4 ಮನುಷ್ಯ ಕಾಣೆಯಾದ ಪ್ರಕರಣಗಳು,  1 ರಸ್ತೆ ಅಪಘಾತ ಪ್ರಕರಣ,  2 ಸಾಮಾನ್ಯ ಕಳವು ಪ್ರಕರಣಗಳು,  1 ಅಕ್ರಮ ಗ್ಯಾಸ್ ಫಿಲಿಂಗ್ ಪ್ರಕರಣ,  2 ಅಕ್ರಮ ಮರಳು ಗಣಿಗಾರಿಕೆ/ಕಳವು/ಸಾಗಾಣಿಕೆ ಪ್ರಕರಣಗಳು,  1 ಯು.ಡಿ.ಆರ್. ಪ್ರಕರಣ,  1 ಕಳ್ಳತನ ಪ್ರಕರಣ,  3 ಕೊಲೆ ಪ್ರಕರಣಗಳು ಹಾಗು 9 ಇತರೆ ಐ.ಪಿ.ಸಿ. ಪ್ರಕರಣಗಳು ವರದಿಯಾಗಿರುತ್ತವೆ.      


ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ :

1. ಬಿಂಡಿಗನವಿಲೆ ಪೊಲೀಸ್ ಠಾಣೆ ಮೊ.ನಂ. 92/13 ಕಲಂ. 498(ಎ)-323-324-506 ಕೂಡ 34 ಐ.ಪಿ.ಸಿ.

ದಿನಾಂಕ: 25-06-2013 ರಂದು ಪಿರ್ಯಾದಿ ಕೆ.ಆರ್.ವರಲಕ್ಮಿ ಕೋಂ.ವೆಂಕಟೇಶ, ಡಿ.ಕೋಡಿಹಳ್ಳಿ ಗ್ರಾಮ, ಬಿಂಡಿಗನವಿಲೆ ಹೋ. ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 25-06-2013, ಡಿ.ಕೋಡಿಹಳ್ಳಿ ಗ್ರಾಮ, .ಆರೋಪಿಗಳಾದ ಅವರ ಗಂಡ 1. ವೆಂಕಟೇಶ ಬಿನ್ ರಾಮಯ್ಯ, 2. ರಾಮಯ್ಯ, 3. ಸಾಕಮ್ಮ ಕೋಂ. ರಾಮಯ್ಯ ಡಿ.ಕೋಡಿಹಳ್ಳಿ ಗ್ರಾಮ, ಬಿಂಡಿಗನವಿಲೆ ಹೋ, ನಾಗಮಂಗಲ ತಾ. ಈ ಮೂವರು ಪಿರ್ಯಾದಿಯವರಿಗೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕಿರುಕುಳ ಕೊಡುತ್ತಿದ್ದರು ನನಗೆ ಹೊಡೆದ ಗೊದಮೊಟೆಯನ್ನು ಅಲ್ಲೇ ಬಿಸಾಡಿ ನಿನ್ನನ್ನು ಕೊಲೆ ಮಾಡದೆ ಬಿಡುವುದಿಲ್ಲವೆಂದು ಪ್ರಾಣಭಯ ಉಂಟು ಮಾಡಿ ಹೊರಟುಹೋದರು ಇವರುಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


2.ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 316/13 ಕಲಂ. 498(ಎ)-504-506 ಕೂಡ 149 ಐಪಿಸಿ ಮತ್ತು 3 & 4 ಡಿ.ಪಿ. ಆಕ್ಟ್.

      ದಿನಾಂಕ: 25-06-2013 ರಂದು ಪಿರ್ಯಾದಿ ಪುಷ್ಪಶ್ರೀ ಕೋಂ. ಸಂತೋಷ್ @ ಪಾಪ, 21 ವರ್ಷ, ಗೃಹಿಣಿ, ಒಕ್ಕಲಿಗರು, ಸೂನಗಹಳ್ಳಿ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ:25-06-2013ರ ರಾತ್ರಿ 09-00 ಗಂಟೆಯಲ್ಲಿ ಅರೋಪಿಗಳಾದ ಪಿರ್ಯಾದಿಯ ಗಂಡ 1] ಸಂತೋಷ @ ಪಾಪ ಮತ್ತು ಮಾವ 2] ನಿಂಗೇಗೌಡ, ಅತ್ತೆ 3] ಸಾಕಮ್ಮ ಕೋಂ ನಿಂಗೇಗೌಡ, ಹಾಗು 4] ಅನಿಲ್ಕುಮಾರ್ ಬಿನ್ ನಿಂಗೇಗೌಡ, 5] ಸ್ಪೂರ್ತಿ ಕೋಂ. ಅನಿಲ್ ಕುಮಾರ್, ಎಲ್ಲರೂ ಸೂನಗಹಳ್ಳಿ ರವರುಗಳು ವರದಕ್ಷಿಣೆ ವಿಚಾರವಾಗಿ ಎಲ್ಲರೂ ಜಗಳ ತೆಗೆದು ಅಶ್ಲೀಲ ಪದಗಳಿಂದ ಬೈದು, ಕೈಗಳಿಂದ ತಲೆ, ಬೆನ್ನು, ಎದೆ & ಕೆನ್ನೆಯ ಮೇಲೆ ಹೊಡೆದು ತನ್ನ ಗಂಡ ದೊಣ್ಣೆಯಿಂದ ಹೊಡೆದು ನೋವುಟು ಮಾಡಿರುತ್ತಾರೆ. ನಂತರ ದಿನಾಂಕ:26-6-2013 ರ ಬೆಳಿಗ್ಗೆ 04-00 ಗಂಟೆಯಲ್ಲಿ ಎಲ್ಲರೂ ತನ್ನ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಲು ಪ್ರಯತ್ನಿಸಿರುತ್ತಾರೆಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


