Moving text

Mandya District Police

Press Note Date: 07-04-2017

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಛೇರಿ
ಮಂಡ್ಯ ಜಿಲ್ಲೆ, ಮಂಡ್ಯ ದಿನಾಂಕ:07-04-2017.
 ಪತ್ರಿಕಾ ಪ್ರಕಟಣೆ
          ಇತ್ತೀಚೆಗೆ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಸ್ಟೇಟ್ ಬ್ಯಾಂಕ್ ಆಫ್ ತಿರುವಾಂಕೂರ್, ಸ್ಟೇಟ್ ಬ್ಯಾಂಕ್ ಆಫ್ ಹೈದರಬಾದ್ ಬ್ಯಾಂಕ್‍ಗಳು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದೊಡನೆ ವಿಲೀನಗೊಂಡಿರುತ್ತವೆ. ಈ ಹಿನ್ನಲೆಯಲ್ಲಿ ಮೇಲ್ಕಂಡ ಬ್ಯಾಂಕಿನ ಗ್ರಾಹಕರುಗಳಿಗೆ ಕೆಲವು ಹ್ಯಾಕರ್‍ಗಳು ದೂರವಾಣಿ ಕರೆ ಮಾಡಿ ಅಕೌಂಟ್‍ನ ಎ.ಟಿ.ಎಂ. ಕಾರ್ಡ್‍ಗಳನ್ನು ಹೊಸದಾಗಿ ನೀಡಬೇಕಾಗುತ್ತಿರುವುದರಿಂದ ನಿಮ್ಮ ಎ.ಟಿ.ಎಂ. ಕಾರ್ಡ್ ನಂಬರ್ ಮತ್ತು ಪಿನ್ ನಂಬರ್‍ಗಳನ್ನು ನೀಡುವಂತೆ ಕರೆ ಮಾಡಿ ಮಾಹಿತಿ ಪಡೆದು ಅಕೌಂಟ್‍ಗಳಿಂದ ಹಣವನ್ನು ಡ್ರಾ ಮಾಡಿ ಮೋಸ ಮಾಡುವ ವಂಚಕರು ಇರುತ್ತಾರೆ. 

          ಆದುದರಿಂದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಸ್ಟೇಟ್ ಬ್ಯಾಂಕ್ ಆಫ್ ತಿರುವಾಂಕೂರ್, ಸ್ಟೇಟ್ ಬ್ಯಾಂಕ್ ಆಫ್ ಹೈದರಬಾದ್ ಬ್ಯಾಂಕ್‍ಗಳ ಗ್ರಾಹಕರು ಇಂತಹ ಯಾವುದೇ ಫ್ರಾಡ್ ಕಾಲರ್‍ಗಳ ಮಾತಿಗೆ ಮರುಳಾಗದೆ ಹಾಗೂ ನಿಮ್ಮ ಅಕೌಂಟ್‍ನ ಮಾಹಿತಿಯನ್ನು ಯಾರಿಗೂ ನೀಡದೆ ಮೋಸಕ್ಕೆ ಒಳಗಾಗದಂತೆ ಎಚ್ಚರದಿಂದ ಇರುವಂತೆ ಪೊಲೀಸ್ ಇಲಾಖೆಯ ವತಿಯಿಂದ ಕೋರಲಾಗಿದೆ.   

No comments:

Post a Comment