ಎಸ್.ಸಿ./ಎಸ್.ಟಿ. ದೌರ್ಜನ್ಯ ತಡೆ ಕಾಯಿದೆ ಪ್ರಕರಣ :

ಕೆ.ಎಂ. ದೊಡ್ಡಿ ಪೊಲೀಶ್ ಠಾಣೆ ಮೊ.ನಂ. 197/13 ಕಲಂ. 341-504-324-506-307 ಕೂಡ 34 ಐಪಿಸಿ ಮತ್ತು 3 ಕ್ಲಾಸ್ [10] ಎಸ್.ಸಿ./ಎಸ್.ಟಿ ಪಿ.ಎ. ಆಕ್ಟ್. 1989.

ದಿನಾಂಕ: 25-06-2013 ರಂದು ಪಿರ್ಯಾದಿ ಚಿಕ್ಕಬೋರಯ್ಯ ಬಿನ್. ದೊಡ್ಡಸಿದ್ದಯ್ಯ, ತೊರೆಬೊಮ್ಮನಹಳ್ಳಿ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 26-06-2013 ರಂದು ಮದ್ಯಾಹ್ನ ಆರೋಪಿಗಳಾದ 1] ಅರಕೇಶ 2] ಶಿವಲಿಂಗಯ್ಯ @ ದ್ಯಾಪ, ತೊರೆಬೊಮ್ಮನಹಳ್ಳಿ ಗ್ರಾಮ ರವರುಗಳು ಪಿರ್ಯಾದಿಯನ್ನು ಕುರಿತು ನಿನ್ನ ಮಗಳ ಮೇಲೆ ಅತ್ಯಾಚಾರ ನಡೆಸಿ ಕೇಸು ರಾಜಿ ಮಾಡಿಕೊಂಡೆ, ಈಗ ನನ್ನ ಹತ್ತಿರ ಏನು ಕಿತ್ತುಕೊಳ್ಳುತ್ತೀಯಾ  ಸೂಳೆ ಮಗನೆ ಎಂದು ತೀಟೆ ಜಗಳ ತೆಗೆದು ಪಿಯರ್ಾದಿಯನ್ನು ಆರೋಪಿಗಳಿಬ್ಬರೂ ತಡೆದು ಅವಾಚ್ಯವಾಗಿ ಬೈಯ್ದು ರೀಪೀಸ್ ಪಟ್ಟಿಯಿಂದ ತಲೆಯ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿ ರಕ್ತಗಾಯ ಮಾಡಿ, ಜಾತಿ ನಿಂದನೆ ಮಾಡಿ ಕೊಲೆ ಬೆದರಿಕೆ ಹಾಕಿರುತ್ತಾರೆಂದು ದೂರು ನೀಡಿದ ಮೇರೆಗೆ ಪ್ರಕರಣ ನೊಂದಾಯಿಸಲಾಗಿದೆ.


ಮನುಷ್ಯ ಕಾಣೆಯಾದ ಪ್ರಕರಣಗಳು :

1. ಮದ್ದೂರು ಪೊಲೀಸ್ ಠಾಣೆ ಮೊ.ನಂ. 281/13 ಕಲಂ. ಹೆಂಗಸು ಮತ್ತು ಮಗು ಕಾಣೆಯಾಗಿರುತ್ತಾರೆ.

ದಿನಾಂಕ: 25-06-2013 ರಂದು ಪಿರ್ಯಾದಿ ಸ್ವಾಮಿಗೌಡ ಬಿನ್. ಈರೇಗೌಡ, ಅಗಸನಪುರ ಗ್ರಾಮ, ಮಳವಳ್ಳಿ ತಾಲ್ಲೂಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ:12-06-2013 ರಂದು ಮದ್ದೂರು ಟೌನ್ ಹೊಳೆ ಬೀದಿಯಲ್ಲಿರುವ ಕೆಂಪೇಗೌಡರ ಮನೆಯಿಂದ ರಜನಿ ಕೋಂ. ಕುಮಾರ, 26ವರ್ಷ ಹೊಸಕೋಟೆ ಗ್ರಾಮ, ಪಾಂಡವಪುರ ತಾ. ಐಶ್ವರ್ಯ ಕೋಂ. ಕುಮಾರ, 04 ವರ್ಷ, ಹೊಸಕೋಟೆ ಗ್ರಾಮರವರು ತನ್ನ ಗಂಡನ ಮನೆಗೆ ಹೋಗುತ್ತೇನೆಂದು  ತನ್ನ ಮಗಳು ಐಶ್ವರ್ಯಳನ್ನು ಕರೆದುಕೊಂಡು ಹೋದವಳು ಮನೆಗೂ ಹೋಗದೇ ಕಾಣೆಯಾಗಿರುತ್ತಾಳೆ. ಅವಳನ್ನು ಎಲ್ಲಾ ಕಡೆಗಳಲ್ಲಿ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ ಇತ್ಯಾದಿಯಾಗಿ ದೂರು ನೀಡಿದ ಮೇರೆಗೆ ಕೇಸು ನೊಂದಾಯಿಸಲಾಗಿದೆ. 

2. ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 141/13 ಕಲಂ. ಮನುಷ್ಯ ಕಾಣೆಯಾಗಿದ್ದಾನೆ.

     ದಿನಾಂಕ: 25-06-2013 ರಂದು ಪಿರ್ಯಾದಿ ಶಶಿಕಲಾ ಕೊಂ. ಗುರು, ಚೊಟ್ಟನಹಳ್ಳಿ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 19-06-2013 ರಂದು, ಬೆಳಗಿನ ಜಾವ 05-00 ಗಂಟೆಯಲ್ಲಿ ಗುರು, 28 ವರ್ಷ, ಚೊಟ್ಟನಹಳ್ಳಿ ಗ್ರಾಮ ರವರು ಮನೆಯಿಂದ ಹೋದವರು ಇದುವರೆವಿಗೂ ವಾಪಸ್ ಮನೆಗೆ ಬಂದಿರುವುದಿಲ್ಲ ಎಲ್ಲಾ ಕಡೆ ಹುಡುಕಾಡಲಾಗಿ ಎಲ್ಲೂ ಪತ್ತೆಯಾಗಿರುವುದಿಲ್ಲ ಎಂದು ಇತ್ಯಾದಿಯಾಗಿ ನೀಡಿದ ಲಿಖಿತ ದೂರಿನ ಮೇರೆಗೆ ಪ್ರಕರಣ ನೊಂದಾಯಿಸಲಾಗಿದೆ.  

3. ಹಲಗೂರು ಪೊಲೀಸ್ ಠಾಣೆ ಮೊ.ನಂ. 138/13 ಕಲಂ. ಹೆಂಗಸು ಕಾಣೆಯಾಗಿದ್ದಾಳೆ.

ದಿನಾಂಕ: 25-06-2013 ರಂದು ಪಿರ್ಯಾದಿ ಕಾಳಯ್ಯ ಬಿನ್. ಲೇಃ ಕರಿಯಯ್ಯ, 36ವರ್ಷ, ಕೂಲಿ ಕೆಲಸ, ಮಾರಗೌಡನಹಳ್ಳಿ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ಸರೋಜ ಕೋಂ. ಕಾಳಯ್ಯ, 27ವರ್ಷ, ಆಶಾ ಕಾರ್ಯಕತರ್ೆ, ವಾಸ-ಮಾರಗೌಡನಹಳ್ಳಿ ಗ್ರಾಮ ರವರು ಪಿರ್ಯಾದಿಯವರ ಮನೆಯಲ್ಲಿದ್ದ ರೂ.1000/-, ಎ.ಟಿ.ಎಂ. ಕಾಡರ್್, ಒಂದು ಜೊತೆ ಓಲೆ, ಜುಮುಕಿ, ಎರಡು ಜೊತೆ ಬಟ್ಟೆಗಳು, ಒಂದು ಮೊಬೈಲ್ ಅನ್ನು ತೆಗೆದುಕೊಂಡು ಹೋಗಿರುತ್ತಾರೆ ಮನೆಯಲ್ಲಿ ಒಂದು ಬಿಳಿಯ ಕಾಗದದಲ್ಲಿ ನನ್ನ ಸಾವಿಗೆ ನಾನೇ ಕಾರಣ ನನ್ನನ್ನು ಯಾರು ಹುಡುಕಬೇಡಿ, ನನ್ನ ಮಗಳನ್ನು ಚೆನ್ನಾಗಿ ನೋಡಿಕೊಳ್ಳಿ, ನನ್ನು ಗಂಡನಿಗೆ ಇನ್ನೊಂದು ಮದುವೆ ಮಾಡಿ ಹೀಗೆ ಬರೆದಿಟ್ಟು ಮನೆಬಿಟ್ಟು ಹೋಗಿರುತ್ತಾರೆ ಇವರನ್ನು ಹುಡುಕಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ನೊಂದಾಯಿಸಲಾಗಿದೆ.

4. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. ಮನುಷ್ಯ ಕಾಣೆಯಾಗಿದ್ದಾನೆ.

ದಿನಾಂಕ: 25-06-2013 ರಂದು ಪಿರ್ಯಾದಿ ಪಿ. ಸುಮಾ ಕೋಂ. ಬಿ.ಎಸ್. ಸತೀಶ್, 42 ವರ್ಷ, ಬುರಾಯನಕೊಪ್ಪಲು, ಶ್ರೀರಂಗಪಟ್ಟಣ ತಾ| ರವರು ನೀಡಿದ ದೂರು ಏನೆಂದರೆ ಅವರ ಗಂಡ ಬಿ.ಎಸ್.ಸತೀಶ್ ರವರು 2010ನೇ ಫೆಬ್ರವರಿ ತಿಂಗಳಿನಲ್ಲಿ ಮನೆಯಿಂದ ಹೊರಗೆ ಹೋದವರು ವಾಪಸ್ ಮನೆಗೆ ಬರಲಿಲ್ಲ. ಕಾಣೆಯಾಗಿದ್ದಾನೆ. ಕುಡಿದು ಅಂಗಡಿಗಳ ಬಳಿ ಮತ್ತು ಎಲ್ಲೆಂದರಲ್ಲಿ ಮಲಗಿ ಬಿಡುತ್ತಿದ್ದರು ಆ ರೀತಿ ಎಂದು ತಿಳಿದು ಸುಮ್ಮನೆ ಇದ್ದು ಮತ್ತು ಪಿರ್ಯಾದಿಯವರು  ಈ ದಿನ ತಡವಾಗಿ ಬಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


ರಸ್ತೆ ಅಪಘಾತ ಪ್ರಕರಣ :

 ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 315/13 ಕಲಂ.279-304(ಎ) ಐ.ಪಿ.ಸಿ. ಕೂಡ 187 ಐ.ಎಂ.ವಿ. ಆಕ್ಟ್.

ದಿನಾಂಕ: 25-06-2013 ರಂದು ಪಿರ್ಯಾದಿ ಹೆಚ್.ಎಸ್. ಚೇತನ್ ಬಿನ್. ಎನ್.ನಂಜುಂಡೇಗೌಡ, ಹುಲ್ಕರೆ ಗ್ರಾಮ, ಮಂಡ್ಯ ತಾ. ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 26-06-2013 ರಂದು 10-00 ಎಎಂ. ನಲ್ಲಿ ಇಂಡುವಾಳು ಗ್ರಾಮದ ಬಸ್ ನಿಲ್ದಾಣದ ನೇರದಲ್ಲಿ, ಮೈಸೂರು-ಬೆಂಗಳೂರು ರಸ್ತೆಯಲ್ಲಿ ಆರೋಪಿ ನಂ. ಕೆಎ-09-ಎಫ್-3670 ಕೆ.ಎಸ್.ಆರ್.ಟಿ.ಸಿ. ಬಸ್ ಚಾಲಕ ಬಸ್ ಅನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಒಡಿಸಿಕೊಂಡು ಬಂದು ಜೆ. ಚಂದ್ರಶೇಖರ್ ರವರು  ಹೋಗುತ್ತಿದ್ದ ಮೋಟಾರ್ ಸೈಕಲ್ನ ಎಡಭಾಗದ ಹ್ಯಾಂಡೆಲ್ಗೆ ಡಿಕ್ಕಿ ಮಾಡಿಸಿದ ಪರಿಣಾಮ ಅವರನ್ನು ಚಿಕಿತ್ಸೆಗಾಗಿ ಮಂಡ್ಯ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಸಿದ್ದು, ವೈದ್ಯರು ಇವರನ್ನು ಪರೀಕ್ಷಿಸಿ ಅವರ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ.


ಸಾಮಾನ್ಯ ಕಳವು ಪ್ರಕರಣಗಳು :

1. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 313/13 ಕಲಂ. 379-511 ಐ.ಪಿ.ಸಿ.

ದಿನಾಂಕ: 25-06-2013 ರಂದು ಪಿರ್ಯಾದಿ ವೈ.ಎಂ. ಪಾರ್ಥ ಬಿನ್. ಮುಟ್ಟಲಿಂಗೇಗೌಡ, ಯಲಿಯೂರು ಗ್ರಾಮ, ಮಂಡ್ಯ ತಾ. ರರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 25-06-2013 ರಂದು ಯಲಿಯೂರು ಗ್ರಾಮದ ಪಿರ್ಯಾದಿರವರ ಜಮೀನಿನ ಬಳಿ ಬಂದಾಗ ರವರು ಒಬ್ಬ ವ್ಯಕ್ತಿ ಅವರ ಜಮೀನಿಗೆ ನುಗ್ಗಿ ಪಂಪ್ ಸೆಟ್ಗೆ ಆಳವಡಿಸಿದ್ದ ಪೈಪ್ ಕಟ್ಟ ಮಾಡುತ್ತಿದ್ದು ಆತನನ್ನು ಹಿಡಿದು ವಿಚಾರ ಮಾಡಲಾಗಿ ಆತ ಶಿವರಾಜು ,ಚಂದಗಾಲು ಗ್ರಾಮ, ಮಂಡ್ಯ ತಾ. ಎಂದು ತಿಳಿಸಿದ್ದು ಗದ್ದೆಯ ಬಳಿ ಕೆಎ-11-ಎ-5249 ರ ಟಾಟಾ ಏಸ್ ಗುಡ್ಸ್ ವಾಹನದಲ್ಲಿ ತಾನು ಕಳ್ಳತನ ಮಾಡಿದ ಪೈಪ್ನ್ನು ತುಂಬುಕೊಂಡು  ಹೋಗಲು ಬಂದಿದ್ದೆನು ಎಂದು ತಿಳಿಸಿರುತ್ತಾನೆ. ಈ ಸಂಬಂಧ ಆರೋಪಿಯ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸುವಂತೆ ದೂರು ನೀಡಿದ ಮೇರೆಗೆ ಪ್ರಕರಣ ನೊಂದಾಯಿಸಲಾಗಿದೆ.


2. ಹಲಗೂರು ಪೊಲೀಸ್ ಠಾಣೆ ಮೊ.ನಂ. 139/13 ಕಲಂ. 434-447-379  ಕೂಡ 34 ಐ.ಪಿ.ಸಿ.

ದಿನಾಂಕ: 25-06-2013 ರಂದು ಪಿರ್ಯಾದಿ ಭಾಗ್ಯಮ್ಮ ಕೋಂ. ಮರಿಕೃಷ್ಣೇಗೌಡ, 36 ವರ್ಷ, ಹುಲ್ಲೇಗಾಲ ಗ್ರಾಮ, ಕಸಬಾ ಹೋಬಳಿ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: ದಿನಾಂಕಃ 26-06-2013  ರಂದು ಬೆಳಿಗ್ಗೆ 8-30 ಗಂಟೆಯಲ್ಲಿ ಆರೋಪಿಗಳಾದ 1] ಈರಣ್ಣ 2] ಶಿವರಾಜು(ಗಣಿಯ) 3] ರಾಧ ಕೋಂ. ಈರಣ್ಣ, 4] ಪ್ರಜೀತ ಕೋಂ. ಶಿವರಾಜು, ಹುಲ್ಲೇಗಾಲ ಗ್ರಾಮ ರವರುಗಳು ನಮ್ಮಗಳ ಮೇಲೆ ವಿನಾ ಕಾರಣ ಜಗಳ ತೆಗೆದು ಬಾಲ ಭಾಷೆಗಳಲ್ಲಿ  ನಿಂದಿಸಿರುವುದಲ್ಲದೆ. ನನ್ನನ್ನು ಕೊಲೆ ಮಾಡಲು ಪ್ರಯತ್ನಿಸಿ ನಮ್ಮೆಲ್ಲರಿಗೂ ಪ್ರಾಣ ಬೆದರಿಕೆ ಹಾಕಿರುವುದರಿಂದ ಹಾಗೂ ಘಟನೆಯು ತೀವ್ರ ಸ್ವರೂಪ ತಾಳಲು ರಾಧ ಕೋಂ. ಈರಣ್ಣ ಹಾಗೂ ಪ್ರಜೀತ ಕೋಂ. ಶಿವರಾಜುರವರುಗಳು ಎಲ್ಲರನ್ನೂ ಪ್ರಚೋದಿಸುತ್ತಾ ಮನೆಯಿಂದ ಬೆಂಕಿಪಟ್ಟಣ ತಂದು ಕೊಟ್ಟು  ಬೆಂಕಿ ಹಚ್ಚಲು ಪ್ರೋತ್ಸಾಹಿಸಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣದ ದಾಖಲಿಸಿರುತ್ತದೆ.


ಅಕ್ರಮ ಗ್ಯಾಸ್ ಫಿಲಿಂಗ್ ಪ್ರಕರಣ :

ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 265/13 ಕಲಂ. 285 ಐ.ಪಿ.ಸಿ.

ದಿನಾಂಕ: 25-06-2013 ರಂದು ಪಿರ್ಯಾದಿ ಹೆಚ್.ಎನ್.ಬಾಲು, ಪಿಎಸ್ಐ, ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ರವರು ನೀಡಿದ ದೂರು ಏನೆಂದರೆ ಆರೋಪಿ ದೇವರಾಜು @ ದೇವು ಬಿನ್ ಬಿ.ಪುಟ್ಟಸ್ವಾಮಿ, 32 ವರ್ಷ, ವಕ್ಕಲಿಗರು, ಆಟೋರಿಕ್ಷಾ ಚಾಲಕ, ವಾಸ 4ನೇ ಕ್ರಾಸ್, ಲೇಬರ್ಕಾಲೋನಿ, ಮಂಡ್ಯ ಸಿಟಿ ರವರು ಯಾವುದೇ ಅಧಿಕೃತ ದಾಖಲಾತಿಗಳಿಲ್ಲದೆ, ಸರ್ಕಾರದಿಂದ ಸಾರ್ವಜನಿಕರ ಉಪಯೋಗಕ್ಕೆ ವಿತರಿಸುವ ಅವಶ್ಯಕ ವಸ್ತುಗಳಾದ ಅಡಿಗೆ ಅನಿಲದ ಸಿಲಿಂಡರ್  ಅನ್ನು ಅಕ್ರಮವಾಗಿ ಆಟೋರಿಕ್ಷಾಗೆ ಉಪಯೋಗಿಸುವ ಚಿಕ್ಕ ಸಿಲಿಂಡರ್ ಹೆಚ್ಚಿನ ಹಣ ಪಡೆದುಕೊಂಡು ರೀಫಿಲ್ಲಿಂಗ್ ಮಾಡಿಕೊಡುತ್ತಿರುವುದು ಮತ್ತು ಸಾರ್ವಜನಿಕರು ವಾಸಿಸುವ ಸ್ಥಳದಲ್ಲಿ ಅಕ್ರಮವಾಗಿ ದಹ್ಯ ವಸ್ತುವನ್ನು ನಿರ್ಲಕ್ಷತೆಯಿಂದ ಸಾರ್ವಜನಿಕರ ಪ್ರಾಣಕ್ಕೆ ಹಾನಿಯಾಗುವ ರೀತಿಯಲ್ಲಿ ಅಡಿಗೆ ಅನಿಲದ ಸಿಲಿಂಡರ್ನಿಂದ ಚಿಕ್ಕ ಸಿಲಿಂಡರ್ಗೆ ರೀಫಿಲ್ಲಿಂಗ್ ಮಾಡುತ್ತಿರುವುದು ಕಂಡುಬಂದಿದ್ದರಿಂದ ಈತನ ಮೇಲೆ ಪ್ರಕರಣ ದಾಖಲಿಸಲಾಗಿದೆ.


ಅಕ್ರಮ ಮರಳು ಗಣಿಗಾರಿಕೆ/ಕಳವು/ಸಾಗಾಣಿಕೆ ಪ್ರಕರಣಗಳು :

1. ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 140/13 ಕಲಂ. 3-42-44 ಕೆ.ಎಂ.ಎಂ.ಸಿ.ಆರ್. 1994 ನಿಯಮ ಕೂಡ 4(1ಎ)-21 (1 ರಿಂದ 5) ಎಂ.ಎಂ.ಆರ್.ಡಿ-1957 ನಿಯಮ ಕೂಡ 379 ಐ.ಪಿ.ಸಿ.

ದಿನಾಂಕ: 25-06-2013 ರಂದು ಪಿರ್ಯಾದಿ ಬಿ.ಆರ್.ವೆಂಕಟರಂಗಯ್ಯ, ರಾಜಸ್ವ ನಿರೀಕ್ಷಕರು, ಹೊನಕೆರೆ ಹೋಬಳಿ, ನಾಗಮಂಗಲ ತಾಲ್ಲೂಕ್ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ಕೆ.ಎ 54-3608ರ ಲಾರಿ ಚಾಲಕ. ಹೆಸರು ವಿಳಾಸ ತಿಳಿಯಬೇಕಾಗಿದೆ ಇವರು ದಿನಾಂಕ: 26-06-2013 ರಂದು ಬೆಳಿಗ್ಗೆ 09-30ಗಂಟೆ ಸಮಯದಲ್ಲಿ ಪಿರ್ಯಾದಿಯವರು ಅಕ್ರಮ ಮರಳು ಸಾಗಾಣಿಕೆಯ ತಪಾಸಣೆಯ ಬಗ್ಗೆ ಸುಖಧರೆ ಗ್ರಾಮದ ಹಾಲಿನ ಡೈರಿಯ ಹತ್ತಿರ ತಪಾಸಣೆ ಮಾಡುತ್ತಿದ್ದಾಗ, ಕೆ.ಎ-54/3608 ರ ಲಾರಿ ಚಾಲಕ ಲಾರಿಯಲ್ಲಿ ಅಕ್ರಮವಾಗಿ ಪರವಾನಗಿ ಇಲ್ಲದೆ ಕದ್ದು ಮರಳು ಸಾಗಾಣಿಕೆ ಮಾಡುತ್ತಿರುತ್ತಾರೆಂದು ಇತ್ಯಾದಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


2. ಕೊಪ್ಪ ಪೊಲೀಸ್ ಠಾಣೆ ಮೊ.ನಂ. 188/13 ಕಲಂ. 188-379 ಐ.ಪಿ.ಸಿ.

ದಿನಾಂಕ: 25-06-2013 ರಂದು ಪಿರ್ಯಾದಿ ಎಸ್. ಸಂತೋಷ್. ಪಿಎಸ್ಐ, ಕೊಪ್ಪ ಪೊಲೀಸ್ ಠಾಣೆ ರವರು ನೀಡಿದ ದೂರು ಏನೆಂದರೆ ದಿನಾಂಕ: 26-06-2013ರ ಬೆಳಿಗ್ಗೆ 7-30 ಗಂಟೆಯಲ್ಲಿ, ಯಡವನಹಳ್ಳಿ ಗ್ರಾಮದಲ್ಲಿ ಆರೋಪಿಗಳು ನಂ. ಕೆಎ-11-ಟಿ-6141 ಮರಳು ತುಂಬಿದ ಟ್ರಾಕ್ಟರ್ ಚಾಲಕ, ಹಾಗು ಕೆಎ-52-8205 ಲಾರಿ ಚಾಲಕ ಇವರುಗಳು ಅಕ್ರಮವಾಗಿ ಮರಳು ತುಂಬಿ ಸಾಗಿಸುತ್ತಿದ್ದು. ಸದರಿ ವಾಹನಗಳ ಚಾಲಕರು ನಿಷೇಧಾಜ್ಞೆಯನ್ನು ಉಲ್ಲಂಘಿಸಿ ಶಿಂಷಾನದಿಯಿಂದ ಮರಳು ತುಂಬುತ್ತಿದ್ದುದು ದೃಢಪಟ್ಟ ಮೇರೆಗೆ ಸ್ಥಳಕ್ಕೆ ಪಂಚಾಯಿತುದಾರರನ್ನು ಬರಮಾಡಿಕೊಂಡು ಪಂಚರ ಸಮಕ್ಷಮ ಮಹಜರು ಕ್ರಮ ಜರುಗಿಸಿ, ಪ್ರಕರಣ ದಾಖಲು ಮಾಡಿರುತ್ತೆ.


ಯು.ಡಿ.ಆರ್. ಪ್ರಕರಣ :

ಕೆ.ಆರ್.ಸಾಗರ ಪೊಲೀಸ್ ಠಾಣೆ ಯು.ಡಿ.ಆರ್. ನಂ. 18/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 25-06-2013 ರಂದು ಪಿರ್ಯಾದಿಯವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ:26-6-2013ರ ಹಿಂದಿನ ದಿನಗಳಲ್ಲಿ. ಕೆ.ಆರ್.ಸಾಗರದ ರಾಚೇಗೌಡ ಬಿನ್. ಲೇಟ್. ಸಿದ್ದೇಗೌಡ, 80ವರ್ಷ ರವರಿಗೆ ಹೊಟ್ಟೆನೋವು ಬರುತ್ತಿದ್ದು, ಹಲವಾರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದ್ದರು ಸಹ ಗುಣಮುಖವಾಗಿರಲಿಲ್ಲ ಇದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ:22-06-2013ರಂದು ಬೆಳಿಗ್ಗೆ 07-00 ಗಂಟೆಯ ಸಮಯದಲ್ಲಿ ಪಿರ್ಯಾದಿಯವರ ಹೆಂಡತಿಗೆ ಮೃತ ರಾಚೇಗೌಡರವರು ಹೊಲದ ಬಳಿ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೋದವರು ವಾಪಸ್ ಮನೆಗೆ ಹೋಗದೆ ದಿನಾಂಕಃ26-06-2013ರ ಹಿಂದಿನ ದಿನಗಳಲ್ಲಿ ಕೆ.ಆರ್.ಸಾಗರ ಅಣೆಕಟ್ಟೆಯ ಹಿನ್ನೀರಿಗೆ ಬಿದ್ದು ಮೃತಪಟ್ಟಿರುವುದಾಗಿರುತ್ತೆ. ಆದ್ದರಿಂದ ಶವದ ಮೇಲೆ ಮುಂದಿನ ಕ್ರಮ ಜರುಗಿಸಬೇಕೆಂದು ನೀಡಿದ ಇತ್ಯಾದಿ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


ಕಳ್ಳತನ ಪ್ರಕರಣ :

ಕಿಕ್ಕೇರಿ ಪೊಲೀಸ್ ಠಾಣೆ ಮೊ.ನಂ. 150/13 ಕಲಂ. 143-147-447-504-323-384-354 ಕೂಡ 149 ಐ.ಪಿ.ಸಿ.

ದಿನಾಂಕ: 25-06-2013 ರಂದು ಪಿರ್ಯಾದಿ ನಿರ್ಮಲಮ್ಮ ಬಿನ್.ಮಹದೇವ, ಹೆಗ್ಗಡಹಳ್ಳಿ ಗ್ರಾಮ, ಕಸಬಾ ಹೋಬಳಿ, ಕೆ.ಆರ್.ಪೇಟೆ ತಾಲ್ಲೋಕು ರವರು ನೀಡಿದ ದೂರು ಏನೆಂದರೆ ದಿನಾಂಕ: 25-05-2013ರಂದು ಬೆಳಿಗ್ಗೆ 11-00 ಗಂಟೆಯಲ್ಲಿ ಮಂಡ್ಯ ಜಿಲ್ಲೆ. ಕೆ.ಆರ್ ಪೇಟೆ ತಾ||, ಕಸಬಾ ಹೋಬಳಿ, ಹೆಗ್ಗಡಹಳ್ಳಿ ಗ್ರಾಮದಲ್ಲಿರುವ ಪಿಯರ್ಾದಿಯವರ ಜಮೀನಿಗೆ ಆರೋಪಿಗಳಾದ 1] ಗೌರಮ್ಮ ಕೊಂ ಪುಟ್ಟಯ್ಯ 2] ರೇಣುಕ ಕೊಂ ಚಂದ್ರಯ್ಯ 3] ನಳಿನಿ ಬಿನ್ ಪುಟ್ಟಯ್ಯ 4] ರಮೇಶ ಬಿನ್ ಪುಟ್ಟಯ್ಯ, 5] ತುಳಸಿರಾಜ ಬಿನ್ ಚಂದ್ರಯ್ಯ  6] ತುಳಸಿರಾಜನ ತಂಗಿ ಪುಟ್ಟಿ 7] ಗೌರಮ್ಮ ಕೋಂ. ಪುಟ್ಟಯ್ಯ, ಎಲ್ಲರೂ ಶಿಂಧಘಟ್ಟ ಗ್ರಾಮ, ಶೀಳನೆರೆ ಹೋಬಳಿ,  ಕೆ.ಆರ್. ಪೇಟೆ ತಾಲ್ಲೋಕು ರವರುಗಳು ಮೇಲ್ಕಂಡ ಜಮೀನಿಗೆ ಅತಿಕ್ರಮ ಪ್ರವೇಶ ಮಾಡಿ ಪಿಯರ್ಾದಿ ಬೆಳೆದಿದ್ದ ಬೆಳೆಯನ್ನು ಟ್ರಾಕ್ಟರ್ನಿಂದ ಉಳಿಸಲು ಬಂದಿದ್ದು  ಇದನ್ನು ಕೇಳಲು ಹೋದ ಪಿಯರ್ಾದಿಯವರಿಗೆ ಆರೋಪಿಗಳು ಅವರ ಮುಂದಲೆ   ಹಿಡಿದು ಎಳೆದಾಡಿ ಸೂಳೆ ಬಡ್ಡಿ ಎಂದು ಅವಾಚ್ಯ ಶಬ್ದಗಳಿಂದ ಬೈದು ಅವರ ಸೀರೆಯನ್ನು ಹಿಡಿದು ಎಳೆದಾಡಿ ಪಿರ್ಯಾದಿಯವರ ಕೊರಳಿನಲ್ಲಿದ್ದ 30 ಗ್ರಾಂ ನ ಮಾಂಗಲ್ಯದ ತಾಳಿಯನ್ನು ಕಿತ್ತುಕೊಂಡು ಹೋಗಿರುತ್ತಾರೆ. ಮೇಲ್ಕಂಡ ಆರೋಪಿಗಳ ವಿರುದ್ದ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಕೊಲೆ ಪ್ರಕರಣಗಳು :

1. ಬೆಳಕವಾಡಿ ಪೊಲೀಸ್ ಠಾಣೆ ಮೊ.ನಂ. 77/13 ಕಲಂ. 302 ಐ.ಪಿ.ಸಿ.

ದಿನಾಂಕ: 25-06-2013 ರಂದು ಪಿರ್ಯಾದಿ ಎಂ.ಮಹದೇವಸ್ವಾಮಿ, ಪಿಎಸ್ಐ, ಬೆಳಕವಾಡಿ ಪೊಲೀಸ್ ಠಾಣೆ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 15-01-2013ರಂದು ಕುಂದೂರು ಬೆಟ್ಟದ ಶ್ರೀ ಮಲ್ಲಿಕಾಜರ್ುನಸ್ವಾಮಿ ದೇವಸ್ಥಾನದ ಹಿಂಭಾಗದಲ್ಲಿ ಅಪರಿಚಿತ ಮನುಷ್ಯನ ತಲೆಬರುಡೆ, ಕೈ ಮತ್ತು ಕಾಲುಗಳ ಮೂಳೆಗಳನ್ನು ದೊರೆಕಿದ್ದು, ಇವುಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಿ ಎಂದು ದೇವಸ್ಥಾನದ ಅರ್ಚಕರು, ಶ್ರೀಧರ್ ಎಂಬುವವರು ನೀಡಿದ ದೂರಿನ ಮೇರೆಗೆ ಠಾಣಾ ಯುಡಿಆರ್ ನಂ. 01/12 ಕಲಂ 174(3) ಸಿಆರ್ಪಿಸಿ ರೀತ್ಯಾ ಪ್ರಕರಣ ದಾಖಲಾಗಿ ತನಿಖೆ ಕೈಗೊಂಡು ಮೂಳೆಗಳ ಬಗ್ಗೆ ಪೋರೆನ್ಸಿಕ ತಜ್ಞರು ಹಾಗೂ ವೈದ್ಯರು ಪರೀಕ್ಷೆ ಮಾಡಿ ಈ ಮೂಳೆಗಳು ಸುಮಾರು 30 ವರ್ಷ ವಯಸ್ಸಿನ ಗಂಡಸಿನದ್ದೆಂದು ಹಾಗೂ ತಲೆಗೆ ಪ್ರಾಕ್ಚರ್ ಆಗಿ ಸಾವುಂಟಾಗಿರುತ್ತೆಂದು ಹಾಗೂ ಯಾರೋ ತಲೆಗೆ ಹೊಡೆದು ಕೊಲೆ ಮಾಡಿರುವ ಸಂಭವವಿದೆಯೆಂದು ವರದಿ ನೀಡಿದ ಮೇರೆಗೆ ಸ್ವತಃ ದೂರು ದಾಖಲಿಸಿರುತ್ತೆ. 


2. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 317/13 ಕಲಂ. 302 ಐ.ಪಿ.ಸಿ.

ದಿನಾಂಕ: 25-06-2013 ರಂದು ಪಿರ್ಯಾದಿ ನಳಿನಿ ಕೊಂ. ಸಿದ್ದರಾಜು, 24ವರ್ಷ, ಗಂಗಾಮತ ಜನಾಂಗ, ಅಕರ್ೆಶ್ವರ ನಗರ, ಗುತ್ತಲು, ಮಂಡ್ಯ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 26-06-2013ರ ಹಿಂದಿನ ದಿನಗಳಲ್ಲಿ, ಹೊಳಲು ಗ್ರಾಮದ ಶಿವಲಿಂಗ ಅವನ ಊರು ಹೊಳಲಿಗೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ ಮತ್ತು ಬೆತ್ತಲೆ ಪೊಟೋ ತೆಗೆದು ಆ ಫೋಟೋಗಳನ್ನು ಇಟ್ಟುಕೊಂಡು ಎದುರಿಸುತ್ತಿದ್ದನು. ದಿನಾಂಕ: 22-12-2012 ರಂದು ಶಿವಲಿಂಗ ಚಿತ್ತದುರ್ಗಕ್ಕೆ ನನ್ನನ್ನು ಕರೆದುಕೊಂಡು ಹೋದನು ಅಲ್ಲಿ ಕೆಟ್ಟದಾಗಿ ನನ್ನ ಜೊತೆ ನೆಡೆದುಕೊಂಡನು, ದಿನಾಂಕ:25-12-2012 ರಂದು ಮತ್ತೆ ವಾಪಸ್ ಕರೆದುಕೊಂಡು ಬಂದ,   ದಿನಾಂಕ:29-12-2012ರಂದು ಬಾಡಿಗೆ ಕೊಟ್ಟಿದ್ದ ಶಿವಲಿಂಗ ಅತ್ತಿಬೆಲೆಯಲ್ಲಿ ಎರಡು ತಿಂಗಳು ಬಾಡಿಗೆ ಮನೆ ಮಾಡಿ ಇರಿಸಿದ್ದ ಅಲ್ಲಿ ನನ್ನನ್ನು ಹೊಡೆದು ಹಿಂಸೆ ಕೊಡುತ್ತಿದ್ದ ಆದ್ದರಿಂದ ಶಿವಲಿಂಗನ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸುವಂತೆ ನೀಡಿದ ಮೇರೆಗೆ ಪ್ರಕರಣ ನೊಂದಾಯಿಸಲಾಗಿದೆ.


3. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 399/13 ಕಲಂ. 302 ಕೂಡ 34 ಐ.ಪಿ.ಸಿ.

ದಿನಾಂಕ: 25-06-2013 ರಂದು ಪಿರ್ಯಾದಿ ರಮೇಶ ಬಿನ್. ಲೇಟ್. ಕೃಷ್ಣೇಗೌಡ, 44 ವರ್ಷ, ಒಕ್ಕಲಿಗರು ಇವರು ನೀಡಿದ ಪಿರ್ಯಾದು ಏನೆಂದರೆ ದಿನಾಂಕ: 26-06-13 ರ ಹಿಂದಿನ ಸಮಯದಲ್ಲಿ ಅರಳಕುಪ್ಪೆ ಗ್ರಾಮದ ಆರೋಪಿಗಳಾದ 1) ರವಿ ಬಿನ್ ಹುರಿಗೌಡ,  2) ನಿಂಗಮ್ಮ ಕೋಂ ಹುರಿಗೌಡ 3) ಇಂದ್ರ ಬಿನ್. ಹುರಿಗೌಡ ರವರುಗಳು ಭಾಗ್ಯಳಿಗೆ ಗಲಾಟೆ ಮಾಡಿ ಹೊಡೆಯುವುದು ಮತ್ತು ಬಯ್ಯುವುದು ಮಾಡಿ ದೈಹಿಕವಾಗಿ ಹಾಗೂ ಮಾನಸಿಕವಾಗಿ ಕಿರುಕುಳ ಕೊಡುತ್ತಿದ್ದು ಈ ದಿವಸ ಭಾಗ್ಯಳನ್ನು ಮೇಲ್ಕಂಡ ಆರೋಪಿಗಳೆಲ್ಲರೂ ಸೇರಿ  ಸಾಯಿಸಿ ನಂತರ ಹುಣಸೆ ಮರಕ್ಕೆ ನೇಣು ಹಾಕಿರುತ್ತಾರೆ ಎಂದು ಇತ್ಯಾದಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.

No comments:

Post a Comment